Thursday, 8 December 2016

ಏಕರೂಪ ನಾಗರಿಕ ಸಂಹಿತೆ


ಏಕರೂಪ ನಾಗರಿಕ ಸಂಹಿತೆ




ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನಕ್ಕೆ ಇದೀಗ ಒದಗಿಬಂದಿದೆ ಕಾಲ
ಏಕರೂಪ ನಾಗರಿಕ ಸಂಹಿತೆಯನ್ನು ರಾಷ್ಟ್ರದಲ್ಲಿ ಜಾರಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರ ತನ್ನ ನಿಲುವು ವ್ಯಕ್ತಪಡಿಸಬೇಕು ಎಂದು ಸುಪ್ರೀಂಕೋರ್ಟ್ ತಾಕೀತು ಮಾಡಿದೆ. ಇದಕ್ಕಾಗಿ ಅಕ್ಟೋಬರ್ 12ರಂದು ಮೂರು ವಾರಗಳ ಗಡುವನ್ನು ಸರ್ಕಾರಕ್ಕೆ ನೀಡಲಾಗಿದೆ. ‘ವಿಚ್ಛೇದನಕ್ಕಾಗಿ ಕ್ರೈಸ್ತ ದಂಪತಿಗಳು ಕನಿಷ್ಠ ಎರಡು ವರ್ಷ ಕಾಯಬೇಕು. ಆದರೆ ಇತರ ಧರ್ಮದವರಿಗೆ ಈ ಅವಧಿ ಒಂದು ವರ್ಷವಿದೆ. ಈ ತಾರತಮ್ಯ ಏಕೆ?’ ಎಂದು ಪ್ರಶ್ನಿಸಿರುವಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿಯೊಂದರ ವಿಚಾರಣೆ ಸಂದರ್ಭದಲ್ಲಿ ಕೇಂದ್ರದ ನಿಲುವನ್ನು ನ್ಯಾಯಮೂರ್ತಿ ವಿಕ್ರಮ್‌ಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಶಿವಕೀರ್ತಿ ಸಿಂಗ್ ಅವರನ್ನೊಳಗೊಂಡ ಪೀಠ ಪ್ರಶ್ನಿಸಿದೆ.
ವಿವಿಧ ಧರ್ಮಗಳಿಗೆ ಸಂಬಂಧಿಸಿದ ವೈಯಕ್ತಿಕ ಕಾನೂನುಗಳಿಂದಾಗಿ ‘ಪೂರ್ಣ ಗೊಂದಲಮಯ’ ಸ್ಥಿತಿ ಇದೆ. ಏಕರೂಪ ನಾಗರಿಕ ಸಂಹಿತೆಯನ್ನು ನಾವು ರೂಪಿಸಬೇಕಿದೆ. ಈ ವಿಚಾರ ಏನಾಯಿತು? ನೀವು (ಸರ್ಕಾರ) ಮಾಡಬಯಸಿದಲ್ಲಿ  ಅದನ್ನು ಮಾಡಬೇಕು. ಯಾಕೆ ಅದನ್ನು ರೂಪಿಸಿ ಅನುಷ್ಠಾನಗೊಳಿಸಬಾರದು’ ಎಂದು ಪೀಠ ಪ್ರಶ್ನಿಸಿದೆ. ಸುಪ್ರೀಂಕೋರ್ಟ್‌ನ ಈ ಮಾತುಗಳು, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರದ ನೇತೃತ್ವ ವಹಿಸಿರುವ ಬಿಜೆಪಿಗೆ ನಿಜಕ್ಕೂ ವರದಾನ. ಏಕೆಂದರೆ, ಉದ್ದಕ್ಕೂ ಏಕರೂಪ ನಾಗರಿಕ ಸಂಹಿತೆಯನ್ನು ಬಿಜೆಪಿ ಬೆಂಬಲಿಸಿಕೊಂಡೇ ಬಂದಿದೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಇರುವ ಮುಖ್ಯ ವಿಚಾರಗಳಲ್ಲಿ ಇದೂ ಒಂದು. ಹೀಗಾಗಿ ಈ ಭರವಸೆ ಈಡೇರಿಸುವ ಅವಕಾಶ ಆಡಳಿತ ಪಕ್ಷಕ್ಕೆ ಈಗ ಸಿಕ್ಕಿದಂತಾಗಿದೆ.
ಆದರೆ ಸದ್ಯದ ಸಂದರ್ಭದಲ್ಲಿ ವಿವಾದಾತ್ಮಕ ವಿಚಾರಗಳಾದ ಘರ್ ವಾಪ್ಸಿ, ಗೋಮಾಂಸ ನಿಷೇಧ, ದಾದ್ರಿ ಹತ್ಯೆ  ವಿಚಾರಗಳಲ್ಲಿ ಹಿಂದುತ್ವದ ತುಂಡು ಸಂಘಟನೆಗಳನ್ನು ನಿಯಂತ್ರಣದಲ್ಲಿಡಲು ವಿಫಲವಾಗಿರುವ ಆರೋಪವನ್ನು ಬಿಜೆಪಿ ಎದುರಿಸುತ್ತಿದೆ. ಈಗ, ರಾಜಕೀಯವಾಗಿ ಸೂಕ್ಷ್ಮವೆನಿಸಿದ ಏಕರೂಪ ನಾಗರಿಕ ಸಂಹಿತೆ ಜಾರಿ ವಿಚಾರದಲ್ಲಿ  ಬಿಜೆಪಿ ಮುತುವರ್ಜಿ ವಹಿಸುವುದೆ ಎಂಬುದು ಪ್ರಶ್ನೆ. ಅಧಿಕಾರಕ್ಕೆ ಬಂದಾಗಲಿಂದ ಈವರೆಗೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮೌನವಾಗಿಯೇ ಇದೆ.
‘ರಾಷ್ಟ್ರೀಯ ಏಕತೆಗೆ ಏಕರೂಪ ನಾಗರಿಕ ಸಂಹಿತೆ ಅಗತ್ಯವಾದುದು’ ಎಂದು ಕೇಂದ್ರ ಕಾನೂನು ಸಚಿವ ಸದಾನಂದ ಗೌಡರೇನೊ ಸುಪ್ರೀಂಕೋರ್ಟ್ ನಿರ್ದೇಶನದ ನಂತರ ಪ್ರತಿಕ್ರಿಯಿಸಿದ್ದಾರೆ.  ಆದರೆ, ‘ಇದು ಸೂಕ್ಷ್ಮ ವಿಚಾರ. ಈ ವಿಚಾರದಲ್ಲಿ ಒಮ್ಮತ ಮೂಡಿಸಲು ವಿಸ್ತೃತ ಸಮಾಲೋಚನೆಗಳ ಅಗತ್ಯವಿದೆ. ವಿವಿಧ ವೈಯಕ್ತಿಕ ಕಾನೂನು ಮಂಡಳಿಗಳು ಸೇರಿದಂತೆ ಸಂಬಂಧಿಸಿದ ಎಲ್ಲರ ಜೊತೆ ಚರ್ಚೆ ಅಗತ್ಯವಿದೆ. ಇದಕ್ಕೆ ಸಾಕಷ್ಟು ಸಮಯ ಹಿಡಿಯಬಹುದು’ ಎಂಬಂತಹ ಮಾತುಗಳನ್ನೂ ಅವರು ಆಡಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯ ಚರ್ಚೆ ಇಂದು ನೆನ್ನೆಯದಲ್ಲ. ಏಕರೂಪ ನಾಗರಿಕ ಸಂಹಿತೆಯನ್ನು ನಾಗರಿಕರಿಗೆ ಒದಗಿಸಿಕೊಡಲು ಪ್ರಭುತ್ವ ಪ್ರಯತ್ನಿಸುತ್ತದೆ ಎಂದು ಸಂವಿಧಾನದ 44ನೇ ವಿಧಿ  ಹೇಳುತ್ತದೆ. ಸಂವಿಧಾನದ 44ನೇ ವಿಧಿ, ರಾಜ್ಯ ನೀತಿಯ ಮಾರ್ಗದರ್ಶಿ ತತ್ವಗಳಲ್ಲಿ ಸೇರಿದೆ. ಮಾರ್ಗದರ್ಶಿ ತತ್ವಗಳ ಜಾರಿ ಕಡ್ಡಾಯ ಏನಲ್ಲ.ಆದರೆ ಇದು ಸಂವಿಧಾನ ಜಾರಿಗೆ ಮಾರ್ಗದರ್ಶಿಯಾಗಿ ಅಥವಾ ಮಾದರಿ ಅಂಶವಾಗಿ ಇರುತ್ತದೆ. ಇದನ್ನು ಯಾವುದೇ ನ್ಯಾಯಾಲಯ ಜಾರಿಗೊಳಿಸುವುದು ಸಾಧ್ಯವಿಲ್ಲ. ಆದರೆ, ಅಲ್ಲಿರುವ ತತ್ವಗಳು ರಾಷ್ಟ್ರದ ಆಡಳಿತಕ್ಕೆ ಮೂಲಭೂತವಾದವು. ಕಾನೂನುಗಳನ್ನು ಮಾಡುವಾಗ ಈ ತತ್ವಗಳನ್ನು ಅಳವಡಿಸುವ ಕರ್ತವ್ಯ ಪ್ರಭುತ್ವದ್ದಾಗಿರುತ್ತದೆ ಎಂಬುದನ್ನು ಸಂವಿಧಾನದ 37ನೇ ವಿಧಿ ಸ್ಪಷ್ಟ ಪಡಿಸುತ್ತದೆ.
ಆದರೆ ಈವರೆಗೆ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಮರೀಚಿಕೆಯಾಗಿಯೇ ಉಳಿದುಕೊಂಡುಬಂದಿದೆ. ಎಲ್ಲಾ ನಾಗರಿಕರಿಗೂ ಅಪರಾಧ ಕಾನೂನು ಒಂದೇ ಇದೆ. ಆದರೆ ವಿವಾಹ, ಕುಟುಂಬಕ್ಕೆ ಸಂಬಂಧಿಸಿದ ನಾಗರಿಕ ಕಾನೂನಿನಲ್ಲಿ, ವಿವಿಧ ಧರ್ಮಗಳು ಹಾಗೂ ಸಮುದಾಯಗಳಿಗೆ ಅವರದೇ ಆಚರಣೆಗಳನ್ನು ಅನುಸರಿಸಲು ಅವಕಾಶ  ಇದೆ. ಅನೇಕ ಸಂದರ್ಭಗಳಲ್ಲಿ ಇವು ಮಹಿಳೆಗೆ ಸಂಬಂಧಿಸಿದಂತೆ ತಾರತಮ್ಯದ ನೀತಿಗಳನ್ನು ಹೊಂದಿರುತ್ತವೆ.
1980ರ ದಶಕದ ಮಧ್ಯಭಾಗದಲ್ಲಿ ಅನೇಕ ಧೈರ್ಯವಂತ ಮಹಿಳೆಯರು ವೈಯಕ್ತಿಕ ಕಾನೂನುಗಳ ವಿರುದ್ಧ ದನಿ ಎತ್ತಿದರು. ಉದಾಹರಣೆಗೆ, ಹಿಂದೂ ಉತ್ತರಾಧಿಕಾರ ಕಾಯಿದೆಯಲ್ಲಿ ಬದಲಾವಣೆಗೆ ಲತಾ ಮಿತ್ತಲ್  ಒತ್ತಾಯಿಸಿದರು. ಕುಟುಂಬದ ಆಸ್ತಿಯಲ್ಲಿ ಹಕ್ಕಿನ ಪಾಲಿನಿಂದ ಮಹಿಳೆಯರನ್ನು ವಂಚಿಸಿದ್ದ ಕ್ರೈಸ್ತ ಉತ್ತರಾಧಿಕಾರಿ ಕಾಯಿದೆಯನ್ನು ಮೇರಿ ರಾಯ್ ಪ್ರಶ್ನಿಸಿದ್ದರು. ಶೆಹನಾಜ್ ಷೇಕ್ ಅವರು ಮುಸ್ಲಿಂ ವಿಚ್ಛೇದನ ಕಾನೂನಿನಲ್ಲಿ ಮೂರು ಬಾರಿ ತಲಾಕ್ ಹೇಳುವುದರ ಕಾನೂನು ಮಾನ್ಯತೆಯನ್ನು ಪ್ರಶ್ನಿಸಿದ್ದರು.
ಆದರೆ 1985ರಲ್ಲಿ ಶಾ ಬಾನೊ ಪ್ರಕರಣವೆಂದು ಕರೆಯಲಾದ ಪ್ರಕರಣದಲ್ಲಿ, ಮಹಿಳೆ ಹಾಗೂ ಧರ್ಮವೊಂದಕ್ಕೆ ಸೇರಿದವಳಾಗಿ ಅಸ್ಮಿತೆಗಳ ವಿಭಿನ್ನ ದ್ವಂದ್ವಗಳಿಗೆ ಮಹಿಳೆ ಸಿಲುಕುವಂತಾದದ್ದು ಇತಿಹಾಸ. ತನ್ನ ವಕೀಲ ಪತಿಯಿಂದ ಜೀವನಾಂಶ ಕೋರಿ ಮಧ್ಯಪ್ರದೇಶದ ಇಂದೂರಿನ ವೃದ್ಧ ವಿಚ್ಛೇದಿತ ಮುಸ್ಲಿಂ ಮಹಿಳೆ ಶಾ ಬಾನೊ ಸುಪ್ರೀಂಕೋರ್ಟ್‌ನ ಮೆಟ್ಟಿಲೇರಿದ್ದರು. ಆಗಿನ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ವೈ.ವಿ. ಚಂದ್ರಚೂಡ್ ಅವರು, ವಿಚ್ಛೇದಿತ ಪತ್ನಿಯರು ಹಾಗೂ ಮಕ್ಕಳಿಗೆ ಪತಿಯಂದಿರು ಜೀವನಾಂಶ ನೀಡಬೇಕೆಂದು ಎತ್ತಿ ಹೇಳುವ ಜಾತ್ಯತೀತ ಕ್ರಿಮಿನಲ್ ಕಾನೂನು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್ ಪಿಸಿ) ಸೆಕ್ಷನ್ 125 ರ ಅಡಿ  ಶಾ ಬಾನೊಗೆ ಜೀವನಾಂಶ ನೀಡಬೇಕೆಂದು ತೀರ್ಪು ನೀಡಿದ್ದರು.


ಈ ತೀರ್ಪು ಹೊರಬಿದ್ದಿದ್ದು 1985 ರ ಏಪ್ರಿಲ್ 23ರಂದು. ಸರಿಯಾಗಿ 30 ವರ್ಷಗಳು ಕಳೆದುಹೋಗಿವೆ ಈಗ. ಆದರೆ ಶಾ ಬಾನೊ ಪರವಾದ ತೀರ್ಪು ಮುಸ್ಲಿಂ ಧಾರ್ಮಿಕ ನಾಯಕರ ಆಕ್ರೋಶಕ್ಕೆ ಕಾರಣವಾಗಿ ರಾಷ್ಟ್ರದಲ್ಲಿ ದೊಡ್ಡ ವಿವಾದವೇ ಸೃಷ್ಟಿಯಾಗಿಹೋಯಿತು. ಹೀಗಾಗಿ ಮಾಸಿಕ ₹ 179.20 ರಷ್ಟು ಕಡಿಮೆ ಮೊತ್ತದ ಜೀವನಾಂಶ ಕುರಿತಾದ ತಮ್ಮ ಪ್ರತಿಪಾದನೆಯನ್ನು ಶಾ ಬಾನೊ ಸಾರ್ವಜನಿಕವಾಗಿಯೇ ಕೈಬಿಟ್ಟರು. ಶಾ ಬಾನೊವಿನ ಹೋರಾಟ ಪಡೆದುಕೊಂಡ ಈ ನಾಟಕೀಯ ತಿರುವುಗಳು, ನಂತರದ ಘಟನಾವಳಿಗಳು ಬದುಕಿನ ದ್ವಂದ್ವಗಳನ್ನು ಹಾಗೂ ಧಾರ್ಮಿಕ, ರಾಜಕೀಯ ಶಕ್ತಿಗಳ ಪ್ರಾಬಲ್ಯವನ್ನು ಎತ್ತಿ ತೋರಿದವು.
ಈ ಪ್ರಕರಣದ ನೇರ ಪರಿಣಾಮ ಎಂದರೆ  1986ರ ಮುಸ್ಲಿಂ ಮಹಿಳೆ (ವಿಚ್ಛೇದನದ ಹಕ್ಕಿನ ರಕ್ಷಣೆ) ಮಸೂದೆ. ಈ ಹೊಸ ಕಾನೂನು ಸಿಆರ್‌ಪಿಸಿಯ ಸೆಕ್ಷನ್ 125ರಂತಹ ಜಾತ್ಯತೀತ ಕಾನೂನಿನ ಮೊರೆ ಹೋಗುವ ಅವಕಾಶವನ್ನು ಮುಸ್ಲಿಂ ಮಹಿಳೆಯರಿಗೆ ನಿರಾಕರಿಸಿತು. ಈ ವಿಚಾರದ ಹೊಣೆಗಾರಿಕೆಯನ್ನು ವಕ್ಫ್ ಮಂಡಳಿಗೆ ವಹಿಸಲಾಯಿತು. ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ಮುಸ್ಲಿಂ ಧಾರ್ಮಿಕ ನಾಯಕರ ಒತ್ತಡಗಳಿಗೆ ಮಣಿದರು ಎಂಬಂತಹ ಟೀಕೆಗಳೂ ವ್ಯಕ್ತವಾದವು. ಒಟ್ಟಾರೆ ರಾಷ್ಟ್ರದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೆ ತರುವ ವಿಚಾರಕ್ಕಂತೂ ತೀವ್ರ ಹಿನ್ನಡೆಯಾಯಿತು.
ವಿವಾದ ತೀವ್ರವಾಗುತ್ತಿದ್ದಂತೆ ಎರಡು ನಿಲುವುಗಳು ಸ್ಪಷ್ಟವಾದವು. ಏಕರೂಪ ನಾಗರಿಕ ಸಂಹಿತೆ ಬೆಂಬಲಿಸಿದವರನ್ನು ಜಾತ್ಯತೀತ, ಆಧುನಿಕ ಹಾಗೂ ಮಹಿಳಾ ಪರ ಎಂದು ಬಿಂಬಿಸಲಾಯಿತು. ವಿರೋಧಿಸಿದವರನ್ನು ಸಂಪ್ರದಾಯಶೀಲ, ಕೋಮುವಾದಿ ಹಾಗೂ ಮಹಿಳಾ ವಿರೋಧಿ ಎಂದು ಬಿಂಬಿಸಲಾಯಿತು. ಬಲಪಂಥೀಯ ಹಿಂದೂಗಳೂ ಈ ಅವಕಾಶ ಬಳಸಿಕೊಂಡರು. ಏಕರೂಪ ನಾಗರಿಕ ಸಂಹಿತೆ ಬೆಂಬಲಿಗರನ್ನು ರಾಷ್ಟ್ರೀಯವಾದಿಗಳೆಂದು ಬಿಂಬಿಸಲಾಯಿತು. ಈ ವಿಚಾರವನ್ನು ರಾಜಕೀಯ ಗಳಿಕೆಗಳಿಗಾಗಿ  ಧಾರ್ಮಿಕ ತೀವ್ರವಾದಿಗಳು ಬಳಸಿಕೊಳ್ಳ ತೊಡಗಿದರು. ನಂತರ ತೀವ್ರಗೊಂಡ ಕೋಮು ರಾಜಕಾರಣ ಹಾಗೂ 1992ರಲ್ಲಿ ಬಾಬ್ರಿ ಮಸೀದಿ ಕೆಡವಿದ್ದರಿಂದ ರಾಷ್ಟ್ರದಾದ್ಯಂತ ನಡೆದ ಗಲಭೆಗಳಿಂದಾಗಿ ಏಕರೂಪ ನಾಗರಿಕ ಸಂಹಿತೆ ಕುರಿತ ಬೇಡಿಕೆಗೆ ಸಂಬಂಧಿಸಿದ ಕಾರ್ಯತಂತ್ರಗಳನ್ನು ಮರು ಆಲೋಚಿಸುವುದು ಮಹಿಳಾ ಸಂಘಟನೆಗಳಿಗೆ ಅನಿವಾರ್ಯವಾಯಿತು.
ಈ ಚರ್ಚೆಯಲ್ಲಿ ತುಂಬಿಕೊಳ್ಳುವ ತೀವ್ರತರದ  ರಾಜಕೀಯದ ಸ್ವರೂಪವನ್ನು ಅರ್ಥ ಮಾಡಿಕೊಳ್ಳಲು ವೈಯಕ್ತಿಕ ಕಾನೂನುಗಳ ಇತಿಹಾಸವನ್ನೊಮ್ಮೆ ಅವಲೋಕಿಸಬೇಕು. 1770ರ ದಶಕದಲ್ಲಿ, ವಿಭಿನ್ನವಾಗಿದ್ದ ಹಾಗೂ ಪರಸ್ಪರ ವೈರುಧ್ಯಗಳನ್ನೂ ಹೊಂದಿದ್ದ ಧಾರ್ಮಿಕ ಪಠ್ಯಗಳಿಂದ ಹಿಂದೂ ಹಾಗೂ ಇಸ್ಲಾಮಿಕ್ ಕಾನೂನುಗಳನ್ನು ಆಯ್ಕೆ ಮಾಡಿ ಅಳವಡಿಸಿಕೊಳ್ಳುವ ಮೂಲಕ ಸಂಹಿತೆ ರೂಪಿಸುವ ಬೃಹತ್ ಕೆಲಸವನ್ನು ಬ್ರಿಟಿಷರು ಕೈಗೆತ್ತಿಕೊಂಡರು. ಈ ಪ್ರಕ್ರಿಯೆಯಲ್ಲಿ ಅದರಲ್ಲೂ ನ್ಯಾಯಾಲಯಗಳಲ್ಲಿ ವೈಯಕ್ತಿಕ ಕಾನೂನುಗಳ ವ್ಯಾಖ್ಯಾನ ಹಾಗೂ ಅನುಷ್ಠಾನಕ್ಕಾಗಿ  ಮೌಲ್ವಿಗಳು ಹಾಗೂ ಪಂಡಿತರ ನೆರವನ್ನೂ ಕೋರಲಾಯಿತು. ಅವರು, ಸಾಮಾಜಿಕ, ವರ್ಗ ಹಾಗೂ ಜಾತಿ ಪೂರ್ವಗ್ರಹಗಳನ್ನೂ ತಮ್ಮೊಂದಿಗೆ ತಂದಿದ್ದು ಸಹಜವಾಗಿಯೇ ಇತ್ತು. ಆದರೆ ಕೆಲವೊಂದು ಆಚರಣೆಗಳು ಅಮಾನುಷ ಹಾಗೂ ಉದಾರವಾದಿ ಚಿಂತನೆಗೆ ವಿರೋಧವಾಗಿದೆಯೆಂದು ಅವುಗಳನ್ನು ಭಾರತದ ಸಮಾಜ ಸುಧಾರಕರ ನೆರವಿನೊಂದಿಗೆ ಬ್ರಿಟಿಷರು ಬಹಿಷ್ಕರಿಸಿದರು.
ಇವುಗಳಲ್ಲಿ ಸತಿ, ಬಾಲ್ಯ ವಿವಾಹ ಹಾಗೂ ವಿಧವಾ ಮರುವಿವಾಹದ ಮೇಲಿನ ನಿಷೇಧಗಳು ಸೇರಿವೆ. ಹಿಂದೂ (ಸಿಖ್ಖರು ಹಾಗೂ ಜೈನರೂ ಒಳಗೊಳ್ಳುತ್ತಾರೆ), ಮುಸ್ಲಿಂ, ಕ್ರೈಸ್ತ ಹಾಗೂ ಪಾರ್ಸಿ– ಈ ನಾಲ್ಕು ಸಮುದಾಯಗಳಿಗೆ ಪ್ರತ್ಯೇಕ ಕಾನೂನುಗಳನ್ನು ರಚಿಸಲಾಯಿತು. ಧಾರ್ಮಿಕ ಹಾಗೂ ಸಾಂಪ್ರದಾಯಿಕ ಸಂಹಿತೆಗಳ ಹೂರಣವಾಗಿರುವ ಈ ಕಾನೂನುಗಳು ಮಹಿಳೆಯರನ್ನು ಪುರುಷನ ಅವಲಂಬಿತಳು ಹಾಗೂ ಅಧೀನ ನೆಲೆಯವಳು ಎಂದೇ ಭಾವಿಸುತ್ತವೆ. ವಿವಾಹದ ನಂತರ ಮಹಿಳೆ ಪತಿ ಮನೆಗೆ ಹೋಗಬೇಕು, ಪತಿಯೇ ಕುಟುಂಬದ ಯಜಮಾನ ಹಾಗೂ ಮಕ್ಕಳ ‘ಸಹಜ’ ಪೋಷಕ ಎಂದು ಭಾವಿಸುತ್ತವೆ. ಆಸ್ತಿಗೆ ಸಂಬಂಧಿಸಿದಂತೆ ಮಹಿಳೆಗೆ ಸಮಾನ ಹಕ್ಕುಗಳಿರುವುದಿಲ್ಲ.
ವೈಯಕ್ತಿಕ ಕಾನೂನುಗಳ ಅಸಂಗತತೆಯನ್ನು ಸಮಾನತೆಯ ಹಕ್ಕು ನೀಡುವ ಸಂವಿಧಾನದ 14ನೇ ವಿಧಿ ಅನ್ವಯ ಪ್ರಶ್ನಿಸಲಾಗುತ್ತದೆ. ವೈಯಕ್ತಿಕ ಕಾನೂನುಗಳಿಂದಾಗಿ ಸಮಾನತೆಯ ಹಕ್ಕಿಗೆ ಧಕ್ಕೆಯೊದಗಿದೆ ಎಂದು ಅನೇಕ ಮಂದಿ ಕೋರ್ಟ್ ಮೊರೆ ಹೋಗಿರುವುದೂ ಉಂಟು. ಎಲ್ಲಾ ಸಂದರ್ಭಗಳಲ್ಲೂ ತಂದೆಯನ್ನೇ ಸಹಜ ಪೋಷಕ ಎಂದು ಪರಿಗಣಿಸುವ ಹಿಂದೂ ಮೈನಾರಿಟಿ ಮತ್ತು ಗಾರ್ಡಿಯನ್ಷಿಪ್ ಕಾಯಿದೆ 1956ರ ಕೆಲವು ಅಂಶಗಳು 14 ನೇ ವಿಧಿಯನ್ನು  ಉಲ್ಲಂಘಿಸುತ್ತವೆ ಎಂದು 1999ರಲ್ಲಿ ಗೀತಾ ಹರಿಹರನ್ ವರ್ಸಸ್ ಆರ್‌ಬಿಐ ಪ್ರಕರಣದಲ್ಲಿ ಸಲ್ಲಿಸಲಾಗಿದ್ದ ಅರ್ಜಿ ಯಲ್ಲಿ ವಾದಿಸಲಾಗಿತ್ತು. ಆಗ, ಹಿಂದೂಗಳಿಗೆ ಸಂಬಂಧಿಸಿದಂತೆ ಪೋಷಕತ್ವದ ವಿಚಾರದಲ್ಲಿ ಸಮಾನತೆಯ ತತ್ವವನ್ನು ಜಾರಿಗೊಳಿಸಿ ಮಗುವಿನ ಹಿತವನ್ನಷ್ಟೇ ಮುಖ್ಯ ಎಂದು ಪರಿಗಣಿಸಲಾಗಿದ್ದನ್ನು ಸ್ಮರಿಸಬಹುದು.
ಈಗ ಕೇಂದ್ರದಲ್ಲಿರುವ ಎನ್‌ಡಿಎ ಸರ್ಕಾರ, ಏಕರೂಪ ನಾಗರಿಕ ಸಂಹಿತೆ ರಚನೆಗೆ ಮುಂದಾಗುವುದೆ? ಎಂಬುದು ಪ್ರಶ್ನೆ. ಯಾವುದೇ ಕಾನೂನು ರಚನೆ ಸಂಸತ್‌ನ ಪರಮಾಧಿಕಾರ. ಹೀಗಿದ್ದೂ ರಾಜಕೀಯ ಪರಿಗಣನೆಗಳಲ್ಲಿ ಸರ್ಕಾರದ  ಇಚ್ಛಾಶಕ್ತಿ ಸಿಲುಕಿಕೊಂಡಿರುವುದು ಈ ವಿಚಾರದಲ್ಲಿ ಸ್ಪಷ್ಟ. ಈ ವಿಚಾರ ಮುಟ್ಟದೆ ಇರುವ ನಿರ್ಧಾರವನ್ನು ಯುಪಿಎ ಸರ್ಕಾರ ಕಾಪಾಡಿಕೊಂಡುಬಂದಿತ್ತು. ಆದರೆ ರಾಷ್ಟ್ರೀಯ ಏಕತೆ ಹಾಗೂ ಲಿಂಗ ಸಮಾನತೆ ಹಿತಾಸಕ್ತಿ ದೃಷ್ಟಿಯಿಂದ ಕೇಂದ್ರ ಸರ್ಕಾರಕ್ಕೆ ಈ ವಿಚಾರವನ್ನು ಸುಪ್ರೀಂಕೋರ್ಟ್ ನೆನಪಿಸುತ್ತಲೇ ಬಂದಿದೆ.
ಮುಂದಿನ ತಿಂಗಳು ಕೋರ್ಟ್‌ಗೆ ಸರ್ಕಾರ ಏನು ಉತ್ತರ ಹೇಳಲಿದೆ ಎಂಬುದರಲ್ಲಿ ಸರ್ಕಾರದ ಇಚ್ಛಾಶಕ್ತಿಯ ಪರೀಕ್ಷೆಯಾಗಲಿದೆ. ಸಾಂವಿಧಾನಿಕ ಕರ್ತವ್ಯ ನಿರ್ವಹಣೆಗಾಗಿ ಸರ್ಕಾರ ಪ್ರಯತ್ನವನ್ನಾದರೂ ಶುರು ಮಾಡಬೇಕು. ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಮಾತುಗಳಲ್ಲೇ ಹೇಳುವುದಾದಲ್ಲಿ ‘ತಾವು ಬದ್ಧವಾಗಿರುತ್ತೇವೆ’ ಎನ್ನುವವರಿಗಾದರೂ ಇದು ಅನ್ವಯವಾಗುವಂತಾಗಬೇಕು. ಯಾವುದೇ ವೈಯಕ್ತಿಕ ಧಾರ್ಮಿಕ ನಿಯಮಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಹಕ್ಕು ಆಯಾ ಧರ್ಮಗಳ ಜನರಿಗೆ ಲಭ್ಯವಾಗುವುದೂ ಮುಖ್ಯ. ಆಗ ಈ ವಿವಾದದ ವಾಗ್ವಾದದಲ್ಲಿ ಹೊಸದೊಂದು ಅಧ್ಯಾಯಕ್ಕೆ ನಾಂದಿಯಾಗುತ್ತದೆ





ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ


ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ





ಬಹುತೇಕ ಎಲ್ಲರಿಗೂ ವಿಶ್ವಸಂಸ್ಥೆಯ ಬಗ್ಗೆ ಗೊತ್ತಿದೆ. ಆದರೆ ವಾಸ್ತವದಲ್ಲಿ ಈ ಸಂಸ್ಥೆ ಏನು ಮಾಡುತ್ತಿದೆ ಅಥವಾ ಅದರ ಕಾರ್ಯನಿರ್ವಹಣೆ ಏನು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಅಥವಾ, ಜಗತ್ತನ್ನು ಉತ್ತಮವಾದ ಮತ್ತು ಹೆಚ್ಚು ಶಾಂತಿಯುತವಾದ ಸ್ಥಳವಾಗಿ ಪರಿವರ್ತಿಸಬೇಕು ಎಂಬ ಸ್ಥಾಪಕರ ನಿರೀಕ್ಷೆಯನ್ನು ಈಡೇರಿಸಲು ವಿಶ್ವಸಂಸ್ಥೆಯು ತಿಣುಕಾಡುತ್ತಿರುವಾಗ 71ನೇ ಮಹಾಧಿವೇಶನಕ್ಕಾಗಿ ಜಾಗತಿಕ ನಾಯಕರೆಲ್ಲ ಸೇರಿದ್ದು ಯಾಕೆ?

ವಿಶ್ವಸಂಸ್ಥೆಯ ಹುಟ್ಟು- ಯಾವಾಗ, ಎಲ್ಲಿ ಮತ್ತು ಯಾಕೆ: 1945ರ ಜೂನ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಸಮಾವೇಶದಲ್ಲಿ ನಾಲ್ಕು ದೇಶಗಳು- ಬ್ರಿಟನ್, ಚೀನಾ, ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಮಾಡಿದವು. ಈ ಸನ್ನದು ಅದೇ ವರ್ಷ ಅಕ್ಟೋಬರ್ 24ರಂದು ಜಾರಿಗೆ ಬಂದ ಸಂದರ್ಭದಲ್ಲಿ ಆಗಷ್ಟೇ ಜಾಗತಿಕ ಯುದ್ಧವೊಂದು ಕೊನೆಗೊಂಡಿತ್ತು.

ಆಫ್ರಿಕಾ ಮತ್ತು ಏಷ್ಯಾದ ಬಹುಪಾಲು ಪ್ರದೇಶಗಳನ್ನು ವಸಾಹತು ಶಕ್ತಿಗಳು ಆಳುತ್ತಿದ್ದವು. ‘ವಿಶ್ವಸಂಸ್ಥೆಯ ಜನರಾದ ನಾವು’ ಎಂದು ಆರಂಭವಾಗುವ ಸನ್ನದಿಗೆ ತೀವ್ರ ಚರ್ಚೆಯ ನಂತರ ಸಹಿ ಹಾಕಲು 50 ದೇಶಗಳು ಒಪ್ಪಿದವು.

ಈ ಆರಂಭಿಕ ಸಾಲು ಯಾಕೆ ಮುಖ್ಯ? ಯಾಕೆಂದರೆ ಇಂದು ವಿಶ್ವಸಂಸ್ಥೆಯು ತನ್ನ 193 ಸದಸ್ಯ ರಾಷ್ಟ್ರಗಳ ಸಂಕುಚಿತ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ಕೆಲವರಿಗಾದರೂ ತೋರುತ್ತಿದೆ; ಸಾಮಾನ್ಯ ಸದಸ್ಯರ ಹಿತಾಸಕ್ತಿಗೆ ಬದಲಾಗಿ ಬಲಾಢ್ಯ ದೇಶಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.

ವಿಶ್ವಸಂಸ್ಥೆಯ ಸನ್ನದಿನಲ್ಲಿರುವ ಮೊದಲ ಎರಡು ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ಈ ಸೀಮಿತ ಆದ್ಯತೆಗಳು ತಡೆಯಾಗುತ್ತಿವೆ. ಈ ಪ್ರತಿಜ್ಞೆಗಳೆಂದರೆ, ಯುದ್ಧದ ಕೆಡುಕನ್ನು ತಡೆಯುವುದು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಮರು ಸ್ಥಾಪಿಸುವುದು.

ಮಾನವ ಹಕ್ಕುಗಳ ಬಗ್ಗೆ ಉನ್ನತ ಆದರ್ಶ: 1948ರಲ್ಲಿ ವಿಶ್ವಸಂಸ್ಥೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಪ್ರಕಟಿಸಿತು. ಗುಲಾಮಗಿರಿಗೆ ಒಳಗಾಗದಿರುವುದು, ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯ, ಕಿರುಕುಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇತರ ದೇಶಗಳಲ್ಲಿ ಆಶ್ರಯ ಕೋರುವ ಹಕ್ಕು ಇದರಲ್ಲಿ ಸೇರಿವೆ.

ಆದರೆ, ವಿಶ್ವಸಂಸ್ಥೆ ಸನ್ನದಿನಲ್ಲಿ ಉಲ್ಲೇಖಿಸಲಾಗಿರುವ ಹಲವು ಹಕ್ಕುಗಳು- ಶಿಕ್ಷಣದ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು, ರಾಷ್ಟ್ರೀಯತೆಯ ಹಕ್ಕು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಮಹಾಧಿವೇಶನ- ಮಹತ್ವದ ವೇದಿಕೆ, ಸೀಮಿತ ಅಧಿಕಾರ: ಪ್ರತಿ ಮಹಾಧಿವೇಶನದ ಆರಂಭದಲ್ಲಿಯೂ 2009ರಲ್ಲಿ ಲಿಬಿಯಾದ ಅಧ್ಯಕ್ಷ ಮುಹಮ್ಮರ್ ಗಡ್ಡಾಫಿ ಮಾಡಿದಂತೆ, ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಸುದೀರ್ಘವಾದ ಅಥವಾ ಕ್ಲೀಷೆಯಾದ ಮತ್ತು ಸಮನ್ವಯ ಇಲ್ಲದ ಭಾಷಣಗಳನ್ನು ಮಾಡುತ್ತಾರೆ.

ಕಾರ್ಯಕ್ರಮದಲ್ಲಿ ಬಲಾಢ್ಯರು ಭಾಗವಹಿಸುತ್ತಾರೆ, ಆದರೆ ಟೀಕಾಕಾರರು ಮಹಾಧಿವೇಶನವನ್ನು ವೈಭವೀಕೃತ ವಾಚಾಳಿ ವಿಚಾರ ಸಂಕಿರಣಗಳಿಗಿಂತ ದೊಡ್ಡದೆಂದು ಭಾವಿಸುವುದಿಲ್ಲ. ಅಧಿವೇಶನದ ಉಳಿದ ಅವಧಿ ಸಾಂಕೇತಿಕ ರಾಜತಾಂತ್ರಿಕ ಗೆಲುವು ಸೋಲುಗಳ ಕಾಳಗವಾಗಿ ಬದಲಾಗುತ್ತದೆ.

ಪ್ರತಿ ವರ್ಷ ನೂರಾರು ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಕೆಲವು ನಿರ್ಣಯಗಳು ಭಾರಿ ಗಮನ ಸೆಳೆಯುತ್ತವೆ. ಉದಾಹರಣೆಗೆ, 1975ರಲ್ಲಿ ಯಹೂದ್ಯವಾದವನ್ನು ಜನಾಂಗೀಯವಾದದೊಂದಿಗೆ ಸಮೀಕರಿಸಿದ ನಿರ್ಣಯ.

ಇಂತಹ ನಿರ್ಣಯಗಳಿಗೆ ಕಾನೂನುರೀತ್ಯ ಬದ್ಧತೆ ಇಲ್ಲ. ತಾತ್ವಿಕವಾಗಿ, ಮಹಾಧಿವೇಶನದಲ್ಲಿ ಸಣ್ಣ ಮತ್ತು ದೊಡ್ಡ, ಶ್ರೀಮಂತ ಮತ್ತು ಬಡವ ಎಲ್ಲ ದೇಶಗಳಿಗೆ ಸಮಾನ ಧ್ವನಿ ಇದೆ. ಪ್ರತಿ ದೇಶಕ್ಕೂ ಒಂದು ಮತ ಇದೆ. ಆದರೆ ನಿಜವಾದ ಅಧಿಕಾರ ಇರುವುದು ಬೇರೆ ಕಡೆ.

ಭದ್ರತಾ ಮಂಡಳಿ- ಶಕ್ತಿಶಾಲಿ ಆದರೆ ಸಾಮಾನ್ಯವಾಗಿ ಪಾರ್ಶ್ವವಾಯು ಪೀಡಿತ: 15 ಸದಸ್ಯರನ್ನು ಹೊಂದಿರುವ ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಘಟಕ. ಅಣ್ವಸ್ತ್ರ ಕಾರ್ಯಕ್ರಮವನ್ನು ವಿರೋಧಿಸಿ ಇರಾನ್‌ನ ಮೇಲೆ ಹೇರಿದಂತೆ ಇದು ನಿರ್ಬಂಧಗಳನ್ನು ಹೇರಬಲ್ಲದು ಮತ್ತು 2011ರಲ್ಲಿ ಲಿಬಿಯಾದ ಮೇಲೆ ಮಾಡಿದಂತೆ ಸೇನಾ ಹಸ್ತಕ್ಷೇಪಕ್ಕೆ ಹುಕುಂ ಕೊಡಬಲ್ಲದು.

ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಕಾಲಾಭಾಸಕ್ಕೆ ಒಳಗಾದ ಸಮಿತಿ ಎಂದೂ ಟೀಕಾಕಾರರು ಹೇಳುತ್ತಾರೆ. ಇದರ ಐದು ಶಾಶ್ವತ ಸದಸ್ಯ ರಾಷ್ಟ್ರಗಳು- ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಎರಡನೇ ಜಾಗತಿಕ ಯುದ್ಧದಲ್ಲಿ ಗೆದ್ದ ದೇಶಗಳು. ಇತರ 10 ಸದಸ್ಯ ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತವೆ. ಈ ಸ್ಥಾನಗಳನ್ನು ಜಗತ್ತಿನ ವಿವಿಧ ಪ್ರದೇಶಗಳಿಗೆ ಮೀಸಲಿರಿಸಲಾಗುತ್ತದೆ.


1945ರ ನಂತರ ದೊಡ್ಡ ಶಕ್ತಿಯಾಗಿ ಬೆಳೆದ ಭಾರತ, ಜಪಾನ್ ಮತ್ತು ಜರ್ಮನಿಯಂತಹ ದೇಶಗಳನ್ನು ಸೇರಿಸಿ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ವಿಸ್ತರಿಸುವ ಪ್ರಯತ್ನ ಮುಂದಕ್ಕೆ ಸಾಗುತ್ತಲೇ ಇಲ್ಲ. ಪ್ರತಿ ದೇಶ ಶಾಶ್ವತ ಸದಸ್ಯತ್ವಕ್ಕೆ ಪ್ರಯತ್ನಿಸಿದಾಗ ಮತ್ತೊಂದು ದೇಶ ಅದಕ್ಕೆ ತಡೆ ಒಡ್ಡುತ್ತದೆ.

ಶಾಶ್ವತ ಸದಸ್ಯತ್ವ ಇರುವ ಐದು ದೇಶಗಳು ಯಾವುದೇ ಕ್ರಮವನ್ನು ತಡೆಯುವ ಪರಮಾಧಿಕಾರ ಹೊಂದಿವೆ. ಈ ಐದರಲ್ಲಿ ಪ್ರತಿ ದೇಶವೂ ಸ್ವಹಿತಾಸಕ್ತಿ ಅಥವಾ ಮಿತ್ರ ದೇಶಗಳ ಹಿತಾಸಕ್ತಿಗಾಗಿ ಇದನ್ನು ನಿಯಮಿತವಾಗಿ ಬಳಸಿವೆ.

1990ರ ನಂತರ ಅಮೆರಿಕ ಪರಮಾಧಿಕಾರವನ್ನು 16 ಬಾರಿ ಬಳಸಿದೆ. ಇಸ್ರೇಲ್-ಪ್ಯಾಲೆಸ್ಟೀನ್ ಸಂಬಂಧದ ಕುರಿತು ಅಮೆರಿಕ ಹಲವು ಬಾರಿ ಪರಮಾಧಿಕಾರ ಉಪಯೋಗಿಸಿದೆ. ರಷ್ಯಾ 13 ಬಾರಿ ಪರಮಾಧಿಕಾರ ಬಳಸಿದ್ದರೆ ಅದರಲ್ಲಿ ನಾಲ್ಕು ಬಾರಿ ಸಿರಿಯಾಕ್ಕೆ ಸಂಬಂಧಿಸಿಯೇ ಈ ಹಕ್ಕು ಚಲಾಯಿಸಿದೆ.

ಪರಮಾಧಿಕಾರವು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ತೊಡಕು ಉಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನಿರ್ಣಯ ಕೈಗೊಳ್ಳಲು ಮಹಾಧಿವೇಶನಕ್ಕೆ ಹಕ್ಕು ಇದೆ ಎಂದು ವಿಶ್ವಸಂಸ್ಥೆಯ ಸನ್ನದು ಹೇಳುತ್ತದೆ. ಆದರೆ ಮಹಾಧಿವೇಶನದ ಈ ಹಕ್ಕು ಬಳಕೆಯಾದದ್ದು ವಿರಳ.

ಶಾಂತಿ ಸ್ಥಾಪನೆಯ ಸಮಸ್ಯೆಗಳು: ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡಿಕೊಂಡು ಬರುವುದು ಭದ್ರತಾ ಮಂಡಳಿಯ ಕೆಲಸ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಾಮರ್ಥ್ಯಕ್ಕೆ ತೀವ್ರವಾದ ತೊಡಕು ಎದುರಾಗಿದೆ.

ರಷ್ಯಾ ಮತ್ತು ಪಶ್ಚಿಮದ ದೇಶಗಳ ನಡುವಣ ಭಿನ್ನಾಭಿಪ್ರಾಯ ಇದಕ್ಕೆ ಮುಖ್ಯ ಕಾರಣ. ಹಲವು ಪ್ರಮುಖ ಸಂಘರ್ಷಗಳ ಸಂದರ್ಭದಲ್ಲಿ ಭದ್ರತಾ ಮಂಡಳಿ ಅಸಹಾಯಕವಾಗಿ ನಿಂತಿದೆ. ಶಾಶ್ವತ ಸದಸ್ಯ ರಾಷ್ಟ್ರಗಳ ಹಿತಾಸಕ್ತಿ ಒಳಗೊಂಡ ಪ್ರಕರಣಗಳಲ್ಲಿಯಂತೂ ಈ ಅಸಹಾಯಕತೆ ಇನ್ನೂ ಹೆಚ್ಚು.

ಸಿರಿಯಾ ಸಂಘರ್ಷ ನಿಭಾಯಿಸುವುದರಲ್ಲಿ ಆಗಿರುವ ವೈಫಲ್ಯ ತೀರಾ ಇತ್ತೀಚಿನ ಅತ್ಯಂತ ಢಾಳಾದ ಉದಾಹರಣೆ. ಸಿರಿಯಾ ಅಧ್ಯಕ್ಷ ಬಷರ್ ಅಸಾದ್ ಸರ್ಕಾರದ ಪರವಾಗಿ ರಷ್ಯಾ ನಿಂತಿದ್ದರೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಕೆಲವು ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತಿವೆ.

ಭದ್ರತಾ ಮಂಡಳಿಯು ಇಲ್ಲಿನ ಸಂಘರ್ಷವನ್ನು ಕೊನೆಗಾಣಿಸಲು ವಿಫಲವಾಗಿದ್ದು ಮಾತ್ರವಲ್ಲದೆ ಅಲ್ಲಿಗೆ ಆಹಾರ ಮತ್ತಿತರ ನೆರವು ನೀಡಲು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ನೋಡಿಕೊಳ್ಳುವಲ್ಲಿಯೂ ವಿಫಲವಾಗಿದೆ. ಸುದೀರ್ಘ ಕಾಲದಿಂದ ಚೀನಾದ ಮಿತ್ರನಾಗಿರುವ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ವಿರುದ್ಧ ವಿಶ್ವಸಂಸ್ಥೆಯ ನಿಷೇಧಗಳನ್ನು ಪದೇ ಪದೇ ಉಲ್ಲಂಘಿಸಿದೆ.

ಪ್ರಧಾನ ಕಾರ್ಯದರ್ಶಿ- ಜಾಗತಿಕ ವ್ಯಾಪ್ತಿ, ಅಸ್ಪಷ್ಟ ಪಾತ್ರ: ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನ ಕಾರ್ಯದರ್ಶಿಯ ಪಾತ್ರ ಏನು ಎಂಬುದನ್ನು ಸನ್ನದಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಪ್ರಧಾನ ಕಾರ್ಯದರ್ಶಿಯು ಯಾವುದೇ ಒಂದು ದೇಶದ ಪಕ್ಷಪಾತಿಯಾಗಿರಬಾರದು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ವಿಶ್ವಸಂಸ್ಥೆಯು ಬಲಾಢ್ಯ ದೇಶಗಳಿಂದ ದೊರೆಯುವ ಅನುದಾನ ಮತ್ತು ಅವುಗಳ ಪ್ರಭಾವದ ಮೇಲೆ ಅವಲಂಬಿತವಾಗಿದೆ.

ಮುಖ್ಯವಾಗಿ, ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ರಹಸ್ಯ ಮತದಾನದ ಮೂಲಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತವೆ. ಒಬ್ಬ ವ್ಯಕ್ತಿಗೆ ಐದು ವರ್ಷಗಳ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಲು ಅವಕಾಶ ಇದೆ.

ಈ  ಪ್ರಕ್ರಿಯೆಯಿಂದಾಗಿ ಪ್ರಧಾನ ಕಾರ್ಯದರ್ಶಿಯು ಐದು ಪ್ರಬಲ ದೇಶಗಳ ಪ್ರಭಾವದಿಂದ ಸ್ವತಂತ್ರವಾಗಿ ಇರುವುದು ಸಾಧ್ಯವಾಗುವುದಿಲ್ಲ. ಎಲ್ಲಾದರೂ ನಿಯೋಜಿಸುವುದಕ್ಕೆ ಪ್ರಧಾನ ಕಾರ್ಯದರ್ಶಿಗೆ ಸೇನೆ ಇಲ್ಲ. ಆದರೆ ಈ ಹುದ್ದೆಗೆ ಪ್ರಭಾವಿ ಧರ್ಮೋಪದೇಶಕನ ಪಾತ್ರ ಇದೆ.

ಪ್ರಧಾನ ಕಾರ್ಯದರ್ಶಿಯು ಸ್ವತಂತ್ರವಾಗಿದ್ದರೆ ಸಂಘರ್ಷದಲ್ಲಿ ತೊಡಗಿರುವ ಎರಡು ದೇಶಗಳನ್ನು ಶಾಂತಿ ಮಾತುಕತೆಗೆ ಕರೆಯುವ ಅಧಿಕಾರ ಅವರಿಗೆ ಇರುತ್ತದೆ. ಈಗಿನ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಹತ್ತು ವರ್ಷಗಳ ಅವಧಿಯಲ್ಲಿ ಈ ಹುದ್ದೆಯ ಮಿತಿಯನ್ನು ಬಹಿರಂಗಪಡಿಸಿದ ಹಲವು ನಿದರ್ಶನಗಳು ಇವೆ.

ಭದ್ರತಾ ಪಡೆಗಳು ಮಕ್ಕಳನ್ನು ಕೊಂದ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ ದೇಶಗಳ ಪಟ್ಟಿಯಲ್ಲಿ ಬಲಾಢ್ಯ ದೇಶಗಳು ಇರಬಾರದು ಎಂದು ಮೂನ್ ಅವರು ಎರಡು ವರ್ಷಗಳಿಂದ ದೇಶಗಳ ಮನವೊಲಿಸಲು ಯತ್ನಿಸುತ್ತಲೇ ಇದ್ದಾರೆ. 1946ರ ನಂತರ ಎಂಟು ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಅವರೆಲ್ಲರೂ ಗಂಡಸರು. ಈ ಬಾರಿ ಮೂನ್ ಅವರ ಉತ್ತರಾಧಿಕಾರಿಯ ಆಯ್ಕೆ ಆಗಲಿದೆ.


ವಿಶ್ಲೇಷಣೆ
ವಿಶ್ವಸಂಸ್ಥೆ: ಶಕ್ತಿಗುಂದುತ್ತಿರುವ ಜಾಗತಿಕ ಸಮಿತಿ

PreviousNext25 Sep, 2016ಪ್ರಜಾವಾಣಿ ವಾರ್ತೆ    
ಬಹುತೇಕ ಎಲ್ಲರಿಗೂ ವಿಶ್ವಸಂಸ್ಥೆಯ ಬಗ್ಗೆ ಗೊತ್ತಿದೆ. ಆದರೆ ವಾಸ್ತವದಲ್ಲಿ ಈ ಸಂಸ್ಥೆ ಏನು ಮಾಡುತ್ತಿದೆ ಅಥವಾ ಅದರ ಕಾರ್ಯನಿರ್ವಹಣೆ ಏನು ಎಂಬುದು ಎಷ್ಟು ಜನರಿಗೆ ತಿಳಿದಿದೆ? ಅಥವಾ, ಜಗತ್ತನ್ನು ಉತ್ತಮವಾದ ಮತ್ತು ಹೆಚ್ಚು ಶಾಂತಿಯುತವಾದ ಸ್ಥಳವಾಗಿ ಪರಿವರ್ತಿಸಬೇಕು ಎಂಬ ಸ್ಥಾಪಕರ ನಿರೀಕ್ಷೆಯನ್ನು ಈಡೇರಿಸಲು ವಿಶ್ವಸಂಸ್ಥೆಯು ತಿಣುಕಾಡುತ್ತಿರುವಾಗ 71ನೇ ಮಹಾಧಿವೇಶನಕ್ಕಾಗಿ ಜಾಗತಿಕ ನಾಯಕರೆಲ್ಲ ಸೇರಿದ್ದು ಯಾಕೆ?

ವಿಶ್ವಸಂಸ್ಥೆಯ ಹುಟ್ಟು- ಯಾವಾಗ, ಎಲ್ಲಿ ಮತ್ತು ಯಾಕೆ: 1945ರ ಜೂನ್‌ನಲ್ಲಿ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ ನಡೆದ ಸಮಾವೇಶದಲ್ಲಿ ನಾಲ್ಕು ದೇಶಗಳು- ಬ್ರಿಟನ್, ಚೀನಾ, ಸೋವಿಯತ್ ಒಕ್ಕೂಟ ಮತ್ತು ಅಮೆರಿಕ ವಿಶ್ವಸಂಸ್ಥೆಯ ಸನ್ನದಿಗೆ ಸಹಿ ಮಾಡಿದವು. ಈ ಸನ್ನದು ಅದೇ ವರ್ಷ ಅಕ್ಟೋಬರ್ 24ರಂದು ಜಾರಿಗೆ ಬಂದ ಸಂದರ್ಭದಲ್ಲಿ ಆಗಷ್ಟೇ ಜಾಗತಿಕ ಯುದ್ಧವೊಂದು ಕೊನೆಗೊಂಡಿತ್ತು.

ಆಫ್ರಿಕಾ ಮತ್ತು ಏಷ್ಯಾದ ಬಹುಪಾಲು ಪ್ರದೇಶಗಳನ್ನು ವಸಾಹತು ಶಕ್ತಿಗಳು ಆಳುತ್ತಿದ್ದವು. ‘ವಿಶ್ವಸಂಸ್ಥೆಯ ಜನರಾದ ನಾವು’ ಎಂದು ಆರಂಭವಾಗುವ ಸನ್ನದಿಗೆ ತೀವ್ರ ಚರ್ಚೆಯ ನಂತರ ಸಹಿ ಹಾಕಲು 50 ದೇಶಗಳು ಒಪ್ಪಿದವು.

ಈ ಆರಂಭಿಕ ಸಾಲು ಯಾಕೆ ಮುಖ್ಯ? ಯಾಕೆಂದರೆ ಇಂದು ವಿಶ್ವಸಂಸ್ಥೆಯು ತನ್ನ 193 ಸದಸ್ಯ ರಾಷ್ಟ್ರಗಳ ಸಂಕುಚಿತ ರಾಷ್ಟ್ರೀಯ ಹಿತಾಸಕ್ತಿಗಳಿಗಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ಕೆಲವರಿಗಾದರೂ ತೋರುತ್ತಿದೆ; ಸಾಮಾನ್ಯ ಸದಸ್ಯರ ಹಿತಾಸಕ್ತಿಗೆ ಬದಲಾಗಿ ಬಲಾಢ್ಯ ದೇಶಗಳ ಪರವಾಗಿ ಮಾತ್ರ ಕೆಲಸ ಮಾಡುತ್ತಿರುವಂತೆ ತೋರುತ್ತಿದೆ.

ವಿಶ್ವಸಂಸ್ಥೆಯ ಸನ್ನದಿನಲ್ಲಿರುವ ಮೊದಲ ಎರಡು ಪ್ರತಿಜ್ಞೆಗಳನ್ನು ಈಡೇರಿಸುವಲ್ಲಿ ಈ ಸೀಮಿತ ಆದ್ಯತೆಗಳು ತಡೆಯಾಗುತ್ತಿವೆ. ಈ ಪ್ರತಿಜ್ಞೆಗಳೆಂದರೆ, ಯುದ್ಧದ ಕೆಡುಕನ್ನು ತಡೆಯುವುದು ಮತ್ತು ಮೂಲಭೂತ ಮಾನವ ಹಕ್ಕುಗಳನ್ನು ಮರು ಸ್ಥಾಪಿಸುವುದು.

ಮಾನವ ಹಕ್ಕುಗಳ ಬಗ್ಗೆ ಉನ್ನತ ಆದರ್ಶ: 1948ರಲ್ಲಿ ವಿಶ್ವಸಂಸ್ಥೆಯು ಸಾರ್ವತ್ರಿಕ ಮಾನವ ಹಕ್ಕುಗಳ ಘೋಷಣೆಯನ್ನು ಪ್ರಕಟಿಸಿತು. ಗುಲಾಮಗಿರಿಗೆ ಒಳಗಾಗದಿರುವುದು, ಮುಕ್ತ ಅಭಿವ್ಯಕ್ತಿಯ ಸ್ವಾತಂತ್ರ್ಯ, ಕಿರುಕುಳದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಇತರ ದೇಶಗಳಲ್ಲಿ ಆಶ್ರಯ ಕೋರುವ ಹಕ್ಕು ಇದರಲ್ಲಿ ಸೇರಿವೆ.

ಆದರೆ, ವಿಶ್ವಸಂಸ್ಥೆ ಸನ್ನದಿನಲ್ಲಿ ಉಲ್ಲೇಖಿಸಲಾಗಿರುವ ಹಲವು ಹಕ್ಕುಗಳು- ಶಿಕ್ಷಣದ ಹಕ್ಕು, ಸಮಾನ ಕೆಲಸಕ್ಕೆ ಸಮಾನ ವೇತನದ ಹಕ್ಕು, ರಾಷ್ಟ್ರೀಯತೆಯ ಹಕ್ಕು ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

ಮಹಾಧಿವೇಶನ- ಮಹತ್ವದ ವೇದಿಕೆ, ಸೀಮಿತ ಅಧಿಕಾರ: ಪ್ರತಿ ಮಹಾಧಿವೇಶನದ ಆರಂಭದಲ್ಲಿಯೂ 2009ರಲ್ಲಿ ಲಿಬಿಯಾದ ಅಧ್ಯಕ್ಷ ಮುಹಮ್ಮರ್ ಗಡ್ಡಾಫಿ ಮಾಡಿದಂತೆ, ದೇಶಗಳ ಅಧ್ಯಕ್ಷರು ಮತ್ತು ಪ್ರಧಾನಿಗಳು ಸುದೀರ್ಘವಾದ ಅಥವಾ ಕ್ಲೀಷೆಯಾದ ಮತ್ತು ಸಮನ್ವಯ ಇಲ್ಲದ ಭಾಷಣಗಳನ್ನು ಮಾಡುತ್ತಾರೆ.

ಕಾರ್ಯಕ್ರಮದಲ್ಲಿ ಬಲಾಢ್ಯರು ಭಾಗವಹಿಸುತ್ತಾರೆ, ಆದರೆ ಟೀಕಾಕಾರರು ಮಹಾಧಿವೇಶನವನ್ನು ವೈಭವೀಕೃತ ವಾಚಾಳಿ ವಿಚಾರ ಸಂಕಿರಣಗಳಿಗಿಂತ ದೊಡ್ಡದೆಂದು ಭಾವಿಸುವುದಿಲ್ಲ. ಅಧಿವೇಶನದ ಉಳಿದ ಅವಧಿ ಸಾಂಕೇತಿಕ ರಾಜತಾಂತ್ರಿಕ ಗೆಲುವು ಸೋಲುಗಳ ಕಾಳಗವಾಗಿ ಬದಲಾಗುತ್ತದೆ.

ಪ್ರತಿ ವರ್ಷ ನೂರಾರು ನಿರ್ಣಯಗಳನ್ನು ಮಂಡಿಸಲಾಗುತ್ತದೆ. ಕೆಲವು ನಿರ್ಣಯಗಳು ಭಾರಿ ಗಮನ ಸೆಳೆಯುತ್ತವೆ. ಉದಾಹರಣೆಗೆ, 1975ರಲ್ಲಿ ಯಹೂದ್ಯವಾದವನ್ನು ಜನಾಂಗೀಯವಾದದೊಂದಿಗೆ ಸಮೀಕರಿಸಿದ ನಿರ್ಣಯ.

ಇಂತಹ ನಿರ್ಣಯಗಳಿಗೆ ಕಾನೂನುರೀತ್ಯ ಬದ್ಧತೆ ಇಲ್ಲ. ತಾತ್ವಿಕವಾಗಿ, ಮಹಾಧಿವೇಶನದಲ್ಲಿ ಸಣ್ಣ ಮತ್ತು ದೊಡ್ಡ, ಶ್ರೀಮಂತ ಮತ್ತು ಬಡವ ಎಲ್ಲ ದೇಶಗಳಿಗೆ ಸಮಾನ ಧ್ವನಿ ಇದೆ. ಪ್ರತಿ ದೇಶಕ್ಕೂ ಒಂದು ಮತ ಇದೆ. ಆದರೆ ನಿಜವಾದ ಅಧಿಕಾರ ಇರುವುದು ಬೇರೆ ಕಡೆ.

ಭದ್ರತಾ ಮಂಡಳಿ- ಶಕ್ತಿಶಾಲಿ ಆದರೆ ಸಾಮಾನ್ಯವಾಗಿ ಪಾರ್ಶ್ವವಾಯು ಪೀಡಿತ: 15 ಸದಸ್ಯರನ್ನು ಹೊಂದಿರುವ ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಶಕ್ತಿಶಾಲಿ ಘಟಕ. ಅಣ್ವಸ್ತ್ರ ಕಾರ್ಯಕ್ರಮವನ್ನು ವಿರೋಧಿಸಿ ಇರಾನ್‌ನ ಮೇಲೆ ಹೇರಿದಂತೆ ಇದು ನಿರ್ಬಂಧಗಳನ್ನು ಹೇರಬಲ್ಲದು ಮತ್ತು 2011ರಲ್ಲಿ ಲಿಬಿಯಾದ ಮೇಲೆ ಮಾಡಿದಂತೆ ಸೇನಾ ಹಸ್ತಕ್ಷೇಪಕ್ಕೆ ಹುಕುಂ ಕೊಡಬಲ್ಲದು.

ಭದ್ರತಾ ಮಂಡಳಿ ವಿಶ್ವಸಂಸ್ಥೆಯ ಅತ್ಯಂತ ಕಾಲಾಭಾಸಕ್ಕೆ ಒಳಗಾದ ಸಮಿತಿ ಎಂದೂ ಟೀಕಾಕಾರರು ಹೇಳುತ್ತಾರೆ. ಇದರ ಐದು ಶಾಶ್ವತ ಸದಸ್ಯ ರಾಷ್ಟ್ರಗಳು- ಅಮೆರಿಕ, ಬ್ರಿಟನ್, ಚೀನಾ, ಫ್ರಾನ್ಸ್ ಮತ್ತು ರಷ್ಯಾ ಎರಡನೇ ಜಾಗತಿಕ ಯುದ್ಧದಲ್ಲಿ ಗೆದ್ದ ದೇಶಗಳು. ಇತರ 10 ಸದಸ್ಯ ರಾಷ್ಟ್ರಗಳು ಎರಡು ವರ್ಷಗಳ ಅವಧಿಗೆ ಆಯ್ಕೆಯಾಗುತ್ತವೆ. ಈ ಸ್ಥಾನಗಳನ್ನು ಜಗತ್ತಿನ ವಿವಿಧ ಪ್ರದೇಶಗಳಿಗೆ ಮೀಸಲಿರಿಸಲಾಗುತ್ತದೆ.

1945ರ ನಂತರ ದೊಡ್ಡ ಶಕ್ತಿಯಾಗಿ ಬೆಳೆದ ಭಾರತ, ಜಪಾನ್ ಮತ್ತು ಜರ್ಮನಿಯಂತಹ ದೇಶಗಳನ್ನು ಸೇರಿಸಿ ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವವನ್ನು ವಿಸ್ತರಿಸುವ ಪ್ರಯತ್ನ ಮುಂದಕ್ಕೆ ಸಾಗುತ್ತಲೇ ಇಲ್ಲ. ಪ್ರತಿ ದೇಶ ಶಾಶ್ವತ ಸದಸ್ಯತ್ವಕ್ಕೆ ಪ್ರಯತ್ನಿಸಿದಾಗ ಮತ್ತೊಂದು ದೇಶ ಅದಕ್ಕೆ ತಡೆ ಒಡ್ಡುತ್ತದೆ.

ಶಾಶ್ವತ ಸದಸ್ಯತ್ವ ಇರುವ ಐದು ದೇಶಗಳು ಯಾವುದೇ ಕ್ರಮವನ್ನು ತಡೆಯುವ ಪರಮಾಧಿಕಾರ ಹೊಂದಿವೆ. ಈ ಐದರಲ್ಲಿ ಪ್ರತಿ ದೇಶವೂ ಸ್ವಹಿತಾಸಕ್ತಿ ಅಥವಾ ಮಿತ್ರ ದೇಶಗಳ ಹಿತಾಸಕ್ತಿಗಾಗಿ ಇದನ್ನು ನಿಯಮಿತವಾಗಿ ಬಳಸಿವೆ.


1990ರ ನಂತರ ಅಮೆರಿಕ ಪರಮಾಧಿಕಾರವನ್ನು 16 ಬಾರಿ ಬಳಸಿದೆ. ಇಸ್ರೇಲ್-ಪ್ಯಾಲೆಸ್ಟೀನ್ ಸಂಬಂಧದ ಕುರಿತು ಅಮೆರಿಕ ಹಲವು ಬಾರಿ ಪರಮಾಧಿಕಾರ ಉಪಯೋಗಿಸಿದೆ. ರಷ್ಯಾ 13 ಬಾರಿ ಪರಮಾಧಿಕಾರ ಬಳಸಿದ್ದರೆ ಅದರಲ್ಲಿ ನಾಲ್ಕು ಬಾರಿ ಸಿರಿಯಾಕ್ಕೆ ಸಂಬಂಧಿಸಿಯೇ ಈ ಹಕ್ಕು ಚಲಾಯಿಸಿದೆ.

ಪರಮಾಧಿಕಾರವು ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆಗೆ ತೊಡಕು ಉಂಟು ಮಾಡುತ್ತದೆ ಎಂದಾದರೆ ಅದರ ವಿರುದ್ಧ ನಿರ್ಣಯ ಕೈಗೊಳ್ಳಲು ಮಹಾಧಿವೇಶನಕ್ಕೆ ಹಕ್ಕು ಇದೆ ಎಂದು ವಿಶ್ವಸಂಸ್ಥೆಯ ಸನ್ನದು ಹೇಳುತ್ತದೆ. ಆದರೆ ಮಹಾಧಿವೇಶನದ ಈ ಹಕ್ಕು ಬಳಕೆಯಾದದ್ದು ವಿರಳ.

ಶಾಂತಿ ಸ್ಥಾಪನೆಯ ಸಮಸ್ಯೆಗಳು: ಅಂತರರಾಷ್ಟ್ರೀಯ ಶಾಂತಿಯನ್ನು ಕಾಪಾಡಿಕೊಂಡು ಬರುವುದು ಭದ್ರತಾ ಮಂಡಳಿಯ ಕೆಲಸ. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಸಾಮರ್ಥ್ಯಕ್ಕೆ ತೀವ್ರವಾದ ತೊಡಕು ಎದುರಾಗಿದೆ.

ರಷ್ಯಾ ಮತ್ತು ಪಶ್ಚಿಮದ ದೇಶಗಳ ನಡುವಣ ಭಿನ್ನಾಭಿಪ್ರಾಯ ಇದಕ್ಕೆ ಮುಖ್ಯ ಕಾರಣ. ಹಲವು ಪ್ರಮುಖ ಸಂಘರ್ಷಗಳ ಸಂದರ್ಭದಲ್ಲಿ ಭದ್ರತಾ ಮಂಡಳಿ ಅಸಹಾಯಕವಾಗಿ ನಿಂತಿದೆ. ಶಾಶ್ವತ ಸದಸ್ಯ ರಾಷ್ಟ್ರಗಳ ಹಿತಾಸಕ್ತಿ ಒಳಗೊಂಡ ಪ್ರಕರಣಗಳಲ್ಲಿಯಂತೂ ಈ ಅಸಹಾಯಕತೆ ಇನ್ನೂ ಹೆಚ್ಚು.

ಸಿರಿಯಾ ಸಂಘರ್ಷ ನಿಭಾಯಿಸುವುದರಲ್ಲಿ ಆಗಿರುವ ವೈಫಲ್ಯ ತೀರಾ ಇತ್ತೀಚಿನ ಅತ್ಯಂತ ಢಾಳಾದ ಉದಾಹರಣೆ. ಸಿರಿಯಾ ಅಧ್ಯಕ್ಷ ಬಷರ್ ಅಸಾದ್ ಸರ್ಕಾರದ ಪರವಾಗಿ ರಷ್ಯಾ ನಿಂತಿದ್ದರೆ ಅಮೆರಿಕ, ಬ್ರಿಟನ್ ಮತ್ತು ಫ್ರಾನ್ಸ್ ಕೆಲವು ವಿರೋಧಿ ಗುಂಪುಗಳನ್ನು ಬೆಂಬಲಿಸುತ್ತಿವೆ.

ಭದ್ರತಾ ಮಂಡಳಿಯು ಇಲ್ಲಿನ ಸಂಘರ್ಷವನ್ನು ಕೊನೆಗಾಣಿಸಲು ವಿಫಲವಾಗಿದ್ದು ಮಾತ್ರವಲ್ಲದೆ ಅಲ್ಲಿಗೆ ಆಹಾರ ಮತ್ತಿತರ ನೆರವು ನೀಡಲು ಮತ್ತು ಆರೋಗ್ಯ ಕಾರ್ಯಕರ್ತರ ಸುರಕ್ಷತೆ ನೋಡಿಕೊಳ್ಳುವಲ್ಲಿಯೂ ವಿಫಲವಾಗಿದೆ. ಸುದೀರ್ಘ ಕಾಲದಿಂದ ಚೀನಾದ ಮಿತ್ರನಾಗಿರುವ ಉತ್ತರ ಕೊರಿಯಾ ಪರಮಾಣು ಪರೀಕ್ಷೆ ವಿರುದ್ಧ ವಿಶ್ವಸಂಸ್ಥೆಯ ನಿಷೇಧಗಳನ್ನು ಪದೇ ಪದೇ ಉಲ್ಲಂಘಿಸಿದೆ.

ಪ್ರಧಾನ ಕಾರ್ಯದರ್ಶಿ- ಜಾಗತಿಕ ವ್ಯಾಪ್ತಿ, ಅಸ್ಪಷ್ಟ ಪಾತ್ರ: ವಿಶ್ವಸಂಸ್ಥೆಯ ಮುಖ್ಯಸ್ಥರಾಗಿರುವ ಪ್ರಧಾನ ಕಾರ್ಯದರ್ಶಿಯ ಪಾತ್ರ ಏನು ಎಂಬುದನ್ನು ಸನ್ನದಿನಲ್ಲಿ ಸ್ಪಷ್ಟವಾಗಿ ವಿವರಿಸಲಾಗಿಲ್ಲ. ಪ್ರಧಾನ ಕಾರ್ಯದರ್ಶಿಯು ಯಾವುದೇ ಒಂದು ದೇಶದ ಪಕ್ಷಪಾತಿಯಾಗಿರಬಾರದು ಎಂದು ನಿರೀಕ್ಷಿಸಲಾಗುತ್ತದೆ. ಆದರೆ ವಿಶ್ವಸಂಸ್ಥೆಯು ಬಲಾಢ್ಯ ದೇಶಗಳಿಂದ ದೊರೆಯುವ ಅನುದಾನ ಮತ್ತು ಅವುಗಳ ಪ್ರಭಾವದ ಮೇಲೆ ಅವಲಂಬಿತವಾಗಿದೆ.

ಮುಖ್ಯವಾಗಿ, ಭದ್ರತಾ ಮಂಡಳಿಯ ಐದು ಶಾಶ್ವತ ಸದಸ್ಯ ರಾಷ್ಟ್ರಗಳು ರಹಸ್ಯ ಮತದಾನದ ಮೂಲಕ ಪ್ರಧಾನ ಕಾರ್ಯದರ್ಶಿಯನ್ನು ಆಯ್ಕೆ ಮಾಡುತ್ತವೆ. ಒಬ್ಬ ವ್ಯಕ್ತಿಗೆ ಐದು ವರ್ಷಗಳ ಎರಡು ಅವಧಿಗೆ ಪ್ರಧಾನ ಕಾರ್ಯದರ್ಶಿಯಾಗಲು ಅವಕಾಶ ಇದೆ.

ಈ  ಪ್ರಕ್ರಿಯೆಯಿಂದಾಗಿ ಪ್ರಧಾನ ಕಾರ್ಯದರ್ಶಿಯು ಐದು ಪ್ರಬಲ ದೇಶಗಳ ಪ್ರಭಾವದಿಂದ ಸ್ವತಂತ್ರವಾಗಿ ಇರುವುದು ಸಾಧ್ಯವಾಗುವುದಿಲ್ಲ. ಎಲ್ಲಾದರೂ ನಿಯೋಜಿಸುವುದಕ್ಕೆ ಪ್ರಧಾನ ಕಾರ್ಯದರ್ಶಿಗೆ ಸೇನೆ ಇಲ್ಲ. ಆದರೆ ಈ ಹುದ್ದೆಗೆ ಪ್ರಭಾವಿ ಧರ್ಮೋಪದೇಶಕನ ಪಾತ್ರ ಇದೆ.

ಪ್ರಧಾನ ಕಾರ್ಯದರ್ಶಿಯು ಸ್ವತಂತ್ರವಾಗಿದ್ದರೆ ಸಂಘರ್ಷದಲ್ಲಿ ತೊಡಗಿರುವ ಎರಡು ದೇಶಗಳನ್ನು ಶಾಂತಿ ಮಾತುಕತೆಗೆ ಕರೆಯುವ ಅಧಿಕಾರ ಅವರಿಗೆ ಇರುತ್ತದೆ. ಈಗಿನ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಅವರ ಹತ್ತು ವರ್ಷಗಳ ಅವಧಿಯಲ್ಲಿ ಈ ಹುದ್ದೆಯ ಮಿತಿಯನ್ನು ಬಹಿರಂಗಪಡಿಸಿದ ಹಲವು ನಿದರ್ಶನಗಳು ಇವೆ.

ಭದ್ರತಾ ಪಡೆಗಳು ಮಕ್ಕಳನ್ನು ಕೊಂದ ಮತ್ತು ಅವರ ಮೇಲೆ ದೌರ್ಜನ್ಯ ಎಸಗಿದ ದೇಶಗಳ ಪಟ್ಟಿಯಲ್ಲಿ ಬಲಾಢ್ಯ ದೇಶಗಳು ಇರಬಾರದು ಎಂದು ಮೂನ್ ಅವರು ಎರಡು ವರ್ಷಗಳಿಂದ ದೇಶಗಳ ಮನವೊಲಿಸಲು ಯತ್ನಿಸುತ್ತಲೇ ಇದ್ದಾರೆ. 1946ರ ನಂತರ ಎಂಟು ಮಂದಿ ಪ್ರಧಾನ ಕಾರ್ಯದರ್ಶಿ ಹುದ್ದೆಯನ್ನು ನಿಭಾಯಿಸಿದ್ದಾರೆ. ಅವರೆಲ್ಲರೂ ಗಂಡಸರು. ಈ ಬಾರಿ ಮೂನ್ ಅವರ ಉತ್ತರಾಧಿಕಾರಿಯ ಆಯ್ಕೆ ಆಗಲಿದೆ.


ಮುಂದೆ ಏನು?
ವಿಶ್ವಸಂಸ್ಥೆಯ ಭವಿಷ್ಯಕ್ಕೆ ಸಂಬಂಧಿಸಿ ಐದು ಪ್ರಶ್ನೆಗಳಿವೆ. ಜನವರಿ ಒಂದರಂದು ಪ್ರಧಾನ ಕಾರ್ಯದರ್ಶಿಯಾಗಿ ಯಾರೇ ಅಧಿಕಾರ ವಹಿಸಿಕೊಳ್ಳಲಿ- 70  ವರ್ಷಗಳ ಹಿಂದೆ ಊಹಿಸಲಾಗದ ಹೊಸ ಸವಾಲುಗಳನ್ನು ಎದುರಿಸುತ್ತಿರುವ ಜಗತ್ತಿನಲ್ಲಿ ವಿಶ್ವಸಂಸ್ಥೆಯನ್ನು ಪ್ರಸ್ತುತವಾಗಿ ಉಳಿಸಿಕೊಳ್ಳುವ ಅಸಾಧ್ಯ ಎನಿಸುವಂತಹ ಹೊಣೆ ಅವರ ಮೇಲಿರುತ್ತದೆ.

ಸಂಸ್ಥೆಯ ಪ್ರಭಾವ ಕುಸಿಯುತ್ತಿದೆಯೇ ಅಥವಾ ಬೆಳೆಯುತ್ತಿದೆಯೇ ಎಂಬುದನ್ನು ನಿರ್ಧರಿಸುವ ಐದು ಪ್ರಶ್ನೆಗಳು ಇಲ್ಲಿವೆ:
1. ಅಂತರರಾಷ್ಟ್ರೀಯ ಮಾನವೀಯ ಕಾನೂನುಗಳನ್ನು ಉಲ್ಲಂಘಿಸುವ ದೇಶಗಳ ವಿರುದ್ಧ ಭದ್ರತಾ ಮಂಡಳಿಯು ಕ್ರಮ ಕೈಗೊಳ್ಳಲು ಸಾಧ್ಯವೇ? ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವದ ಐದು ದೇಶಗಳು ತಮ್ಮ ಸಂಕುಚಿತ ಹಿತಾಸಕ್ತಿಬದಿಗಿಟ್ಟು ಯುದ್ಧಾಕಾಂಕ್ಷೆಯನ್ನು ತಡೆಯವುದಕ್ಕೆ ಸಾಧ್ಯವೇ?

2. ನಾಗರಿಕರ ರಕ್ಷಣೆಯ ಖಾತರಿ ನೀಡುವ ರೀತಿಯಲ್ಲಿ ಶಾಂತಿ ಪಾಲನಾ ಕಾರ್ಯಾಚರಣೆಯನ್ನು ಪುನರ್‌ರೂಪಿಸುವುದು ಸಾಧ್ಯವೇ?

3. ಸಾಮೂಹಿಕ ವಲಸೆಯ ಹೊಸ ವಾಸ್ತವವನ್ನು ಕೊನೆಗೊಳಿಸಲು ಹೊಸ ಕ್ರಮಗಳೊಂದಿಗೆ ಮುಂದೆ ಬರುವಂತೆ ದೇಶಗಳ ಮನವೊಲಿಸಲು ವಿಶ್ವಸಂಸ್ಥೆಗೆ ಸಾಧ್ಯವಾದೀತೇ?

4. ಇಂಗಾಲದ ಹೊರಸೂಸುವಿಕೆಯ ಕಡಿತದ ಭರವಸೆಯನ್ನು ಈಡೇರಿಸುವಂತೆ ದೇಶಗಳ ಮನವೊಲಿಸಲು ಪ್ರಧಾನ ಕಾರ್ಯದರ್ಶಿಗೆ ಸಾಧ್ಯವಾದೀತೇ? ಹವಾಮಾನ ಬದಲಾವಣೆಯ ಪರಿಣಾಮಗಳಿಂದ ನರಳುತ್ತಿರುವವರಿಗೆ ನೆರವಾಗಲು ಅವರಿಗೆ ಸಾಧ್ಯವಾದೀತೇ?

5. ತನ್ನ ಸ್ಥಾಪನಾ ಉದ್ದೇಶವಾದ, ಜಗತ್ತನ್ನು ಉತ್ತಮ ಮತ್ತು ಹೆಚ್ಚು ಶಾಂತಿಯುತವಾದ ಸ್ಥಳವಾಗಿ ಮಾರ್ಪಡಿಸುವ ಗುರಿಗೆ ಇನ್ನಷ್ಟು ಹತ್ತಿರವಾಗುವುದಕ್ಕೆ ವಿಶ್ವಸಂಸ್ಥೆಗೆ ಸಾಧ್ಯವಾದೀತೇ?






ವಿಶ್ಲೇಷಣೆ : ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?

ಕುಲಾಂತರಿ ಸಾಸಿವೆ ಇಂದಿನ ಅಗತ್ಯವೇ?




ಕುಲಾಂತರಿ ಬೀಜಗಳಿಂದ ನಮ್ಮ ಬೀಜ ಸ್ವಾತಂತ್ರ್ಯ ನಾಶವಾಗಿ ಬಹುರಾಷ್ಟ್ರೀಯ ಕಂಪೆನಿಗಳ ಏಕಸ್ವಾಮ್ಯತೆಗೆ ದಾರಿಯಾಗುತ್ತದೆ ಎಂಬ ಕಾರಣಕ್ಕೆ ಅದನ್ನು ವಿರೋಧಿಸಲಾಗುತ್ತದೆ ಎಂಬುದು ಸಾಮಾನ್ಯ ಅಭಿಪ್ರಾಯ. ಹಾಗಾದರೆ ದೆಹಲಿ ವಿಶ್ವವಿದ್ಯಾಲಯವೇ ಅಭಿವೃದ್ಧಿಪಡಿಸಿ, ದೇಶದ ಅತ್ಯುಚ್ಚ ನಿಯಂತ್ರಕ ಸಂಸ್ಥೆಯಾದ ಜಿಇಎಸಿಯ (Genetic Engineering Appraisal Committee) ಅನುಮೋದನೆ ಪಡೆದ ಡಿಎಮ್‌ಎಚ್- 11 (ಧಾರಾ ಮಸ್ಟರ್ಡ್ ಹೈಬ್ರಿಡ್– 11)  ಎನ್ನುವ ‘ದೇಸಿ’ ಕುಲಾಂತರಿ ಸಾಸಿವೆ ಇದೀಗ ತೀವ್ರ ವಿವಾದಕ್ಕೆ ಸಿಕ್ಕಿಕೊಂಡದ್ದಾದರೂ ಹೇಗೆ?

ಈ ದೇಸಿ ಕುಲಾಂತರಿ ಬೀಜವನ್ನು ದೇಶದ ಹೆಮ್ಮೆಯ ಸಂಕೇತವೆಂದು ಬಿಂಬಿಸುತ್ತಿದ್ದ ಕೇಂದ್ರ ಅರಣ್ಯ ಮತ್ತು ಪರಿಸರ ಸಚಿವಾಲಯ ಈ ವಿಚಾರದಲ್ಲಿ ಸಾರ್ವಜನಿಕ ಅಭಿಪ್ರಾಯ ಕೋರಿ 30 ದಿನಗಳ, ಅಂದರೆ ಇಂದಿನವರೆಗೆ (ಅ. 5) ಅವಕಾಶ ನೀಡಿದೆ. 2010ರಲ್ಲಿ ಹೀಗೆಯೇ ಬಿಡುಗಡೆಗೆ ಅನುಮೋದನೆ ಪಡೆದಿದ್ದ ಕುಲಾಂತರಿ ಬದನೆಗೆ ತಡೆ ತರುವಲ್ಲಿ ಆಗಿನ ಪರಿಸರ ಮತ್ತು ಅರಣ್ಯ ಸಚಿವ ಜೈರಾಂ ರಮೇಶ್ ಕ್ರಿಯಾಶೀಲ ಪಾತ್ರ ವಹಿಸಿದ್ದರು. ಆಗ ಬದನೆಯಲ್ಲಿ ಮುಗಿದಿದ್ದ ಕುಲಾಂತರಿ ಆಹಾರ ಬೆಳೆಯ ಅಧ್ಯಾಯ ಈಗ ಸಾಸಿವೆಯಲ್ಲಿ ಮತ್ತೆ ತೆರೆದುಕೊಂಡಿದೆ.

ಕುಲಾಂತರಿ ಸಾಸಿವೆಯನ್ನು ಏಕೆ ಬೆಂಬಲಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರದ ನಿಲುವು ಇಂತಿದೆ. ಮೊದಲನೆಯದಾಗಿ, ಇದು ಸಾರ್ವಜನಿಕ ವಲಯ ಈ ದೇಶದ ಜನರ ದುಡ್ದಿನಿಂದ ಅಭಿವೃದ್ಧಿಪಡಿಸಿರುವುದೇ ಹೊರತು ಬಹುರಾಷ್ಟ್ರೀಯ ಕಂಪೆನಿಯ ಕೂಸಲ್ಲ. ಎರಡನೆಯದಾಗಿ, ಭಾರತ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬನೆ ಕಳೆದುಕೊಂಡಿದ್ದು ಪ್ರತಿವರ್ಷ 65 ಸಾವಿರ ಕೋಟಿ ರೂಪಾಯಿಯ ತೈಲ ಆಮದು ಮಾಡಿಕೊಳ್ಳುತ್ತಿದೆ.

ಈ ಕುಲಾಂತರಿ ಸಾಸಿವೆ ಈಗಿರುವ ತಳಿಗಳಿಗಿಂತ 35% ಹೆಚ್ಚು ಇಳುವರಿ ಕೊಡುವುದರಿಂದ ಉತ್ಪಾದನೆ ಹೆಚ್ಚಾಗಿ ತೈಲ ಆಮದಿನಲ್ಲಿ ಗಣನೀಯ ಕಡಿತ ಮಾಡಬಹುದು. ಮೂರನೆಯದಾಗಿ, ಬಿಡುಗಡೆಗೆ ಸಿದ್ಧವಾಗಿರುವ ಈ ಕುಲಾಂತರಿ ಸಾಸಿವೆ ಮಾನವ, ಪರಿಸರ, ಪಶುಪಕ್ಷಿ- ಕೀಟಗಳ ಮೇಲೆ ಕೆಟ್ಟ ಪರಿಣಾಮ ಉಂಟುಮಾಡುವುದಿಲ್ಲವೆಂದು ಸಾಬೀತಾಗಿದೆ. ಆದರೆ ವಾಸ್ತವವೇ ಬೇರೆಯಿದ್ದು ಈ ಎಲ್ಲಾ ವಿಚಾರಗಳು ಸತ್ಯಕ್ಕೆ ದೂರವಾಗಿರುವುದರಿಂದಲೇ ಇದನ್ನು ನಿಷೇಧಿಸಬೇಕೆಂಬ ಕೂಗು ಮುಗಿಲು ಮುಟ್ಟುತ್ತಿರುವುದು.

ಮೊದಲನೆಯದಾಗಿ, ಈ ಕುಲಾಂತರಿ ಸಾಸಿವೆಯನ್ನು ನಮ್ಮ ಸ್ವಂತ ನೆಲದಲ್ಲಿ ಅಭಿವೃದ್ಧಿಪಡಿಸಿದ್ದರೂ ಇದಕ್ಕೆ ಸೇರಿಸಿರುವ ವಂಶವಾಹಿಯ (ಜೀನ್) ಹಕ್ಕುಸ್ವಾಮ್ಯ ಇರುವುದು ‘ಬಾಯರ್ ಆಗ್ರೋ ಸೈನ್ಸಸ್’ ಎನ್ನುವ ಜರ್ಮನಿ ಮೂಲದ ಬಹುರಾಷ್ಟ್ರೀಯ ಕಂಪೆನಿ ಬಳಿ. ಈ ಡಿಎಂಎಚ್- 11 ಎನ್ನುವ ಕುಲಾಂತರಿ ಸಾಸಿವೆ ಬರ್ನೆಸ್, ಬರ್‌ಸ್ಟರ್, ಬಾರ್ ಎಂಬ ಮೂರು ವಂಶವಾಹಿ ವ್ಯವಸ್ಥೆ ಹೊಂದಿದೆ.

ಇಲ್ಲಿ ಫಲಹೀನ ಗಂಡು ಸಸ್ಯಗಳನ್ನು ಅಭಿವೃದ್ಧಿಪಡಿಸಲು ಬರ್ನೆಸ್-ಬರ್‌ಸ್ಟರ್ ವಂಶವಾಹಿ ಪದ್ಧತಿ ಬಳಸಿದ್ದರೆ, ಗ್ಲುಫೊಸಿನೇಟ್ ಎಂಬ ಕಳೆನಾಶಕದ ಸಹಿಷ್ಣುತೆಗೆ ಬಾರ್ ವಂಶವಾಹಿಯನ್ನು ಸೇರಿಸಲಾಗಿದೆ. 2002ರಲ್ಲಿ ಇದೇ ಬಾಯರ್ (ಪ್ರೊ- ಆಗ್ರೊ) ಕಂಪೆನಿ ಇದೇ ವಂಶವಾಹಿ ವ್ಯವಸ್ಥೆ ಹೊಂದಿದ ಕುಲಾಂತರಿ ಸಾಸಿವೆ ಬಿಡುಗಡೆಗೆ ಅರ್ಜಿ ಸಲ್ಲಿಸಿದಾಗ ಜೈವಿಕ ತಂತ್ರಜ್ಞಾನ ಇಲಾಖೆ ಅದನ್ನು ತಿರಸ್ಕರಿಸಿತ್ತು (ಈಗಲೂ ಇಂತಹ ಹತ್ತಾರು ಕಳೆನಾಶಕ ಸಹಿಷ್ಣು ಕುಲಾಂತರಿ ಬೆಳೆಗಳನ್ನು ತಡೆಹಿಡಿಯಲಾಗಿದೆ).

ಕಳೆನಾಶಕ ಸಹಿಷ್ಣು ವಂಶವಾಹಿಗಳ 100% ಹಕ್ಕನ್ನು ಬಾಯರ್ ಕಂಪೆನಿ ಹೊಂದಿದೆ. ಈ ಕುಲಾಂತರಿ ಸಾಸಿವೆಗೆ ಸೇರಿಸಿರುವ ವಂಶವಾಹಿಗಳ ಹಕ್ಕುಸ್ವಾಮ್ಯ ಕೂಡ ಬಾಯರ್‌ಗೇ ಸೇರುತ್ತದೆ. ಮುಂದೊಂದು ದಿನ ಈ ‘ದೇಸಿ’  ಕುಲಾಂತರಿ ಸಾಸಿವೆಯ ಹಕ್ಕುಸ್ವಾಮ್ಯ ನನ್ನದು ಎಂದು ಬಾಯರ್ ಅದನ್ನು ಕಬಳಿಸಬಹುದು.

ದೆಹಲಿ ವಿಶ್ವವಿದ್ಯಾಲಯದ ಡಾ. ಪೆಂತಾಲ್ ಅವರು ಕುಲಾಂತರಿ ಸಾಸಿವೆ ಅಭಿವೃದ್ಧಿಗೆ ಜಿಇಎಸಿಗೆ ಅರ್ಜಿ ಸಲ್ಲಿಸಿದಾಗ, ಅದಕ್ಕೆ ಕಳೆನಾಶಕ ಸಹಿಷ್ಣು ವಂಶವಾಹಿ ಸೇರಿಸಲಾಗುತ್ತದೆ ಎಂಬ ವಿಚಾರವನ್ನೇ ಹೇಳಿರಲಿಲ್ಲ. ಇದನ್ನು ವಾಣಿಜ್ಯವಾಗಿ ಬೆಳೆಯಲು ಅನುಮೋದನೆ ನೀಡಿದಾಗಲೂ ಜಿಇಎಸಿಗೆ ಈ ವಿಚಾರ ಗೊತ್ತಿರಲಿಲ್ಲ! ಕಳೆನಾಶಕ ಸಹಿಷ್ಣು ಕುಲಾಂತರಿ ತಂತ್ರಜ್ಞಾನ ಮಹಾ ಅಪಾಯಕಾರಿ. 2012ರಲ್ಲಿ ಲೋಕಸಭೆಯ ಸ್ಥಾಯಿ ಸಮಿತಿ ಮತ್ತು 2013ರಲ್ಲಿ ಸುಪ್ರೀಂ ಕೋರ್ಟ್‌ನ ತಾಂತ್ರಿಕ ತಜ್ಞ ಸಮಿತಿಗಳೆರಡೂ, ಈ ತಂತ್ರಜ್ಞಾನವನ್ನು ಭಾರತದಲ್ಲಿ ಉಪಯೋಗ ಮಾಡಕೂಡದು ಎಂದು ಬಲವಾಗಿ ಶಿಫಾರಸು ಮಾಡಿದ್ದವು.

ಕುಲಾಂತರಿ ಸಾಸಿವೆ ಬೆಳೆಗೆ ಗ್ಲುಫೊಸಿನೇಟ್ ಕಳೆನಾಶಕ ಕಡ್ಡಾಯವಾಗಿ ಹೊಡೆಯಬೇಕಾಗಿರುತ್ತದೆ. ಪ್ರಪಂಚದಾದ್ಯಂತ ಅನೇಕ ದೇಶಗಳು ಗ್ಲುಫೊಸಿನೇಟನ್ನು ನಿಷೇಧಿಸಿರುವುದರಿಂದ ಭಾರತದಲ್ಲಿ ಕುಲಾಂತರಿ ಸಾಸಿವೆಯ ಮೂಲಕ ಲಾಭ ದೋಚಿಕೊಳ್ಳಲು ಬಾಯರ್ ಈ ಹುನ್ನಾರ ನಡೆಸಿದೆ. ಹಾಗಾಗಿ ಬಾಯರ್ ಕಂಪೆನಿಯ ಜೊತೆ ವಂಶವಾಹಿ ಹಕ್ಕುಸ್ವಾಮ್ಯಕ್ಕೆ ಸಂಬಂಧಿಸಿ ಡಾ. ಪೆಂತಾಲ್ ಮಾಡಿಕೊಂಡ ಒಪ್ಪಂದ ಬಹಿರಂಗಪಡಿಸಬೇಕು ಎಂದು ಇದರ ವಿರೋಧಿಗಳು ಒತ್ತಾಯಿಸುತ್ತಿದ್ದಾರೆ.

ಈ ಕಳೆನಾಶಕ ಸಹಿಷ್ಣು ವಂಶವಾಹಿಯನ್ನು ಹೊಂದಿರುವ ಮೂಲ ಬೀಜಗಳನ್ನು ಬಳಸಿ ಲೆಕ್ಕವಿಲ್ಲದಷ್ಟು ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಎಷ್ಟರ ಮಟ್ಟಿಗಿನ ಮಾಲಿನ್ಯ ಉಂಟಾಗುತ್ತದೆ ಎಂಬುದು ಊಹಿಸಲು ಅಸಾಧ್ಯ. ಎರಡನೆಯದಾಗಿ, ಕುಲಾಂತರಿ ಸಾಸಿವೆಯಿಂದ ಇಳುವರಿ ಹೆಚ್ಚಾಗಿ ಖಾದ್ಯತೈಲ ಆಮದಿನಲ್ಲಿ ಕಡಿತವಾಗುತ್ತದೆ ಎನ್ನುವುದು.


ಈ ಕಳೆನಾಶಕ ಸಹಿಷ್ಣು ವಂಶವಾಹಿಯನ್ನು ಹೊಂದಿರುವ ಮೂಲ ಬೀಜಗಳನ್ನು ಬಳಸಿ ಲೆಕ್ಕವಿಲ್ಲದಷ್ಟು ಸಂಕರಣ ತಳಿಗಳನ್ನು ಅಭಿವೃದ್ಧಿಪಡಿಸಬಹುದು. ಇದರಿಂದ ಎಷ್ಟರ ಮಟ್ಟಿಗಿನ ಮಾಲಿನ್ಯ ಉಂಟಾಗುತ್ತದೆ ಎಂಬುದು ಊಹಿಸಲು ಅಸಾಧ್ಯ. ಎರಡನೆಯದಾಗಿ, ಕುಲಾಂತರಿ ಸಾಸಿವೆಯಿಂದ ಇಳುವರಿ ಹೆಚ್ಚಾಗಿ ಖಾದ್ಯತೈಲ ಆಮದಿನಲ್ಲಿ ಕಡಿತವಾಗುತ್ತದೆ ಎನ್ನುವುದು.

1980ರ ದಶಕದಲ್ಲಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸಂಪೂರ್ಣ ಸ್ವಾವಲಂಬನೆ ಹೊಂದಿದ್ದ ಭಾರತ ನಂತರ ಅದನ್ನು ಕಳೆದುಕೊಳ್ಳಲು ಉತ್ಪಾದನೆ ಕಡಿಮೆಯಾದದ್ದು ಕಾರಣವಲ್ಲ, 1991ರ ಹೊಸ ಆರ್ಥಿಕ ನೀತಿ, ಭಾರತ ಡಬ್ಲ್ಯುಟಿಒ ಸೇರಿದ್ದು ಮತ್ತು 1994ರಲ್ಲಿ ಆಹಾರ ಪದಾರ್ಥಗಳ ಆಮದಿನ ಮೇಲೆ ಪ್ರಮಾಣಾತ್ಮಕ ನಿರ್ಬಂಧ ತೆಗೆದುಹಾಕಿದ್ದು ಕಾರಣ.

ಇದರಿಂದ ಭಾರತ ಮತ್ತು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸಾಸಿವೆಯ ಬೆಲೆಯಲ್ಲಿ ದೊಡ್ಡ ವ್ಯತ್ಯಾಸ ಉಂಟಾಯಿತು. 1994-97ರ ಅವಧಿಯಲ್ಲಿ ಭಾರತದಲ್ಲಿ ಸಾಸಿವೆ ಬೆಲೆ ಟನ್ನಿಗೆ ಗರಿಷ್ಠ ₹ 63,500 (962.3 ಡಾಲರ್) ಇದ್ದರೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ  ₹ 40,700 (617 ಡಾಲರ್) ಇತ್ತು. ಇದರಿಂದ ಭಾರತದ ರೈತರು ಅಂತರರಾಷ್ಟ್ರೀಯ ಮಾರುಕಟ್ಟೆಯಿಂದ ಹೊರಗುಳಿಯುವಂತಾಯಿತು. ಬೆಲೆ ಕುಸಿತದಿಂದ ಭಾರತದ ಸಾಸಿವೆ ಬೆಳೆಗಾರರು ₹ 1.09 ಲಕ್ಷ ಕೋಟಿ ನಷ್ಟ ಅನುಭವಿಸಬೇಕಾಯಿತು. ಇಲ್ಲಿನ ಸಾಸಿವೆ ಬೆಲೆ ಅಂತರರಾಷ್ಟ್ರೀಯ ಮಾರುಕಟ್ಟೆಗಿಂತ 27% ಹೆಚ್ಚಿದೆ.

ಭಾರತದಲ್ಲಿ ಎಣ್ಣೆಕಾಳು ಬೆಳೆಗಾರರಿಗೆ ಸಿಗುವ ಕಿಲುಬುಕಾಸಿನ ಸಬ್ಸಿಡಿಗೂ ಯುರೋಪಿಯನ್ ದೇಶಗಳಲ್ಲಿನ ಸಬ್ಸಿಡಿಗೂ ಅಜಗಜದ ವ್ಯತ್ಯಾಸ ಇರುವುದರಿಂದ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮುಕ್ತ ಸ್ಪರ್ಧೆ ಅಸಾಧ್ಯ. ಹೀಗಾಗಿ 1998ರ ವೇಳೆಗೆ ಭಾರತ ಸ್ವಾವಲಂಬನೆ ಕಳೆದುಕೊಂಡು ಪ್ರಪಂಚದಲ್ಲೇ ದೊಡ್ಡ ಎಣ್ಣೆ ಆಮದುದಾರ ದೇಶ ಎನಿಸಿಕೊಂಡಿತು. ಇಲ್ಲಿನ ಸಾಸಿವೆ ಮತ್ತು ಇತರ ಎಣ್ಣೆಕಾಳುಬೇಸಾಯದಲ್ಲಿ ತೀವ್ರ ಸ್ಥಗಿತ ಉಂಟಾಯಿತು.

ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯದ ಪ್ರಕಾರ, 2005- 15ರ ಅವಧಿಯಲ್ಲಿ ಭಾರತದ ಎಣ್ಣೆ ಆಮದು ಮೂರುಪಟ್ಟಾಯಿತು. ಇವತ್ತು ಭಾರತ 1.45 ಕೋಟಿ ಟನ್ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತಿದೆ. ದೇಶ ಇಂದು ರಿಫೈನ್ಡ್ ಆಯಿಲ್ ಅನ್ನು ಕಚ್ಚಾತೈಲ ಮಾತ್ರವಲ್ಲ, ಎಣ್ಣೆಕಾಳುಗಳಿಗಿಂತ ಕಡಿಮೆ ದರದಲ್ಲಿ ಆಮದು ಮಾಡಿಕೊಳ್ಳುತ್ತಿದೆ!  ಇದರ ಬಹುಪಾಲು ಪಾಮ್‌ಆಯಿಲ್ ಆಗಿದೆಯೇ ವಿನಾ ಸಾಸಿವೆ ಎಣ್ಣೆಯಲ್ಲ.

ಹೀಗಾಗಿ ತೈಲ ಆಮದು ವೆಚ್ಚ  ಕಡಿಮೆ ಮಾಡುವುದು ಉತ್ಪಾದನೆಗೆ ಸಂಬಂಧಿಸಿದ್ದಲ್ಲ, ಮಾರಾಟ ನೀತಿಗೆ ಸಂಬಂಧಿಸಿದ್ದಾಗಿದ್ದು ಸಮಸ್ಯೆಗೆ ಉತ್ತರ ಇರುವುದು ಕುಲಾಂತರಿ ಸಾಸಿವೆಯಲ್ಲಲ್ಲ, ಮಾರಾಟ ನೀತಿಗಳನ್ನು ಸರಿಪಡಿಸುವಲ್ಲಿ. ಅಷ್ಟಕ್ಕೂ ಇಂದು ಭಾರತದ ರೈತರು ಬಳಸುತ್ತಿರುವ ಬೀಜಗಳು ಉತ್ತಮ ಇಳುವರಿಯನ್ನೇ ಕೊಡುತ್ತಿವೆ.

ವಿಷಮುಕ್ತ ರೀತಿಯಲ್ಲಿ ಬೆಳೆದಾಗ ಜೇನುಹುಳುಗಳು ಅಪಾರವಾಗಿ ಆಕರ್ಷಿತವಾಗಿ 30% ಇಳುವರಿ ಹೆಚ್ಚುವುದರಲ್ಲಿ ಯಾವ ಅನುಮಾನವೂ ಇಲ್ಲ.ಮೂರನೆಯದು, ಕುಲಾಂತರಿ ಸಾಸಿವೆ ಸುರಕ್ಷಿತ ಎನ್ನುವ ಪ್ರತಿಪಾದನೆ. ಈ ಸಾಸಿವೆ ಕಳೆನಾಶಕ ಸಹಿಷ್ಣು ಎನ್ನುವಾಗಲೇ ಅಪಾಯದ ಗಂಟೆ ಬಾರಿಸಿಯಾಯಿತು. ಭಾರತದಲ್ಲಿ ಇದರ ದುಷ್ಪರಿಣಾಮ ಕಂಡುಹಿಡಿಯುವ ವ್ಯವಸ್ಥೆ ಇಲ್ಲವೇ ಇಲ್ಲ.

ಪ್ರಪಂಚದಾದ್ಯಂತ ವೈಜ್ಞಾನಿಕವಾಗಿ ಸಾಬೀತಾಗಿರುವಂತೆ, ಗ್ಲುಫೊಸಿನೇಟ್ ಕಳೆನಾಶಕವು ಜೇನುನೊಣಗಳ ನರಕೋಶ, ಸಂತಾನೋತ್ಪತ್ತಿ ಅಂಗಗಳ ಮೇಲೆ ಮಾರಕ ಪರಿಣಾಮ ಬೀರುತ್ತದೆ. ಭಾರತದ ಏಳು ರಾಜ್ಯಗಳ ಜೇನು ಉತ್ಪಾದಕರ ಮಹಾಮಂಡಳಿಯ ಪ್ರಕಾರ, ನಮ್ಮಲ್ಲಿ 90 ಸಾವಿರ ಟನ್ ವಾರ್ಷಿಕ ಜೇನು ಉತ್ಪಾದನೆಯಿದ್ದು ಇದರ ಶೇ 60ಕ್ಕೂ ಹೆಚ್ಚು ಸಾಸಿವೆ ಹೊಲದಿಂದ ಬರುತ್ತಿದೆ.

ವಾರ್ಷಿಕವಾಗಿ 35 ಸಾವಿರ ಟನ್ ರಫ್ತಾಗುತ್ತಿದ್ದು ವಿಶ್ವದಲ್ಲಿ 4ನೇ ಸ್ಥಾನದಲ್ಲಿದೆ. ಜೇನು ಕೃಷಿಕರ ಅನುಭವದಂತೆ ಬಿ.ಟಿ. ಹತ್ತಿ ಬಂದ ನಂತರ ಜೇನುಹುಳುಗಳು ಹತ್ತಿ ಹೊಲಕ್ಕೆ ಹೋಗುವುದನ್ನು ಬಿಟ್ಟವು. ದಿನಕ್ಕೆ 20 ಕೆ.ಜಿ.ಯಷ್ಟು ಉತ್ಪಾದನೆಯಾಗುತ್ತಿದ್ದ ಜೇನುತುಪ್ಪ ಒಂದು ತೊಟ್ಟೂ ಸಿಗದಂತಾಯಿತು. ಹೀಗಾಗಿ ಬಿ.ಟಿ. ಹತ್ತಿ ಹೊಲದ ಆಸುಪಾಸಿನಲ್ಲಿ ಜೇನು ಕೃಷಿ ಮಾಡುವುದನ್ನೇ ನಿಲ್ಲಿಸಬೇಕಾಯಿತು. ಇನ್ನು ಕುಲಾಂತರಿ ಸಾಸಿವೆ ಬಂದುಬಿಟ್ಟರೆ ದೇಶದ ಜೇನು ಕೃಷಿಯ ಮೇಲೆ ದೊಡ್ಡ ಹೊಡೆತವೇ ಬೀಳುತ್ತದೆ.

ಈ ಉದ್ಯಮದಲ್ಲಿ ಒಳಗೊಂಡಿರುವ ಐದು ಲಕ್ಷ ಜೇನು ಕೃಷಿಕರು ಉದ್ಯೋಗ ಕಳೆದುಕೊಳ್ಳುವಂತಹ ಸ್ಥಿತಿ ಎದುರಾಗುತ್ತದೆ. ಅಲ್ಲದೆ ದೇಶದ  ಬಹುಪಾಲು ಜೇನುತುಪ್ಪವನ್ನು ಆಮದು ಮಾಡಿಕೊಳ್ಳುವ ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕ ಕುಲಾಂತರಿ ಮುಕ್ತ ದೃಢೀಕರಣ ಪಡೆದ ಜೇನುತುಪ್ಪವನ್ನು ಮಾತ್ರ ಕೊಳ್ಳುತ್ತವೆ.

ಇದಕ್ಕೆ ಸಮಜಾಯಿಷಿ ಕೊಡುವ ದೀಪಕ್ ಪೆಂತಾಲ್, ‘ನಮ್ಮ ಕ್ಷೇತ್ರ ಪ್ರಯೋಗದ ಸಮಯದಲ್ಲಿ ಜೇನುನೊಣಗಳು ಎಂದಿನಂತೆ ಹೂವಿಗೆ ಬರುತ್ತಿದ್ದವು’ ಎನ್ನುತ್ತಾರೆ. ಅಷ್ಟಕ್ಕೂ ಇವರು ಕೈಗೊಂಡದ್ದು ಒಂದೇ ಹಂಗಾಮಿನ ಕ್ಷೇತ್ರ ಪ್ರಯೋಗ. ಹಿರಿಯ ವಿಜ್ಞಾನಿ ಪುಷ್ಪ ಭಾರ್ಗವ, ‘ಇಂಥ ಪರಿಣಾಮಗಳು ತಕ್ಷಣ ತೋರ್ಪಡುವುದಿಲ್ಲ. ಯಾವುದೇ ಕುಲಾಂತರಿ ಬೆಳೆಯನ್ನು ಪರಿಸರಕ್ಕೆ ಬಿಡುವ ಮೊದಲು 30  ಪರೀಕ್ಷೆಗಳನ್ನು ಕಡ್ಡಾಯವಾಗಿ ಮಾಡಬೇಕು ಎನ್ನುತ್ತಾರೆ.

ಆದರೆ ಈ ಕುಲಾಂತರಿ ಸಾಸಿವೆ ವಿಚಾರದಲ್ಲಿ ಯಾವುದೇ ಜೀವ ಸುರಕ್ಷಕ ಪರೀಕ್ಷೆಗಳೂ ಪೂರ್ಣಗೊಂಡಿಲ್ಲ. ಅಪೂರ್ಣ ಪ್ರಯೋಗಗಳನ್ನೇ ಒಳಗೊಂಡಿದ್ದ 4 ಸಾವಿರ  ಪುಟಗಳ ‘ಬಯೋಸೇಫ್ಟಿ ಡೋಸಿಯರ್’ ಅನ್ನು ಪೆಂತಾಲ್ ಸಲ್ಲಿಸಿದರೂ ಜಿಇಎಸಿ ಅದನ್ನು ಪರಿಶೀಲಿಸದೆ ‘ಕುಲಾಂತರಿ ಸಾಸಿವೆ ಸುರಕ್ಷಿತವಾಗಿದೆ’ ಎಂದು ಘೋಷಿಸಿಬಿಟ್ಟಿತು.

ನಾಗರಿಕ ಸಮಾಜದಿಂದ ಒತ್ತಡ ಹೆಚ್ಚಾದ ನಂತರ ಕೇಂದ್ರ ಮಾಹಿತಿ ಆಯೋಗವು ಪರಿಸರ ಸಚಿವಾಲಯಕ್ಕೆ ಜೀವ ಸುರಕ್ಷತಾ ವಿವರ ಬಿಡುಗಡೆಗೆ  ಆದೇಶಿಸಿತು.ಆನಂತರವೇ ಇದೇ ಜನವರಿಯಲ್ಲಿ ಜಿಇಎಸಿಯು ಒಂದು ಉಪಸಮಿತಿ ರಚಿಸಿ ಅದರ ವರದಿ ತೆಗೆದುಕೊಂಡಿತು. ಅದನ್ನು ಓದಲು ಹೋಗದೆ 133 ಪುಟಗಳ ಸಂಕ್ತಿಪ್ತ ದಾಖಲೆಯೊಂದರಲ್ಲಿ ಅದನ್ನು ಸೇರಿಸಿ, ಪರಿಸರ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಿಸಿ ಸಾರ್ವಜನಿಕರ ಅಭಿಪ್ರಾಯ ಕೋರಿತು.

ಇದನ್ನು ಓದಿದಾಗ ನಮಗೆ ಅವರು ಕೈಗೊಂಡಿರಬಹುದಾದ ಸುರಕ್ಷತಾ ಪರೀಕ್ಷೆಗಳ ಕಲ್ಪನೆ ಸಿಗುವುದಿಲ್ಲ. ‘ಕುಲಾಂತರಿ ಸಾಸಿವೆ ಮಾನವ ಮತ್ತು ಪ್ರಾಣಿಗಳ ಆಹಾರದ ದೃಷ್ಟಿಯಿಂದ ಸುರಕ್ಷಿತ ಮತ್ತು ಪರಿಸರಕ್ಕೆ ಇದರಿಂದ ಹಾನಿ ಇಲ್ಲ’ ಎಂದು ಹೇಳಿ, ಕೊನೆಗೆ ‘ಜೇನುನೊಣಗಳುಮತ್ತು ಆಸುಪಾಸಿನ ಕೀಟ ಸಂತತಿಗಳ ಮೇಲೆ ಯಾವ ರೀತಿಯ ಪರಿಣಾಮವಾಗುತ್ತದೆ ಎಂಬ ಬಗ್ಗೆ ಹೆಚ್ಚಿನ ಅಧ್ಯಯನ ಬೇಕು’ ಎಂದು ಹೇಳಲಾಗಿದೆ. ಅಂದರೆ ಈಗ ನಡೆದಿರುವ ಪರೀಕ್ಷೆಗಳು ಅಪೂರ್ಣ ಎಂದು ಪರೋಕ್ಷವಾಗಿ ಘೋಷಿಸಿಕೊಂಡಿದೆ. ಜಿಇಎಸಿಯಲ್ಲಿ ಇರುವ ಬಹುಪಾಲು ಸದಸ್ಯರು ದ್ವಂದ್ವನೀತಿ ಉಳ್ಳವರು ಮತ್ತು ಅವರು ಸಭೆಗಳಿಗೆ ಹಾಜರಾದುದೇ ಕಡಿಮೆ.

ಕೊನೆಗೆ ತೀರ್ಮಾನ ಕೊಡಬೇಕಾಗಿ ಬಂದಾಗ, ‘ಕುಲಾಂತರಿ ಸಾಸಿವೆ ಎಲ್ಲಾ ರೀತಿಯಲ್ಲೂ ಸುರಕ್ಷಿತ’ ಎಂದು ಛಾಪು ಹಾಕುತ್ತಾರೆ. ಆದ್ದರಿಂದ ಡಾ. ಪೆಂತಾಲ್ ಅವರು ಸಲ್ಲಿಸಿದ ಸಂಪೂರ್ಣ ದಾಖಲೆಯನ್ನು ಬಹಿರಂಗಗೊಳಿಸಬೇಕು, ಜನಾಭಿಪ್ರಾಯ ಸಂಗ್ರಹಣೆಗೆ ಮೂರು ತಿಂಗಳ ಅವಧಿ ಕೊಡಬೇಕು ಎಂದು ಪ್ರಶಾಂತ್ ಭೂಷಣ್ ಮತ್ತಿತರರು ಪಟ್ಟು ಹಿಡಿದಿದ್ದಾರೆ. ‘ಸುರಕ್ಷಿತವೋ ಅಲ್ಲವೋ ಎಂದು ತಿಳಿದುಕೊಳ್ಳದೆ ಕುಲಾಂತರಿ ಸಸ್ಯಗಳನ್ನು ಪರಿಸರಕ್ಕೆ ಬಿಡುವುದು, ಆಹಾರಕ್ಕೆ ಬಳಸುವುದು ಮಹಾ ಅಪರಾಧ’ ಎನ್ನುತ್ತಾರೆ ಪುಷ್ಪ ಭಾರ್ಗವ.

ದೇಶದಲ್ಲಿ 65 ಲಕ್ಷ ಹೆಕ್ಟೇರ್‌ನಲ್ಲಿ ಸಾಸಿವೆ ಬೆಳೆಯುತ್ತಿದ್ದು ವಾರ್ಷಿಕ 6.80 ಕೋಟಿಯಿಂದ 8 ಕೋಟಿ ಟನ್ ಉತ್ಪಾದನೆ ಇದೆ. ವೈವಿಧ್ಯಮಯ ಸಾಸಿವೆ ತಳಿಗಳನ್ನು ಹೊಂದಿರುವ ಹೆಮ್ಮೆ ಭಾರತಕ್ಕಿದೆ. ಸಾಸಿವೆ ಬೇಸಾಯ ಪ್ರಧಾನವಾಗಿಲ್ಲದ ಕರ್ನಾಟಕದಂಥ ರಾಜ್ಯದಲ್ಲೂ ರೈತರು ಪ್ರತಿ ಬೆಳೆ ಜೊತೆ ಅಷ್ಟಿಷ್ಟು ಸಾಸಿವೆ ಸೇರಿಸಿ ಬಿತ್ತುವುದು ವಾಡಿಕೆ. ಇದು ಮುಖ್ಯ ಬೆಳೆಗೆ ಬೀಳುವ ಕೀಟಬಾಧೆ ತಡೆಯುತ್ತದೆ, ಮನೆ ಬಳಕೆಗೆ ಸಿಗುತ್ತದೆ.

ಸಾಸಿವೆ ಒಗ್ಗರಣೆ ಹಾಕದ ಮನೆ ಹೇಗೆ ಇಲ್ಲವೋ, ಸಾಸಿವೆ ಕೂಡಿಸಿ ಹಾಕದ ಬೆಳೆ, ಹೊಲವೂ ಇಲ್ಲ. ಕುಲಾಂತರಿ ಸಾಸಿವೆಯೇನಾದರೂ ಬಂದರೆ ಈ ಎಲ್ಲಾ ವೈವಿಧ್ಯಮಯ ಬೀಜಗಳು ನಾಶವಾಗಿ, ಪ್ರತಿ ಹೊಲವೂ ಕುಲಾಂತರಿ ಮಾಲಿನ್ಯಕ್ಕೆ ಒಳಗಾಗುತ್ತದೆ. ಬಿ.ಟಿ. ಹತ್ತಿಯ ಅನುಭವಕ್ಕಿಂತ ಬೇರೆ ಬೇಕಿಲ್ಲವಷ್ಟೆ.

ವಿಶ್ಲೇಷಣೆ : ಕೌಟುಂಬಿಕ ದೌರ್ಜನ್ಯ - ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ

ಕೌಟುಂಬಿಕ ದೌರ್ಜನ್ಯ

ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ






ಕೌಟು ಎಂದು ವಾದಿಸಿದರು. ಈ ಪ್ರಕರಣದಲ್ಲಿ ಇಂಥದ್ದೊಂದು ವಾದವನ್ನು ಮುಂದಿಡುವುದು ತೀರಾ ಅಸಂಗತವಾಗಿತ್ತು. ಮಹಿಳೆಯು ನ್ಯಾಯಾಲಯದ ಮುಂದಿಟ್ಟಿದ್ದ ಕೋರಿಕೆ, ಮಹಿಳೆಯರ ವಿರುದ್ಧ ನೀಡಿದ ದೂರುಗಳಿಗೆ ಮರುಜೀವ ಕೊಡಿ ಎಂದು ಆಗಿರಲಿಲ್ಲ, ಸೆಕ್ಷನ್ 2(ಕ್ಯೂ) ಅನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಮಾತ್ರ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ, ಅರ್ಜಿದಾರರು ಇಂಥದ್ದೊಂದು ಕೋರಿಕೆಯನ್ನು ಇಟ್ಟ ಉದ್ದೇಶ ಏನೆಂಬುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಲೇ ಇಲ್ಲ ಎಂಬುದು ಆಶ್ಚರ್ಯದ ಸಂಗತಿ.


ಮನವಿಯ ಆಳಕ್ಕೆ ಹೋದ ಸುಪ್ರೀಂ ಕೋರ್ಟ್, ‘ಈ ಅರ್ಜಿಯು ಹೆಣ್ಣಿನ ರಕ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತದೆ’ ಎಂದು ಹೇಳಿತು. ಮಹಿಳೆಯ ಬಗ್ಗೆ ಆಡುವ ಇಂತಹ ಮಾತುಗಳು ಸಮಸ್ಯೆಗೆ ಕಾರಣವಾಗುತ್ತವೆ. ಏಕೆಂದರೆ, ಇಂತಹ ಮಾತುಗಳನ್ನು, ಮಹಿಳೆ ಕೂಡ ಮನುಷ್ಯಳೇ ಎಂಬ ಅರ್ಥದಲ್ಲಿ ಹೇಳಿರುವುದಿಲ್ಲ. ಬದಲಿಗೆ, ಮಹಿಳೆ ನಿಕೃಷ್ಟಳು ಎಂಬ ಅರ್ಥವು ಮಾತಿನಲ್ಲೇ ಅಡಗಿರುತ್ತದೆ. ಮಹಿಳೆಯನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಿಸುವ ನೈಜ ಕಳಕಳಿಯಿಂದ ತೀರ್ಪು ಬರೆದಿರುವ ನ್ಯಾಯಮೂರ್ತಿ ರೊಹಿಂಟನ್ ನಾರಿಮನ್ ಅವರು, ‘ಇಂಥ ಹಿಂಸೆಗಳು ಲಿಂಗ ನಿರಪೇಕ್ಷ. ದೌರ್ಜನ್ಯವನ್ನು ಮಹಿಳೆಯ ಮೇಲೆ ಇನ್ನೊಬ್ಬಳು ಮಹಿಳೆಯೂ ನಡೆಸಬಲ್ಲಳು ಎಂಬುದು ಸ್ಪಷ್ಟ. ಕೆಲವು ಸಂದರ್ಭಗಳಲ್ಲಿ ಮಹಿಳೆಯೊಬ್ಬಳು ಇನ್ನೊಬ್ಬಳು ಮಹಿಳೆಯನ್ನು ಲೈಂಗಿಕ ದೌರ್ಜನ್ಯಕ್ಕೂ ಗುರಿಪಡಿಸಬಲ್ಲಳು. ಹಾಗಾಗಿ ಕಾಯ್ದೆಯ ಸೆಕ್ಷನ್ 3, ಕಾಯ್ದೆಯ ಒಟ್ಟಾರೆ ಆಶಯಕ್ಕೆ ಪೂರಕವಾಗಿದೆ. ಮಹಿಳೆಯ ಮೇಲೆ ಕೌಟುಂಬಿಕ ಚೌಕಟ್ಟಿನಲ್ಲಿ ನಡೆಯುವ ಯಾವುದೇ ಬಗೆಯ ದೌರ್ಜನ್ಯವನ್ನು ಕಾನೂನುಬಾಹಿರ ಎನ್ನುತ್ತದೆ ಇದು. ಹಾಗಾಗಿ ಇದು ಲಿಂಗನಿರಪೇಕ್ಷವಾಗಿದೆ’ ಎಂದು ಹೇಳಿದ್ದಾರೆ.

ಕೌಟುಂಬಿಕ ಹಿಂಸೆ ಲಿಂಗನಿರಪೇಕ್ಷ ಅಲ್ಲ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇಟ್ಟುಕೊಂಡೇ ಹೇಳಬೇಕಿದೆ. ಕೌಟುಂಬಿಕ ದೌರ್ಜನ್ಯಗಳು ಲಿಂಗನಿರಪೇಕ್ಷ ಅಲ್ಲ. ಕೌಟುಂಬಿಕ ದೌರ್ಜನ್ಯ ಲಿಂಗನಿರಪೇಕ್ಷ ಎನ್ನುವಾಗ ಸುಪ್ರೀಂ ಕೋರ್ಟ್ ಅಂಕಿ-ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡಿಲ್ಲ. ಅತಿಹೆಚ್ಚಿನ ಸಂದರ್ಭಗಳಲ್ಲಿ ಕೌಟುಂಬಿಕ ದೌರ್ಜನ್ಯ ನಡೆಸುವವರು ಪುರುಷರು. ತೀವ್ರವಾದ, ಮತ್ತೆ ಮತ್ತೆ ನಡೆಯುವ ಕೌಟುಂಬಿಕ ಹಿಂಸೆಯನ್ನು ವಿಶ್ವದ ಎಲ್ಲೆಡೆ ಮಹಿಳೆಯರು ಪುರುಷರಿಂದಲೇ ಎದುರಿಸುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ನೀಡಿರುವ ಮಾಹಿತಿ ಅನ್ವಯ, 2003ರಲ್ಲಿ 50,703ರಷ್ಟಿದ್ದ ಕೌಟುಂಬಿಕ ದೌರ್ಜನ್ಯಗಳ ಸಂಖ್ಯೆ 2013ರ ವೇಳೆಗೆ 1,18,866ಕ್ಕೆ ಏರಿತ್ತು. ಅಂದರೆ ದೌರ್ಜನ್ಯದ ಪ್ರಮಾಣದಲ್ಲಿ ಶೇಕಡ 134ರಷ್ಟು ಹೆಚ್ಚಳ ಆಗಿತ್ತು. ಈ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಆದ ಹೆಚ್ಚಳ ಖಂಡಿತ ಈ ಪ್ರಮಾಣದಲ್ಲಿ ಇರಲಿಲ್ಲ.


2005ರ ಕಾಯ್ದೆ ಜಾರಿಯಾಗುವ ಮುನ್ನ, 1983ರಲ್ಲಿ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಸೆಕ್ಷನ್ 498(ಎ) ಸೇರಿಸಿ, ವಿವಾಹಿತ ಮಹಿಳೆಗೆ ಹಿಂಸೆ ಕೊಡುವುದನ್ನು, ಅಂದರೆ ಕೌಟುಂಬಿಕ ದೌರ್ಜನ್ಯವನ್ನು, ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಯಿತು. ಸೆಕ್ಷನ್ 498(ಎ)ಯನ್ನು ಪ್ರಯೋಗಿಸುವುದು ಕೂಡ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಮಾತ್ರ. 2005ರ ಕಾಯ್ದೆಯನ್ನು ಸಂಸತ್ತು ರೂಪಿಸುತ್ತಿದ್ದ ಹೊತ್ತಿನಲ್ಲಿ, ಇದು ಸೆಕ್ಷನ್ 498(ಎ) ಆಶಯಗಳಿಗೆ ಪೂರಕವಾಗಿ ಇರಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿತ್ತು. ಅಂದರೆ ಪತಿ ಹಾಗೂ ಆತನ  ಮಹಿಳಾ ಸಂಬಂಧಿಕರ ವಿರುದ್ಧ ದೂರು ದಾಖಲಿಸಲು ಅವಕಾಶ ಇರಬೇಕು ಎಂಬುದು ಶಾಸನಸಭೆಯ ಗಮನದಲ್ಲಿತ್ತು. ಮಹಿಳೆಗೆ ಹಿಂಸೆ ಕೊಡುವ ಅತ್ತೆ, ನಾದಿನಿಯ ವಿರುದ್ಧ ದೂರು ಕೊಡಲು ಅವಕಾಶ ಇರಬೇಕು, ಆದರೆ ಮಹಿಳೆಯರ ವಿರುದ್ಧ ಮಾತ್ರ ದೂರು ದಾಖಲಿಸಲು ಅವಕಾಶ ಕೊಡಬಾರದು ಎಂಬುದು ಐಪಿಸಿಯ ಸೆಕ್ಷನ್ 498(ಎ) ಆಶಯವಾಗಿತ್ತು. ಮಹಿಳೆಯನ್ನು ಮಾತ್ರ ಗುರಿಯಾಗಿಸಿಕೊಂಡು ದೂರು ದಾಖಲಿಸಲು ಅವಕಾಶ ಇರಬಾರದು ಎಂಬುದು 2005ರ ಕಾಯ್ದೆಯ ಆಶಯವೂ ಆಗಿದೆ.

ದೂರುದಾರ ಮಹಿಳೆಗೆ, ಕುಟುಂಬಕ್ಕೆ ಸೇರಿದ ಮನೆಯಲ್ಲಿ ಬದುಕು ಮುಂದುವರಿಸುವ ಹಕ್ಕೂ ಇರಬೇಕು ಎಂಬುದು 2005ರ ಕಾಯ್ದೆಯ ಪ್ರಮುಖ ಅಂಶಗಳಲ್ಲಿ ಒಂದು. ಸಾಮಾನ್ಯ ಸಂದರ್ಭಗಳಲ್ಲಿ ಆಸ್ತಿಯು ಮಹಿಳೆಯರ ಹೆಸರಿನಲ್ಲಿ ಇರುವುದಿಲ್ಲ. ಹಾಗಾಗಿ, ಕಾಯ್ದೆಯು ಇಂಥದ್ದೊಂದು ಹಕ್ಕನ್ನು ಕೊಟ್ಟಿರುವುದು ಬಹಳ ಮುಖ್ಯ. ಹಾಗಾಗಿ, ಪುರುಷನ ಮಹಿಳಾ ಸಂಬಂಧಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ನೀಡಿದರೂ, ಕಾಯ್ದೆಯು ಮಹಿಳೆಯರನ್ನು ಆ ಮನೆಯಿಂದ ಹೊರಗೆ ಕಳುಹಿಸುವಂಥ ಆದೇಶ ಹೊರಡಿಸಬಾರದು ಎನ್ನುತ್ತದೆ. ಪುರುಷನು ತನ್ನ ತಾಯಿಯನ್ನು ಮುಂದಿಟ್ಟುಕೊಂಡು, ಪತ್ನಿ ಮನೆ ತೊರೆಯುವಂತೆ ಮಾಡಬಹುದು ಎಂಬ ಆತಂಕ ಇತ್ತು. ಆದರೆ ಕಾಯ್ದೆಯ ಸೆಕ್ಷನ್ 19ರಲ್ಲಿ, ‘ಮನೆ ತೊರೆಯುವಂತೆ ಮಹಿಳೆಗೆ ಆದೇಶ ನೀಡುವಂತಿಲ್ಲ’ ಎನ್ನುವ ಮೂಲಕ ಇಂಥದ್ದೊಂದು ಆತಂಕ ದೂರ ಮಾಡಲಾಯಿತು.

ವಯಸ್ಕ ಪುರುಷ ಎಂಬ ಪದಗಳನ್ನು ತೆಗೆಯದಿದ್ದರೆ, ಪುರುಷನ ಮಹಿಳಾ ಸಂಬಂಧಿಕರ ವಿರುದ್ಧ ಯಾವುದೇ ಆದೇಶ ನೀಡಲು ಆಗದು. ಆಗ ಕಾಯ್ದೆಯೇ ಅರ್ಥ ಕಳೆದುಕೊಳ್ಳುತ್ತದೆ ಎಂಬ ಕಾರಣವನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದು ಸಂಪೂರ್ಣವಾಗಿ ತಪ್ಪು. ಏಕೆಂದರೆ, ಮನೆಯನ್ನು ತೊರೆಯಬೇಕು ಎಂಬ ಆದೇಶವೊಂದನ್ನು ಮಾತ್ರ ಮಹಿಳೆಯರ ವಿರುದ್ಧ ಹೊರಡಿಸಲು ಆಗದು. ಉಳಿದಂತೆ, ಮಹಿಳೆಯ ವಿರುದ್ಧ ಆದೇಶ ಹೊರಡಿಸಲು ಯಾವ ಅಡೆತಡೆಯೂ ಇಲ್ಲ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ – 2013ನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ‘ವಯಸ್ಕ ಪುರುಷ’ನೇ ಆಗಿರಬೇಕು ಎಂದೇನೂ ಇಲ್ಲ ಎನ್ನುತ್ತದೆ. ಆದರೆ, ಇದಕ್ಕೆ ಸಂವಾದಿಯಾಗಿರುವ, 2013ರಲ್ಲಿ ಐಪಿಸಿಗೆ ತಿದ್ದುಪಡಿ ತಂದು ಜಾರಿಗೊಳಿಸಿದ ಸೆಕ್ಷನ್ 354(ಎ) ಕೂಡ ಪುರುಷರ ವಿರುದ್ಧ ಮಾತ್ರ ಇದೆ ಎಂಬುದನ್ನು ಗುರುತಿಸುವಲ್ಲಿ ಈ ತೀರ್ಪು ವಿಫಲವಾಗಿದೆ. ಅಲ್ಲದೆ, ಹೊಸದಾಗಿ ಅಪರಾಧದ ವ್ಯಾಖ್ಯಾನದೊಳಕ್ಕೆ ಬಂದ, ಮಹಿಳೆಯನ್ನು ಹಿಂಬಾಲಿಸುವುದು, ಬೆತ್ತಲಾಗಿರುವ ಅಥವಾ ಅರೆನಗ್ನವಾಗಿರುವ ಮಹಿಳೆಯನ್ನು ನೋಡುತ್ತಾ ಲೈಂಗಿಕ ಸುಖ ಅನುಭವಿಸುವುದು, ಐಪಿಸಿಗೆ ತಿದ್ದುಪಡಿ ತರುವ ಮೂಲಕ ಅಸ್ತಿತ್ವಕ್ಕೆ ಬಂದ ಸೆಕ್ಷನ್ 354(ಬಿ), 354(ಸಿ) ಮತ್ತು 376 ಕೂಡ ಪುರುಷರ ವಿರುದ್ಧವೇ ಇವೆ. ಅವು ಲಿಂಗನಿರಪೇಕ್ಷವಾಗಿಲ್ಲ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧ ನಡೆಯುವ ಈ ಮಾದರಿಯ ಇತರ ಕೃತ್ಯಗಳು ಲಿಂಗನಿರಪೇಕ್ಷವಾಗಿಲ್ಲ. ಈ ವಾಸ್ತವವನ್ನು ಕಾನೂನು ಗುರುತಿಸಿದೆ.

ಆದರೆ, ಇಲ್ಲಿರುವ ವ್ಯಂಗ್ಯವೆಂದರೆ, ಇಡೀ ತೀರ್ಪು ‘ಸಮಾನತೆ’ಯ ಮೇಲೆ ನಿಂತಿದೆ ಎಂದು ಹೇಳಲಾಗಿದೆ. ‘ವಯಸ್ಕ ಪುರುಷ’ನ ಎಂದು ನಮೂದಿಸಿರುವುದು ಸಮಾನತೆಗೆ ವಿರುದ್ಧ. ಏಕೆಂದರೆ, ಹೀಗೆ ಮಿತಿ ಹೇರುವುದರಿಂದ ಮಹಿಳೆಗೆ ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ಕೊಡುವ ಉದ್ದೇಶದ ಕಾಯ್ದೆಯನ್ನು ಮಿತಿಗೊಳಿಸಿದಂತೆ ಆಗುತ್ತದೆ ಎಂದು ನ್ಯಾಯಮೂರ್ತಿ ನಾರಿಮನ್ ತೀರ್ಪಿನಲ್ಲಿ ಹೇಳಿದ್ದಾರೆ. ಇದು ಮಹಿಳೆಯನ್ನು ರಕ್ಷಿಸಲು ಸಮಾನತೆಯನ್ನು ವಿಚಿತ್ರ ರೀತಿಯಲ್ಲಿ ಬಳಸಿಕೊಂಡಂತಿದೆ. ಹೀಗೆ ಮಾಡುವುದರಿಂದ ಕಾಯ್ದೆ ಮಹಿಳೆಯರ ವಿರುದ್ಧವೇ ಬಳಕೆಯಾಗುವ ಸಾಧ್ಯತೆ ಇದೆ. ಈ ಕಾಯ್ದೆ ರೂಪುಗೊಂಡಿದ್ದೇ, ಕುಟುಂಬದ ಒಳಗೆ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ರಕ್ಷಣೆ ಕೊಡಲು. ಮಹಿಳೆಯನ್ನು, ಬಾಲಕಿಯನ್ನು ಗುರಿಪಡಿಸಲು ಅಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳ ವಾಸ್ತವವನ್ನು ಕಡೆಗಣಿಸಿ, ಇದಕ್ಕೆ ಲಿಂಗನಿರಪೇಕ್ಷ ಬಣ್ಣ ನೀಡಲು ತೀರ್ಪು ಯತ್ನಿಸಿದೆ. ಇಲ್ಲಿ ಮಹಿಳೆಯೂ ಹಿಂಸಾ ಕೃತ್ಯ ಎಸಗುವವಳು ಎಂದು ತೋರಿಸಿ, ಮಹಿಳಾ ಪರ ಹೋರಾಟಗಳ ಫಲವಾಗಿ ಮೂಡಿದ ಕಾಯ್ದೆಯನ್ನು ದುರ್ಬಲಗೊಳಿಸಿದೆ.

ಈ ತೀರ್ಪು ಮಹಿಳೆಯರ ಮೇಲೆ ಯಾವ ಬಗೆಯ ಪರಿಣಾಮ ಬೀರಲಿದೆ? ಈ ತೀರ್ಪಿನ ಪುನರ್‌ ಪರಿಶೀಲನೆ ಆಗದಿದ್ದರೆ, ಮಹಿಳೆಯ ಮೇಲೆಯೇ ದೂರು ದಾಖಲಾಗುವುದು ಹೆಚ್ಚಲಿದೆ. ಆಗ ಈ ಕಾನೂನಿಗೆ ಮಹಿಳೆಯರೇ ಬಲಿಪಶುಗಳಾಗಲಿದ್ದಾರೆ. ಈ ತೀರ್ಪಿನಿಂದಾಗಿ, ಇತರ ಮಹಿಳಾ ಕೇಂದ್ರಿತ ಕಾನೂನುಗಳೂ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಸಮಾನತೆಯ ತತ್ವದ ಅಡಿ ಮಹಿಳೆಯರಿಗೆ ರಕ್ಷಣೆ ನೀಡಲು ಆತುರವಾಗಿರುವ ನಮ್ಮ ನ್ಯಾಯಾಲಯಗಳಿಗೆ ಒಂದು ವಿಚಾರ ನೆನಪಿಸಬೇಕು. ಸಂವಿಧಾನದಲ್ಲಿ ಹೇಳಿರುವ ಸಮಾನತೆಯ ತತ್ವವೇ ಮಹಿಳೆಯರಿಗೆ ರಕ್ಷಣೆ ನೀಡಲು ವಿಶೇಷ ಕಾನೂನುಗಳನ್ನು ರೂಪಿಸಲು ಅವಕಾಶ ನೀಡುತ್ತದೆ. ಮಹಿಳೆಯರು ತಾರತಮ್ಯಕ್ಕೆ ಗುರಿಯಾಗಬಾರದು ಎಂಬ ಉದ್ದೇಶದಿಂದ 2005ರ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈಗ ಇಂತಹ ಕಾಯ್ದೆಗಳನ್ನು ಲಿಂಗ ನಿರಪೇಕ್ಷಗೊಳಿಸಿದರೆ, ಮಹಿಳೆಯರು ಇನ್ನಷ್ಟು ದೌರ್ಜನ್ಯಕ್ಕೆ ಗುರಿಯಾಗುತ್ತಾರೆ.


ವಿಶ್ಲೇಷಣೆ : ತಲಾಖ್‌ ಎಂಬ ತೂಗುಗತ್ತಿ ಮತ್ತು ಪೂರ್ವಗ್ರಹ

ತಲಾಖ್‌ ಎಂಬ ತೂಗುಗತ್ತಿ ಮತ್ತು ಪೂರ್ವಗ್ರಹ


ಪ್ರವಾದಿ ಮೊಹಮ್ಮದ್‌ ಒಬ್ಬರೇ ಇಸ್ಲಾಂ ಧರ್ಮದ ಸ್ಥಾಪಕರಾಗಿದ್ದರೂ ಅವರ ಮರಣಾನಂತರ ಈ ಧರ್ಮದ ಅನುಯಾಯಿಗಳು ಹಲವಾರು ವಿಭಾಗಗಳಾಗಿ ವಿಭಜನೆಗೊಂಡಿದ್ದಾರೆ. ಪ್ರವಾದಿಗಳ ಪ್ರಧಾನ ಅನುಯಾಯಿಗಳ ಭಿನ್ನಾಭಿಪ್ರಾಯಗಳಿಂದಾಗಿ ಪ್ರಾರಂಭದಲ್ಲಿ ಸುನ್ನಿ ಮತ್ತು ಶಿಯಾ ಎಂಬ ಎರಡು ಪಂಗಡಗಳಾದವು.

ಸುನ್ನಿಗಳು ಪ್ರವಾದಿಗಳ ಪ್ರಥಮ ಅನುಯಾಯಿ ಅಬೂಬಕ್ಕರ್‌ ಸಿದ್ಧಿಖ್‌ ಅವರ ಬೆಂಬಲಿಗರಾಗಿದ್ದರೆ, ಶಿಯಾ ಪಂಗಡವು ಪ್ರವಾದಿಗಳ ನಾಲ್ಕನೇ ಅನುಯಾಯಿಯೂ, ಅವರ ಅಳಿಯನೂ, ದಾಯಾದಿಯೂ ಆಗಿದ್ದ ಹಲಿ ಅವರ ಬೆಂಬಲಿಗರಾಗಿದ್ದಾರೆ.

ಈ ಎರಡು ಪಂಗಡಗಳಲ್ಲಿ ಪರಸ್ಪರ ಎಷ್ಟೊಂದು ದ್ವೇಷವಿದೆಯೆಂದರೆ ಸುನ್ನಿಗಳು,  ಶಿಯಾ ಪಂಗಡದವರನ್ನು ಮುಸ್ಲಿಮರೇ ಅಲ್ಲವೆನ್ನುತ್ತಾ ಪಾಕಿಸ್ತಾನದಲ್ಲಿ ಅವರ ಮಸೀದಿಗಳಿಗೆ ಬೆಂಕಿ ಹಚ್ಚುವುದು, ಮಸೀದಿಯಲ್ಲಿ ಪ್ರಾರ್ಥನೆ ಮಾಡುವವರನ್ನು ಹತ್ಯೆ ಮಾಡುವ ಮಟ್ಟಕ್ಕೆ ದ್ವೇಷ ಬೆಳೆದಿದೆ. ಈಗ ಈ ಎರಡೂ ಪಂಗಡಗಳು ಒಡೆದು ಹಲವಾರು ಹೋಳುಗಳಾಗಿವೆ.

ಇಡೀ ಮುಸ್ಲಿಂ ಸಮಾಜದಲ್ಲಿ ಇಷ್ಟೊಂದು ಭಿನ್ನಾಭಿಪ್ರಾಯಗಳು, ವಿವಿಧ ಗುಂಪುಗಳು ಇದ್ದರೂ ಮಹಿಳೆಯರ ಒಳಿತಿಗಾಗಿ ಸರ್ಕಾರವು ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ಕೆಲವು ಬದಲಾವಣೆಗಳು ಆಗಬೇಕೆಂದು ಪ್ರಯತ್ನಿಸಿದರೆ, ಆಗ ಈ ಎಲ್ಲ ಪಂಗಡಗಳ ಪುರುಷರೂ ಒಂದಾಗಿ, ಒಕ್ಕೊರಲಿನಿಂದ ಸರ್ಕಾರದ ಪ್ರಯತ್ನವನ್ನು ವಿರೋಧಿಸಿ, ಅದಾಗದಂತೆ ತಡೆಯುತ್ತಾರೆ. ಅಂತಹ ತಡೆಯೊಡ್ಡಲು ಅವರು ಕುರ್‌ಆನ್‌ ವಾಕ್ಯಗಳನ್ನೂ ದೂರ ತಳ್ಳುತ್ತಾರೆ.

ಉದಾಹರಣೆಗೆ, ತಲಾಖ್‌ ನೀಡಿದ ಮಹಿಳೆಗೆ ಜೀವನಾಂಶ ನೀಡಿ ಮುಂದಿನ ಬದುಕಿಗೆ ತೊಂದರೆಯಾಗದಂತೆ ಆಕೆಗೆ ‘ಮತಾಃ’ (ಜೀವನಾಂಶ) ನೀಡಬೇಕೆಂದು ಕುರ್‌ಆನ್‌ ಸ್ಪಷ್ಟವಾಗಿ ಬೋಧಿಸಿದ್ದರೂ ‘ವಿಚ್ಛೇದಿತ ಮುಸ್ಲಿಂ ಮಹಿಳೆಯರ ಹಕ್ಕು ರಕ್ಷಣಾ ಮಸೂದೆ’ ಎಂಬ ಹೊಸ ನಿಯಮದಲ್ಲಿ ಈ ವಾಕ್ಯ ಸೇರ್ಪಡೆಯಾಗಲೇ ಇಲ್ಲ!

ಕೆಲವು ವರ್ಷಗಳ ಹಿಂದೆ (2008ರ ಅಕ್ಟೋಬರ್‌ 28) ಕೇರಳ ಹೈಕೋರ್ಟ್‌ ಒಂದು ತೀರ್ಪು ನೀಡಿದ್ದು, ವಿವಾದವೇ ಸೃಷ್ಟಿಯಾಯಿತು. ತ್ರಿಶ್ಶೂರಿನ ಸೈದಾಲಿ ಎಂಬಾತ ಎರಡನೇ ಮದುವೆಯಾದಾಗ, ಆತನ ಮೊದಲ ಪತ್ನಿ ಸೆಲೀನಾ ತನಗೆ ವಿಚ್ಛೇದನ ಬೇಕೆಂದು ನ್ಯಾಯಾಲಯಕ್ಕೆ ಹೋದರು. ಆಗ ಕೆಳ ನ್ಯಾಯಾಲಯ ವಿಚ್ಛೇದನಕ್ಕೆ ಆಕೆಗೆ ಅನುಮತಿ ನೀಡಿತು. ಆಕೆಯ ಗಂಡ ಈ ತೀರ್ಪಿನ ವಿರುದ್ಧ ಹೈಕೋರ್ಟ್‌ಗೆ ಹೋದಾಗ, ಅದು ಈ ತೀರ್ಪನ್ನು  ರದ್ದುಪಡಿಸಿತು.

ಗಂಡ ಎರಡನೇ ವಿವಾಹ ಆದನೆಂಬ ಒಂದೇ ಕಾರಣಕ್ಕೆ ಮುಸ್ಲಿಂ ಪತ್ನಿಗೆ ವಿಚ್ಛೇದನ ನೀಡಲು ಇಂದು ಭಾರತದಲ್ಲಿ  ಜಾರಿಯಲ್ಲಿರುವ ‘ಮುಸ್ಲಿಂ ವೈಯಕ್ತಿಕ ಕಾನೂನು’ ಅನುಮತಿ ನೀಡುವುದಿಲ್ಲ ಎಂಬುದು ಈ ರದ್ದತಿಗೆ ಕಾರಣವಾಗಿತ್ತು. ಧಾರ್ಮಿಕ ನಿಯಮಗಳು ಮತ್ತು ಸಾಮಾಜಿಕ ನಿಯಮಗಳಿಗೆ ಒಪ್ಪಿಗೆಯಾಗದ ಬಹುಪತ್ನಿತ್ವ ಹಾಗೂ ಏಕಪಕ್ಷೀಯವಾದ ತಲಾಖ್‌ ಪದ್ಧತಿ ಮುಸ್ಲಿಮರಲ್ಲಿದೆ ಎಂಬುದನ್ನು ತಿಳಿದ ನ್ಯಾಯಾಲಯ, ಇದನ್ನು ನಿಯಂತ್ರಿಸಲು ಪ್ರಾದೇಶಿಕವಾಗಿಯೂ, ದೇಶೀಯವಾಗಿಯೂ ಸಮಿತಿಗಳನ್ನು ರಚಿಸಿ, ಇದಕ್ಕಾಗಿ ನಿಯಮಗಳನ್ನು ರೂಪಿಸಬೇಕಾದ ಅಗತ್ಯವಿದೆಯೆಂದು ಹೇಳಿತು.

ಹೀಗೊಂದು ಸಮಿತಿ ರಚನೆ ಆಗಬೇಕೆಂದದ್ದಕ್ಕೇ ಮತ್ತೊಂದು ವಿವಾದ ಆರಂಭವಾಯಿತು. ಇದು ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಹಸ್ತಕ್ಷೇಪ ಎಂದು ಹೇಳಿದ ಸುನ್ನಿ ವಿಭಾಗ, ಅದನ್ನು ವಿರೋಧಿಸಬೇಕೆಂದಿತು. ಮುಜಾಹಿದ್ ವಿಭಾಗ ಮೌನವಾಯಿತು. ಜಮಾಅತೇ ಇಸ್ಲಾಮಿ ಈ ನಿರ್ದೇಶನವನ್ನು ಸ್ವಾಗತಿಸಿತು. ‘ವಿರೋಧಿಸುವವರೂ, ಮೌನವಾಗಿ ಕುಳಿತವರೂ, ಸ್ವಾಗತಿಸುವವರೂ ಒಟ್ಟು ಸೇರಿ ಇನ್ನು ಯಾವಾಗ ಯುದ್ಧಕ್ಕೆ ಹೊರಡುವರೆಂಬುದು ನನ್ನ ಸಂದೇಹ’ ಎಂದು ಪ್ರೊ. ಕಾರಶ್ಶೇರಿಯವರು  ಬರೆದಿದ್ದಾರೆ.

ಕಾರಶ್ಶೇರಿಯವರ ನಿರೀಕ್ಷೆಯಂತೆಯೇ ಈಗ ಇಸ್ಲಾಂ ಸಮಾಜದ ಎಲ್ಲ ಪುರುಷರೂ ಒಟ್ಟು ಸೇರಿ, ಬಾಯಿ ಮಾತಿನಲ್ಲಿ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್‌ ಹೇಳಿ ಹೆಣ್ಣೊಬ್ಬಳನ್ನು ನಿರ್ಗತಿಕಳನ್ನಾಗಿಸುವ ನಿಯಮದ  ತಿದ್ದುಪಡಿಗೆ ಸರ್ಕಾರ ಮುಂದಾಗುವುದನ್ನು ವಿರೋಧಿಸಲು ಪ್ರಾರಂಭಿಸಿದ್ದಾರೆ. ಇಸ್ಲಾಂ ಧಾರ್ಮಿಕ ನಿಯಮದಲ್ಲಿ ಸರ್ಕಾರದ ಹಸ್ತಕ್ಷೇಪವೆಂಬ ಕೂಗು ಆರಂಭವಾಗಿದೆ. ವಿವಾಹ, ವಿಚ್ಛೇದನ, ಜೀವನಾಂಶ ಇವೆಲ್ಲವೂ ನಾಗರಿಕ ನಿಯಮಗಳೇ ಹೊರತು ಧಾರ್ಮಿಕ ನಿಯಮಗಳಲ್ಲ. ‘ನೀವು ಯಾವ ದೇಶದಲ್ಲಿ ಬದುಕುತ್ತಿದ್ದೀರೊ ಆ ದೇಶದ ನಾಗರಿಕ ನಿಯಮಗಳನ್ನು ಅನುಸರಿಸಿ’ ಎಂಬುದು ಪ್ರವಾದಿಗಳ ಉಪದೇಶವಾಗಿದೆ.


ಮುಸ್ಲಿಂ ಧಾರ್ಮಿಕ ನಿಯಮಗಳೆಂದರೆ, ನಿರಾಕಾರನಾದ ಏಕ ದೇವನಲ್ಲಿ ವಿಶ್ವಾಸ, ನಮಾಜ್‌, ಉಪವಾಸ ವ್ರತ, ಕಡ್ಡಾಯ ದಾನ, ಹಜ್‌ ಯಾತ್ರೆ ಇತ್ಯಾದಿ. ಈ ನಿಯಮಗಳಲ್ಲಿ ಸರ್ಕಾರ ಎಂದೂ ಹಸ್ತಕ್ಷೇಪ ಮಾಡುವುದಿಲ್ಲ. ಇನ್ನು ಏಕರೂಪ ನಾಗರಿಕ ಸಂಹಿತೆ ಕುರಿತು ಚಿಂತಿಸೋಣ. ನಮಗೆ ಏಕರೂಪ ನಾಗರಿಕ ಸಂಹಿತೆ ಬೇಡವಾದರೆ ಈಗ ಎಲ್ಲರಿಗೂ ಸಮಾನವಾಗಿ ಅನ್ವಯವಾಗುತ್ತಿರುವ ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಕ್ರಿಮಿನಲ್‌ ಪ್ರೊಸೀಜರ್‌ ಕೋಡ್‌) ಯಾಕೆ ಬೇಕು? ಮುಸ್ಲಿಮರು ತಮ್ಮದೇ ದಂಡ ಪ್ರಕ್ರಿಯಾ ಸಂಹಿತೆಗೇ  ಅಂಟಿಕೊಳ್ಳಬಹುದಲ್ಲವೇ?

ಕದ್ದಾತನ ಕೈ ಕಡಿಯಬೇಕು, ಕೊಲೆ ಮಾಡಿದವನ ತಲೆಯನ್ನು ಸಾರ್ವಜನಿಕ ಸ್ಥಳದಲ್ಲಿ ಕಡಿಯಬೇಕು, ಹೆಂಡ ಕುಡಿದವನಿಗೆ ನೂರು ಛಡಿ ಏಟು ನೀಡಬೇಕು, ಅನೈತಿಕ ಸಂಬಂಧ ಹೊಂದಿದ ಗಂಡು ಅಥವಾ ಹೆಣ್ಣಿಗೆ ನೂರು ಛಡಿ ಏಟಿನ ಶಿಕ್ಷೆ ನೀಡಬೇಕು... ಈ ರೀತಿ ಅಪರಾಧ ಎಸಗುವ ಮುಸ್ಲಿಮರಿಗೆ ಈ ದಂಡ ಸಂಹಿತೆಯೇ ಜಾರಿಗೆ ಬರಲಿ ಎನ್ನಲಾಗುತ್ತದೆಯೇ? ಅಂಥ ಶಿಕ್ಷೆ ಅನುಭವಿಸಿದವರಿಗೆ ಸ್ವರ್ಗದಲ್ಲಿ ಸೀಟು ಮೀಸಲಿಡಲಾಗುತ್ತದೆ!

ಕೇರಳದ ಕಾಂತಾಪುರಂ ಅಬೂಬಕ್ಕರ್ ಮೌಲವಿ ಮತ್ತು ಹಲವಾರು ಮದ್ರಸಾ ಧರ್ಮಗುರುಗಳು ಮಹಿಳೆಯರನ್ನು ಅವಮಾನಿಸುವ ರೀತಿ ಹೇಳಿಕೆ ನೀಡುತ್ತಾರೆ. ಆಕೆ ಪುರುಷನ ಸುಖ ಜೀವನಕ್ಕಾಗಿಯೇ ಸೃಷ್ಟಿಯಾದ ಒಂದು ನಿರ್ಜೀವ ವಸ್ತು ಎಂಬಂತೆ ಚಿತ್ರಿಸುತ್ತಾರೆ. ಬಹುಪತ್ನಿತ್ವವನ್ನು ಸಮರ್ಥಿಸುತ್ತಾ ಕಾಂತಾಪುರಂ ಹೀಗೆಂದಿದ್ದರು: ‘ಮಹಿಳೆಯರಿಗೆ ತಿಂಗಳಿಗೊಮ್ಮೆ ಮುಟ್ಟಾಗುತ್ತದೆ. ಕೆಲವರಿಗೆ ಐದಾರು ದಿನಗಳಾದರೆ ಇನ್ನು ಕೆಲವರಿಗೆ ಹತ್ತು ದಿನಗಳವರೆಗೆ ಇದು ಇರುತ್ತದೆ. ಆಗಲೂ ಪುರುಷರಿಗೆ ಸುಖ ಜೀವನಕ್ಕೆ ಹೆಣ್ಣಿನ (ಆಕೆಯ ದೇಹದ) ಅಗತ್ಯವಿರುತ್ತದೆ. ಅದಕ್ಕಾಗಿ ಇಸ್ಲಾಂ ಧರ್ಮ ಬಹುಪತ್ನಿತ್ವವನ್ನು ಅನುಮತಿಸಿದೆ’.

ಹೆಣ್ಣೆಂದರೆ ಗಂಡಿಗೆ ಬೇಕಾದಾಗ ಬೇಕಾದಂತೆ ಉಪಯೋಗಿಸಲು ಇರುವ ಒಂದು ನಿರ್ಜೀವ ವಸ್ತು. ಬೇಡವಾದರೆ ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್ ಎಂದುಬಿಟ್ಟು ಹೊರಗಟ್ಟಿದರಾಯಿತು! ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್ ಅವರು ಕೂಡ ಇದೇ ಮಾತನ್ನು ಇತ್ತೀಚೆಗೆ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಧರ್ಮಗುರುಗಳ ಮನದಾಳದಲ್ಲೂ ಹೆಣ್ಣೆಂದರೆ ತಮ್ಮ ಸುಖಕ್ಕಾಗಿಯೇ ಇರುವ ವಸ್ತು ಎಂಬ ಭಾವನೆ ಬೇರೂರಿದೆ.

ಇನ್ನು ‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ ಭಾರತದ ಎಲ್ಲ ಮುಸ್ಲಿಮರ ಪ್ರಾತಿನಿಧಿಕ ಸಂಘಟನೆ ಅಲ್ಲ. ಅವರು ಎಂತಹ ನಿಯಮವನ್ನು ನಮ್ಮ ಮೇಲೆ ಹೇರಿದರೂ ನನ್ನಂತಹವರ ಕುಟುಂಬಕ್ಕೆ ಅದು ಅನ್ವಯಿಸುವುದಿಲ್ಲ. ಪ್ರವಾದಿಗಳು ಎಂದೂ ಇಂತಹ ಸಂಘಟನೆ ಸ್ಥಾಪಿಸಿ ಅದರ ಆದೇಶದಂತೆ ಮುಸ್ಲಿಮರು ಬದುಕಬೇಕೆಂದು ಹೇಳಿಲ್ಲ. ನಾನು ಮತ್ತು ನನ್ನ ಕುಟುಂಬ ಈ ದೇಶದ ಸಂವಿಧಾನಕ್ಕನುಸಾರವಾಗಿ ಬದುಕುತ್ತಿದ್ದೇವೆ.

ಏಕರೂಪ ನಾಗರಿಕ ಸಂಹಿತೆಯನ್ನು ವಿರೋಧಿಸಲು ಎಂತೆಂತಹ ಸುಳ್ಳುಗಳನ್ನೆಲ್ಲ ತೇಲಿ ಬಿಡಲಾಗುತ್ತಿದೆ. ಈ ನಿಯಮ ಜಾರಿಗೆ ಬಂದರೆ ಮುಸ್ಲಿಮರು ಮೃತರಾದಾಗ  ಗೋರಿ ಕಟ್ಟಲು ಸಾಧ್ಯವಾಗದು, ಅವರನ್ನು ದಹಿಸಬೇಕಾಗಬಹುದು; ಆದುದರಿಂದ ನಾವು ಈಗಲೇ ಜಾಗೃತರಾಗಿ ಈ ನಿಯಮ ಬರದಂತೆ ತಡೆಯಬೇಕು ಎಂದು ಫೇಸ್‌ಬುಕ್‌ನಲ್ಲಿ ಸಂದೇಶ ನೀಡಲಾಗುತ್ತಿದೆ.

ಮೃತರಾದಾಗ ಗೋರಿ ಕಟ್ಟುವುದು ಮುಸ್ಲಿಮರು ಮಾತ್ರವಲ್ಲ, ಹಿಂದೂಗಳಲ್ಲೂ ಹಲವು ಜಾತಿಗಳಲ್ಲಿ ಮಣ್ಣು ಮಾಡುವ ಪದ್ಧತಿ ಇದೆ. ಇಂಥ  ಸುಳ್ಳುಗಳನ್ನು ತೇಲಿಬಿಟ್ಟು ಅನಕ್ಷರಸ್ಥ ಮುಸ್ಲಿಂ ಮಹಿಳೆಯರನ್ನು ಹಾದಿ ತಪ್ಪಿಸಲಾಗುತ್ತಿದೆ. ಮುಸ್ಲಿಂ ಮಹಿಳೆಯರು ಈಗಲಾದರೂ ತಮ್ಮ ಮೌನ ಮುರಿದು, ಒಂದೇ ಉಸಿರಿನಲ್ಲಿ ಮೂರು ಬಾರಿ ತಲಾಖ್‌ ಹೇಳುವುದರ ವಿರುದ್ಧ ತಮ್ಮ ಅನಿಸಿಕೆಗಳನ್ನು ಹೇಳಬೇಕು.

ಶಾಯಿರಾ ಬಾನು ಎಂಬ ಮಹಿಳೆಗೆ ಗಂಡ ಈ ರೀತಿ ತಲಾಖ್ ನೀಡಿದ್ದು ಮಾತ್ರವಲ್ಲ ಆಕೆ ತನ್ನ ಮಕ್ಕಳೊಡನೆ ಫೋನಿನಲ್ಲೂ ಮಾತನಾಡದಂತೆ ನಿರ್ಬಂಧ ಹೇರಿದ್ದಾನೆ.ಇಬ್ಬರು ಮಕ್ಕಳಾದ ಬಳಿಕ ಆಕೆಗೆ ನಾಲ್ಕೈದು ಬಾರಿ ಗರ್ಭಪಾತ ಮಾಡಿಸಿದ್ದಾನೆ. ಮಹಿಳೆಯರು ಇಂಥ  ಸರ್ವಾಧಿಕಾರಿ ಮನೋಭಾವವನ್ನು ಅರ್ಥ ಮಾಡಿಕೊಳ್ಳಬೇಕು. ಇಂದು ಪಾಕಿಸ್ತಾನ, ಬಾಂಗ್ಲಾದೇಶ, ಅರಬ್ ದೇಶ ಮುಂತಾದೆಡೆಗಳಲ್ಲಿ ಒಮ್ಮೆಗೇ  ಮೂರು ಬಾರಿ ತಲಾಖ್‌ ಹೇಳುವುದನ್ನು ರದ್ದುಪಡಿಸಲಾಗಿದೆ.

ಈ ಸಂದರ್ಭದಲ್ಲಿ ನನಗೆ ಒಂದು ವಿಷಯ ನೆನಪಾಗುತ್ತಿದೆ. ಕಾಂಗ್ರೆಸ್ ಸರ್ಕಾರ, ವಿಚ್ಛೇದಿತ ಮಹಿಳೆಗೆಜೀವನಾಂಶ ಕೊಡುವುದು ಬೇಡ ಎಂಬ ನಿಯಮ ಜಾರಿಗೊಳಿಸಿದ ಸಂದರ್ಭ ಅದಾಗಿತ್ತು. ಆ ಸಮಯದಲ್ಲಿ ಒಂದು ಮದ್ರಸಾದ ಬಡ ಮೌಲ್ವಿಯೊಬ್ಬರು ನನ್ನ ಬಳಿ ಬಂದು ತಮ್ಮ ದುಃಖ ತೋಡಿಕೊಂಡರು. ಅವರು ಸಾಲ ಮಾಡಿ ಮಗಳ ಮದುವೆ ಮಾಡಿ, ಅಳಿಯನನ್ನು ಕೊಲ್ಲಿ ರಾಷ್ಟ್ರವೊಂದಕ್ಕೆ ಕಳುಹಿಸಿದ್ದರು. ಒಂದು ವರ್ಷವಾಗುತ್ತಿದ್ದಂತೆ ಆತ ಅವರ ಮಗಳಿಗೆ ಪತ್ರದ ಮೂಲಕ ತಲಾಖ್ ಕಳುಹಿಸಿದ್ದ.

ಇದಕ್ಕೆ ಏನಾದರೂ ಮಾಡಲು ಸಾಧ್ಯವಿದೆಯೇ ಎಂದು ಕೇಳಲು ಅವರು ನನ್ನ ಬಳಿ ಬಂದಿದ್ದರು. ಆಗ ನಾನೆಂದೆ, ‘ದೇಶದಾದ್ಯಂತ ಮುಸ್ಲಿಮರ ತಲೆ ಕೆಡಿಸಿ, ನಮ್ಮ ಧರ್ಮದಲ್ಲಿ ಸರ್ಕಾರದ ಹಸ್ತಕ್ಷೇಪವೆಂದು ಕೆಲವು ಮತಾಂಧ ಸಂಘಟನೆಗಳು ಕೂಗಾಡಿದವಲ್ಲ. ನೀವು ಹೋಗಿ ಅವರೊಡನೆ ಕೇಳಿ. ತಲಾಖ್ ಪಡೆದ ಮಹಿಳೆಯರಿಗೆ ವಕ್ಫ್ ಮಂಡಳಿ ಜೀವನಾಂಶ ಕೊಡಬೇಕೆಂದು ಸರ್ಕಾರ ನಿಯಮ ಮಾಡಿದೆ! ಅವರೊಡನೆ ಕೇಳಿ.


ನೀವು, ನಿಮ್ಮಂತಹವರು ತಾನೇ ಈ ಮತಾಂಧರಿಗೆ ಬೆಂಬಲ ನೀಡಿದ್ದು? ಈಗ ನಿಮ್ಮ ಮಗಳ ಬದುಕಿನಲ್ಲೇ ಅಂಥ ದುರ್ಘಟನೆ ನಡೆದು ಆಕೆ ನಿರ್ಗತಿಕಳಾದಾಗ ನಿಮಗೆ ನೋವಾಯಿತು. ನಿಮ್ಮಂತಹ ಸಾವಿರಾರು ತಂದೆಯಂದಿರು ಇಂತಹ ನಿಯಮಗಳಿಂದಾಗಿ ನೋವಿನಿಂದ ನರಳುತ್ತಿದ್ದಾರೆ ಎಂಬ ಅರಿವು ನಿಮ್ಮಲ್ಲಿದ್ದಿದ್ದರೆ ಇಂಥ  ನಿಯಮ ಜಾರಿಯಾಗುತ್ತಿರಲಿಲ್ಲ’ ಎಂದೆ. ಆ ಮನುಷ್ಯ ದುಃಖದ ಭಾರದಿಂದ ತಲೆ ತಗ್ಗಿಸಿ ನಡೆಯುತ್ತಾ ಮೆಲ್ಲಗೆ ಗೇಟು ದಾಟುತ್ತಿದ್ದುದನ್ನು ನೋಡಿದಾಗ ನನ್ನ ಕಣ್ಣುಗಳು ತುಂಬಿಕೊಂಡವು. ಆ ದೃಶ್ಯ ಇಂದಿಗೂ ನನ್ನ ಮನಸ್ಸಿನಿಂದ ಮರೆಯಾಗಿಲ್ಲ.

ಏಕರೂಪ ನಾಗರಿಕ ಸಂಹಿತೆ ಜಾರಿಗೆ ಬಂದರೆ ಮುಸ್ಲಿಂ ಹೆಣ್ಣು ಮಕ್ಕಳ ಬದುಕು ಎಷ್ಟೋ ಸುಧಾರಿಸಬಹುದು. ಆದುದರಿಂದ ಅವರ ತಲೆಯ ಮೇಲೆ ತೂಗಾಡುತ್ತಿರುವ ಈ ತ್ರಿವಳಿ ತಲಾಖ್‌ ಎಂಬ ಖಡ್ಗದಿಂದ ಅವರನ್ನು ರಕ್ಷಿಸಬೇಕಾಗಿದೆ. ಏಕರೂಪ ನಾಗರಿಕ ಸಂಹಿತೆ ಜಾರಿಯಾದರೆ ತಮ್ಮ ಹಕ್ಕಿನಿಂದ ತಾವು ವಂಚಿತರಾಗುತ್ತೇವೆಂಬ ಭಯ ಮುಸ್ಲಿಂ ಪುರುಷರನ್ನು ಕಾಡುತ್ತಿದೆ. ಆದುದರಿಂದ ಹೇಗಾದರೂ ಇದನ್ನು ತಡೆಯಬೇಕೆಂಬ ಹುನ್ನಾರ ಅವರದಾಗಿದೆ.

ಇತ್ತ ಮುಸ್ಲಿಂ ಮಹಿಳೆಯರು ತ್ರಿವಳಿ ತಲಾಖ್ ಎಂಬ ಬೆಂಕಿಯಲ್ಲಿ ನರಳುತ್ತಿರುವಾಗ ಆ ಬೆಂಕಿಯಲ್ಲಿ ಚಳಿ ಕಾಯಿಸಿಕೊಳ್ಳಲು ಎಚ್‌.ಡಿ. ದೇವೇಗೌಡರಂಥ ರಾಜಕಾರಣಿಗಳು ಪ್ರಯತ್ನಿಸುತ್ತಿದ್ದಾರೆ. ಮುಸ್ಲಿಂ ಮಹಿಳೆಯರು ರಾಜಕಾರಣಿಗಳ ಹುನ್ನಾರವನ್ನೂ ಅರ್ಥ ಮಾಡಿಕೊಳ್ಳಬೇಕು.

ಇಷ್ಟೆಲ್ಲ ಹೇಳಿದ ಮೇಲೂ ಏಕರೂಪ ನಾಗರಿಕ ಸಂಹಿತೆ ಕುರಿತು ಕೆಲ ಮಾತುಗಳನ್ನು ಹೇಳಬೇಕಾಗಿದೆ. ಈ ಸಂಹಿತೆ ಹೇಗಿರಬೇಕು, ಅದರಲ್ಲಿ ಯಾವ್ಯಾವ ವಿಷಯಗಳು ಒಳಗೊಳ್ಳಬೇಕು ಎಂಬುದನ್ನು ಸರ್ಕಾರ ಸ್ಪಷ್ಟವಾಗಿ ತಿಳಿಸಬೇಕು, ಈ ಕುರಿತು ಲೋಕಸಭೆ, ರಾಜ್ಯಸಭೆ ಹಾಗೂ ಎಲ್ಲ ರಾಜ್ಯಗಳ ವಿಧಾನಸಭೆಗಳಲ್ಲೂ ಚರ್ಚೆ ನಡೆಯಬೇಕು, ಆಮೇಲಷ್ಟೆ ಇದರ ಕುರಿತು ಕೊನೆಯ ತೀರ್ಮಾನ ಕೈಗೊಳ್ಳಬೇಕು ಎಂಬ ಅಭಿಪ್ರಾಯವೂ ವಿದ್ವಾಂಸರಿಂದ ವ್ಯಕ್ತವಾಗಿದೆ. ಒಮ್ಮೆ ಜಾರಿಗೆ ಬಂದ ಮೇಲೂ ತಿದ್ದುಪಡಿ ಮಾಡಲು ಅವಕಾಶ ಇದ್ದೇ ಇರುತ್ತದೆ. ಹಾಗಾಗಿ ಏಕರೂಪ ನಾಗರಿಕ ಸಂಹಿತೆ ಕುರಿತು ಯಾರೂ ಭಯಪಡಬೇಕಾದ ಆಗತ್ಯವಿಲ್ಲ.

ಇಂದು ಅಮೆರಿಕ, ಇಂಗ್ಲೆಂಡ್ ಮುಂತಾದ ದೇಶಗಳಲ್ಲಿ ಬದುಕುತ್ತಿರುವವರು ಅಲ್ಲಿ ಜಾರಿಯಲ್ಲಿರುವ ಸಂವಿಧಾನವನ್ನು ಅನುಸರಿಸಬೇಕೇ ಹೊರತು ನಾಗರಿಕ ಜೀವನದಲ್ಲಿ ತಮ್ಮ ಧಾರ್ಮಿಕ ನಿಯಮಗಳಂತೆ ಬದುಕಲು ಸಾಧ್ಯವಿಲ್ಲ. ಒಮ್ಮೆಗೇ ಮೂರು ಬಾರಿ ತಲಾಖ್ ಹೇಳಿ ವಿಚ್ಛೇದನ ನೀಡುವುದಕ್ಕಾಗಲಿ, ವಿಚ್ಛೇದಿತೆಗೆ ಜೀವನಾಂಶ ನೀಡದೆ ಇರುವುದಕ್ಕಾಗಲಿ ಅಲ್ಲಿನ ನಿಯಮಗಳು ಅವಕಾಶ ನೀಡುವುದಿಲ್ಲ. ಅಲ್ಲಿ ಬದುಕುವವರೆಲ್ಲರೂ ಅಲ್ಲಿನ ನಾಗರಿಕ ನಿಯಮಗಳಿಗೆ ಅನುಸಾರವಾಗಿ ಬದುಕುವುದು ಕಡ್ಡಾಯವಾಗಿದೆ.


Tips for Writing Better Answers in UPSC Main Examination

Tips for Writing Better Answers in UPSC Main Examination



Style of Answering Questions
It is vitally important to understand the question first. If you are asked to “elucidate”, “discuss”, “critically appreciate”, explain or “give reasons for and against”, preferred mode of answering should be descriptive. It is through your style of answering questions, one can get a chance to examine your analytical abilities or originality of thought. Right strategy is to devote five or ten minutes of your time to run through the question paper which will help you decide which questions have to be answered first. You should also allocate time to frame the answer so that there is no confusion later on. It is advisable to use simple English and stave off using flowery and decorative language which takes attention away from the original facts and opinions about a given topic.
How to Write a Good Answer
It is not just enough to know all the facts and information but to pen down your answers in a clear and concise manner is pertinent. By writing answers having clear and a logical frame with no irrelevant or piling up of information, you can grab one’s attention. A candidate should adopt an answering style which is natural, original and to the point. Likewise, use of archaic and fancy words or language should be avoided at all costs. Grammatical errors in the answers attract dislike of the evaluator so there must be no room for grammatical errors in your answers. Last but not the least, it is essential to have a good and legible handwriting.
How to Answer the Effective Part of the Question:
Time and again, you would have heard aspirants talking about effective part of the question and which is too frequently confused with introduction, body and conclusion of any answer which is its structure. The effective part refers to angle or perspective; you wish the answers to be seen. The facts remain unchangeable but the presentation differs.
Getting attuned to the meaning and application of terms that appear repeatedly in questions in the IAS mains exam will certainly help you write better answers. A vast majority of students sometimes wrongly interpret the meaning of these terms consequently they err while answering.

Enumerate:
Enumeration involves listing the points about the topic without giving detailed explanation.

Define:
It refers to writing the simple definition. A bit of memory will definitely help you while reproducing verbatim and at least including all possible keywords and phrases which you know are essential parts of that particular definition.

Evaluate/ Assess / Examine:
Detailed explanations are required. Whatever you know should be explained in detail. The ideal approach is to write introduction in one or two lines followed by three to four lines in favor and three to four lines against the given topic. Implications or limitations associated with a concept should be penned down in two or three lines and finally conclusion should be made in another two or three line.

Opinion / Comment / Views:
Whenever a question asks for your opinion, you should give constructive opinions. Future-oriented and progressive ideas must reflect on your answers.

Purpose / Goal / Objective / Target:
Your answers must answer the fundamental questions like what goals, purposes, objectives or the targets will be achieved? Your answers must provide or suggest viable solutions to the addressed problems.

Analyse:
Analysis is same as evaluation, examination or assessment just that you need to buttress your analysis with your opinion here. How you opine will tell how you evaluate a situation.

Discuss:
You should write answers in a fashion as if you are talking to the examiner. This is how; it will be like child’s play to convey your point of view in an evident manner to the examiner.

Describe:
If you have good theoretical knowledge, describing the concepts will be the easiest thing to do. You have to write basically its parts, constituents, characteristics, what it is made up of and attributes.


Critically:
Whenever you are asked to critically comment, critically examine or critically analyse, you need to write both pros and cons and give a fair, unbiased or value loaded judgment. It should always give a feeling of closure.

Elucidate / Elaborate / Expand / Exemplify:
Most of the candidates fail to find difference between these similar looking words. Elaborate and expand mean detailed explanations. Elucidate means make it clear with examples.

Implications / Consequences / Outcomes / Results:
Here you have to shed light on the possible scenario or impact of the event in question.

Contrast/ Distinguish:
It means to write differences not similarities. But if you are asked to compare and contrast, you can write similarities as well as differences.

Significance / Importance:
What happens because it exists or what happen if it doesn’t exist.

Justify / Advocate:
Here you have to argue in favor of a situation or an event and write favorable comments as far as reasonably possible.


Wednesday, 7 December 2016

Indian Constitution : ಹಕ್ಕುಗಳ ಆರ್ಭಟದಲ್ಲಿ ಕರ್ತವ್ಯ ಮರೆತೆವೇ?


ಮಾನವ ಅಭಿವೃದ್ಧಿ ಸೂಚ್ಯಂಕ -2015





ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದ 188 ದೇಶಗಳ ಪೈಕಿ ಭಾರತ 130ನೇ ರ್ಯಾಂಕಿಂಗ್ ಪಡೆದಿದೆ.  ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪ್ರೋಗ್ರಾಂ (ಯುಎನ್‍ಡಿಪಿ) ಬಿಡುಗಡೆ ಮಾಡಿದ ಮಾನವ ಅಭಿವೃದ್ಧಿ ವರದಿ-2015ರಲ್ಲಿ ಈ ಅಂಶ ಬಯಲಾಗಿದೆ.



ಪ್ರಮುಖ ಅಂಶಗಳು
* ಈ ವರದಿಯಲ್ಲಿ ಭಾರತ 130ನೇ ರ್ಯಾಂಕಿಂಗ್ ಪಡೆದಿದ್ದು, 0.609 ಅಂಕ ದಾಖಲಿಸಿದೆ. ಮಾನವ ಅಭಿವೃದ್ಧಿಯಲ್ಲಿ ಮಧ್ಯಮವರ್ಗದ ದೇಶಗಳ ಸಾಲಿನಲ್ಲಿ ಭಾರತ ಸೇರಿದೆ. 2014ರ ವರದಿಯಲ್ಲಿ ಭಾರ 0.586 ಅಂಕಗಳೊಂದಿಗೆ 135ನೇ ರ್ಯಾಂಕ್ ಪಡೆದಿತ್ತು.

* ದೇಶದಲ್ಲಿ ತಲಾದಾಯ ಹೆಚ್ಚಿರುವುದು ಮತ್ತು ಸರಾಸರಿ ಜೀವನಾಯುಷ್ಯ ಹೆಚ್ಚಿರುವುದು ಭಾರತದ ರ್ಯಾಂಕಿಂಗ್‍ನಲ್ಲಿ ಏರಿಕೆಗೆ ಮುಖ್ಯ ಕಾರಣಗಳು.

* ಭಾರತದಲ್ಲಿ ಹುಟ್ಟಿನ ವೇಳೆ ಜೀವಿತಾವಧಿ 68 ವರ್ಷ ಎಂದು ಅಂದಾಜು ಮಾಡಲಾಗಿದೆ. 2014ರಲ್ಲಿ ಈ ಪ್ರಮಾಣ 67.4 ವರ್ಷ ಇತ್ತು. ಇದಕ್ಕೂ ಮುನ್ನ 1980ರಲ್ಲಿ ಭಾರತದ ವ್ಯಕ್ತಿಗಳ ನಿರೀಕ್ಷಿತ ಆಯುಷ್ಯ 53.9 ವರ್ಷ ಆಗಿತ್ತು.

* ಒಟ್ಟಾರೆ ರಾಷ್ಟೀಯ ತಲಾ ಆದಾಯ (ಜಿಎನ್‍ಐ) 2014ರಲ್ಲಿ 5497 ಡಾಲರ್‍ಗೆ ಏರಿದೆ. ಹಿಂದಿನ ವರ್ಷ ಇದು 5180 ಡಾಲರ್ ಆಗಿತ್ತು. 1980ರಲ್ಲಿ ಭಾರತದ ತಲಾದಾಯ 1255 ಡಾಲರ್ ಮಾತ್ರ ಇತ್ತು. 1980ರಿಂದ 2014ರ ಅವಧಿಯಲ್ಲಿ ಭಾರತೀಯರ ತಲಾದಾಯ ಶೇಕಡ 338ರಷ್ಟು ಏರಿಕೆ ಕಂಡಿದೆ.

* ಜ್ಞಾನಲಭ್ಯತೆ: ಆದರೆ 2011ರಿಂದೀಚೆಗೆ ಮಕ್ಕಳ ಸರಾಸರಿ ಕಲಿಕಾ ವಯಸ್ಸು 11.7ರಲ್ಲೇ ನಿಂತಿದೆ. ಶಾಲೆಗೆ ಸೇರುವ ಅವಧಿ 2010ರಲ್ಲಿ 5.4 ವರ್ಷ ಇದ್ದುದು ಯಾವ ಬದಲಾವಣೆಯೂ ಆಗಿಲ್ಲ.

* ಲಿಂಗ ಅಭಿವೃದ್ಧಿ ಸೂಚ್ಯಂಕ: ಭಾರತದ ಜಿಡಿಐ ಮೌಲ್ಯ 0.795ರಷ್ಟಿದೆ. ಮಹಿಳಾ ಅಭಿವೃದ್ಧಿ ಸೂಚ್ಯಂಕವು 0.525 ಇದ್ದರೆ, ಪುರುಷರ ಅಭಿವೃದ್ಧಿ ಸೂಚ್ಯಂಕ 0.660 ಇದೆ.

* ಲಿಂಗ ಅಸಮಾನತೆ ಸೂಚ್ಯಂಕ: ಭಾರತ 155 ದೇಶಗಳ ಪೈಕಿ 0.563 ಮೌಲ್ಯದೊಂದಿಗೆ 130ನೇ ಸ್ಥಾನದಲ್ಲಿದೆ.

* ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯ 1980ರಲ್ಲಿ 0.362 ಇದ್ದುದು, 2014ರವೇಳೆಗೆ 0.609ಕ್ಕೆ ಏರಿದೆ. ಅಂದರೆ ಶೇಕಡ 68.1ರಷ್ಟು ಏರಿಕೆ ಕಂಡಿದ್ದು, ವಾರ್ಷಿಕ 1.54 ಶೇಕಡ ದರದಲ್ಲಿ ಏರಿಕೆಯಾಗುತ್ತಿದೆ.

* ಭಾರತೀಯರ ಹುಟ್ಟಿನ ವೇಳೆ ಅಂದಾಜು ಜೀವಿತಾವಧಿ 1980 ರಿಂದ 2014ರವರೆಗೆ 14.1 ವರ್ಷದಷ್ಟು ಹೆಚ್ಚಿದೆ. ಸರಾಸರಿ ಶಾಲೆಯಲ್ಲಿ ಕಲಿಕಾವಧಿ 3.5 ವರ್ಷದಷ್ಟು ಹೆಚ್ಚಿದ್ದು, ಇದೀಗ ಶಾಲೆಯಲ್ಲಿ ಕಲಿಕಾ ಅವಧಿ 5.3 ವರ್ಷದಷ್ಟು ಹೆಚ್ಚಿದೆ.

* ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೂರು ಅಗ್ರಗಣ್ಯ ದೇಶಗಳೆಂದರೆ, ಕ್ರಮವಾಗಿ ನಾರ್ವೆ, ಆಸ್ಟ್ರೇಲಿಯಾ ಹಾಗೂ ಸ್ವಿಡ್ಜರ್‍ಲೆಂಡ್.

* ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (73), ಚೀನಾ (90), ಭೂತಾನ್ (132), ಬಾಂಗ್ಲಾದೇಶ (142), ನೇಪಾಳ (145), ಪಾಕಿಸ್ತಾನ (147), ಅಪ್ಘಾನಿಸ್ತಾನ (171).
ಬ್ರಿಕ್ಸ್ ದೇಶಗಳು: ರಷ್ಯಾ (50), ಬ್ರೆಜಿಲ್ (75), ಚೀನಾ (90), ದಕ್ಷಿಣ ಆಫ್ರಿಕಾ (116) ಮತ್ತು ಭಾರತ (130).

ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ:
ಮಾನವ ಅಭಿವೃದ್ಧಿ ಸೂಚ್ಯಂಕವೆಂದರೆ, ಮೂಲಭೂತವಾಗಿ ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ದೇಶ ಸಾಧಿಸಿದ ಅಭಿವೃದ್ಧಿಯಾಗಿದ್ದು, ಇದನ್ನು ಯುಎನ್‍ಡಿಪಿ ಅಧ್ಯಯನ ಮಾಡುತ್ತದೆ. ದೇಶಗಳ ಮೂರು ಪ್ರಮುಖ ಧೀರ್ಘಾವಧಿ ಪ್ರಗತಿಯ ಆಯಾಮಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜೀವಿತಾವಧಿ ಮತ್ತು ಆರೋಗ್ಯ, ಜ್ಞಾನಲಭ್ಯತೆ ಹಾಗೂ ಶಿಷ್ಟ ಜೀವನ ಗುಣಮಟ್ಟ.




NO SELFI ZONE ನೋ ಸೆಲ್ಫಿ ಝೋನ್




ನೋ ಸೆಲ್ಫಿ ಝೋನ್


ರಾಜ್ಯದ 400 ತಾಣಗಳು ನೋ ಸೆಲ್ಫಿ ಝೋನ್


ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫೋನ್ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ.

ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್ ವಲಯಗಳಾಗಿದ್ದು, ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್ ತಾಣಗಳು ಹೀಗೆ ಪ್ರವಾಸಿಗರು ತೆರಳುವ ಕೇಂದ್ರಗಳಲ್ಲಿ ಅದರಲ್ಲೂ ನೈಸರ್ಗಿಕ ತಾಣದ ಪ್ರದೇಶಗಳಲ್ಲಿ ಸೆಲ್ಫಿಯಿಂದಾಗಿ ಅಪಾಯ ಸಂಭವಿಸದಂತೆ ‘ನೋ ಸೆಲ್ಫಿ ಝೋನ್’ ಫಲಕಗಳನ್ನು ಇಲಾಖೆ ಅಳವಡಿಸುತ್ತಿದೆ. ಈ ಫಲಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಇನ್ನೂ ಕೆಲವೆಡೆ ಚಿತ್ರಗಳೇ ಅಪಾಯವನ್ನು ಒತ್ತಿ ಹೇಳುವ ಫಲಕಗಳನ್ನೂ ಅಳವಡಿಸಲಾಗಿದೆ.

ವಿಶೇಷವೆಂದರೆ, ಫೋಟೊಗಳನ್ನು ತೆಗೆಯಬಹುದಾದ ತಾಣಗಳಲ್ಲಿ ‘ಇಲ್ಲಿ ಫೋಟೊಗಳನ್ನು ತೆಗೆಯಬಹುದು’ ಎಂಬ ಫಲಕಗಳನ್ನೂ ಅಳವಡಿಸಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಗಮನ ನೀಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಸೆಲ್ಫಿ ಸಾವು
•  ವಿಶ್ವದ ಅಂಕಿ ಅಂಶಗಳನ್ನು ನೋಡಿದರೆ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅತಿ ಹೆಚ್ಚು ಸಾವು ಸಂಭವಿಸಿದ ನಗರ ದೆಹಲಿ ಎಂದು ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂದ್ರಪ್ರಸ್ಥ ಮಾಹಿತಿ ಸಂಸ್ಥೆಯ ಸಂಶೋಧನಾ ವರದಿ ತಿಳಿಸಿದೆ.
•   ಸೆಲ್ಫಿ ತೆಗೆಯುವಾಗ ಸಾವಿಗೀಡಾದವರ ಒಟ್ಟು ಸಂಖ್ಯೆ 127. ಅದರಲ್ಲಿ ಭಾರತದ ಪಾಲು 76. ಪಾಕಿಸ್ತಾನದಲ್ಲಿ 9. ಅದು 2ನೇ ಸ್ಥಾನದಲ್ಲಿದೆ.
•  ಅಮೆರಿಕ (8), ರಷ್ಯಾ(6), ಫಿಲಿಫೈನ್ಸ್ ಮತ್ತು ಚೀನಾ (ತಲಾ4), ಸ್ಪೇನ್ (3), ಪೋರ್ಚುಗಲ್, ಇಂಡೋನೇಷ್ಯಾ, ಪೆರು ಮತ್ತು ಟರ್ಕಿ (ತಲಾ2), ರೋಮೇನಿಯಾ, ಆಸ್ಟ್ರೇಲಿಯಾ, ಮೆಕ್ಸಿಕೊ, ದಕ್ಷಿಣ ಆಫ್ರಿಕ, ಇಟಲಿ, ನೇಪಾಳ, ಸರ್ಬಿಯಾ, ಚಿಲಿ ಮತ್ತು ಹಾಂಗ್‍ಕಾಂಗ್‍ಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ಆಕ್ಸ್ ಫರ್ಡ್ ಪದಕೋಶದಲ್ಲಿ ‘ಸೆಲ್ಫಿ’
2013ರ ವರ್ಷದ ಪದವಾಗಿ ಆಕ್ಸ್‍ಫರ್ಡ್ ಪದಕೋಶದಲ್ಲಿ ಸೇರ್ಪಡೆ ಆಗಿತ್ತು. ಸೆಲ್ಫಿ ಪದದ ಅರ್ಥ ಹೀಗಿದೆ. ಒಬ್ಬ ವ್ಯಕ್ತಿ ತನ್ನ ಚಿತ್ರವನ್ನು ಸ್ವಯಂ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದು.




OPEC


PSLV-C36 / RESOURCESAT-2A


PSLV-C36 / RESOURCESAT-2A
PSLV-C36

PSLV-C36 is the thirty eighth flight of ISRO's Polar Satellite Launch Vehicle (PSLV) placed the 1235 kg RESOURCESAT-2A into an 817 km polar Sun Synchronous Orbit (SSO). PSLV-C36 was launched from the First Launch Pad (FLP) at Satish Dhawan Space Centre SHAR, Sriharikota. In this flight, the 'XL' version of PSLV with six solid strap-on motors was used.

PSLV is the ISRO's versatile launch vehicle for launching multiple satellites in polar SSOs, Low Earth Orbits (LEO) as well as Geosynchronous Transfer Orbit (GTO) and sub GTO. With 36 successful launches, PSLV has emerged as the workhorse launch vehicle of ISRO and is offered for launching satellites for international customers. During 1994-2016 period, PSLV has launched a total of 121 satellites, of which 79 satellites are from abroad and 42 are Indian satellites.

PSLV-C36 / RESOURCESAT-2A was successfully launched on December 07, 2016 at 10:25 hrs (IST) from SDSC SHAR, Sriharikota.


BACK

1) RESOURCESAT-2.         2011April 20


RESOURCESAT-2
RESOURCESAT-2 is a follow on mission to RESOURCESAT-1 and the eighteenth Remote Sensing satellite built by ISRO. RESOURCESAT-2 is intended to continue the remote sensing data services to global users provided by RESOURCESAT-1, and to provide data with enhanced multispectral and spatial coverage as well.

Important changes in RESOURCESAT-2 compared to RESOURCESAT-1 are: Enhancement of LISS-4 multispectral swath from 23 km to 70 km and improved Radiometric accuracy from 7 bits to 10 bits for LISS-3 and LISS-4 and 10 bits to 12 bits for AWIFS. Besides, suitable changes, including miniaturisation in payload electronics, have been made in RESOURCESAT-2.

RESOURCESAT-2 also carries an additional payload known as AIS (Automatic Identification System) from COMDEV, Canada as an experimental payload for ship surveillance in VHF band to derive position, speed and other information about ships.

RESOURCESAT-2 carries two Solid State Recorders with a capacity of 200 Giga Bytes each to store the images taken by its cameras which can be read out later to ground stations.


Launch Mass:
1206 kg
Mission Life:
5 years
Power:
1250 W
Launch Vehicle:
PSLV-C16/RESOURCESAT-2
Type of Satellite:
Earth Observation
Manufacturer:
ISRO
Owner:
ISRO
Application:
Earth Observation
Orbit Type:
SSPO

2) RESOUCESAT-1

Oct 17, 2003
IRS-P6 / RESOURCESAT-1
RESOURCESAT-1 is the tenth satellite of ISRO in IRS series, intended to not only continue the remote sensing data services provided by IRS-1C and IRS-1D, both of which have far outlived their designed mission lives, but also to vastly enhance the data quality. RESOURCESAT-1 is the most advanced Remote Sensing Satellite built by ISRO as of 2003.


Launch Mass:
1360 kg
Mission Life:
5 years
Power:
1250 W
Launch Vehicle:
PSLV-C5 /RESOURCESAT-1
Type of Satellite:
Earth Observation
Manufacturer:
ISRO
Owner:
ISRO
Application:
Earth Observation
Orbit Type:
SSPO




ಗುರು


ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಜೀವನದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಶಕ್ತಿಯನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಬೆಳಕಿನ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಜೀವನದ ಅರಿವು ಅರಿಯಬೇಕಾಗಿರುವುದರಿಂದ, ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.
ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.
ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |
ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :
ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||
ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ.ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ,ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನುಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ|
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ.ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.
ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||
ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||
ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.
ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||
ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.
ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||
ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿಭಕ್ತಿ ಇಲ್ಲದವನ ಜೀವನ ನಿರರ್ಥಕ.
ಕ್ಷಮಾಮಂಡಲೇ ಭೂಪಭೂಪಾಲಬೃಂದೈ:
ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||
ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.
ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||
ಅನೇಕ ದಾನ ಧರ್ಮಗಳನ್ನುಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.
ನ ಭೋಗೇ ನ ಯೋಗೇ ನ ವಾವಾಜಿರಾಜೌ
ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್||೭||
ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.
ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||
ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.
ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾ ಪ್ರತಿಯೊಂದು ಶ್ಲೋಕದ ಕೊನೆಗೂಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆಕಷ್ಟಸಾಧ್ಯ ಎನ್ನುತ್ತಾ ಗುರುವಿನಮಹತ್ವವನ್ನು ವಿವರಿಸುತ್ತಾರೆ.
ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.
ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.
ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ:
ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ
ಆಧ್ಯಾತ್ಮವಿದ್ಯ ಗುರುಕೀಲು ಮಹಿಮ
ವ್ಯಕ್ತಿಯ ಬೆಳವಣಿಗೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಸಾಧನೆ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು.ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ. (ಕೃಪೆ: ಅಂತರ್ಜಾಲ)
“ಗುರು”ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಇಂದು ನಮ್ಮ ಭವಿಷ್ಯಕ್ಕಾಗಿ ತಮ್ಮ ಜೀವನ ತೆಯ್ದ ನಮ್ಮ ಗುರುಗಳಿಗೆ ಮತ್ತು ಗುರುಮಾತೆಯರಿಗೆ ಅಕ್ಷರ ನಮನ ಸಲ್ಲಿಸೋಣ. ಸಾಧ್ಯವಾದರೆ ನಮ್ಮ ಗುರುಗಳನ್ನು ಭೇಟಿಯಾಗಿ ಅಥವಾ ಕನಿಷ್ಠ ಪಕ್ಷ ದೂರವಾಣಿ ಮೂಲಕವಾದರೂ ಶುಭಾಶಯಗಳನ್ನು ಕೋರೊಣ. ನಮ್ಮಲ್ಲಿ ಇಂದು ಸಾಕಷ್ಟು ಜನ ಅನೇಕ ಗುರುಗಳು ನಮಗೆ ನೀಡಿದ ಅಕ್ಷರ ಭಿಕ್ಷೆಯಿಂದ ಇಂದು ಅನ್ನ ಕಂಡು ಕೊಂಡಿರುವದರೊಂದಿಗೆ ಸಾಕಷ್ಟು ಸ್ಥಿತಿವಂತರಾಗಿದಿವಿ ನಮ್ಮ ಗುರುಗಳಾರಾದರು ತೊಂದರೆಯಲ್ಲಿರುವುದು ತಿಳಿದರೆ ಕೈಲಾದಷ್ಟು ಸಹಾಯ ಮಾಡೋಣ. ನೆನಪಿಡಿ ನಾವು ಅನುಭವಿಸುತ್ತಿರುವ ಜೀವ ತಂದೆತಾಯಿಯರದು ಆದರೆ ಜೀವನ ನಮ್ಮ ಶಿಕ್ಷಕರದು.

IAS Prelim Exam 2016 (KANNADA) Part-2


51. ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಕನಿಷ್ಠ ಖಾತ್ರಿಯ ಪಿಂಚಣಿ ಯೋಜನೆಯಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ.
2. ಕುಟುಂಬದ ಒಬ್ಬ ಸದಸ್ಯ ಮಾತ್ರ ಇದರ ಸದಸ್ಯತ್ವ ಪಡೆಯಬಹುದು.
3. ವಿಮಾಸೌಲಭ್ಯ ಪಡೆದ ವ್ಯಕ್ತಿ ಮೃತಪಟ್ಟ ಬಳಿಕವೂ ಗಂಡ/ ಹೆಂಡತಿಗೆ ಅದೇ ಮೊತ್ತದ ಪಿಂಚಣಿ ಬರುತ್ತದೆ.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಸಿ
52. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಯಾವ ದೇಶಗಳ ಗುಂಪಿಗೆ ಸಂಬಂಧಿಸಿದ್ದು?
ಎ. ಜಿ-20
ಬಿ. ಏಷಿಯನ್
ಸಿ. ಎಸ್‍ಸಿಓ
ಡಿ. ಸಾರ್ಕ್
ಉ: ಬಿ
53. ಬ್ಯೂರೊ ಆಫ್ ಎನರ್ಜಿ ಎಫೀಶಿಯೆನ್ಸಿ ಸ್ಟಾರ್ ಲೇಬಲ್ ಯಾವುದರ ಮೇಲೆ ಕಂಡುಬರುತ್ತದೆ?
1. ಸೀಲಿಂಗ್ ಫ್ಯಾನ್
2. ಇಲೆಕ್ಟ್ರಿಕ್ ಗೀಸರ್
3. ಟ್ಯೂಬ್ ಆಕಾರದ ಫ್ಲೋರೊಸೆಂಟ್ ದೀಪ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಡಿ
54. ಭಾರತವು ಸಾಂಪ್ರದಾಯಿಕ ಥರ್ಮೋನ್ಯೂಕ್ಲಿಯರ್ ಎಕ್ಸ್‍ಪರಿಮೆಂಟಲ್ ರಿಯಾಕ್ಟರ್‍ನ ಪ್ರಮುಖ ಸದಸ್ಯದೇಶವಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಆಗುವ ಲಾಭ ಏನು?
ಎ. ನಾವು ಯುರೇನಿಯಂ ಅನ್ನು ಸಾಂಪ್ರದಾಯಕ ಉಷ್ಣವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಬಳಸಬಹುದು.
ಬಿ. ಇದು ಉಪಗ್ರಹ ಪಥದರ್ಶಕದಲ್ಲಿ ಜಾಗತಿಕ ಪಾತ್ರವನ್ನು ನಿರ್ವಹಿಸಬಹುದು.
ಸಿ. ವಿದ್ಯುತ್ ಉತ್ಫಾದನೆಗೆ ರಿಯಾಕ್ಟರ್‍ಗಳ ಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಡಿ. ಇದು ಫ್ಯೂಷನ್ ರಿಯಾಕ್ಟರ್‍ಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು.
ಉ: ಡಿ
55. ಭಾರತದ ಇತಿಹಾಸದ ಹಿನ್ನೆಲೆಯಲ್ಲಿ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗುತ್ತದೆ?
1. ಎರಿಪರ್ತಿ: ಗ್ರಾಮೀಣ ಬ್ಯಾಂಕ್ ಮುಖ್ಯ ಕಂದಾಯದ ಹೊರತಾಗಿ ಪಡೆಯುವ ಭೂಕಂದಾಯ.
2. ತನಿಯೂರ: ಬ್ರಾಹ್ಮಣ ಅಥವಾ ಬ್ರಾಹ್ಮಣ ಸಮುದಾಯಕ್ಕೆ ದಾನ ಮಾಡಲ್ಪಟ್ಟ ಗ್ರಾಮ
3. ಘತಿಕಾ: ದೇವಾಲಯಕ್ಕೆ ಸಂಬಂಧಿಸಿದ ಕಾಲೇಜುಗಳು
ಎ. 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1 ಮತ್ತು 3
ಉ: ಡಿ
56. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಅಂತರರಾಷ್ಟ್ರೀಯ ಸೌರ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ 2015ರಲ್ಲಿ ಆರಂಭಿಸಲಾಯಿತು.
2. ಈ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಆರಂಭಿಸಿವೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
57. ಯುರೋಪಿಯನ್ ಸ್ಟೆಬಿಲಿಟಿ ಮೆಕ್ಯಾನಿಸಂ ಎಂದರೇನು?
ಎ. ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು, ಲಕ್ಷಾಂತರ ಮಂದಿಯ ವಲಸೆಯನ್ನು ನಿರ್ವಹಿಸುವುದು ಇದರ ಹೊಣೆ.
ಬಿ. ಯೂರೋಪಿಯನ್ ದೇಶಗಳ ಹಣಕಾಸು ಸುಸ್ಥಿರತೆ ಕಾಪಾಡಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಸಿ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವ್ಯಾಪಾರ ಒಪ್ಪಂದ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಡಿ. ಸದಸ್ಯದೇಶಗಳ ಸಂಘರ್ಷ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಉ: ಬಿ
58. ತುಂತುರು ನೀರಾವರಿಯ ಪ್ರಯೋಜನಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ?
1. ಕಳೆಗಳು ಕಡಿಮೆಯಾಗುತ್ತವೆ.
2. ಮಣ್ಣು ಜವಳಾಗುವುದು ಕಡಿಮೆಯಾಗುತ್ತದೆ.
3. ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. ಯಾವುದೂ ಅಲ್ಲ
ಉ: ಸಿ
59. ರೆಜಿಸ್ಟರಿಂಗ್ ಡಿಜಿಟಲ್ ಲಾಕರ್ಸ್ ಎನ್ನುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1 ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಡಿಜಿಟಲ್ ಲಾಕರ್ ವ್ಯವಸ್ಥೆ
2. ಯಾವುದೇ ಪ್ರದೇಶದಿಂದಲಾದರೂ ಇದರ ಮೂಲಕ ನೀವು ಇ– ದಾಖಲೆಗಳನ್ನು ನಿರ್ವಹಿಸಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ.
ಉ: ಸಿ
60. ಇತ್ತೀಚೆಗೆ ಈ ಕೆಳಗಿನ ಯಾವ ನದಿಗಳನ್ನು ಜೋಡಿಸಲಾಗಿದೆ?
ಎ. ಕಾವೇರಿ ಹಾಗೂ ತುಂಗಭದ್ರಾ
ಬಿ. ಗೋದಾವರಿ ಹಾಗೂ ಕೃಷ್ಣಾ
ಸಿ. ಮಹಾನದಿ ಹಾಗೂ ಸೋನೆ
ಡಿ. ನರ್ಮದಾ ಮತ್ತು ತಪತಿ
ಉ: ಬಿ


61. ದೇಶದ ನಗರಗಳಲ್ಲಿ ವಾಯು ಗುಣಮಟ್ಟವನ್ನು ಅಳೆಯಲು ಯಾವ ಅನಿಲವನ್ನು ಪರಿಗಣಿಸಲಾಗುತ್ತದೆ?
1. ಇಂಗಾಲದ ಡೈ ಆಕ್ಸೈಡ್
2. ಇಂಗಾಲದ ಮೋನೋಕ್ಸೈಡ್
3. ಸಾರಜನಕದ ಡೈ ಆಕ್ಸೈಡ್
4. ಗಂಧಕದ ಡೈ ಆಕ್ಸೈಡ್
5. ಮಿಥೇನ್
ಎ. 1, 2 ಮತ್ತು 3
ಬಿ. 2, 3 ಮತ್ತು 4
ಸಿ. 1, 4 ಮತ್ತು 5
ಡಿ. ಮೇಲ್ಕಂಡ ಎಲ್ಲವೂ
ಉ: ಬಿ
62. ಆಸ್ಟ್ರೋ ನಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಅಮೆರಿಕ ಹಾಗೂ ರಷ್ಯಾ ಹೊರತುಪಡಿಸಿದರೆ ಭಾರತ ಮಾತ್ರ ಅಂಥ ವೀಕ್ಷಣಾ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
2. ಇದು 2000 ಕೆ.ಜಿ. ತೂಕದ ಉಪಗ್ರಹವಾಗಿದದ್ದು, ಭೂಮಿಯ ಮೇಲ್ಮೈನಿಂದ 1050 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಅಳವಡಿಸಲಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2′
ಡಿ. ಯಾವುದೂ ಅಲ್ಲ
ಉ: ಎ
63. ಮಧ್ಯಕಾಲೀನ ಭಾರತದ ಆರ್ಥಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಅರಘಟ್ಟ ಎಂದರೇನು?
ಎ. ಜೀತ ಕಾರ್ಮಿಕ
ಬಿ. ಸೇನಾ ಅಧಿಕಾರಿಗಳಿಗೆ ಮಂಜೂರಾದ ಭೂಮಿ
ಸಿ. ನೀರಾವರಿಗೆ ಬಳಸುತ್ತಿದ್ದ ಚಕ್ರ
ಡಿ. ಕೃಷಿಗೆ ಪರಿವರ್ತನೆಯಾದ ಬಂಬರು ಭೂಮಿ
ಉ: ಸಿ
64. ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದ, ರಾಜಮನೆತನದ ಇತಿಹಾಸಕಾರರು, ಪುರಾಣಕಥೆ ವೃತ್ತಿಯವರು ಯಾರು?
ಎ. ಶ್ರಾಮಣ
ಬಿ. ಪರಿವ್ರಾಜಕ
ಸಿ. ಅಗ್ರಹಾರಿಕ
ಡಿ. ಮಾಗಧ
ಉ: ಡಿ

65, ಇತ್ತೀಚೆಗೆ ಯಾವ ರಾಜ್ಯ ನಿರ್ದಿಷ್ಟ ಚಿಟ್ಟೆಯನ್ನು ರಾಜ್ಯದ ಚಿಟ್ಟೆ ಎಂದು ಘೋಷಿಸಿದೆ?
ಎ. ಅರುಣಾಚಲಪ್ರದೇಶ
ಬಿ. ಹಿಮಾಚಲ ಪ್ರದೇಶ
ಸಿ. ಕರ್ನಾಟಕ
ಡಿ. ಮಹಾರಾಷ್ಟ್ರ
ಉ: ಡಿ
66. ಇಸ್ರೋ ಉಡಾಯಿಸಿದ ಮಂಗಳಯಾನಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಇದನ್ನು ಮಾರ್ಸ್ ಆರ್ಬಿಟರ್ ಮಿಷಿನ್ ಎಂದೂ ಕರೆಯಲಾಗುತ್ತದೆ.
2. ಈ ಮೂಲಕ ಅಮೆರಿಕ ನಂತರ ಭಾರತ ಮಂಗಳಯಾನ ಕೈಗೊಂಡ ಎರಡನೇ ದೇಶ.
3. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದ ಮೊದಲ ದೇಶ ಭಾರತ
ಎ. ಕೇವಲ 1
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 1,2 ಮತ್ತು 3
ಉ: ಸಿ
67. ಭಾರತ ರಾಷ್ಟ್ರೀಯ ಕಾಂಗ್ರೆಸ್ 1907ರಲ್ಲಿ ವಿಭಜನೆಯಾಗಲು ಮುಖ್ಯ ಕಾರಣ ಏನು?
ಎ. ಲಾರ್ಡ್ ಮಿಂಟೊ ಭಾರತದ ರಾಜಕೀಯದಲ್ಲಿ ಕೋಮುವಾದ ಆರಂಭಿಸಿದ್ದು
ಬಿ. ಮಂದಗಾಮಿಗಳ ವಿಧಾನಗಳ ಬಗ್ಗೆ ತೀವ್ರವಾದಿಗಳಿಗೆ ಅಸಮಾಧಾನ
ಸಿ. ಮುಸ್ಲಿಂ ಲೀಗ್‍ನ ಹುಟ್ಟು
ಡಿ. ಅರವಿಂದೋ ಘೋಷ್ ಅವರು ಐಎನ್‍ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು
ಉ: ಬಿ
68. ಎರಡನೇ ಮಹಾಯುದ್ಧದ ಬಳಿಕ ಸರ್ ಸ್ಟಫರ್ಡ್ ಕ್ರಿಪ್ಲರ್‍ನ ಯೋಜನೆಗಳು ಹೇಗೆ ರೂಪುಗೊಂಡವು?
ಎ. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಬಿ. ಸ್ವಾತಂತ್ರ್ಯ ನೀಡುವ ಮುನ್ನ ಭಾರತವನ್ನು ವಿಭಜಿಸಬೇಕು
ಸಿ. ಕಾಮನ್ವೆಲ್ತ್ ಸೇರುವ ಷರತ್ತಿನ ಅನ್ವಯ ಸ್ವಾತಂತ್ರ್ಯ ನೀಡಬೇಕು
ಡಿ. ಅರೆ ಸ್ವತಂತ್ರ್ಯ ದೇಶವಾಗಿ ಭಾರತ ರೂಪುಗೊಳ್ಳಬೇಕು.
ಉ: ಡಿ
69. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಬುದ್ಧಗಯಾ: ಭಗೇಲ್‍ಖಂಡ
2. ಖುಜರಾಹೊ: ಬುಂಡೇಲ್‍ಖಂಢ
3. ಶಿರಡಿ: ವಿದರ್ಭ
4. ನಾಶಿಕ್: ಮಾಳವ
5. ತಿರುಪತಿ: ರಾಯಲ್‍ಸೀಮಾ
ಎ. ಕೇವಲ 1, 2 ಮತ್ತು 4
ಬಿ. 2, 3, 4 ಮತ್ತು 5
ಸಿ. 2 ಮತ್ತು 5
ಡಿ. 1,3,4 ಮತ್ತು 5
ಉ: ಸಿ
70. ದೇಶದ ಹಿತಾಸಕ್ತಿಯಿಂದ ಯಾವುದೇ ರಾಜ್ಯ ವಿಷಯಗಳ ಶಾಸನ ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಲು ಈ ಕೆಳಗಿನ ಯಾವ ನಿರ್ಣಯ ಅಗತ್ಯವಾಗುತ್ತದೆ?
ಎ. ಲೋಕಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಬಿ. ಲೋಕಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಸಿ. ರಾಜ್ಯಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಡಿ. ರಾಜ್ಯಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಉ: ಡಿ
71. ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
ಎ. ಆಂಧ್ರಪ್ರದೇಶ
ಬಿ. ಛತ್ತೀಸ್‍ಗಢ
ಸಿ. ಕರ್ನಾಟಕ
ಡಿ. ರಾಜಸ್ಥಾನ
ಉ: ಡಿ
72. ಪ್ಯಾರೀಸ್‍ನಲ್ಲಿ 2015ರಲ್ಲಿ ನಡೆದ ಯುಎನ್‍ಎಫ್‍ಸಿಸಿಸಿ ಸಭೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಸಹಿ ಮಾಡಿದ್ದು 2017ರಲ್ಲಿ ಇದು ಜಾರಿಗೆ ಬರಲಿದೆ.
2. ಇದು ಹಸಿರುಮನೆ ಪರಿಣಾಮ ನಿಯಂತ್ರಿಸಲು ಮಾಡಿಕೊಂಡ ಒಪ್ಪಂದವಾಗಿದೆ.
3. ಜಾಗತಿಕ ತಾಪಮಾನದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು 1000 ಶತಕೋಟಿ ಡಾಲರ್ ವಾರ್ಷಿಕ ನೆರವು ನೀಡುತ್ತವೆ.
ಎ. ಕೇವಲ 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2 ಮತ್ತು 3
ಉ: ಬಿ
73. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಸುಸ್ಥಿರ ಅಭಿವೃದ್ಧಿ ಗುರಿಯನ್ನು 1972ರಲ್ಲಿ ಮೊಟ್ಟಮೊದಲ ಬಾರಿಗೆ ಕ್ಲಬ್ ಆಫ್ ರೋಮ್ ಮುಂದಿಟ್ಟಿತು.
2. ಸುಸ್ಥಿರ ಅಭಿವೃದ್ಧಿ ಗುರಿಯನ್ನು 2030ರೊಳಗೆ ತಲುಪಬೇಕು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
74. ಇತ್ತೀಚೆಗೆ ಬಿಡುಗಡೆಯಾದ ದ ಮ್ಯಾನ್ ಹೂ ನೋಸ್ ಇನ್‍ಫಿನಿಟಿ ಯಾರಿಗೆ ಸಂಬಂಧಿಸಿದ ಚಿತ್ರ?
ಎ. ಎಸ್,ರಾಮಾನುಜಂ
ಬಿ. ಎಸ್.ಚಂದ್ರಶೇಖರ್
ಸಿ. ಎಸ್.ಎನ್.ಬೋಸ್
ಡಿ. ಸಿ.ವಿ.ರಾಮನ್
ಉ: ಎ
75. ಕೆಳಗಿನ ಸರಿ ಹೇಳಿಕೆ ಗುರುತಿಸಿ.
1. ಪಂಚಾಯ್ತಿ ಸದಸ್ಯರಾಗಲು ಕನಿಷ್ಠ ವಯಸ್ಸು 25
2. ಅವಧಿಪೂರ್ವ ವಿಜರ್ಸನೆಯಾದ ಪಂಚಾಯ್ತಿಯನ್ನು ಪುನರ್ ರೂಪಿಸಿದಾಗ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. 1 ಅಥವಾ 2
ಉ:ಬಿ


76. ಈ ಕೆಳಗಿನ ಯಾವ ಹೇಳಿಕೆ ಸರಿ?
1. ಲೋಕಸಭೆ ಅವಧಿ ಮುಕ್ತಾಯದ ವೇಳೆಗೆ ಅಲ್ಲಿ ಬಾಕಿ ಇದ್ದ ಮಸೂದೆ ಅನೂರ್ಜಿತಗೊಳ್ಳುತ್ತದೆ.
2. ಲೋಕಸಭೆಯಲ್ಲಿ ಆಂಗೀಕಾರವಾದ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆ ಬಳಿಕವೂ ಊರ್ಜಿತದಲ್ಲಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
77. ಜಾಗತಿಕ ಹಸಿವು ಸೂಚ್ಯಂಕ ವರದಿ ಸಿದ್ಧಪಡಿಸಲು ಯಾವ ಐಎಫ್‍ಪಿಆರ್‍ಐ ಬಳಸಲಾಗುತ್ತದೆ?
1. ನಿರುದ್ಯೋಗ
2. ಮಕ್ಕಳ ಕುಬ್ಜತೆ
3. ಮಕ್ಕಳ ಸಾವು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1, 2 ಮತ್ತು 3
ಡಿ. 1 ಮತ್ತು 2
ಉ: ಸಿ
78. ವಿತ್ತೀಯ ಕೊರತೆ ಕಡಿಮೆ ಮಾಡಲು ಸರ್ಕಾರ ಈ ಕೆಳಗಿನ ಯಾವ ಕ್ರಮ ಕೈಗೊಳ್ಳಬಹುದು?
1. ಸರ್ಕಾರಿ ವೆಚ್ಚ ಕಡಿತ
2. ಹೊಸ ಕಲ್ಯಾಣ ಯೋಜನೆ ಆರಂಭ
3. ಸಬ್ಸಿಡಿಗಳನ್ನು ತಾರ್ಕಿಕಗೊಳಿಸುವುದು
4. ಆಮದು ಸುಂಕ ಕಡಿತ ಮಾಡುವುದು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2 ಮತ್ತು 3
ಉ: ಸಿ
79. ಪೇಮೆಂಟ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಭಾರತೀಯ ಮೂಲದ ಮೊಬೈಲ್ ಕಂಪನಿಗಳು ಪೇಮೆಂಟ್ ಬ್ಯಾಂಕ್ ಪವರ್ತಕರಾಗಬಹುದು.
2. ಪೇಮೆಂಟ್‍ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಿಡುಗಡೆ ಮಾಡಬಹುದು.
3. ಪೇಮೆಂಟ್ ಬ್ಯಾಂಕ್ ಸಾಲ ಚಟುವಟಿಕೆ ಕೈಗೊಳ್ಳುವಂತಿಲ್ಲ
ಎ. ಕೇವಲ 1 ಮತ್ತು 2
ಬಿ. 1 ಮತ್ತು 3 ಮಾತ್ರ
ಸಿ. 2 ಮಾತ್ರ
ಡಿ. 1,2 ಮತ್ತು 3
ಉ: ಬಿ
80. ಲೈ ಫೈಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಇದು ಹೈಸ್ಪೀಡ್ ಡಾಟಾ ವರ್ಗಾವಣೆಗೆ ಬೆಳಕನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ.
2. ಇದು ನಿಸ್ತಂತು ತಂತ್ರಜ್ಞಾಣವಾಗಿದ್ದು, ವೈ ಫೈ ಗಿಂತ ಹೆಚ್ಚು ವೇಗ ಹೊಂದಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
81. ಇಂಟೆಂಡೆಡ್ ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ಸ್ ಎನ್ನುವುದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಯುದ್ಧಪೀಡಿತ ಮಧ್ಯಪ್ರಾಚ್ಯ ದೇಶಗಳ ನಿರಾಶ್ರಿತರ ಪುನರ್ವಸತಿಗೆ ಯೂರೋಪಿಯನ್ ದೇಶಗಳು ಕೈಗೊಂಡ ಪ್ರತಿಜ್ಞೆ
ಬಿ. ಹವಾಮಾನ ಬದಲಾವಣೆ ತಡೆಗೆ ವಿಶ್ವದ ದೇಶಗಳ ಕೈಗೊಂಡ ಕ್ರಿಯಾಯೋಜನೆ
ಸಿ. ಏಷ್ಯನ್ ಹೂಡಿಕೆ ಬ್ಯಾಂಕಿನ ಸ್ಥಾಪನೆಗೆ ಸದಸ್ಯದೇಶಗಳ ಬಂಡವಾಳ ದೇಣಿಗೆ
ಡಿ. ಸುಸ್ಥಿರ ಅಭಿವೃದ್ಧಿ ಸಾಧನೆಗೆ ವಿಶ್ವದ ದೇಶಗಳು ರೂಪಿಸಿದ ಕ್ರಿಯಾಯೋಜನೆ
ಉ: ಬಿ
82. ಉದಯ್ ಯೋಜನೆಯ ಉದ್ದೇಶ ಏನು?
ಎ. ಸ್ಟಾರ್ಟ್ ಅಪ್ ಪುನರ್‍ಬಳಕೆ ಮೂಲದ ವಿದ್ಯುತ್ ಕಂಪನಿಗಳುಗೆ ಹಣಕಾಸು ಹಾಗೂ ತಾಂತ್ರಿಕ ನೆರವು ನೀಡುವುದು.
ಬಿ. 2018ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು.
ಸಿ. ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳ ಬದಲು £ನೈಸರ್ಗಿಕ ಅನಿಲ ಆಧರಿತ ವಿದ್ಯುತ್ ಘಟಕ ಸ್ಥಾಪನೆ
ಡಿ. ವಿದ್ಯುತ್ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡುವುದು.
ಉ: ಡಿ
83. ಐಎಫ್‍ಸಿ ಮಸಾಲಾ ಬಾಂಡ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಈ ಬಾಂಡ್ ಬಿಡುಗಡೆ ಮಾಡಿದೆ.
2. ಇದು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ದಿಮೆಗಳಿಗೆ ಸಾಲ ಕ್ರೋಢೀಕರಿಸುವ ಸಾಧನ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
84. ವಿಜಯನಗರದ ಅರಸ ಕೃಷ್ಣದೇವನ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಭೂಮಿಯ ಮೇಲಿನ ತೆರಿಗೆ ದರ ಭೂಮಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
2. ಖಾಸಗಿ ಕಾರ್ಯಾಗಾರಗಳು ಕೈಗಾರಿಕಾ ತೆರಿಗೆ ನೀಡಬೇಕು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
85. ಸುಂಗ ರಾಜಮನೆತನದ ಪ್ರೇಮಕಥೆಯನ್ನು ಒಳಗೊಂಡ ಪ್ರಾಚೀನ ಭಾರತದ ಕೃತಿ ಯಾವುದು?
ಎ. ಸ್ವಪ್ನವಾಸವದತ್ತ
ಬಿ. ಮಾಳವಿಕಾಗ್ನಿಮಿತ್ರ
ಸಿ. ಮೇಘದೂತ
ಡಿ. ರತ್ನಾವತಿ
ಉ: ಬಿ
86. ಅಂಬೆರ್ ಬಾಕ್ಸ್, ಬ್ಲೂ ಬಾಕ್ಸ್, ಹಾಗೂ ಗ್ರೀನ್ ಬಾಕ್ಸ್ ಯಾವುದಕ್ಕೆ ಸಂಬಂಧಿಸಿದ್ದು?
ಎ. ವಿಶ್ವ ವ್ಯಾಪಾರ ಸಂಸ್ಥೆ ವಹಿವಾಟು
ಬಿ. ಸಾಕ್ ವಹಿವಾಟು
ಸಿ. ಯುಎನ್‍ಎಫ್‍ಸಿಸಿಸಿ ವಹಿವಾಟು
ಡಿ. ಭಾರತ– ಯೂರೋಪಿಯನ್ ಯೂನಿಯನ್ ಒಪ್ಪಂದ
ಉ: ಎ
87. ಸರ್ಕಾರದ ಹೂಡಿಕೆ ಬಜೆಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ರಸ್ತೆ, ಕಟ್ಟಡ ಹಾಗೂ ಯಂತ್ರೋಪಕರಣ ಸ್ವಾಧೀನದ ಮೇಲಿನ ಖರ್ಚು ಇತ್ಯಾದಿ.
2. ವಿದೇಶಿ ಸರ್ಕಾರಗಳಿಂದ ಪಡೆದ ಸಾಲ
3. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಸಾಲ ವಿವರ
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಡಿ
88. ವಿಶ್ವಸಂಸ್ಥೆಯ ಡಿಸರ್ಟಿಫಿಕೇಶನ್ ಒಪ್ಪಂದದ ಮಹತ್ವ ಏನು?
1. ಪರಿಣಾಮಕಾರಿ ಕ್ರಿಯಾಯೋಜನೆಯನ್ನು ಉತ್ತೇಜಿಸುವ ರಾಷ್ಟ್ರೀಯ ಯೋಜನೆ ಮತ್ತು ಬೆಂಬಲಾತ್ಮಕ ಅಂತರರಾಷ್ಟ್ರೀಯ ಪಾಲುದಾರಿಕೆ
2. ಇದು ದಕ್ಷಿಣ ಏಷ್ಯಾ ಹಾಗೂ ಉತ್ತರ ಆಫ್ರಿಕಾ ಪ್ರದೇಶಗಳ ಮೇಲೆ ಗುರಿ ಇಟ್ಟುಕೊಂಡಿದ್ದು, ಈ ಭಾಗಕ್ಕೆ ದೊಡ್ಡ ಮೊತ್ತದ ಹಣಕಾಸು ನೆರವು ನೀಡುವುದು.
3. ಡಿಸರ್ಟಿಫಿಕೇಶನ್ ವಿರುದ್ಧ ಸ್ಥಳೀಯರ ಹೋರಾಟಕ್ಕೆ ಬೆಂಬಲ ನೀಡುವುದು.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಸಿ
89. ಇತ್ತೀಚೆಗೆ ಐಎಂಎಫ್‍ನ ಎಸ್‍ಡಿಆರ್ ಬಾಸ್ಕೆಟ್‍ಗೆ ಸೇರಿಸಲು ಯಾವ ಕರೆನ್ಸಿಯನ್ನು ಪರಿಗಣಿಸಲಾಗಿದೆ?
ಎ. ರೂಬೆಲ್
ಬಿ. ರೆಂಡ್
ಸಿ. ಭಾರತೀಯ ರೂಪಾಯಿ
ಡಿ. ರೊಮಿಂಬಿ
ಉ: ಡಿ
90. ಅಂತರರಾಷ್ಟ್ರೀಯ ವಿತ್ತೀಯ ಹಾಗೂ ಹಣಕಾಸು ಸಮಿತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಐಎಂಎಫ್‍ಸಿ ಜಾಗತಿಕ ಆರ್ಥಿಕತೆಯ ವಿಷಯಗಳನ್ನು ಚರ್ಚಿಸುತ್ತದೆ ಮತ್ತು ಈ ಸಂಬಂಧ ಐಎಂಎಫ್‍ಗೆ ಸಲಹೆ ಮಾಡುತ್ತದೆ.
2. ಐಎಂಎಫ್‍ಸಿ ಸಭೆಗಳಲ್ಲಿ ವಿಶ್ವಬ್ಯಾಂಕ್ ವೀಕ್ಷಕನಾಗಿ ಭಾಗವಹಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ


91. ರಾಷ್ಟ್ರೀಯ ಗೃಹ ಅಭಿಯಾನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನಿರ್ವಸತಿಗರಿಗೆ ಪುನರ್ವಸತಿ ಕಲ್ಪಿಸುವುದು.
ಬಿ. ಲೈಂಗಿಕ ಕಾರ್ಯಕರ್ತರನ್ನು ವಿಮುಕ್ತಿಗೊಳಿಸಿ ಪರ್ಯಾಯ ಜೀವನಾಧಾರ ಕಲ್ಪಿಸುವುದು.
ಸಿ. ಜಾಡಮಾಲಿ ಪದ್ಧತಿ ನಿರ್ಮೂಲನೆ
ಡಿ. ಜೀತ ಕಾರ್ಮಿಕರನ್ನು ಬಂಧಮುಕ್ತಿಗೊಳಿಸುವುದು.
ಉ: ಸಿ
92. ಮಧ್ಯಕಾಲೀನ ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ತಮಿಳು ಪ್ರದೇಶದ ಸಿದ್ಧರು ಮೂರ್ತಿಪೂಜೆ ಖಂಡಿಸಿದ್ದರು.
2. ಕರ್ನಾಟಕದ ಲಿಂಗಾಯತರು ಪುನರ್ಜನ್ಮ ಸಿದ್ಧಾಂತ ಪ್ರಶ್ನಿಸಿದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉಡಿ
93. ಸುದ್ದಿಗಳಲ್ಲಿ ಕಾಣಿಸಿಕೊಳ್ಳುವ ಆಮದು ಸುರಕ್ಷೆ ಎಂಬ ಪದ ಯಾವುದಕ್ಕೆ ಸೂಕ್ತವಾಗಿದೆ?
ಎ. ಜಿಡಿಪಿಮತ್ತು ಆಮದು ನಡುವಿನ ಅನುಪಾತ
ಬಿ. ಒಂದು ವರ್ಷದಲ್ಲಿ ದೇಶದ ಒಟ್ಟು ಆಮದು ಮೌಲ್ಯ
ಸಿ. ಎರಡು ದೇಶಗಳ ನಡುವಿನ ರಫ್ತು ಹಾಗೂ ಆಮದು ಮೌಲ್ಯದ ಅನುಪಾತ
ಡಿ. ದೇಶದ ಅಂತರರಾಷ್ಟ್ರೀಯ ದಾಸ್ತಾನಿನಿಂದ ಎಷ್ಟು ತಿಂಗಳು ಆಮದಿಗೆ ಪಾವತಿ ಮಾಡಬಹುದು ಎಂಬ ಅಂದಾಜು.
ಉ: ಡಿ
94. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಕುರ್ದ್: ಬಾಂಗ್ಲಾದೇಶ
2. ಮಧೇಲ್: ನೇಪಾಳ
3. ರೊಹಿಂಗ್ಯಾ: ಮ್ಯಾನ್ಮಾರ್
ಎ. 1 ಮತ್ತು 2 ಮಾತ್ರ
ಬಿ. 2 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 3 ಮಾತ್ರ
ಉ: ಸಿ
95. ರಾಸಾಯನಿಕ ಅಸ್ತ್ರ ತಡೆ ಸಂಘಟನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಇದು ನ್ಯಾಟೊ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಕಾರ್ಯನಿರ್ವಹಿಸುವ ಯೂರೋಪಿಯನ್ ಒಕ್ಕೂಟದ ಒಂದು ಸಂಸ್ಥೆ.
2. ಇದು ಹೊಸ ರಾಸಾಯನಿಕ ಅಸ್ತ್ರಗಳ ತಡೆಯ ಉದ್ದೇಶ ಹೊಂದಿದೆ.
3. ಇದು ದೇಶಗಳಿಗೆ ರಾಸಾಯನಿಕ ಅಸ್ತ್ರಗಳ ಅಪಾಯದಿಂದ ಸುರಕ್ಷೆ ನೀಡುತ್ತದೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಬಿ
96. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಗುರುತಿಸಿ.
1. ಈ ಯೋಜನೆಯಡಿ ರೈತರು ಯಾವುದೇ ಹಂಗಾಮಿನಲ್ಲಿ ಯಾವುದೇ ಬೆಳೆ ಬೆಳೆದರೂ ಸಮಾನ ವಿಮಾಕಂತು ನೀಡಬೇಕಾಗುತ್ತದೆ.
2. ಈ ಯೋಜನೆಯು ಕೊಯ್ಲೋತ್ತರ ಅಪಾಯಗಳಿಗೂ ಸುರಕ್ಷೆ ಒದಗಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
97. ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ಭಾರತದ ಯಾವ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಎ. ಉತ್ತರ ಭಾರತದ ಸಿಂಧ್ ಪ್ರಾಂತ್ಯ
ಬಿ. ಹಿಮಾಲಯದ ಎತ್ತರ ಪ್ರದೇಶ
ಸಿ. ಪಶ್ಚಿಮ ಗುಜರಾತ್
ಡಿ. ಪಶ್ಚಿಮ ಘಟ್ಟ
ಉ: ಡಿ
98. ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರದ ಪ್ರಮುಖ ಲಕ್ಷಣ ಯಾವುದು?
1. ನದಿಪಾತ್ರವು ಯೋಜನೆ ಹಾಗೂ ನಿರ್ವಹಣೆಯ ಮೂಲ ಘಟಕ
2. ಇದು ರಾಷ್ಟ್ರಮಟ್ಟದಲ್ಲಿ ನದಿ ಸಂರಕ್ಷಣೆ ಪ್ರಯತ್ನವನ್ನು ಹೆಚ್ಚಿಸುತ್ತದೆ.
3. ಗಂಗಾನದಿ ಹರಿಯುವ ಒಂದು ರಾಜ್ಯದ ಮುಖ್ಯಮಂತ್ರಿ ಇದರ ಅಧ್ಯಕ್ಷರಾಗುತ್ತಾರೆ.
ಎ. 1 ಮತ್ತು 2 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಎ
99. ಕೃಷಿಕ್ಷೇತ್ರದಲ್ಲಿ ಬೇವು ಲೇಪಿತ ಯೂರಿಯಾವನ್ನು ಭಾರತ ಸರ್ಕಾರ ಏಕೆ ಉತ್ತೇಜಿಸುತ್ತದೆ?
ಎ. ಬೇವಿನ ಎಣ್ಣೆ ಮಣ್ಣಿನಲ್ಲಿ ಬಿಡುಗಡೆಯಾಗುವುದರಿಂದ ಸಾರಜನಕ ಸರಿಯಾಗಿ ಮಣ್ಣಿನ ಕಣಗಳಿಗೆ ಸೇರಿಕೊಳ್ಳುತ್ತದೆ.
ಬಿ. ಬೇವಿನೆಣ್ಣೆ ಯೂರಿಯಾ ಮಣ್ಣಿನಲ್ಲಿ ಕರಗುವುದನ್ನು ನಿಧಾನಗೊಳಿಸುತ್ತದೆ.
ಸಿ. ನೈಟ್ರಸ್ ಆಕ್ಸೈಡ್ ಮುಕ್ತ ಹೊಲಗಳಿಂದ ಬಿಡುಗಡೆಯಾಗುವುದಿಲ್ಲ
ಡಿ. ಇದು ಕಳೆನಾಶಕ ಹಾಗೂ ಗೊಬ್ಬರವಾಗುತ್ತದೆ.
ಉ: ಡಿ
100. ಈ ಕೆಳಗಿನ ಸರಿ ಹೇಳಿಕೆಗಳನ್ನು ಗುರುತಿಸಿ.
1. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಆಯಾ ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
2. ರಾಜ್ಯದ ಮುಖ್ಯ ಕಾರ್ಯದರ್ಶಿಯು ಸೀಮಿತ ಅಧಿಕಾರ ಅವಧಿಯ ಹೊಂದಿರುತ್ತಾರೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಡಿ
@@@@@@@@@@@@@@@@@@@@@@@@@@@@@@@@@@@@@@@@@@@@@




IAS Prelim Exam 2016 (KANNADA) Part-1

ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡಭಾಷಾಂತರ)
★★ 1-10 ★★
@@@@@@@@@@@@@@@@@@@@@@
1. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶ.
2. ಇದು ಎಸ್‍ಐಡಿಬಿಐ ಮೂಲಕ ಹಣಕಾಸು ನೆರವನ್ನು ನೀಡುತ್ತದೆ.
ಎ. ಹೇಳಿಕೆ 1 ಮಾತ್ರ
ಬಿ. ಹೇಳಿಕೆ 2 ಮಾತ್ರ
ಸಿ. ಹೇಳಿಕೆ 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
2. ಎಫ್‍ಎಓ ಜಾಗತಿಕ ಮಹತ್ವದ ಕೃಷಿ ಪರಂಪರೆ ವ್ಯವಸ್ಥೆ (ಜಿಐಎಎಸ್‍ಎಚ್)ಗೆ ಚಾಲನೆ ನೀಡಿದೆ. ಇದರ ಉದ್ದೇಶ ಏನು?
1. ಆಧುನಿಕ ತಂತ್ರಜ್ಞಾನ, ಆಧುನಿಕ ಕೃಷಿ ತರಬೇತಿ ಮತ್ತು ಹಣಕಾಸು ನೆರವು ನೀಡಿ ಈ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಕೃಷಿ ಉತ್ಫಾದನೆ ಹೆಚ್ಚಿಸಲು ಉತ್ತೇಜನ ನಿಡುವುದು.
2. ಪರಿಸರ ಸ್ನೇಹಿ ಸಾಂಪ್ರದಾಯಿಕ ಕೃಷಿ ವಿಧಾನವನ್ನು ಉಳಿಸುವುದು/
3. ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ವೈಶಿಷ್ಟ್ಯ ಗುರುತಿಸುವಿಕೆ ಸ್ಥಾನಮಾನ ನೀಡುವುದು.
ಎ. 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2,3
ಉ:
3, ಈ ಕೆಳಗಿನ ಯಾವ ನದಿಗಳು ಬ್ರಹ್ಮಪುತ್ರಾದ ಉಪನದಿಗಳು?
1. ದಿಬಾಂಗ್
2. ಕುರ್ದೆಂಗ್
3. ಲೋಹಿತ್
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಡಿ
4. ಕೋರ್‍ಬ್ಯಾಂಕಿಂಗ್ ಸೊಲ್ಯೂಶನ್ ಎಂಬ ಬಳಕೆಯನ್ನು ಸುದ್ದಿಗಳಲ್ಲಿ ಕಾಣುತ್ತೇವೆ. ಈ ಕೆಳಗಿನ ಯಾವ ಹೇಳಿಕೆ ಅದಕ್ಕೆ ಸೂಕ್ತವಾಗುತ್ತದೆ?
1. ಇದು ಬ್ಯಾಂಕ್ ಶಾಖೆಗಳ ಜಾಲವಾಗಿದ್ದು, ಇದರಿಂದ ಗ್ರಾಹಕರು ಯಾವುದೇ ಶಾಖೆಯಲ್ಲಿ ಖಾತೆ ಹೊಂದಿದ್ದರೂ ಮತ್ತೊಂದು ಶಾಖೆಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ.
2. ಇದು ಕಂಪ್ಯೂಟರೀಕರಣದ ಮೂಲಕ ಆರ್‍ಬಿಐ ಬ್ಯಾಂಕ್‍ಗಳ ನಿಯಂತ್ರಣಕ್ಕೆ ಮಾಡಿಕೊಂಡ ವ್ಯವಸ್ಥೆ.
3. ಇದು ಒಂದು ಬ್ಯಾಂಕಿನ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು ಮತ್ತೊಂದ ಬ್ಯಾಂಕ್ ತೆಗೆದುಕೊಳ್ಳುವ ಪ್ರಕ್ರಿಯೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಎ
5. ಹೊಂದಿಸಿ ಬರೆಯಿರಿ
1. ಪ್ರಮಾಣೀಕರಿಸಿದ ದೇಶಗಳು ಎ. ಕಾರ್ಟೆಜೆನಾ ಒಪ್ಪಂದ
2. ಪ್ರಮಾಣೀಕೃತ ಹೊಗೆಯುಗುಳುವಿಕೆ ಕಡಿಮೆಮಾಡುವುದು ಬಿ. ನಗೋಯಾ ಒಪ್ಪಂದ
3. ಸ್ವಚ್ಛ ಅಭಿವೃದ್ಧಿ ವ್ಯವಸ್ಥೆ ಸಿ. ಕ್ಯೂಟೊ ಒಪ್ಪಂದ
ಮೇಲಿನ ಯಾವುದು ಸರಿ ಹೊಂದಾಣಿಕೆಯಾಗುತ್ತವೆ?
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2,3
ಉ: ಬಿ
6. ಬಯೋಇನ್ರ್ಫೋಮ್ಯಾಟಿಕ್ಸ್‍ಗೆ ಸಂಬಂಧಿಸಿದಂತೆ ಸುದ್ದಿಗಳಲ್ಲಿ ಟ್ರಾನ್ಸ್‍ಸ್ಕ್ರಿಪ್ಟೋನ್ ಎಂಬ ಪದ ಕಾಣಿಸುತ್ತದೆ. ಇದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಜೆನೋಮ್ ಸಂಸ್ಕರಣೆಯಲ್ಲಿ ಬಳಸುವ ಒಂದು ಬಗೆಯ ಎನ್ಸಾಯಿಮ್ (ಇಓZಙಒಇ)
ಬಿ. ಜೈವಿಕ ಕಣಗಳು ಹೊರಸೂಸುವ ಆರ್‍ಎನ್‍ಎ ಕಣಗಳು
ಸಿ. ವಂಶವಾಹಿ ಅಭಿವ್ಯಕ್ತಿಯ ವಿವರಣೆ
ಡಿ. ಕೋಶಗಳಲ್ಲಿ ಸಂಭವಿಸುವ ವಂಶವಾಹಿ ಕುಲಾಂತರ
ಉ: ಬಿ
7. ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ
ಡಿ. ಹೊಸ ಶಿಕ್ಷಣ ನೀತಿ
ಉ: ಎ
8. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನು ಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಬಜೆಟ್‍ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನು ಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿ ಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2 ಮತ್ತು 3
ಉ: ಸಿ
9. ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಾವಳಿ-2011ರ ಅನ್ವಯ ಈ ಕೆಳಗಿನ ಯಾವ ಮಾಹಿತಿಯನ್ನು ಲೇಬಲ್‍ನಲ್ಲಿ ಪ್ರದರ್ಶಿಸಬೇಕು?
1. ಉತ್ಪನ್ನದಲ್ಲಿ ಒಳಗೊಂಡ ಅಂಶಗಳು
2. ಪೌಷ್ಟಿಕ ಮಾಹಿತಿ
3. ಯಾವುದೇ ಅಲರ್ಜಿಗೆ ಕಾರಣವಾಗುವ ಅಂಶಗಳ ಸಾಧ್ಯತೆ ಬಗ್ಗೆ ಮಾಹಿತಿ
4. ಸಸ್ಯಾಹಾರಿ/ ಮಾಂಸಾಹಾರಿ ಎಂಬ ಮಾಹಿತಿ
ಎ. ಕೇವಲ 1,2,3
ಬಿ. 2 3, ಮತ್ತು 4
ಸಿ. 1,2,4 ಮಾತ್ರ
ಡಿ. 1 ಮತ್ತು 4
ಉ: ಸಿ
10. ಸಾಮಾನ್ಯವಾಗಿ ಸುದ್ದಿಗಳಲ್ಲಿ ಕಂಡುಬರುವ ಪ್ರಾಜೆಕ್ಟ್ ಲೂನ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನೀರು ನಿರ್ವಹಣೆ ತಂತ್ರಜ್ಞಾನ
ಬಿ. ನಿಸ್ತಂತು ಸಂವಹನಾ ತಂತ್ರಜ್ಞಾನ
ಸಿ. ಜಲವಿದ್ಯುತ್ ಉತ್ಪಾದನಾ ತಂತ್ರಜ್ಞಾನ
ಡಿ. ನೀರು ಸಂರಕ್ಷಣೆ ತಂತ್ರಜ್ಞಾನ
ಉ: ಬಿ
11. ನೆಟ್‍ಸೆಂಟರಿಂಗ್ ಎಂಬ ಪದ ಸುದ್ದಿಯಲ್ಲಿ ಕಂಡುಬರುತ್ತದೆ. ಇದು ಯಾವ ಸಂದರ್ಭಕ್ಕೆ ಅನ್ವಯಿಸುತ್ತದೆ?
ಎ. ಕುಟುಂಬಗಳು ಅಥವಾ ಗ್ರಾಹಕರಿಂದ ಸೌರಶಕ್ತಿಯ ಉತ್ಪಾದನೆ ಮತ್ತು ಬಳಕೆ
ಬಿ. ಕುಟುಂಬಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಸರಬರಾಜು ವ್ಯವಸ್ಥೆ
ಸಿ. ಸಿಎನ್‍ಜಿ ಕಿಟ್‍ಗಳನ್ನು ವಾಹನಗಳಲ್ಲಿ ಅಳವಡಿಸುವುದು.
ಡಿ. ನಗರಗಳ ಮನೆಗಳಿಗೆ ನೀರಿನ ಮೀಟರ್ ಅಳವಡಿಸುವುದು.
ಉ: ಎ
12. ವ್ಯವಹಾರ ನಡೆಸಲು ಅನುಕೂಲಕರ ವಾತಾವರಣದ ರ್ಯಾಂಕಿಂಗ್ ಎನ್ನುವುದು ಸುದ್ದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರ್ಯಾಂಕಿಂಗ್ ನೀಡುವ ಸಂಸ್ಥೆ ಯಾವುದು?
ಎ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ
ಬಿ. ವಿಶ್ವ ಆರ್ಥಿಕ ವೇದಿಕೆ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಘಟನೆ
ಉ: ಸಿ
13. ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾ ಸಮುದಾಯದವರು ಯಾರು?
ಎ. ಕೃಷಿಕರು
ಬಿ. ಯೋಧರು
ಸಿ. ನೇಕಾರರು
ಡಿ. ವ್ಯಾಪಾರಿಗಳು
ಉ: ಡಿ
14. ಈ ಕೆಳಗಿನ ಯಾರು ಚಕ್ರವರ್ತಿ ಅಶೋಕನ ಸಂಹಿತೆಗಳ ಅರ್ಥ ಗ್ರಹಿಸಿದವರು?
ಎ. ಜಾರ್ಜ್ ಓಲರ್
ಬಿ. ಜೇಮ್ಸ್ ಪ್ರಿನೇಪ್
ಸಿ. ಮ್ಯಾಕ್ಸ್ ಮುಲ್ಲರ್
ಡಿ. ವಿಲಿಯಂ ಜೋನ್ಸ್
ಉ: ಬಿ
15. ಗ್ರಾಮನ್ಯಾಯಾಲಯ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಕಾಯ್ದೆಯ ಅನ್ವಯ, ಗ್ರಾಮನ್ಯಾಯಾಲಯಗಳು ಕೇವಲ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಬಹುದು.
2. ಈ ಕಾಯ್ದೆಯು ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಮಧ್ಯಸ್ಥಿಕೆದಾರರನ್ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
16. ಟ್ರಾನ್ಸ್‍ಫೆಸಿಫಿಕ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಚೀನಾ ಮತ್ತು ರಷ್ಯಾ ಹೊರತುಪಡಿಸಿ ಎಲ್ಲ ಪೆಸಿಫಿಕ್ ವಲಯದ ದೇಶಗಳ ನಡುವೆ ಆದ ಒಪ್ಪಂದ.
2. ಸಾಗರ ಭದ್ರತೆಗೆ ಸಂಬಂಧಿಸಿದ ತಂತ್ರಗಾರಿಕೆ ಮೈತ್ರಿಕೂಟ ಇದಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಡಿ
17. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. 2015ರಲ್ಲಿ ನಡೆದ ಭಾರತ ಆಫ್ರಿಕಾ ಶೃಂಗವು ಮೂರನೇ ಶೃಂಗವಾಗಿದೆ.
2. ಇದನ್ನು ಜವಾಹರ್‍ಲಾಲ್ ನೆಹರೂ 1951ರಲ್ಲಿ ಆರಂಭಿಸಿದ್ದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
18. ಸಾಲ ದರಕ್ಕೆ ಅನುಗುಣವಾಗಿ ಆರ್‍ಬಿಐ ಘೋಷಿಸಿದ ನಿಧಿಗಳ ಮಾರ್ಜಿನಲ್ ವೆಚ್ಚದ ಉದ್ದೇಶವೇನು?
1. ಬ್ಯಾಂಕುಗಳು ಸಾಲದ ಬಡ್ಡಿದರವನ್ನು ನಿರ್ಧರಿಸಲು ಅನುಸರಿಸಬೇಕಾದ ವಿಧಿವಿಧಾನಗಳಲ್ಲಿ ಪಾರದರ್ಶಕತೆಯನ್ನು ಇದು ಸುಧಾರಿಸುವ ಮಾರ್ಗದರ್ಶಿ ಸೂತ್ರವಾಗಿದೆ.
2. ಬ್ಯಾಂಕ್ ಹಾಗೂ ಸಾಲಪಡೆಯುವವರಿಗೆ ನ್ಯಾಯಬದ್ಧ ಎನಿಸುವ ದರದಲ್ಲಿ ಸಾಲವನ್ನು ಪಡೆಯಲು ಇದು ಮಾರ್ಗಸೂಚಿಯಾಗುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
19. ಭಾರತದಲ್ಲಿ ಕಂಡುಬರುವ ಖರಾಜ್ ಒಂಟೆಯ ತಳಿಯ ವೈಶಿಷ್ಠ್ಯ ಏನು?
1, ಇದು ಸಮುದ್ರದ ನೀರಿನಲ್ಲಿ 3 ಕಿಲೋಮೀಟರ್ ಈಜಬಲ್ಲದು
2. ಇದು ಮ್ಯಾಂಗ್ರೋವ್ ಅರಣ್ಯದಲ್ಲಿ ಮೇಯುವ ಮೂಲಕ ಜೀವಿಸಬಲ್ಲದು.
3. ಇದು ವನ್ಯಮೃಗವಾಗಿದ್ದು ಸಾಕಲು ಸಾಧ್ಯವಿಲ್ಲ.
ಎ. ಕೇವಲ 1 ಮತ್ತು 2
ಬಿ. ಕೇವಲ 3
ಸಿ. 1 ಮತ್ತು 3
ಡಿ. 1, 2, 3
ಉ: ಎ
20. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನು ಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂ ಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
ಎ. ಅಂಡಮಾನ್ ದ್ವೀಪ
ಬಿ. ಅಣ್ಣಾಮಲೈ ಅರಣ್ಯ
ಸಿ. ಮೈಕೆಲಾ ಬೆಟ್ಟ
ಡಿ. ಈಶಾನ್ಯದ ಉಷ್ಣವಲಯದ ಮಳೆ ಕಾಡು
ಉ: ಎ

21. ಇತ್ತೀಚೆಗೆ ಸುದ್ದಿ ಮಾಡಿದ ಐಎನ್‍ಎಸ್ ಅಷ್ಟಧಾರಿಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
ಎ. ನೀರು/ ಭೂಮಿಯಲ್ಲಿ ಬಳಸಬಹುದಾದ ಯುದ್ಧನೌಕೆ
ಬಿ. ಅಣ್ವಸ್ತ್ರ ಸಜ್ಜಿತ ಸಬ್‍ಮೆರಿನ್
ಸಿ. ಟಾರ್ಪೆಡೊ ಉಡಾವಣೆ ಮತ್ತು ಪತ್ತೆ ನೌಕೆ
ಡಿ. ಅಣ್ವಸ್ತ್ರ ಸಾಮಥ್ರ್ಯದ ವಿಮಾನ ವಾಹನ
ಉ: ಸಿ
22. ಇತ್ತೀಚೆಗೆ ಸುದ್ದಿಯಲ್ಲಿದ್ದ ಗ್ರೀಸ್‍ಡ್ ಲೈಟನಿಂಗ್-10 ಎಂದರೇನು?
ಎ. ನಾಸಾ ಪರೀಕ್ಷಿಸಿದ ಎಲೆಕ್ಟ್ರಿಕ್ ವಿಮಾನ
ಬಿ. ಜಪಾನ್ ವಿನ್ಯಾಸಗೊಳಿಸಿದ ಎರಡು ಆಸನಗಳ ಸೌರವಿಮಾನ
ಸಿ. ಚೀನಾ ಉಡಾಯಿಸಿದ ಬಾಹ್ಯಾಕಾಶ ವೀಕ್ಷಣಾ ವ್ಯವಸ್ಥೆ
ಡಿ. ಇಸ್ರೊ ವಿನ್ಯಾಸಗೊಳಿಸಿದ ಮರುಬಳಕೆ ರಾಕೆಟ್
ಉ: ಎ
23. ತೀವ್ರ ತೃಣಧಾನ್ಯ ಉತ್ತೇಜನ ಮೂಲಕ ಪೌಷ್ಟಿಕ ಭದ್ರತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಯೋಜನೆಯ ಮುಖ್ಯ ಉದ್ದೇಶ ಸುಧಾರಿತ ಉತ್ಪಾದನೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನವನ್ನು ಉತ್ತೇಜಿಸುವುದು.
2. ಬಡ, ಸಣ್ಣ, ಅತಿಸಣ್ಣ ಹಾಗೂ ಬುಡಕಟ್ಟು ಕೃಷಿಕರು ಈ ಯೋಜನೆಯಲ್ಲಿ ದೊಡ್ಡ ಪಾಲು ಪಡೆಯುತ್ತಾರೆ.
3. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರನ್ನು ತೃಣಧಾನ್ಯ ಬೆಳೆಯಲು ಪ್ರೋತ್ಸಾಹಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 1, 2
ಡಿ. 1, 2, 3
ಉ: ಸಿ
24. ಸ್ವದೇಶಿ ಮತ್ತು ಬಹಿಷ್ಕಾರ ವಿಧಾನವನ್ನು ಸಂಘರ್ಷದ ವಿಧಾನವಾಗಿ ಮೊಟ್ಟಮೊದಲು ಯಾವಾಗ ಬಳಸಿಕೊಳ್ಳಲಾಯಿತು?
ಎ. ಬಂಗಾಳ ವಿಭಜನೆ ಸಂದರ್ಭದ ಪ್ರತಿಭಟನೆಯಲ್ಲಿ
ಬಿ. ಹೋಂರೂಲ್ ಚಳವಳಿ
ಸಿ. ಅಸಹಕಾರ ಚಳವಳಿ
ಡಿ. ಭಾರತಕ್ಕೆ ಸೈಮನ್ ಕಮಿಷನ್ ಭೇಟಿ ಸಂದರ್ಭ
ಉ: ಎ
25. ಭಾರತದ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ್ದನ್ನು ಗುರುತಿಸಿ.
1. ಬೋಧಿಸತ್ವ ಪರಿಕಲ್ಪನೆಯು ಬೌದ್ಧಧರ್ಮದ ಹಿನಾಯಾನ ಪಂಥಕ್ಕೆ ಸೀಮಿತ
2. ಬೋಧಿಸತ್ವ ಎನ್ನುವುದು ಜ್ಞಾನೋದಯದ ಮಾರ್ಗದ ಅನುಕಂಪ.
3. ತನ್ನ ಸ್ವಂತ ಮುಕ್ತಿಯನ್ನು ಪಡೆಯುವುದನ್ನು ಬೋಧಿಸತ್ವ ನಿರಾಕರಿಸುತ್ತದೆ.
ಎ. ಕೇವಲ 1
ಬಿ. 2 ಮತ್ತು 3
ಸಿ. 2 ಮಾತ್ರ
ಡಿ. 1,2,3
ಉ: ಬಿ
26. ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಎನ್ನುವುದು ಸುದ್ದಿಯಲ್ಲಿದೆ. ಹಾಗೆಂದರೆ:
ಎ. ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗ
ಬಿ. ಇದೊಂದು ಸರ್ಕಾರೇತರ ಅಂತರರಾಷ್ಟ್ರೀಯ ಸಂಸ್ಥೆ
ಸಿ. ಯೂರೋಪಿಯನ್ ಯೂನಿಯನ್ ಪ್ರಾಯೋಜಕತ್ವದ ಅಂತರ ಸರ್ಕಾರ ಏಜೆನ್ಸಿ
ಡಿ. ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿ
ಉ: ಬಿ
27. ಪರಿಸರ ಹಾಗೂ ಜೀವವೈವಿಧ್ಯದ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದನ್ನು ಯುಎನ್‍ಇಪಿ, ಐಎಂಎಫ್ ಹಾಗೂ ವಿಶ್ವ ಆರ್ಥಿಕ ವೇದಿಕೆ ಆರಂಭಿಸಿದೆ.
2. ಜೀವವೈವಿಧ್ಯದ ಆರ್ಥಿಕ ಲಾಭಗಳ ಬಗ್ಗೆ ಗಮನ ಸೆಳೆಯುವ ಯೋಜನೆ‘
3. ನೀತಿ ನಿರೂಪಕರು ಪರಿಸರ ಹಾಗೂ ಜೀವವೈವಿಧ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು.
ಎ. ಕೇವಲ 1 ಮತ್ತು 2
ಬಿ. 3
ಸಿ. 2 ಮತ್ತು 3
ಡಿ. 1, 2, 3
ಉ: ಸಿ
28. ರೆಡ್‍ಸ್ಯಾಂಡರ್ಸ್ ಎಂಬ ಶಬ್ದ ಸುದ್ದಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಒಂದು ಬಗೆಯ ಮರದ ಪ್ರಬೇಧವಾಗಿದ್ದು, ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.
2. ಇದು ದಕ್ಷಿಣ ಭಾರತದ ಮಹತ್ವದ ಮಳೆಕಾಡಿನಲ್ಲಿ ಕಂಡುಬರುವ ಮರದ ಪ್ರಬೇಧವಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
29. ಯುಎನ್ ಆರ್‍ಇಡಿಡಿ ಯೋಜನೆಯು ಈ ಕೆಳಗಿನ ಯಾವುದಕ್ಕೆ ಕೊಡುಗೆ ನೀಡುತ್ತದೆ?
1. ಜೀವವೈವಿಧ್ಯ ಸಂರಕ್ಷಣೆ
2. ಅರಣ್ಯ ಪರಿಸರ ಸಂರಕ್ಷಣೆ
3. ಬಡತನ ಕಡಿಮೆ ಮಾಡುವುದು‘
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 1, 2, 3
ಉ: ಎ
30. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
ಎ. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲು ಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವ ಸಾಧನವಾಗಿದೆ.
ಬಿ. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲು ನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
ಸಿ. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರ ಒಪ್ಪಂದವಾಗಿದೆ.
ಡಿ. ಇದು ಆರ್‍ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ ಪ್ರಾಯೋಜಿತವಾಗಿದೆ.
ಉ: ಎ

31. ಹಣಕಾಸಿನ ಸ್ಥಿರತೆ ಹಾಗೂ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ನೀತಿ ಆಯೋಗದ ಅಂಗಸಂಸ್ಥೆ
2. ಕೇಂದ್ರ ಹಣಕಾಸು ಸಚಿವರು ಇದರ ಮುಖ್ಯಸ್ಥರಾಗಿರುತ್ತಾರೆ.
3. ಇದು ಆರ್ಥಿಕತೆಯ ಮೇಲ್ವಿಚಾರಣೆ ನಿರ್ವಹಿಸುತ್ತದೆ.
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಸಿ
32. ಅಜಂಡಾ 21ಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಕ್ರಿಯಾಯೋಜನೆ
2. ಇದು 2002ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಹುಟ್ಟಿಕೊಂಡಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
33. ಸತ್ಯಬೋಧಕ ಸಮಾಜವು ಈ ಕೆಳಗಿನ ಯಾವ ಚಳವಳಿಯನ್ನು ಸಂಘಟಿಸಿದೆ?
ಎ. ಬಿಹಾರದ ಬುಡಕಟ್ಟು ಜನಾಂಗದ ಉನ್ನತಿ
ಬಿ. ಗುಜರಾತ್‍ನಲ್ಲಿ ದೇವಸ್ಥಾನ ಪ್ರವೇಶ ಚಳವಳಿ
ಸಿ. ಮಹಾರಾಷ್ಟ್ರದ ಜಾತಿ ವಿರೋಧಿ ಚಳವಳಿ
ಡಿ. ಪಂಜಾಬ್‍ನ ರೈತ ಚಳವಳಿ
ಉ: ಸಿ
34. ವೈರಸ್ ಯಾವುದಕ್ಕೆ ಸೋಂಕು ಉಂಟುಮಾಡುತ್ತದೆ?
1. ಬ್ಯಾಕ್ಟೀರಿಯಾ
2. ಶಿಲೀಂದ್ರ
3. ಸಸ್ಯಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಡಿ
35. ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ ಈಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂಪನ್ಮೂಲ ಭರಿತ ಆದರೆ ಹಿಂದುಳಿದ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಗಣಿಗಾರಿಕೆ
ಬಿ. ಬಹುರಾಷ್ಟ್ರೀಯ ಕಂಪನಿಗಳ ತೆರಿಗೆಕಳ್ಳತನವನ್ನು ಕಡಿಮೆ ಮಾಡುವುದು.
ಸಿ. ಬಹುರಾಷ್ಟ್ರೀಯ ಕಂಪನಿಗಳು ವಂಶವಾಹಿ ಸಂಪನ್ಮೂಲಗಳನ್ನು ಶೋಷಿಸುವುದು.
ಡಿ. ಯೋಜನೆ ರೂಪಿಸುವ ಹಾಗೂ ಅನುಷ್ಠಾನದಲ್ಲಿ ಪರಿಸರ ವೆಚ್ಚವನ್ನು ಪರಿಗಣಿಸದಿರುವುದು.
ಉ: ಬಿ
36. ಭಾರತದ ಮೊಟ್ಟಮೊದಲ ಹೂಡಿಕೆ ಹಾಗೂ ಉತ್ಫಾಧನಾ ವಲಯ ಎಲ್ಲಿ ಸ್ಥಾಪನೆಯಾಗಲಿದೆ?
ಎ. ಆಂಧ್ರಪ್ರದೇಶ
ಬಿ. ಗುಜರಾತ್
ಸಿ. ಮಹಾರಾಷ್ಟ್ರ
ಡಿ. ಉತ್ತರಪ್ರದೇಶ
ಉ: ಡಿ
37. ಭಾರತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಗಳ ಉದ್ದೇಶವೇನು?
1. ಖನಿಜಭರಿತ ಜಿಲ್ಲೆಗಳಲ್ಲಿ ಖನಿಜ ಹೊರತೆಗೆಯುವುದನ್ನು ಉತ್ತೇಜಿಸುವುದು.
2. ಗಣಿ ಕಾರ್ಯಾಚರಣೆಯಿಂದ ತೊಂದರೆಗೀಡಾದ ಜನರ ಹಿತಾಸಕ್ತಿಯನ್ನು ಕಾಪಾಡುವುದು.
3. ಖನಿಜ ಹೊರತೆಗೆಯಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡುವ ಅಧಿಕಾರ ನೀಡುವುದು.
ಎ. ಕೇವಲ 1 ಮತ್ತು 2
ಬಿ. 2 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಬಿ
38. ಕೇಂದ್ರ ಸರ್ಕಾರದ ಸ್ವಯಂ ಯೋಜನೆಯ ಉದ್ದೇಶವೇನು?
ಎ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವುದು.
ಬಿ. ಹೊಸ ಸ್ಟಾರ್ಟ್‍ಅಪ್ ಉದ್ಯಮಿಗಳಿಗೆ ಹಣಕಾಸು ನೆರವು ನೀಡುವುದು
ಸಿ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ನೆರವಾಗುವುದು.
ಡಿ. ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದು.
ಉ: ಡಿ
39. ಮಾಂಟೆಗ್ ಚೆಮ್ಸ್‍ಫೋರ್ಡ್ ಪ್ರಸ್ತಾವನೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?
ಎ. ಸಾಮಾಜಿಕ ಸುಧಾರಣೆ
ಬಿ. ಶೈಕ್ಷಣಿಕ ಸುಧಾರಣೆ
ಸಿ. ಪೊಲೀಸ್ ಆಡಳಿತದಲ್ಲಿ ಸುಧಾರಣೆ
ಡಿ. ಸಂವಿಧಾನ ಸುಧಾರಣೆ
ಉ: ಡಿ
40. ಎರಡು ಐತಿಹಾಸಿಕ ಸ್ಥಳಗಳಾದ ಅಜಂತ ಮತ್ತು ಮಹಾಬಲಿಪುರಕ್ಕೆ ಇರುವ ಸಾಮ್ಯತೆಗಳು ಏನು?
1. ಎರಡೂ ಒಂದೇ ಅವಧಿಯಲ್ಲಿ ನಿರ್ಮಾಣವಾದವು.
2. ಎರಡೂ ಸಮಾನ ಧಾರ್ಮಿಕ ಪಂಥಗಳಿಗೆ ಸೇರಿದವು
3. ಎರಡೂ ಶಿಲಾಕೆತ್ತನೆಯ ಸ್ಮಾರಕಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. ಯಾವುದೂ ಅಲ್ಲ
ಉ: ಬಿ

41. ಬಿಟ್‍ಕಾಯಿನ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿ?
1. ಬಿಟ್‍ಕಾಯಿನ್‍ಗಳನ್ನು ದೇಶಗಳ ಕೇಂದ್ರೀಯ ಬ್ಯಾಂಕ್‍ಗಳು ನಿಗಾ ವಹಿಸುತ್ತವೆ.
2. ಬಿಟ್‍ಕಾಯಿನ್ ವಿಳಾಸ ಹೊಂದಿರುವ ಯಾರು ಬೇಕಾದರೂ ಬಿಟ್‍ಕಾಯಿನ್‍ಗಳು ಕಳುಹಿಸಲು ಹಾಗೂ ಪಡೆಯಲು ಅವಕಾಶವಿದೆ.
3. ಮತ್ತೊಬ್ಬರ ಗುರುತು ಇಲ್ಲದೇ ಆನ್‍ಲೈನ್ ಪಾವತಿ ಮಾಡಲು ಅವಕಾಶವಿದೆ.
ಎ. ಕೇವಲ 1 ಮತ್ತು 2
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3
ಉ: ಬಿ
42. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಹೊಸ ಅಭಿವೃದ್ಧಿ ಬ್ಯಾಂಕನ್ನು ಎಪಿಇಸಿ ಆರಂಭಿಸಿದೆ.
2. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಕೇಂದ್ರ ಕಚೇರಿ ಶಾಂಘೈಯಲ್ಲಿದೆ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
43. ಗಾಡ್ಗೀಳ್ ಸಮಿತಿ ವರದಿ ಹಾಗೂ ಕಸ್ತೂರಿರಂಗನ್ ಸಮಿತಿ ವರದಿ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂವಿಧಾನ ಸುಧಾರಣೆ
ಬಿ. ಗಂಗಾಕ್ರಿಯಾಯೋಜನೆ
ಸಿ. ನದಿಗಳ ಜೋಡಣೆ
ಡಿ. ಪಶ್ಚಿಮಘಟ್ಟಗಳ ಸಂರಕ್ಷಣೆ
ಉ: ಡಿ
44. ಕೇಶವ್ ಚಂದ್ರಸೇನ್ ಈ ಕೆಳಗಿನ ಯಾವುದರ ಜತೆ ಸಂಬಂಧ ಹೊಂದಿದ್ದಾರೆ?
1. ಕಲ್ಕತ್ತ ಏಕೀಕರಣ ಸಮಿತಿ
2. ಗುಡಿಸಲು ಹಂಚಿಕೆ
3. ಭಾರತ ಸುಧಾರಣಾ ಸಂಘ
ಎ. ಕೇವಲ 1 ಮತ್ತು 3
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3
ಉ: ಬಿ
45. ಗಲ್ಫ್ ಸಹಕಾರ ಮಂಡಳಿಯ ಸದಸ್ಯತ್ವ ಹೊಂದದ ದೇಶ ಯಾವುದು?
ಎ. ಇರಾನ್
ಬಿ. ಸೌದಿ ಅರೇಬಿಯಾ
ಸಿ. ಓಮಾನ್
ಡಿ. ಕುವೈತ್
ಉ: ಬಿ
46. ಸೊವರಿನ್ ಚಿನ್ನ ಬಾಂಡ್ ಯೋಜನೆ ಹಾಗೂ ಚಿನ್ನ ನಗದೀಕರಣ ಯೋಜನೆಯ ಉದ್ದೇಶವೇನು?
1. ಭಾರತದ ಕುಟುಂಬಗಳಲ್ಲಿ ಜಡವಾಗಿರುವ ಚಿನ್ನವನ್ನು ಆರ್ಥಿಕತೆಗೆ ತರುವುದು.
2. ಚಿನ್ನ ಹಾಗೂ ಆಭರಣ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಉತ್ತೇಜಿಸುವುದು
3. ಚಿನ್ನ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡುವುದು.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಸಿ
47. ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಆಫ್ರಿಕನ್ ಯೂನಿಯನ್
ಬಿ. ಬ್ರೆಜಿಲ್
ಸಿ. ಯೂರೋಪಿನ್ ಯೂನಿಯನ್
ಡಿ. ಚೀನಾ
ಉ: ಡಿ
48. ಪ್ರಧಾನಮಂತ್ರಿ ಮುದ್ರಾ ಯೋಜನೆಯು
ಎ. ಸಣ್ಣ ಉದ್ಯಮಶೀಲರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರುವುದು
ಬಿ. ಬಡರೈತರಿಗೆ ನಿರ್ದಿಷ್ಟ ಬೆಳೆ ಬೆಳೆಯಲು ಸಾಲ ನೀಡುವುದು
ಸಿ. ವೃದ್ಧ ಮತ್ತು ನಿರ್ಗತಿಕರಿಗೆ ಪಿಂಚಣಿ ನೀಡುವುದು
ಡಿ. ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸ್ವಯಂಸೇವಾ ಸಂಸ್ಥೆಗಳಿಗೆ ನೆರವಾಗುವುದು.
ಉ: ಎ
49. ಈ ಕೆಳಗಿನ ಯಾವ ಪ್ರದೇಶದಲ್ಲಿ ಶೇಲ್ ಗ್ಯಾಸ್ ಕಂಡುಬರುತ್ತದೆ?
ಎ. ಕ್ಯಾಂಬೆ ನದಿಪಾತ್ರ
ಬಿ. ಕಾವೇರಿ ನದಿಪಾತ್ರ
ಸಿ. ಕೃಷ್ಣಾ ಮತ್ತು ಗೋದಾವರಿ ನದಿಪಾತ್ರ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಡಿ
50. ಜಾಗತಿಕ ಹಣಕಾಸು ಸ್ಥಿರತೆ ವರದಿಯನ್ನು ಯಾವುದು ಸಿದ್ಧಪಡಿಸುತ್ತದೆ?
ಎ. ಯೂರೋಪಿಯನ್ ಕೇಂದ್ರೀಯ ಬ್ಯಾಂಕ್
ಬಿ. ಅಂತರರಾಷ್ಟ್ರೀಯ ಹಣಕಾಸು ನಿಧಿ
ಸಿ. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್
ಡಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ
ಉ: ಬಿ