Thursday, 8 December 2016

ವಿಶ್ಲೇಷಣೆ : ಕೌಟುಂಬಿಕ ದೌರ್ಜನ್ಯ - ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ

ಕೌಟುಂಬಿಕ ದೌರ್ಜನ್ಯ

ಲಿಂಗನಿರಪೇಕ್ಷ ಬಣ್ಣ ನೀಡುವ ಪ್ರಯತ್ನ






ಕೌಟು ಎಂದು ವಾದಿಸಿದರು. ಈ ಪ್ರಕರಣದಲ್ಲಿ ಇಂಥದ್ದೊಂದು ವಾದವನ್ನು ಮುಂದಿಡುವುದು ತೀರಾ ಅಸಂಗತವಾಗಿತ್ತು. ಮಹಿಳೆಯು ನ್ಯಾಯಾಲಯದ ಮುಂದಿಟ್ಟಿದ್ದ ಕೋರಿಕೆ, ಮಹಿಳೆಯರ ವಿರುದ್ಧ ನೀಡಿದ ದೂರುಗಳಿಗೆ ಮರುಜೀವ ಕೊಡಿ ಎಂದು ಆಗಿರಲಿಲ್ಲ, ಸೆಕ್ಷನ್ 2(ಕ್ಯೂ) ಅನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಮಾತ್ರ ಅರ್ಜಿಯಲ್ಲಿ ಕೋರಲಾಗಿತ್ತು. ಆದರೆ, ಅರ್ಜಿದಾರರು ಇಂಥದ್ದೊಂದು ಕೋರಿಕೆಯನ್ನು ಇಟ್ಟ ಉದ್ದೇಶ ಏನೆಂಬುದನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಲೇ ಇಲ್ಲ ಎಂಬುದು ಆಶ್ಚರ್ಯದ ಸಂಗತಿ.


ಮನವಿಯ ಆಳಕ್ಕೆ ಹೋದ ಸುಪ್ರೀಂ ಕೋರ್ಟ್, ‘ಈ ಅರ್ಜಿಯು ಹೆಣ್ಣಿನ ರಕ್ಷಣೆಗೆ ಸಂಬಂಧಿಸಿದಂತೆ ಪ್ರಮುಖ ಪ್ರಶ್ನೆಗಳನ್ನು ಎತ್ತುತ್ತದೆ’ ಎಂದು ಹೇಳಿತು. ಮಹಿಳೆಯ ಬಗ್ಗೆ ಆಡುವ ಇಂತಹ ಮಾತುಗಳು ಸಮಸ್ಯೆಗೆ ಕಾರಣವಾಗುತ್ತವೆ. ಏಕೆಂದರೆ, ಇಂತಹ ಮಾತುಗಳನ್ನು, ಮಹಿಳೆ ಕೂಡ ಮನುಷ್ಯಳೇ ಎಂಬ ಅರ್ಥದಲ್ಲಿ ಹೇಳಿರುವುದಿಲ್ಲ. ಬದಲಿಗೆ, ಮಹಿಳೆ ನಿಕೃಷ್ಟಳು ಎಂಬ ಅರ್ಥವು ಮಾತಿನಲ್ಲೇ ಅಡಗಿರುತ್ತದೆ. ಮಹಿಳೆಯನ್ನು ಕೌಟುಂಬಿಕ ಹಿಂಸೆಯಿಂದ ರಕ್ಷಿಸುವ ನೈಜ ಕಳಕಳಿಯಿಂದ ತೀರ್ಪು ಬರೆದಿರುವ ನ್ಯಾಯಮೂರ್ತಿ ರೊಹಿಂಟನ್ ನಾರಿಮನ್ ಅವರು, ‘ಇಂಥ ಹಿಂಸೆಗಳು ಲಿಂಗ ನಿರಪೇಕ್ಷ. ದೌರ್ಜನ್ಯವನ್ನು ಮಹಿಳೆಯ ಮೇಲೆ ಇನ್ನೊಬ್ಬಳು ಮಹಿಳೆಯೂ ನಡೆಸಬಲ್ಲಳು ಎಂಬುದು ಸ್ಪಷ್ಟ. ಕೆಲವು ಸಂದರ್ಭಗಳಲ್ಲಿ ಮಹಿಳೆಯೊಬ್ಬಳು ಇನ್ನೊಬ್ಬಳು ಮಹಿಳೆಯನ್ನು ಲೈಂಗಿಕ ದೌರ್ಜನ್ಯಕ್ಕೂ ಗುರಿಪಡಿಸಬಲ್ಲಳು. ಹಾಗಾಗಿ ಕಾಯ್ದೆಯ ಸೆಕ್ಷನ್ 3, ಕಾಯ್ದೆಯ ಒಟ್ಟಾರೆ ಆಶಯಕ್ಕೆ ಪೂರಕವಾಗಿದೆ. ಮಹಿಳೆಯ ಮೇಲೆ ಕೌಟುಂಬಿಕ ಚೌಕಟ್ಟಿನಲ್ಲಿ ನಡೆಯುವ ಯಾವುದೇ ಬಗೆಯ ದೌರ್ಜನ್ಯವನ್ನು ಕಾನೂನುಬಾಹಿರ ಎನ್ನುತ್ತದೆ ಇದು. ಹಾಗಾಗಿ ಇದು ಲಿಂಗನಿರಪೇಕ್ಷವಾಗಿದೆ’ ಎಂದು ಹೇಳಿದ್ದಾರೆ.

ಕೌಟುಂಬಿಕ ಹಿಂಸೆ ಲಿಂಗನಿರಪೇಕ್ಷ ಅಲ್ಲ ಎಂಬ ಮಾತನ್ನು ಸುಪ್ರೀಂ ಕೋರ್ಟ್ ಬಗ್ಗೆ ಅಪಾರ ಗೌರವ ಇಟ್ಟುಕೊಂಡೇ ಹೇಳಬೇಕಿದೆ. ಕೌಟುಂಬಿಕ ದೌರ್ಜನ್ಯಗಳು ಲಿಂಗನಿರಪೇಕ್ಷ ಅಲ್ಲ. ಕೌಟುಂಬಿಕ ದೌರ್ಜನ್ಯ ಲಿಂಗನಿರಪೇಕ್ಷ ಎನ್ನುವಾಗ ಸುಪ್ರೀಂ ಕೋರ್ಟ್ ಅಂಕಿ-ಅಂಶಗಳನ್ನು ಆಧಾರವಾಗಿ ಇಟ್ಟುಕೊಂಡಿಲ್ಲ. ಅತಿಹೆಚ್ಚಿನ ಸಂದರ್ಭಗಳಲ್ಲಿ ಕೌಟುಂಬಿಕ ದೌರ್ಜನ್ಯ ನಡೆಸುವವರು ಪುರುಷರು. ತೀವ್ರವಾದ, ಮತ್ತೆ ಮತ್ತೆ ನಡೆಯುವ ಕೌಟುಂಬಿಕ ಹಿಂಸೆಯನ್ನು ವಿಶ್ವದ ಎಲ್ಲೆಡೆ ಮಹಿಳೆಯರು ಪುರುಷರಿಂದಲೇ ಎದುರಿಸುತ್ತಾರೆ. ರಾಷ್ಟ್ರೀಯ ಅಪರಾಧ ದಾಖಲೆಗಳ ಸಂಸ್ಥೆ ನೀಡಿರುವ ಮಾಹಿತಿ ಅನ್ವಯ, 2003ರಲ್ಲಿ 50,703ರಷ್ಟಿದ್ದ ಕೌಟುಂಬಿಕ ದೌರ್ಜನ್ಯಗಳ ಸಂಖ್ಯೆ 2013ರ ವೇಳೆಗೆ 1,18,866ಕ್ಕೆ ಏರಿತ್ತು. ಅಂದರೆ ದೌರ್ಜನ್ಯದ ಪ್ರಮಾಣದಲ್ಲಿ ಶೇಕಡ 134ರಷ್ಟು ಹೆಚ್ಚಳ ಆಗಿತ್ತು. ಈ ಅವಧಿಯಲ್ಲಿ ಜನಸಂಖ್ಯೆಯಲ್ಲಿ ಆದ ಹೆಚ್ಚಳ ಖಂಡಿತ ಈ ಪ್ರಮಾಣದಲ್ಲಿ ಇರಲಿಲ್ಲ.


2005ರ ಕಾಯ್ದೆ ಜಾರಿಯಾಗುವ ಮುನ್ನ, 1983ರಲ್ಲಿ ಭಾರತೀಯ ದಂಡ ಸಂಹಿತೆಗೆ (ಐಪಿಸಿ) ಸೆಕ್ಷನ್ 498(ಎ) ಸೇರಿಸಿ, ವಿವಾಹಿತ ಮಹಿಳೆಗೆ ಹಿಂಸೆ ಕೊಡುವುದನ್ನು, ಅಂದರೆ ಕೌಟುಂಬಿಕ ದೌರ್ಜನ್ಯವನ್ನು, ಕ್ರಿಮಿನಲ್ ಅಪರಾಧವಾಗಿ ಪರಿಗಣಿಸಲಾಯಿತು. ಸೆಕ್ಷನ್ 498(ಎ)ಯನ್ನು ಪ್ರಯೋಗಿಸುವುದು ಕೂಡ ಪತಿ ಹಾಗೂ ಆತನ ಸಂಬಂಧಿಕರ ವಿರುದ್ಧ ಮಾತ್ರ. 2005ರ ಕಾಯ್ದೆಯನ್ನು ಸಂಸತ್ತು ರೂಪಿಸುತ್ತಿದ್ದ ಹೊತ್ತಿನಲ್ಲಿ, ಇದು ಸೆಕ್ಷನ್ 498(ಎ) ಆಶಯಗಳಿಗೆ ಪೂರಕವಾಗಿ ಇರಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಲಾಗಿತ್ತು. ಅಂದರೆ ಪತಿ ಹಾಗೂ ಆತನ  ಮಹಿಳಾ ಸಂಬಂಧಿಕರ ವಿರುದ್ಧ ದೂರು ದಾಖಲಿಸಲು ಅವಕಾಶ ಇರಬೇಕು ಎಂಬುದು ಶಾಸನಸಭೆಯ ಗಮನದಲ್ಲಿತ್ತು. ಮಹಿಳೆಗೆ ಹಿಂಸೆ ಕೊಡುವ ಅತ್ತೆ, ನಾದಿನಿಯ ವಿರುದ್ಧ ದೂರು ಕೊಡಲು ಅವಕಾಶ ಇರಬೇಕು, ಆದರೆ ಮಹಿಳೆಯರ ವಿರುದ್ಧ ಮಾತ್ರ ದೂರು ದಾಖಲಿಸಲು ಅವಕಾಶ ಕೊಡಬಾರದು ಎಂಬುದು ಐಪಿಸಿಯ ಸೆಕ್ಷನ್ 498(ಎ) ಆಶಯವಾಗಿತ್ತು. ಮಹಿಳೆಯನ್ನು ಮಾತ್ರ ಗುರಿಯಾಗಿಸಿಕೊಂಡು ದೂರು ದಾಖಲಿಸಲು ಅವಕಾಶ ಇರಬಾರದು ಎಂಬುದು 2005ರ ಕಾಯ್ದೆಯ ಆಶಯವೂ ಆಗಿದೆ.

ದೂರುದಾರ ಮಹಿಳೆಗೆ, ಕುಟುಂಬಕ್ಕೆ ಸೇರಿದ ಮನೆಯಲ್ಲಿ ಬದುಕು ಮುಂದುವರಿಸುವ ಹಕ್ಕೂ ಇರಬೇಕು ಎಂಬುದು 2005ರ ಕಾಯ್ದೆಯ ಪ್ರಮುಖ ಅಂಶಗಳಲ್ಲಿ ಒಂದು. ಸಾಮಾನ್ಯ ಸಂದರ್ಭಗಳಲ್ಲಿ ಆಸ್ತಿಯು ಮಹಿಳೆಯರ ಹೆಸರಿನಲ್ಲಿ ಇರುವುದಿಲ್ಲ. ಹಾಗಾಗಿ, ಕಾಯ್ದೆಯು ಇಂಥದ್ದೊಂದು ಹಕ್ಕನ್ನು ಕೊಟ್ಟಿರುವುದು ಬಹಳ ಮುಖ್ಯ. ಹಾಗಾಗಿ, ಪುರುಷನ ಮಹಿಳಾ ಸಂಬಂಧಿಗಳ ವಿರುದ್ಧ ದೂರು ದಾಖಲಿಸಲು ಅವಕಾಶ ನೀಡಿದರೂ, ಕಾಯ್ದೆಯು ಮಹಿಳೆಯರನ್ನು ಆ ಮನೆಯಿಂದ ಹೊರಗೆ ಕಳುಹಿಸುವಂಥ ಆದೇಶ ಹೊರಡಿಸಬಾರದು ಎನ್ನುತ್ತದೆ. ಪುರುಷನು ತನ್ನ ತಾಯಿಯನ್ನು ಮುಂದಿಟ್ಟುಕೊಂಡು, ಪತ್ನಿ ಮನೆ ತೊರೆಯುವಂತೆ ಮಾಡಬಹುದು ಎಂಬ ಆತಂಕ ಇತ್ತು. ಆದರೆ ಕಾಯ್ದೆಯ ಸೆಕ್ಷನ್ 19ರಲ್ಲಿ, ‘ಮನೆ ತೊರೆಯುವಂತೆ ಮಹಿಳೆಗೆ ಆದೇಶ ನೀಡುವಂತಿಲ್ಲ’ ಎನ್ನುವ ಮೂಲಕ ಇಂಥದ್ದೊಂದು ಆತಂಕ ದೂರ ಮಾಡಲಾಯಿತು.

ವಯಸ್ಕ ಪುರುಷ ಎಂಬ ಪದಗಳನ್ನು ತೆಗೆಯದಿದ್ದರೆ, ಪುರುಷನ ಮಹಿಳಾ ಸಂಬಂಧಿಕರ ವಿರುದ್ಧ ಯಾವುದೇ ಆದೇಶ ನೀಡಲು ಆಗದು. ಆಗ ಕಾಯ್ದೆಯೇ ಅರ್ಥ ಕಳೆದುಕೊಳ್ಳುತ್ತದೆ ಎಂಬ ಕಾರಣವನ್ನು ಸುಪ್ರೀಂ ಕೋರ್ಟ್ ನೀಡಿದೆ. ಇದು ಸಂಪೂರ್ಣವಾಗಿ ತಪ್ಪು. ಏಕೆಂದರೆ, ಮನೆಯನ್ನು ತೊರೆಯಬೇಕು ಎಂಬ ಆದೇಶವೊಂದನ್ನು ಮಾತ್ರ ಮಹಿಳೆಯರ ವಿರುದ್ಧ ಹೊರಡಿಸಲು ಆಗದು. ಉಳಿದಂತೆ, ಮಹಿಳೆಯ ವಿರುದ್ಧ ಆದೇಶ ಹೊರಡಿಸಲು ಯಾವ ಅಡೆತಡೆಯೂ ಇಲ್ಲ.

ಕೆಲಸದ ಸ್ಥಳಗಳಲ್ಲಿ ಲೈಂಗಿಕ ಕಿರುಕುಳ ತಡೆ ಕಾಯ್ದೆ – 2013ನ್ನು ಉಲ್ಲೇಖಿಸಿರುವ ಸುಪ್ರೀಂ ಕೋರ್ಟ್‌, ಆರೋಪಿ ಸ್ಥಾನದಲ್ಲಿರುವ ವ್ಯಕ್ತಿ ‘ವಯಸ್ಕ ಪುರುಷ’ನೇ ಆಗಿರಬೇಕು ಎಂದೇನೂ ಇಲ್ಲ ಎನ್ನುತ್ತದೆ. ಆದರೆ, ಇದಕ್ಕೆ ಸಂವಾದಿಯಾಗಿರುವ, 2013ರಲ್ಲಿ ಐಪಿಸಿಗೆ ತಿದ್ದುಪಡಿ ತಂದು ಜಾರಿಗೊಳಿಸಿದ ಸೆಕ್ಷನ್ 354(ಎ) ಕೂಡ ಪುರುಷರ ವಿರುದ್ಧ ಮಾತ್ರ ಇದೆ ಎಂಬುದನ್ನು ಗುರುತಿಸುವಲ್ಲಿ ಈ ತೀರ್ಪು ವಿಫಲವಾಗಿದೆ. ಅಲ್ಲದೆ, ಹೊಸದಾಗಿ ಅಪರಾಧದ ವ್ಯಾಖ್ಯಾನದೊಳಕ್ಕೆ ಬಂದ, ಮಹಿಳೆಯನ್ನು ಹಿಂಬಾಲಿಸುವುದು, ಬೆತ್ತಲಾಗಿರುವ ಅಥವಾ ಅರೆನಗ್ನವಾಗಿರುವ ಮಹಿಳೆಯನ್ನು ನೋಡುತ್ತಾ ಲೈಂಗಿಕ ಸುಖ ಅನುಭವಿಸುವುದು, ಐಪಿಸಿಗೆ ತಿದ್ದುಪಡಿ ತರುವ ಮೂಲಕ ಅಸ್ತಿತ್ವಕ್ಕೆ ಬಂದ ಸೆಕ್ಷನ್ 354(ಬಿ), 354(ಸಿ) ಮತ್ತು 376 ಕೂಡ ಪುರುಷರ ವಿರುದ್ಧವೇ ಇವೆ. ಅವು ಲಿಂಗನಿರಪೇಕ್ಷವಾಗಿಲ್ಲ. ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಅತ್ಯಾಚಾರ ಮತ್ತು ಮಹಿಳೆಯರ ವಿರುದ್ಧ ನಡೆಯುವ ಈ ಮಾದರಿಯ ಇತರ ಕೃತ್ಯಗಳು ಲಿಂಗನಿರಪೇಕ್ಷವಾಗಿಲ್ಲ. ಈ ವಾಸ್ತವವನ್ನು ಕಾನೂನು ಗುರುತಿಸಿದೆ.

ಆದರೆ, ಇಲ್ಲಿರುವ ವ್ಯಂಗ್ಯವೆಂದರೆ, ಇಡೀ ತೀರ್ಪು ‘ಸಮಾನತೆ’ಯ ಮೇಲೆ ನಿಂತಿದೆ ಎಂದು ಹೇಳಲಾಗಿದೆ. ‘ವಯಸ್ಕ ಪುರುಷ’ನ ಎಂದು ನಮೂದಿಸಿರುವುದು ಸಮಾನತೆಗೆ ವಿರುದ್ಧ. ಏಕೆಂದರೆ, ಹೀಗೆ ಮಿತಿ ಹೇರುವುದರಿಂದ ಮಹಿಳೆಗೆ ಕೌಟುಂಬಿಕ ದೌರ್ಜನ್ಯದಿಂದ ರಕ್ಷಣೆ ಕೊಡುವ ಉದ್ದೇಶದ ಕಾಯ್ದೆಯನ್ನು ಮಿತಿಗೊಳಿಸಿದಂತೆ ಆಗುತ್ತದೆ ಎಂದು ನ್ಯಾಯಮೂರ್ತಿ ನಾರಿಮನ್ ತೀರ್ಪಿನಲ್ಲಿ ಹೇಳಿದ್ದಾರೆ. ಇದು ಮಹಿಳೆಯನ್ನು ರಕ್ಷಿಸಲು ಸಮಾನತೆಯನ್ನು ವಿಚಿತ್ರ ರೀತಿಯಲ್ಲಿ ಬಳಸಿಕೊಂಡಂತಿದೆ. ಹೀಗೆ ಮಾಡುವುದರಿಂದ ಕಾಯ್ದೆ ಮಹಿಳೆಯರ ವಿರುದ್ಧವೇ ಬಳಕೆಯಾಗುವ ಸಾಧ್ಯತೆ ಇದೆ. ಈ ಕಾಯ್ದೆ ರೂಪುಗೊಂಡಿದ್ದೇ, ಕುಟುಂಬದ ಒಳಗೆ ಪುರುಷರಿಂದ ದೌರ್ಜನ್ಯಕ್ಕೆ ಒಳಗಾಗುವ ಮಹಿಳೆಯರಿಗೆ ರಕ್ಷಣೆ ಕೊಡಲು. ಮಹಿಳೆಯನ್ನು, ಬಾಲಕಿಯನ್ನು ಗುರಿಪಡಿಸಲು ಅಲ್ಲ. ಮಹಿಳೆಯರ ಮೇಲಿನ ದೌರ್ಜನ್ಯಗಳ ವಾಸ್ತವವನ್ನು ಕಡೆಗಣಿಸಿ, ಇದಕ್ಕೆ ಲಿಂಗನಿರಪೇಕ್ಷ ಬಣ್ಣ ನೀಡಲು ತೀರ್ಪು ಯತ್ನಿಸಿದೆ. ಇಲ್ಲಿ ಮಹಿಳೆಯೂ ಹಿಂಸಾ ಕೃತ್ಯ ಎಸಗುವವಳು ಎಂದು ತೋರಿಸಿ, ಮಹಿಳಾ ಪರ ಹೋರಾಟಗಳ ಫಲವಾಗಿ ಮೂಡಿದ ಕಾಯ್ದೆಯನ್ನು ದುರ್ಬಲಗೊಳಿಸಿದೆ.

ಈ ತೀರ್ಪು ಮಹಿಳೆಯರ ಮೇಲೆ ಯಾವ ಬಗೆಯ ಪರಿಣಾಮ ಬೀರಲಿದೆ? ಈ ತೀರ್ಪಿನ ಪುನರ್‌ ಪರಿಶೀಲನೆ ಆಗದಿದ್ದರೆ, ಮಹಿಳೆಯ ಮೇಲೆಯೇ ದೂರು ದಾಖಲಾಗುವುದು ಹೆಚ್ಚಲಿದೆ. ಆಗ ಈ ಕಾನೂನಿಗೆ ಮಹಿಳೆಯರೇ ಬಲಿಪಶುಗಳಾಗಲಿದ್ದಾರೆ. ಈ ತೀರ್ಪಿನಿಂದಾಗಿ, ಇತರ ಮಹಿಳಾ ಕೇಂದ್ರಿತ ಕಾನೂನುಗಳೂ ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಸಮಾನತೆಯ ತತ್ವದ ಅಡಿ ಮಹಿಳೆಯರಿಗೆ ರಕ್ಷಣೆ ನೀಡಲು ಆತುರವಾಗಿರುವ ನಮ್ಮ ನ್ಯಾಯಾಲಯಗಳಿಗೆ ಒಂದು ವಿಚಾರ ನೆನಪಿಸಬೇಕು. ಸಂವಿಧಾನದಲ್ಲಿ ಹೇಳಿರುವ ಸಮಾನತೆಯ ತತ್ವವೇ ಮಹಿಳೆಯರಿಗೆ ರಕ್ಷಣೆ ನೀಡಲು ವಿಶೇಷ ಕಾನೂನುಗಳನ್ನು ರೂಪಿಸಲು ಅವಕಾಶ ನೀಡುತ್ತದೆ. ಮಹಿಳೆಯರು ತಾರತಮ್ಯಕ್ಕೆ ಗುರಿಯಾಗಬಾರದು ಎಂಬ ಉದ್ದೇಶದಿಂದ 2005ರ ಕಾಯ್ದೆಯನ್ನು ಜಾರಿಗೆ ತರಲಾಯಿತು. ಈಗ ಇಂತಹ ಕಾಯ್ದೆಗಳನ್ನು ಲಿಂಗ ನಿರಪೇಕ್ಷಗೊಳಿಸಿದರೆ, ಮಹಿಳೆಯರು ಇನ್ನಷ್ಟು ದೌರ್ಜನ್ಯಕ್ಕೆ ಗುರಿಯಾಗುತ್ತಾರೆ.


No comments:

Post a Comment