Wednesday, 7 December 2016

ಮಾನವ ಅಭಿವೃದ್ಧಿ ಸೂಚ್ಯಂಕ -2015





ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ವಿಶ್ವದ 188 ದೇಶಗಳ ಪೈಕಿ ಭಾರತ 130ನೇ ರ್ಯಾಂಕಿಂಗ್ ಪಡೆದಿದೆ.  ಯುನೈಟೆಡ್ ನೇಷನ್ಸ್ ಡೆವಲಪ್‍ಮೆಂಟ್ ಪ್ರೋಗ್ರಾಂ (ಯುಎನ್‍ಡಿಪಿ) ಬಿಡುಗಡೆ ಮಾಡಿದ ಮಾನವ ಅಭಿವೃದ್ಧಿ ವರದಿ-2015ರಲ್ಲಿ ಈ ಅಂಶ ಬಯಲಾಗಿದೆ.



ಪ್ರಮುಖ ಅಂಶಗಳು
* ಈ ವರದಿಯಲ್ಲಿ ಭಾರತ 130ನೇ ರ್ಯಾಂಕಿಂಗ್ ಪಡೆದಿದ್ದು, 0.609 ಅಂಕ ದಾಖಲಿಸಿದೆ. ಮಾನವ ಅಭಿವೃದ್ಧಿಯಲ್ಲಿ ಮಧ್ಯಮವರ್ಗದ ದೇಶಗಳ ಸಾಲಿನಲ್ಲಿ ಭಾರತ ಸೇರಿದೆ. 2014ರ ವರದಿಯಲ್ಲಿ ಭಾರ 0.586 ಅಂಕಗಳೊಂದಿಗೆ 135ನೇ ರ್ಯಾಂಕ್ ಪಡೆದಿತ್ತು.

* ದೇಶದಲ್ಲಿ ತಲಾದಾಯ ಹೆಚ್ಚಿರುವುದು ಮತ್ತು ಸರಾಸರಿ ಜೀವನಾಯುಷ್ಯ ಹೆಚ್ಚಿರುವುದು ಭಾರತದ ರ್ಯಾಂಕಿಂಗ್‍ನಲ್ಲಿ ಏರಿಕೆಗೆ ಮುಖ್ಯ ಕಾರಣಗಳು.

* ಭಾರತದಲ್ಲಿ ಹುಟ್ಟಿನ ವೇಳೆ ಜೀವಿತಾವಧಿ 68 ವರ್ಷ ಎಂದು ಅಂದಾಜು ಮಾಡಲಾಗಿದೆ. 2014ರಲ್ಲಿ ಈ ಪ್ರಮಾಣ 67.4 ವರ್ಷ ಇತ್ತು. ಇದಕ್ಕೂ ಮುನ್ನ 1980ರಲ್ಲಿ ಭಾರತದ ವ್ಯಕ್ತಿಗಳ ನಿರೀಕ್ಷಿತ ಆಯುಷ್ಯ 53.9 ವರ್ಷ ಆಗಿತ್ತು.

* ಒಟ್ಟಾರೆ ರಾಷ್ಟೀಯ ತಲಾ ಆದಾಯ (ಜಿಎನ್‍ಐ) 2014ರಲ್ಲಿ 5497 ಡಾಲರ್‍ಗೆ ಏರಿದೆ. ಹಿಂದಿನ ವರ್ಷ ಇದು 5180 ಡಾಲರ್ ಆಗಿತ್ತು. 1980ರಲ್ಲಿ ಭಾರತದ ತಲಾದಾಯ 1255 ಡಾಲರ್ ಮಾತ್ರ ಇತ್ತು. 1980ರಿಂದ 2014ರ ಅವಧಿಯಲ್ಲಿ ಭಾರತೀಯರ ತಲಾದಾಯ ಶೇಕಡ 338ರಷ್ಟು ಏರಿಕೆ ಕಂಡಿದೆ.

* ಜ್ಞಾನಲಭ್ಯತೆ: ಆದರೆ 2011ರಿಂದೀಚೆಗೆ ಮಕ್ಕಳ ಸರಾಸರಿ ಕಲಿಕಾ ವಯಸ್ಸು 11.7ರಲ್ಲೇ ನಿಂತಿದೆ. ಶಾಲೆಗೆ ಸೇರುವ ಅವಧಿ 2010ರಲ್ಲಿ 5.4 ವರ್ಷ ಇದ್ದುದು ಯಾವ ಬದಲಾವಣೆಯೂ ಆಗಿಲ್ಲ.

* ಲಿಂಗ ಅಭಿವೃದ್ಧಿ ಸೂಚ್ಯಂಕ: ಭಾರತದ ಜಿಡಿಐ ಮೌಲ್ಯ 0.795ರಷ್ಟಿದೆ. ಮಹಿಳಾ ಅಭಿವೃದ್ಧಿ ಸೂಚ್ಯಂಕವು 0.525 ಇದ್ದರೆ, ಪುರುಷರ ಅಭಿವೃದ್ಧಿ ಸೂಚ್ಯಂಕ 0.660 ಇದೆ.

* ಲಿಂಗ ಅಸಮಾನತೆ ಸೂಚ್ಯಂಕ: ಭಾರತ 155 ದೇಶಗಳ ಪೈಕಿ 0.563 ಮೌಲ್ಯದೊಂದಿಗೆ 130ನೇ ಸ್ಥಾನದಲ್ಲಿದೆ.

* ಭಾರತದ ಮಾನವ ಅಭಿವೃದ್ಧಿ ಸೂಚ್ಯಂಕ ಮೌಲ್ಯ 1980ರಲ್ಲಿ 0.362 ಇದ್ದುದು, 2014ರವೇಳೆಗೆ 0.609ಕ್ಕೆ ಏರಿದೆ. ಅಂದರೆ ಶೇಕಡ 68.1ರಷ್ಟು ಏರಿಕೆ ಕಂಡಿದ್ದು, ವಾರ್ಷಿಕ 1.54 ಶೇಕಡ ದರದಲ್ಲಿ ಏರಿಕೆಯಾಗುತ್ತಿದೆ.

* ಭಾರತೀಯರ ಹುಟ್ಟಿನ ವೇಳೆ ಅಂದಾಜು ಜೀವಿತಾವಧಿ 1980 ರಿಂದ 2014ರವರೆಗೆ 14.1 ವರ್ಷದಷ್ಟು ಹೆಚ್ಚಿದೆ. ಸರಾಸರಿ ಶಾಲೆಯಲ್ಲಿ ಕಲಿಕಾವಧಿ 3.5 ವರ್ಷದಷ್ಟು ಹೆಚ್ಚಿದ್ದು, ಇದೀಗ ಶಾಲೆಯಲ್ಲಿ ಕಲಿಕಾ ಅವಧಿ 5.3 ವರ್ಷದಷ್ಟು ಹೆಚ್ಚಿದೆ.

* ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ ಮೂರು ಅಗ್ರಗಣ್ಯ ದೇಶಗಳೆಂದರೆ, ಕ್ರಮವಾಗಿ ನಾರ್ವೆ, ಆಸ್ಟ್ರೇಲಿಯಾ ಹಾಗೂ ಸ್ವಿಡ್ಜರ್‍ಲೆಂಡ್.

* ಭಾರತದ ನೆರೆಯ ರಾಷ್ಟ್ರಗಳಾದ ಶ್ರೀಲಂಕಾ (73), ಚೀನಾ (90), ಭೂತಾನ್ (132), ಬಾಂಗ್ಲಾದೇಶ (142), ನೇಪಾಳ (145), ಪಾಕಿಸ್ತಾನ (147), ಅಪ್ಘಾನಿಸ್ತಾನ (171).
ಬ್ರಿಕ್ಸ್ ದೇಶಗಳು: ರಷ್ಯಾ (50), ಬ್ರೆಜಿಲ್ (75), ಚೀನಾ (90), ದಕ್ಷಿಣ ಆಫ್ರಿಕಾ (116) ಮತ್ತು ಭಾರತ (130).

ಮಾನವ ಅಭಿವೃದ್ಧಿ ಸೂಚ್ಯಂಕದ ಬಗ್ಗೆ:
ಮಾನವ ಅಭಿವೃದ್ಧಿ ಸೂಚ್ಯಂಕವೆಂದರೆ, ಮೂಲಭೂತವಾಗಿ ಮಾನವ ಅಭಿವೃದ್ಧಿ ಕ್ಷೇತ್ರದಲ್ಲಿ ದೇಶ ಸಾಧಿಸಿದ ಅಭಿವೃದ್ಧಿಯಾಗಿದ್ದು, ಇದನ್ನು ಯುಎನ್‍ಡಿಪಿ ಅಧ್ಯಯನ ಮಾಡುತ್ತದೆ. ದೇಶಗಳ ಮೂರು ಪ್ರಮುಖ ಧೀರ್ಘಾವಧಿ ಪ್ರಗತಿಯ ಆಯಾಮಗಳನ್ನು ಇಲ್ಲಿ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಜೀವಿತಾವಧಿ ಮತ್ತು ಆರೋಗ್ಯ, ಜ್ಞಾನಲಭ್ಯತೆ ಹಾಗೂ ಶಿಷ್ಟ ಜೀವನ ಗುಣಮಟ್ಟ.




NO SELFI ZONE ನೋ ಸೆಲ್ಫಿ ಝೋನ್




ನೋ ಸೆಲ್ಫಿ ಝೋನ್


ರಾಜ್ಯದ 400 ತಾಣಗಳು ನೋ ಸೆಲ್ಫಿ ಝೋನ್


ಪ್ರವಾಸಿ ತಾಣಗಳಲ್ಲಿ ಮೊಬೈಲ್ ಫೋನ್ನಿಂದ ಸೆಲ್ಫಿ ಫೋಟೊ ತೆಗೆದುಕೊಳ್ಳುವ ವೇಳೆ ಆಕಸ್ಮಿಕ ಸಾವು ಸಂಭವಿಸುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರವಾಸೋದ್ಯಮ ಇಲಾಖೆ ರಾಜ್ಯದ 400ಕ್ಕೂ ಅಧಿಕ ಪ್ರದೇಶಗಳನ್ನು ‘ನೋ ಸೆಲ್ಫಿ ಝೋನ್’ ಎಂದು ಘೋಷಿಸಿದೆ.

ಬೆಂಗಳೂರು ಸಮೀಪದ ನಂದಿಬೆಟ್ಟ, ಚಿಂತಾಮಣಿ ಬೆಟ್ಟ, ಗುಡಿಬಂಡೆ ಬೆಟ್ಟಗಳು ಕೂಡ ನೋ ಸೆಲ್ಫಿ ಝೋನ್ ವಲಯಗಳಾಗಿದ್ದು, ರಾಜ್ಯದ ಕರಾವಳಿ ವಲಯ, ದಕ್ಷಿಣ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶಗಳಲ್ಲಿ ಸೆಲ್ಫಿ ತೆಗೆದುಕೊಳ್ಳುವುದರಿಂದ ಆಗುತ್ತಿರುವ ಅಪಾಯಗಳ ಕುರಿತಂತೆ ಇಲಾಖೆ ಜಾಗೃತಿ ಅಭಿಯಾನವನ್ನೂ ಆರಂಭಿಸಿದೆ.

ಈ ಹಿನ್ನೆಲೆಯಲ್ಲಿ ರಾಜ್ಯದ ಜಲಾಶಯಗಳು, ನದಿಗಳು, ಸಮುದ್ರ ತೀರ, ಪ್ರವಾಸಿ ತಾಣಗಳಾಗಿರುವ ಬೆಟ್ಟ-ಗುಡ್ಡಗಳು, ಎತ್ತರದ ಪ್ರದೇಶಗಳಲ್ಲಿರುವ ದೇವಸ್ಥಾನಗಳು, ಟ್ರೆಕ್ಕಿಂಗ್ ತಾಣಗಳು ಹೀಗೆ ಪ್ರವಾಸಿಗರು ತೆರಳುವ ಕೇಂದ್ರಗಳಲ್ಲಿ ಅದರಲ್ಲೂ ನೈಸರ್ಗಿಕ ತಾಣದ ಪ್ರದೇಶಗಳಲ್ಲಿ ಸೆಲ್ಫಿಯಿಂದಾಗಿ ಅಪಾಯ ಸಂಭವಿಸದಂತೆ ‘ನೋ ಸೆಲ್ಫಿ ಝೋನ್’ ಫಲಕಗಳನ್ನು ಇಲಾಖೆ ಅಳವಡಿಸುತ್ತಿದೆ. ಈ ಫಲಕಗಳು ಕನ್ನಡ ಮತ್ತು ಇಂಗ್ಲಿಷ್ ಭಾಷೆಯಲ್ಲಿವೆ. ಇನ್ನೂ ಕೆಲವೆಡೆ ಚಿತ್ರಗಳೇ ಅಪಾಯವನ್ನು ಒತ್ತಿ ಹೇಳುವ ಫಲಕಗಳನ್ನೂ ಅಳವಡಿಸಲಾಗಿದೆ.

ವಿಶೇಷವೆಂದರೆ, ಫೋಟೊಗಳನ್ನು ತೆಗೆಯಬಹುದಾದ ತಾಣಗಳಲ್ಲಿ ‘ಇಲ್ಲಿ ಫೋಟೊಗಳನ್ನು ತೆಗೆಯಬಹುದು’ ಎಂಬ ಫಲಕಗಳನ್ನೂ ಅಳವಡಿಸಿ, ಪ್ರವಾಸೋದ್ಯಮ ಉತ್ತೇಜನಕ್ಕೆ ಗಮನ ನೀಡಲಾಗಿದೆ.

ಭಾರತದಲ್ಲಿ ಅತಿ ಹೆಚ್ಚು ಸೆಲ್ಫಿ ಸಾವು
•  ವಿಶ್ವದ ಅಂಕಿ ಅಂಶಗಳನ್ನು ನೋಡಿದರೆ, ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಅತಿ ಹೆಚ್ಚು ಸಾವು ಸಂಭವಿಸಿದ ನಗರ ದೆಹಲಿ ಎಂದು ಕಾರ್ನೆಗಿ ಮೆಲನ್ ವಿಶ್ವವಿದ್ಯಾಲಯ ಮತ್ತು ದೆಹಲಿಯ ಇಂದ್ರಪ್ರಸ್ಥ ಮಾಹಿತಿ ಸಂಸ್ಥೆಯ ಸಂಶೋಧನಾ ವರದಿ ತಿಳಿಸಿದೆ.
•   ಸೆಲ್ಫಿ ತೆಗೆಯುವಾಗ ಸಾವಿಗೀಡಾದವರ ಒಟ್ಟು ಸಂಖ್ಯೆ 127. ಅದರಲ್ಲಿ ಭಾರತದ ಪಾಲು 76. ಪಾಕಿಸ್ತಾನದಲ್ಲಿ 9. ಅದು 2ನೇ ಸ್ಥಾನದಲ್ಲಿದೆ.
•  ಅಮೆರಿಕ (8), ರಷ್ಯಾ(6), ಫಿಲಿಫೈನ್ಸ್ ಮತ್ತು ಚೀನಾ (ತಲಾ4), ಸ್ಪೇನ್ (3), ಪೋರ್ಚುಗಲ್, ಇಂಡೋನೇಷ್ಯಾ, ಪೆರು ಮತ್ತು ಟರ್ಕಿ (ತಲಾ2), ರೋಮೇನಿಯಾ, ಆಸ್ಟ್ರೇಲಿಯಾ, ಮೆಕ್ಸಿಕೊ, ದಕ್ಷಿಣ ಆಫ್ರಿಕ, ಇಟಲಿ, ನೇಪಾಳ, ಸರ್ಬಿಯಾ, ಚಿಲಿ ಮತ್ತು ಹಾಂಗ್‍ಕಾಂಗ್‍ಗಳಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ.

ಆಕ್ಸ್ ಫರ್ಡ್ ಪದಕೋಶದಲ್ಲಿ ‘ಸೆಲ್ಫಿ’
2013ರ ವರ್ಷದ ಪದವಾಗಿ ಆಕ್ಸ್‍ಫರ್ಡ್ ಪದಕೋಶದಲ್ಲಿ ಸೇರ್ಪಡೆ ಆಗಿತ್ತು. ಸೆಲ್ಫಿ ಪದದ ಅರ್ಥ ಹೀಗಿದೆ. ಒಬ್ಬ ವ್ಯಕ್ತಿ ತನ್ನ ಚಿತ್ರವನ್ನು ಸ್ವಯಂ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಅಪ್‍ಲೋಡ್ ಮಾಡುವುದು.




OPEC


PSLV-C36 / RESOURCESAT-2A


PSLV-C36 / RESOURCESAT-2A
PSLV-C36

PSLV-C36 is the thirty eighth flight of ISRO's Polar Satellite Launch Vehicle (PSLV) placed the 1235 kg RESOURCESAT-2A into an 817 km polar Sun Synchronous Orbit (SSO). PSLV-C36 was launched from the First Launch Pad (FLP) at Satish Dhawan Space Centre SHAR, Sriharikota. In this flight, the 'XL' version of PSLV with six solid strap-on motors was used.

PSLV is the ISRO's versatile launch vehicle for launching multiple satellites in polar SSOs, Low Earth Orbits (LEO) as well as Geosynchronous Transfer Orbit (GTO) and sub GTO. With 36 successful launches, PSLV has emerged as the workhorse launch vehicle of ISRO and is offered for launching satellites for international customers. During 1994-2016 period, PSLV has launched a total of 121 satellites, of which 79 satellites are from abroad and 42 are Indian satellites.

PSLV-C36 / RESOURCESAT-2A was successfully launched on December 07, 2016 at 10:25 hrs (IST) from SDSC SHAR, Sriharikota.


BACK

1) RESOURCESAT-2.         2011April 20


RESOURCESAT-2
RESOURCESAT-2 is a follow on mission to RESOURCESAT-1 and the eighteenth Remote Sensing satellite built by ISRO. RESOURCESAT-2 is intended to continue the remote sensing data services to global users provided by RESOURCESAT-1, and to provide data with enhanced multispectral and spatial coverage as well.

Important changes in RESOURCESAT-2 compared to RESOURCESAT-1 are: Enhancement of LISS-4 multispectral swath from 23 km to 70 km and improved Radiometric accuracy from 7 bits to 10 bits for LISS-3 and LISS-4 and 10 bits to 12 bits for AWIFS. Besides, suitable changes, including miniaturisation in payload electronics, have been made in RESOURCESAT-2.

RESOURCESAT-2 also carries an additional payload known as AIS (Automatic Identification System) from COMDEV, Canada as an experimental payload for ship surveillance in VHF band to derive position, speed and other information about ships.

RESOURCESAT-2 carries two Solid State Recorders with a capacity of 200 Giga Bytes each to store the images taken by its cameras which can be read out later to ground stations.


Launch Mass:
1206 kg
Mission Life:
5 years
Power:
1250 W
Launch Vehicle:
PSLV-C16/RESOURCESAT-2
Type of Satellite:
Earth Observation
Manufacturer:
ISRO
Owner:
ISRO
Application:
Earth Observation
Orbit Type:
SSPO

2) RESOUCESAT-1

Oct 17, 2003
IRS-P6 / RESOURCESAT-1
RESOURCESAT-1 is the tenth satellite of ISRO in IRS series, intended to not only continue the remote sensing data services provided by IRS-1C and IRS-1D, both of which have far outlived their designed mission lives, but also to vastly enhance the data quality. RESOURCESAT-1 is the most advanced Remote Sensing Satellite built by ISRO as of 2003.


Launch Mass:
1360 kg
Mission Life:
5 years
Power:
1250 W
Launch Vehicle:
PSLV-C5 /RESOURCESAT-1
Type of Satellite:
Earth Observation
Manufacturer:
ISRO
Owner:
ISRO
Application:
Earth Observation
Orbit Type:
SSPO




ಗುರು


ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಜೀವನದ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಶಕ್ತಿಯನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಬೆಳಕಿನ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು. ನಾವು ಗುರುವಿನ ಮುಖಾಂತರವೇ ಜೀವನದ ಅರಿವು ಅರಿಯಬೇಕಾಗಿರುವುದರಿಂದ, ಅನು ದಿನ, ಅನು ಕ್ಷಣ, ಗುರುವನ್ನು ಅಂತರಂಗದಲ್ಲೇ ಪೂಜಿಸುತ್ತಾ ನಮ್ಮನ್ನು ನಾವು ಸಮರ್ಪಿಸಿಕೊಳ್ಳಬೇಕು. ಹೀಗೆ ನನ್ನದೇನೂ ಇಲ್ಲವೆಂಬ ಭಾವ ನಮ್ಮಲ್ಲಿ ಸದಾ ಜಾಗೃತವಾಗಿಟ್ಟುಕೊಂಡು, ಗುರುವಿನಲ್ಲಿ ಶರಣಾದರೆ ಮಾತ್ರ ನಮ್ಮ ಗುರಿ ಮುಟ್ಟುವ ಪ್ರಯತ್ನ ಸಫಲವಾಗುತ್ತದೆ.
ಉಪನಿಷತ್ತಿನ ಪ್ರಕಾರ “ಗು” ಎಂದರೆ ಅಂಧಕಾರವೆಂದೂ “ರು” ಎಂದರೆ ದೂರೀಕರಿಸುವವ ಅಥವಾ ಅಜ್ಞಾನದ ಅಂಧಕಾರವನ್ನು ನಿವಾರಿಸಿ ಜ್ಞಾನದ ಹಾದಿಗೆ ನಡೆಸುವವ ಎಂಬ ಅರ್ಥವಾಗುತ್ತದೆ. ಸಂಸ್ಕೃತದಲ್ಲಿ “ಗುರು” ಪದಕ್ಕೆ ಭಾರವಾದ ಎನ್ನುವ ಅರ್ಥವೂ ಇದೆಯೆನ್ನುತ್ತಾರೆ. ಯಾರು ಜ್ಞಾನದಿಂದ ಭಾರವಾಗಿರುವನೋ ಅವನೇ ಗುರು ಎಂದು ಅರ್ಥೈಸಬಹುದೇನೋ.
ಸ್ಕಂದ ಪುರಾಣದ “ಗುರುಗೀತೆ”ಯಲ್ಲಿ ಗುರುವನ್ನು ನಂದಾದೀಪದಂತೆ ಬೆಳಗುವ ಜ್ಯೋತಿಯಂತೆ ಎಂದು ಗುರುವಿನ ಹಿರಿಮೆಯನ್ನು ವಿಸ್ತಾರವಾಗಿ ತಿಳಿಸಿಲಾಗಿದೆ :
ಅಖಂಡ ಮಂಡಲಾಕಾರಂ ವ್ಯಾಪ್ತಂ ಯೇನಾ ಚರಾಚರಂ |
ತತ್ಪದಂ ದರ್ಶಿತಂ ಯೇನಾ ತಸ್ಮೈ ಶ್ರೀಗುರವೇ ನಮಃ |
ಆದಿಗುರು ಶ್ರೀ ಶಂಕರಾಚಾರ್ಯರು ಗುರು ಸ್ತೋತ್ರವನ್ನು ಹೀಗೆ ಹೇಳುತ್ತಾರೆ :
ಗುರುರ್ಬ್ರಹ್ಮಾ ಗುರುರ್ವಿಷ್ಣುಃ | ಗುರುರ್ದೇವೋ ಮಹೇಶ್ವರಃ |
ಗುರುಸ್ಸಾಕ್ಶಾತ್ ಪರಬ್ರಹ್ಮಃ | ತಸ್ಮೈ ಶ್ರೀ ಗುರವೇ ನಮಃ ||
ಗುರುವು ಬ್ರಹ್ಮ, ವಿಷ್ಣು ಮತ್ತು ಮಹೇಶ್ವರನ ಸ್ವರೂಪಿಯಾಗಿದ್ದು, ಅದಕ್ಕೂ ಮಿಗಿಲಾದ ಪರಬ್ರಹ್ಮ ತತ್ತ್ವವೇ ಆಗಿದ್ದಾನೆ.ಅಂಥ ಗುರುವಿಗೆ ಪ್ರಣಾಮಗಳು ಎಂಬ ಅರ್ಥವಾಗುತ್ತದೆ.
ಅಜ್ಞಾನ ತಿಮಿರಾಂಧಸ್ಯ ಜ್ಞಾನಾಂಜನ ಶಲಾಕಯಾ |
ಚಕ್ಷುರುನ್ಮೀಲಿತಂ ಯೇನ ತಸ್ಮೈ ಶ್ರೀ ಗುರವೇ ನಮಃ ||
ಅಂದರೆ ನಮ್ಮಲ್ಲಿರುವ ಅಜ್ಞಾನವೆಂಬ ಕಣ್ಣಿಗೆ ಅಂಟಿದ ಅಂಧಕಾರವನ್ನು ಜ್ಞಾನವೆಂಬ ಕಡ್ಡಿಯಿಂದ ಗುಣಪಡಿಸಿ, ಶಿಷ್ಯನ ಏಳಿಗೆಗೆ ಬೇಕಾದ ಸೋಪಾನವನ್ನು ಹತ್ತಿಸುವ,ಸಾಧನೆಯ ಮಾರ್ಗದರ್ಶನ ಮಾಡುವ ಶ್ರೀ ಗುರುವಿಗೆ ವಂದನೆಗಳು.
ಹೀಗೆ ನಮ್ಮ ಪರಂಪರೆಯಲ್ಲಿ ಅನಾದಿ ಕಾಲದಿಂದಲೂ ಗುರುವಿನ ಮಹತ್ವವನ್ನುಸಾರುತ್ತಾ
ನ ಗುರೋರಧಿಕಂ ತತ್ವಂ, ನ ಗುರೋರಧಿಕಂ ತಪಃ|
ತತ್ವ ಜ್ಞಾನಾತ್ ಪರಂ ನಾಸ್ತಿ, ತಸ್ಮೈ ಶ್ರೀ ಗುರವೇ ನಮಃ ||
ಅಂದರೆಗುರುವಿಗಿಂತ ಮೀರಿದ ತತ್ವ, ತಪಸ್ಸು ಬೇರೆ ಯಾವುದೂ ಇಲ್ಲ.ಜ್ಞಾನದ ದಾರಿದೀಪ ತೋರುವವನಾದ ಶ್ರೀ ಗುರುವೇ ನಿನಗೆ ವಂದನೆಗಳು ಎಂದು ಹೇಳಿದ್ದಾರೆ.
ಶಾಶ್ವತವಾದ ಆನಂದವನ್ನು ಹೊಂದುವುದು ಸದ್ಗುರುವಿನ ಅನುಗ್ರಹದಿಂದ ಮಾತ್ರವೇ ಸಾಧ್ಯವೆಂದು ಶ್ರೀ ಶಂಕರಾಚಾರ್ಯರು ತಮ್ಮಗುರ್ವಷ್ಟಕಮ್ ನಲ್ಲಿ ಕೂಡ ಹೀಗೆ ಹೇಳಿದ್ದಾರೆ :
ಶರೀರಂ ಸುರೂಪಂ ತಥಾ ವಾ ಕಲತ್ರಂ
ಯಶಶ್ಚಾರು ಚಿತ್ರಂ ಧನಂ ಮೇರುತುಲ್ಯಮ್ ||೧||
ಕಲತ್ರಂ ಧನಂ ಪುತ್ರಪೌತ್ರಾದಿ ಸರ್ವಂ
ಗೃಹಂ ಬಾಂಧವಾಃ ಸರ್ವಮೇತದ್ಧಿ ಜಾತಮ್ ||೨||
ನಮಗೆ ಸುಂದರ ಶರೀರ, ಅಪಾರ ಅಂತಸ್ತು, ಕೀರ್ತಿ, ಸಂಸಾರ ಎಲ್ಲವೂ ಇದ್ದರೂ ಗುರುವಿನ ಚರಣಗಳಲ್ಲಿ ಭಕ್ತಿ ಶ್ರದ್ಧೆ ಇಲ್ಲದವನಿಗೆ ಮೋಕ್ಷವಿಲ್ಲ.
ಷಡಂಗಾದಿವೇದೋ ಮುಖೇ ಶಾಸ್ತ್ರವಿದ್ಯಾ
ಕವಿತ್ವಾದಿ ಗದ್ಯಂ ಸುಪದ್ಯಂ ಕರೋತಿ ||೩||
ವೇದ, ಶಾಸ್ತ್ರ ಪಾರಂಗತನಾಗಿ ಅನೇಕ ವಿದ್ಯೆಗಳನ್ನು ತಿಳಿದವನಾಗಿದ್ದರೂ ಕೂಡ ಸದ್ಗುರುವಿನ ಚರಣಗಳಲ್ಲಿ ನಿಷ್ಠೆ ಇಡದಿದ್ದರೆ ಮುಕ್ತಿಯಿಲ್ಲ.
ವಿದೇಶೇಷು ಮಾನ್ಯಃ ಸ್ವದೇಶೇಷು ಧನ್ಯಃ
ಸದಾಚಾರವೃತ್ತೇಷು ಮತ್ತೋ ನಾ ಚಾನ್ಯಃ ||೪||
ವಿದೇಶಗಳಲ್ಲಿ ತುಂಬಾ ಹೆಸರು ಮಾಡಿ, ಸ್ವದೇಶದಲ್ಲಿ ಆಚಾರ ಪಾಲಿಸಿ, ಎಲ್ಲರಿಗಿಂತ ಶ್ರೇಷ್ಠ ವ್ಯಕ್ತಿ ಎಂಬ ಹೆಸರು ಪಡೆದಿದ್ದರೂ ಸಹ ಗುರುಚರಣಗಳಲ್ಲಿಭಕ್ತಿ ಇಲ್ಲದವನ ಜೀವನ ನಿರರ್ಥಕ.
ಕ್ಷಮಾಮಂಡಲೇ ಭೂಪಭೂಪಾಲಬೃಂದೈ:
ಸದಾ ಸೇವಿತಂ ಯಸ್ಯ ಪಾದಾರವಿಂದಮ್ ||೫||
ಭೂಮಂಡಲದಲ್ಲಿ ಅನೇಕರಿಂದ ಪಾದ ಪೂಜಿಸಿ ಕೊಳ್ಳುವಂತಹ ವ್ಯಕ್ತಿಯಾಗಿದ್ದರೂ ಕೂಡ ತನ್ನ ಗುರುಗಳ ಪಾದ ಪೂಜಿಸದವನು ಮೇರು ವ್ಯಕ್ತಿತ್ವದವನಾಗಿದ್ದರೂ ವ್ಯರ್ಥವೇ.
ಯಶೋ ಮೇ ಗತಂ ದಿಕ್ಷು ದಾನಪ್ರತಾಪಾತ್
ಜಗದ್ವಸ್ತು ಸರ್ವಂ ಕರೇ ಯತ್ಪ್ರಸಾದಾತ್ ||೬||
ಅನೇಕ ದಾನ ಧರ್ಮಗಳನ್ನುಮಾಡಿ ಇಡೀ ಜಗತ್ತನ್ನೇ ಗೆದ್ದಿರುವೆನೆಂದು ಕೊಂಡಾಗಲೂ ಅವನು ತನ್ನ ಗುರುವಿನ ಅನುಗ್ರಹಕ್ಕೆ ಪಾತ್ರನಾಗದಿದ್ದರೆ ಎಲ್ಲವೂ ತೃಣ ಮಾತ್ರವೇ.
ನ ಭೋಗೇ ನ ಯೋಗೇ ನ ವಾವಾಜಿರಾಜೌ
ನ ಕಾಂತಾಮುಖೇ ನೈವ ವಿತ್ತೇಷು ಚಿತ್ತಮ್||೭||
ಲೌಕಿಕದ ಎಲ್ಲಾ ವ್ಯಾಪಾರಗಳಲ್ಲಿ ಆಸಕ್ತಿ ತೊರೆದಿದ್ದರೂ ಕೂಡ ಆ ವ್ಯಕ್ತಿಯ ಮನಸ್ಸು ಅಚಲವಾಗಿ ಗುರು ಚರಣಗಳಲ್ಲಿ ಶ್ರದ್ಧೆ ಹೊಂದಿರದಿದ್ದರೆ ಅವನ ವೈರಾಗ್ಯ ಉಪಯೋಗವಿಲ್ಲದ್ದು, ಮೋಕ್ಷವನ್ನು ಹೊಂದಲಾರ.
ಅರಣ್ಯೇ ನ ವಾ ಸ್ವಸ್ಯ ಗೇಹೇ ನ ಕಾರ್ಯೇ
ನ ದೇಹೇ ಮನೋ ವರ್ತತೇ ಮೇ ತ್ವನರ್ಘ್ಯೇ ||೮||
ಸಮಸ್ತವನ್ನೂ ತ್ಯಜಿಸಿ, ಅರಣ್ಯದಲ್ಲಿ ವಾಸಿಸಿದರೂ ಕೂಡ, ಗುರುಚರಣಗಳಿಗೆ ಶರಣಾಗತನಾಗದಿದ್ದರೆ ಆತ ಸಂಸಾರ ಬಂಧನದಿಂದ ಮುಕ್ತನಾಗುವುದು ಸುಳ್ಳು.
ಹೀಗೆ ಮೇಲಿನ ಶ್ಲೋಕಗಳಲ್ಲಿ ನಾವು ಬದುಕಿನಲ್ಲಿ ಏನೆಲ್ಲಾ ಸಾಧಿಸಿದ್ದರೂ, ತ್ಯಜಿಸಿದ್ದರೂ, ಗುರುವಿನ ಕರುಣೆ ಯಿಲ್ಲದೆ ಎಲ್ಲವೂ ವ್ಯರ್ಥ ಎಂದು ತಿಳಿಸುತ್ತಾ ಪ್ರತಿಯೊಂದು ಶ್ಲೋಕದ ಕೊನೆಗೂಮನಶ್ಚೇನ್ನ ಲಗ್ನಂ ಗುರೋರಂಘ್ರಿಪದ್ಮೇ | ತತಃ ಕಿಂ ತತಃ ಕಿಂ ತತಃ ಕಿಂ ತತಃ ಕಿಮ್ || ಎಂಬ ಮಾತನ್ನು ಪದೇ ಪದೇ ಪುನಶ್ಚರಣ ಮಾಡುತ್ತಾ ಗುರುವಿನ ಪಾದಗಳಲ್ಲಿ ಮನಸ್ಸನ್ನು ನಿಲ್ಲಿಸದಿದ್ದರೆ ನಮ್ಮ ಸಾಧನೆಕಷ್ಟಸಾಧ್ಯ ಎನ್ನುತ್ತಾ ಗುರುವಿನಮಹತ್ವವನ್ನು ವಿವರಿಸುತ್ತಾರೆ.
ಗುರುವಿಗೆ ಯಾವಾಗಲೂ ಶಿಷ್ಯನ ಉನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.
ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.
ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ:
ಬ್ರಹ್ಮರುದ್ರುಲಕೈನ - ಭಾವಿಂಪ ಶಕ್ಯಮಾ
ಆಧ್ಯಾತ್ಮವಿದ್ಯ ಗುರುಕೀಲು ಮಹಿಮ
ವ್ಯಕ್ತಿಯ ಬೆಳವಣಿಗೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಸಾಧನೆ ಅಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ "ಗುರುಕೀಲು ಮಹಿಮೆ" ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. "ಗುರುಕೀಲು" ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ 'ಮಾತೃಸ್ಥಾನ' ಕೊಟ್ಟಿದ್ದಾರೆ. ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು.ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ. (ಕೃಪೆ: ಅಂತರ್ಜಾಲ)
“ಗುರು”ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಇಂದು ನಮ್ಮ ಭವಿಷ್ಯಕ್ಕಾಗಿ ತಮ್ಮ ಜೀವನ ತೆಯ್ದ ನಮ್ಮ ಗುರುಗಳಿಗೆ ಮತ್ತು ಗುರುಮಾತೆಯರಿಗೆ ಅಕ್ಷರ ನಮನ ಸಲ್ಲಿಸೋಣ. ಸಾಧ್ಯವಾದರೆ ನಮ್ಮ ಗುರುಗಳನ್ನು ಭೇಟಿಯಾಗಿ ಅಥವಾ ಕನಿಷ್ಠ ಪಕ್ಷ ದೂರವಾಣಿ ಮೂಲಕವಾದರೂ ಶುಭಾಶಯಗಳನ್ನು ಕೋರೊಣ. ನಮ್ಮಲ್ಲಿ ಇಂದು ಸಾಕಷ್ಟು ಜನ ಅನೇಕ ಗುರುಗಳು ನಮಗೆ ನೀಡಿದ ಅಕ್ಷರ ಭಿಕ್ಷೆಯಿಂದ ಇಂದು ಅನ್ನ ಕಂಡು ಕೊಂಡಿರುವದರೊಂದಿಗೆ ಸಾಕಷ್ಟು ಸ್ಥಿತಿವಂತರಾಗಿದಿವಿ ನಮ್ಮ ಗುರುಗಳಾರಾದರು ತೊಂದರೆಯಲ್ಲಿರುವುದು ತಿಳಿದರೆ ಕೈಲಾದಷ್ಟು ಸಹಾಯ ಮಾಡೋಣ. ನೆನಪಿಡಿ ನಾವು ಅನುಭವಿಸುತ್ತಿರುವ ಜೀವ ತಂದೆತಾಯಿಯರದು ಆದರೆ ಜೀವನ ನಮ್ಮ ಶಿಕ್ಷಕರದು.

IAS Prelim Exam 2016 (KANNADA) Part-2


51. ಅಟಲ್ ಪಿಂಚಣಿ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಕನಿಷ್ಠ ಖಾತ್ರಿಯ ಪಿಂಚಣಿ ಯೋಜನೆಯಾಗಿದ್ದು, ಅಸಂಘಟಿತ ಕಾರ್ಮಿಕರಿಗೆ ಇರುವ ಯೋಜನೆ.
2. ಕುಟುಂಬದ ಒಬ್ಬ ಸದಸ್ಯ ಮಾತ್ರ ಇದರ ಸದಸ್ಯತ್ವ ಪಡೆಯಬಹುದು.
3. ವಿಮಾಸೌಲಭ್ಯ ಪಡೆದ ವ್ಯಕ್ತಿ ಮೃತಪಟ್ಟ ಬಳಿಕವೂ ಗಂಡ/ ಹೆಂಡತಿಗೆ ಅದೇ ಮೊತ್ತದ ಪಿಂಚಣಿ ಬರುತ್ತದೆ.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಸಿ
52. ಪ್ರಾದೇಶಿಕ ಸಮಗ್ರ ಆರ್ಥಿಕ ಪಾಲುದಾರಿಕೆ ಯಾವ ದೇಶಗಳ ಗುಂಪಿಗೆ ಸಂಬಂಧಿಸಿದ್ದು?
ಎ. ಜಿ-20
ಬಿ. ಏಷಿಯನ್
ಸಿ. ಎಸ್‍ಸಿಓ
ಡಿ. ಸಾರ್ಕ್
ಉ: ಬಿ
53. ಬ್ಯೂರೊ ಆಫ್ ಎನರ್ಜಿ ಎಫೀಶಿಯೆನ್ಸಿ ಸ್ಟಾರ್ ಲೇಬಲ್ ಯಾವುದರ ಮೇಲೆ ಕಂಡುಬರುತ್ತದೆ?
1. ಸೀಲಿಂಗ್ ಫ್ಯಾನ್
2. ಇಲೆಕ್ಟ್ರಿಕ್ ಗೀಸರ್
3. ಟ್ಯೂಬ್ ಆಕಾರದ ಫ್ಲೋರೊಸೆಂಟ್ ದೀಪ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಡಿ
54. ಭಾರತವು ಸಾಂಪ್ರದಾಯಿಕ ಥರ್ಮೋನ್ಯೂಕ್ಲಿಯರ್ ಎಕ್ಸ್‍ಪರಿಮೆಂಟಲ್ ರಿಯಾಕ್ಟರ್‍ನ ಪ್ರಮುಖ ಸದಸ್ಯದೇಶವಾಗಿದೆ. ಈ ಪ್ರಯೋಗ ಯಶಸ್ವಿಯಾದರೆ ಆಗುವ ಲಾಭ ಏನು?
ಎ. ನಾವು ಯುರೇನಿಯಂ ಅನ್ನು ಸಾಂಪ್ರದಾಯಕ ಉಷ್ಣವಿದ್ಯುತ್ ಘಟಕಗಳಲ್ಲಿ ವಿದ್ಯುತ್ ಉತ್ಪಾದನೆ ಬಳಸಬಹುದು.
ಬಿ. ಇದು ಉಪಗ್ರಹ ಪಥದರ್ಶಕದಲ್ಲಿ ಜಾಗತಿಕ ಪಾತ್ರವನ್ನು ನಿರ್ವಹಿಸಬಹುದು.
ಸಿ. ವಿದ್ಯುತ್ ಉತ್ಫಾದನೆಗೆ ರಿಯಾಕ್ಟರ್‍ಗಳ ಕ್ಷಮತೆಯನ್ನು ಗಣನೀಯವಾಗಿ ಹೆಚ್ಚಿಸಬಹುದು.
ಡಿ. ಇದು ಫ್ಯೂಷನ್ ರಿಯಾಕ್ಟರ್‍ಗಳನ್ನು ವಿದ್ಯುತ್ ಉತ್ಪಾದನೆಗೆ ಬಳಸಬಹುದು.
ಉ: ಡಿ
55. ಭಾರತದ ಇತಿಹಾಸದ ಹಿನ್ನೆಲೆಯಲ್ಲಿ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗುತ್ತದೆ?
1. ಎರಿಪರ್ತಿ: ಗ್ರಾಮೀಣ ಬ್ಯಾಂಕ್ ಮುಖ್ಯ ಕಂದಾಯದ ಹೊರತಾಗಿ ಪಡೆಯುವ ಭೂಕಂದಾಯ.
2. ತನಿಯೂರ: ಬ್ರಾಹ್ಮಣ ಅಥವಾ ಬ್ರಾಹ್ಮಣ ಸಮುದಾಯಕ್ಕೆ ದಾನ ಮಾಡಲ್ಪಟ್ಟ ಗ್ರಾಮ
3. ಘತಿಕಾ: ದೇವಾಲಯಕ್ಕೆ ಸಂಬಂಧಿಸಿದ ಕಾಲೇಜುಗಳು
ಎ. 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1 ಮತ್ತು 3
ಉ: ಡಿ
56. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಅಂತರರಾಷ್ಟ್ರೀಯ ಸೌರ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನದಲ್ಲಿ 2015ರಲ್ಲಿ ಆರಂಭಿಸಲಾಯಿತು.
2. ಈ ಮೈತ್ರಿಕೂಟವನ್ನು ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಆರಂಭಿಸಿವೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
57. ಯುರೋಪಿಯನ್ ಸ್ಟೆಬಿಲಿಟಿ ಮೆಕ್ಯಾನಿಸಂ ಎಂದರೇನು?
ಎ. ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆಯಾಗಿದ್ದು, ಲಕ್ಷಾಂತರ ಮಂದಿಯ ವಲಸೆಯನ್ನು ನಿರ್ವಹಿಸುವುದು ಇದರ ಹೊಣೆ.
ಬಿ. ಯೂರೋಪಿಯನ್ ದೇಶಗಳ ಹಣಕಾಸು ಸುಸ್ಥಿರತೆ ಕಾಪಾಡಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಸಿ. ದ್ವಿಪಕ್ಷೀಯ ಹಾಗೂ ಬಹುಪಕ್ಷೀಯ ವ್ಯಾಪಾರ ಒಪ್ಪಂದ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಡಿ. ಸದಸ್ಯದೇಶಗಳ ಸಂಘರ್ಷ ನಿರ್ವಹಿಸಲು ಯೂರೋಪಿಯನ್ ಒಕ್ಕೂಟದಿಂದ ಆರಂಭಿಸಲ್ಪಟ್ಟ ಸಂಸ್ಥೆ.
ಉ: ಬಿ
58. ತುಂತುರು ನೀರಾವರಿಯ ಪ್ರಯೋಜನಕ್ಕೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿ?
1. ಕಳೆಗಳು ಕಡಿಮೆಯಾಗುತ್ತವೆ.
2. ಮಣ್ಣು ಜವಳಾಗುವುದು ಕಡಿಮೆಯಾಗುತ್ತದೆ.
3. ಮಣ್ಣಿನ ಸವಕಳಿ ಕಡಿಮೆಯಾಗುತ್ತದೆ.
ಎ. 1 ಮತ್ತು 2 ಮಾತ್ರ
ಬಿ. 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. ಯಾವುದೂ ಅಲ್ಲ
ಉ: ಸಿ
59. ರೆಜಿಸ್ಟರಿಂಗ್ ಡಿಜಿಟಲ್ ಲಾಕರ್ಸ್ ಎನ್ನುವುದಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1 ಡಿಜಿಟಲ್ ಇಂಡಿಯಾ ಯೋಜನೆಯಡಿ ಕೇಂದ್ರ ಸರ್ಕಾರ ನೀಡುವ ಡಿಜಿಟಲ್ ಲಾಕರ್ ವ್ಯವಸ್ಥೆ
2. ಯಾವುದೇ ಪ್ರದೇಶದಿಂದಲಾದರೂ ಇದರ ಮೂಲಕ ನೀವು ಇ– ದಾಖಲೆಗಳನ್ನು ನಿರ್ವಹಿಸಬಹುದು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ.
ಉ: ಸಿ
60. ಇತ್ತೀಚೆಗೆ ಈ ಕೆಳಗಿನ ಯಾವ ನದಿಗಳನ್ನು ಜೋಡಿಸಲಾಗಿದೆ?
ಎ. ಕಾವೇರಿ ಹಾಗೂ ತುಂಗಭದ್ರಾ
ಬಿ. ಗೋದಾವರಿ ಹಾಗೂ ಕೃಷ್ಣಾ
ಸಿ. ಮಹಾನದಿ ಹಾಗೂ ಸೋನೆ
ಡಿ. ನರ್ಮದಾ ಮತ್ತು ತಪತಿ
ಉ: ಬಿ


61. ದೇಶದ ನಗರಗಳಲ್ಲಿ ವಾಯು ಗುಣಮಟ್ಟವನ್ನು ಅಳೆಯಲು ಯಾವ ಅನಿಲವನ್ನು ಪರಿಗಣಿಸಲಾಗುತ್ತದೆ?
1. ಇಂಗಾಲದ ಡೈ ಆಕ್ಸೈಡ್
2. ಇಂಗಾಲದ ಮೋನೋಕ್ಸೈಡ್
3. ಸಾರಜನಕದ ಡೈ ಆಕ್ಸೈಡ್
4. ಗಂಧಕದ ಡೈ ಆಕ್ಸೈಡ್
5. ಮಿಥೇನ್
ಎ. 1, 2 ಮತ್ತು 3
ಬಿ. 2, 3 ಮತ್ತು 4
ಸಿ. 1, 4 ಮತ್ತು 5
ಡಿ. ಮೇಲ್ಕಂಡ ಎಲ್ಲವೂ
ಉ: ಬಿ
62. ಆಸ್ಟ್ರೋ ನಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಅಮೆರಿಕ ಹಾಗೂ ರಷ್ಯಾ ಹೊರತುಪಡಿಸಿದರೆ ಭಾರತ ಮಾತ್ರ ಅಂಥ ವೀಕ್ಷಣಾ ನೌಕೆಯನ್ನು ಬಾಹ್ಯಾಕಾಶಕ್ಕೆ ಕಳುಹಿಸಿದೆ.
2. ಇದು 2000 ಕೆ.ಜಿ. ತೂಕದ ಉಪಗ್ರಹವಾಗಿದದ್ದು, ಭೂಮಿಯ ಮೇಲ್ಮೈನಿಂದ 1050 ಕಿಲೋಮೀಟರ್ ಎತ್ತರದಲ್ಲಿ ಕಕ್ಷೆಯಲ್ಲಿ ಅಳವಡಿಸಲಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2′
ಡಿ. ಯಾವುದೂ ಅಲ್ಲ
ಉ: ಎ
63. ಮಧ್ಯಕಾಲೀನ ಭಾರತದ ಆರ್ಥಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಅರಘಟ್ಟ ಎಂದರೇನು?
ಎ. ಜೀತ ಕಾರ್ಮಿಕ
ಬಿ. ಸೇನಾ ಅಧಿಕಾರಿಗಳಿಗೆ ಮಂಜೂರಾದ ಭೂಮಿ
ಸಿ. ನೀರಾವರಿಗೆ ಬಳಸುತ್ತಿದ್ದ ಚಕ್ರ
ಡಿ. ಕೃಷಿಗೆ ಪರಿವರ್ತನೆಯಾದ ಬಂಬರು ಭೂಮಿ
ಉ: ಸಿ
64. ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದ, ರಾಜಮನೆತನದ ಇತಿಹಾಸಕಾರರು, ಪುರಾಣಕಥೆ ವೃತ್ತಿಯವರು ಯಾರು?
ಎ. ಶ್ರಾಮಣ
ಬಿ. ಪರಿವ್ರಾಜಕ
ಸಿ. ಅಗ್ರಹಾರಿಕ
ಡಿ. ಮಾಗಧ
ಉ: ಡಿ

65, ಇತ್ತೀಚೆಗೆ ಯಾವ ರಾಜ್ಯ ನಿರ್ದಿಷ್ಟ ಚಿಟ್ಟೆಯನ್ನು ರಾಜ್ಯದ ಚಿಟ್ಟೆ ಎಂದು ಘೋಷಿಸಿದೆ?
ಎ. ಅರುಣಾಚಲಪ್ರದೇಶ
ಬಿ. ಹಿಮಾಚಲ ಪ್ರದೇಶ
ಸಿ. ಕರ್ನಾಟಕ
ಡಿ. ಮಹಾರಾಷ್ಟ್ರ
ಉ: ಡಿ
66. ಇಸ್ರೋ ಉಡಾಯಿಸಿದ ಮಂಗಳಯಾನಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಇದನ್ನು ಮಾರ್ಸ್ ಆರ್ಬಿಟರ್ ಮಿಷಿನ್ ಎಂದೂ ಕರೆಯಲಾಗುತ್ತದೆ.
2. ಈ ಮೂಲಕ ಅಮೆರಿಕ ನಂತರ ಭಾರತ ಮಂಗಳಯಾನ ಕೈಗೊಂಡ ಎರಡನೇ ದೇಶ.
3. ಮೊದಲ ಪ್ರಯತ್ನದಲ್ಲೇ ಮಂಗಳಯಾನ ಯಶಸ್ವಿಯಾದ ಮೊದಲ ದೇಶ ಭಾರತ
ಎ. ಕೇವಲ 1
ಬಿ. 2 ಮತ್ತು 3
ಸಿ. 1 ಮತ್ತು 3
ಡಿ. 1,2 ಮತ್ತು 3
ಉ: ಸಿ
67. ಭಾರತ ರಾಷ್ಟ್ರೀಯ ಕಾಂಗ್ರೆಸ್ 1907ರಲ್ಲಿ ವಿಭಜನೆಯಾಗಲು ಮುಖ್ಯ ಕಾರಣ ಏನು?
ಎ. ಲಾರ್ಡ್ ಮಿಂಟೊ ಭಾರತದ ರಾಜಕೀಯದಲ್ಲಿ ಕೋಮುವಾದ ಆರಂಭಿಸಿದ್ದು
ಬಿ. ಮಂದಗಾಮಿಗಳ ವಿಧಾನಗಳ ಬಗ್ಗೆ ತೀವ್ರವಾದಿಗಳಿಗೆ ಅಸಮಾಧಾನ
ಸಿ. ಮುಸ್ಲಿಂ ಲೀಗ್‍ನ ಹುಟ್ಟು
ಡಿ. ಅರವಿಂದೋ ಘೋಷ್ ಅವರು ಐಎನ್‍ಸಿ ಅಧ್ಯಕ್ಷರಾಗಿ ಆಯ್ಕೆಯಾದದ್ದು
ಉ: ಬಿ
68. ಎರಡನೇ ಮಹಾಯುದ್ಧದ ಬಳಿಕ ಸರ್ ಸ್ಟಫರ್ಡ್ ಕ್ರಿಪ್ಲರ್‍ನ ಯೋಜನೆಗಳು ಹೇಗೆ ರೂಪುಗೊಂಡವು?
ಎ. ಭಾರತಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡಬೇಕು.
ಬಿ. ಸ್ವಾತಂತ್ರ್ಯ ನೀಡುವ ಮುನ್ನ ಭಾರತವನ್ನು ವಿಭಜಿಸಬೇಕು
ಸಿ. ಕಾಮನ್ವೆಲ್ತ್ ಸೇರುವ ಷರತ್ತಿನ ಅನ್ವಯ ಸ್ವಾತಂತ್ರ್ಯ ನೀಡಬೇಕು
ಡಿ. ಅರೆ ಸ್ವತಂತ್ರ್ಯ ದೇಶವಾಗಿ ಭಾರತ ರೂಪುಗೊಳ್ಳಬೇಕು.
ಉ: ಡಿ
69. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಬುದ್ಧಗಯಾ: ಭಗೇಲ್‍ಖಂಡ
2. ಖುಜರಾಹೊ: ಬುಂಡೇಲ್‍ಖಂಢ
3. ಶಿರಡಿ: ವಿದರ್ಭ
4. ನಾಶಿಕ್: ಮಾಳವ
5. ತಿರುಪತಿ: ರಾಯಲ್‍ಸೀಮಾ
ಎ. ಕೇವಲ 1, 2 ಮತ್ತು 4
ಬಿ. 2, 3, 4 ಮತ್ತು 5
ಸಿ. 2 ಮತ್ತು 5
ಡಿ. 1,3,4 ಮತ್ತು 5
ಉ: ಸಿ
70. ದೇಶದ ಹಿತಾಸಕ್ತಿಯಿಂದ ಯಾವುದೇ ರಾಜ್ಯ ವಿಷಯಗಳ ಶಾಸನ ರೂಪಿಸಲು ಸಂಸತ್ತಿಗೆ ಅಧಿಕಾರ ನೀಡಲು ಈ ಕೆಳಗಿನ ಯಾವ ನಿರ್ಣಯ ಅಗತ್ಯವಾಗುತ್ತದೆ?
ಎ. ಲೋಕಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಬಿ. ಲೋಕಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಸಿ. ರಾಜ್ಯಸಭೆಯಲ್ಲಿ ಸರಳ ಬಹುಮತದಿಂದ ಕೈಗೊಂಡ ನಿರ್ಣಯ
ಡಿ. ರಾಜ್ಯಸಭೆಯಲ್ಲಿ ಮೂರನೇ ಎರಡು ಬಹುಮತದಿಂದ ಕೈಗೊಂಡ ನಿರ್ಣಯ
ಉ: ಡಿ
71. ಇತ್ತೀಚೆಗೆ ಯಾವ ರಾಜ್ಯ ಕೃತಕ ಒಳನಾಡು ಬಂದರನ್ನು ಉದ್ದ ಕಾಲುವೆ ಮೂಲಕ ಸಮುದ್ರಕ್ಕೆ ಸಂಪರ್ಕಿಸಿದೆ?
ಎ. ಆಂಧ್ರಪ್ರದೇಶ
ಬಿ. ಛತ್ತೀಸ್‍ಗಢ
ಸಿ. ಕರ್ನಾಟಕ
ಡಿ. ರಾಜಸ್ಥಾನ
ಉ: ಡಿ
72. ಪ್ಯಾರೀಸ್‍ನಲ್ಲಿ 2015ರಲ್ಲಿ ನಡೆದ ಯುಎನ್‍ಎಫ್‍ಸಿಸಿಸಿ ಸಭೆಯ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಈ ಒಪ್ಪಂದಕ್ಕೆ ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳು ಸಹಿ ಮಾಡಿದ್ದು 2017ರಲ್ಲಿ ಇದು ಜಾರಿಗೆ ಬರಲಿದೆ.
2. ಇದು ಹಸಿರುಮನೆ ಪರಿಣಾಮ ನಿಯಂತ್ರಿಸಲು ಮಾಡಿಕೊಂಡ ಒಪ್ಪಂದವಾಗಿದೆ.
3. ಜಾಗತಿಕ ತಾಪಮಾನದಲ್ಲಿ ಅಭಿವೃದ್ಧಿಹೊಂದಿದ ದೇಶಗಳು ತಮ್ಮ ಹೊಣೆಗಾರಿಕೆಯನ್ನು ಅರಿತುಕೊಂಡು 1000 ಶತಕೋಟಿ ಡಾಲರ್ ವಾರ್ಷಿಕ ನೆರವು ನೀಡುತ್ತವೆ.
ಎ. ಕೇವಲ 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2 ಮತ್ತು 3
ಉ: ಬಿ
73. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಸುಸ್ಥಿರ ಅಭಿವೃದ್ಧಿ ಗುರಿಯನ್ನು 1972ರಲ್ಲಿ ಮೊಟ್ಟಮೊದಲ ಬಾರಿಗೆ ಕ್ಲಬ್ ಆಫ್ ರೋಮ್ ಮುಂದಿಟ್ಟಿತು.
2. ಸುಸ್ಥಿರ ಅಭಿವೃದ್ಧಿ ಗುರಿಯನ್ನು 2030ರೊಳಗೆ ತಲುಪಬೇಕು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
74. ಇತ್ತೀಚೆಗೆ ಬಿಡುಗಡೆಯಾದ ದ ಮ್ಯಾನ್ ಹೂ ನೋಸ್ ಇನ್‍ಫಿನಿಟಿ ಯಾರಿಗೆ ಸಂಬಂಧಿಸಿದ ಚಿತ್ರ?
ಎ. ಎಸ್,ರಾಮಾನುಜಂ
ಬಿ. ಎಸ್.ಚಂದ್ರಶೇಖರ್
ಸಿ. ಎಸ್.ಎನ್.ಬೋಸ್
ಡಿ. ಸಿ.ವಿ.ರಾಮನ್
ಉ: ಎ
75. ಕೆಳಗಿನ ಸರಿ ಹೇಳಿಕೆ ಗುರುತಿಸಿ.
1. ಪಂಚಾಯ್ತಿ ಸದಸ್ಯರಾಗಲು ಕನಿಷ್ಠ ವಯಸ್ಸು 25
2. ಅವಧಿಪೂರ್ವ ವಿಜರ್ಸನೆಯಾದ ಪಂಚಾಯ್ತಿಯನ್ನು ಪುನರ್ ರೂಪಿಸಿದಾಗ ಉಳಿದ ಅವಧಿಗೆ ಮಾತ್ರ ಸೀಮಿತವಾಗಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. 1 ಅಥವಾ 2
ಉ:ಬಿ


76. ಈ ಕೆಳಗಿನ ಯಾವ ಹೇಳಿಕೆ ಸರಿ?
1. ಲೋಕಸಭೆ ಅವಧಿ ಮುಕ್ತಾಯದ ವೇಳೆಗೆ ಅಲ್ಲಿ ಬಾಕಿ ಇದ್ದ ಮಸೂದೆ ಅನೂರ್ಜಿತಗೊಳ್ಳುತ್ತದೆ.
2. ಲೋಕಸಭೆಯಲ್ಲಿ ಆಂಗೀಕಾರವಾದ ಮಸೂದೆ ರಾಜ್ಯಸಭೆಯಲ್ಲಿ ಬಾಕಿ ಇದ್ದರೆ, ಲೋಕಸಭೆ ವಿಸರ್ಜನೆ ಬಳಿಕವೂ ಊರ್ಜಿತದಲ್ಲಿರುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
77. ಜಾಗತಿಕ ಹಸಿವು ಸೂಚ್ಯಂಕ ವರದಿ ಸಿದ್ಧಪಡಿಸಲು ಯಾವ ಐಎಫ್‍ಪಿಆರ್‍ಐ ಬಳಸಲಾಗುತ್ತದೆ?
1. ನಿರುದ್ಯೋಗ
2. ಮಕ್ಕಳ ಕುಬ್ಜತೆ
3. ಮಕ್ಕಳ ಸಾವು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1, 2 ಮತ್ತು 3
ಡಿ. 1 ಮತ್ತು 2
ಉ: ಸಿ
78. ವಿತ್ತೀಯ ಕೊರತೆ ಕಡಿಮೆ ಮಾಡಲು ಸರ್ಕಾರ ಈ ಕೆಳಗಿನ ಯಾವ ಕ್ರಮ ಕೈಗೊಳ್ಳಬಹುದು?
1. ಸರ್ಕಾರಿ ವೆಚ್ಚ ಕಡಿತ
2. ಹೊಸ ಕಲ್ಯಾಣ ಯೋಜನೆ ಆರಂಭ
3. ಸಬ್ಸಿಡಿಗಳನ್ನು ತಾರ್ಕಿಕಗೊಳಿಸುವುದು
4. ಆಮದು ಸುಂಕ ಕಡಿತ ಮಾಡುವುದು
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2 ಮತ್ತು 3
ಉ: ಸಿ
79. ಪೇಮೆಂಟ್ ಬ್ಯಾಂಕುಗಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಭಾರತೀಯ ಮೂಲದ ಮೊಬೈಲ್ ಕಂಪನಿಗಳು ಪೇಮೆಂಟ್ ಬ್ಯಾಂಕ್ ಪವರ್ತಕರಾಗಬಹುದು.
2. ಪೇಮೆಂಟ್‍ಬ್ಯಾಂಕ್ ಕ್ರೆಡಿಟ್ ಹಾಗೂ ಡೆಬಿಟ್ ಕಾರ್ಡ್ ಬಿಡುಗಡೆ ಮಾಡಬಹುದು.
3. ಪೇಮೆಂಟ್ ಬ್ಯಾಂಕ್ ಸಾಲ ಚಟುವಟಿಕೆ ಕೈಗೊಳ್ಳುವಂತಿಲ್ಲ
ಎ. ಕೇವಲ 1 ಮತ್ತು 2
ಬಿ. 1 ಮತ್ತು 3 ಮಾತ್ರ
ಸಿ. 2 ಮಾತ್ರ
ಡಿ. 1,2 ಮತ್ತು 3
ಉ: ಬಿ
80. ಲೈ ಫೈಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಯಾವುದು?
1. ಇದು ಹೈಸ್ಪೀಡ್ ಡಾಟಾ ವರ್ಗಾವಣೆಗೆ ಬೆಳಕನ್ನು ಮಾಧ್ಯಮವಾಗಿ ಬಳಸಿಕೊಳ್ಳುತ್ತದೆ.
2. ಇದು ನಿಸ್ತಂತು ತಂತ್ರಜ್ಞಾಣವಾಗಿದ್ದು, ವೈ ಫೈ ಗಿಂತ ಹೆಚ್ಚು ವೇಗ ಹೊಂದಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
81. ಇಂಟೆಂಡೆಡ್ ನ್ಯಾಷನಲಿ ಡಿಟರ್ಮೈನ್ಡ್ ಕಾಂಟ್ರಿಬ್ಯೂಷನ್ಸ್ ಎನ್ನುವುದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಯುದ್ಧಪೀಡಿತ ಮಧ್ಯಪ್ರಾಚ್ಯ ದೇಶಗಳ ನಿರಾಶ್ರಿತರ ಪುನರ್ವಸತಿಗೆ ಯೂರೋಪಿಯನ್ ದೇಶಗಳು ಕೈಗೊಂಡ ಪ್ರತಿಜ್ಞೆ
ಬಿ. ಹವಾಮಾನ ಬದಲಾವಣೆ ತಡೆಗೆ ವಿಶ್ವದ ದೇಶಗಳ ಕೈಗೊಂಡ ಕ್ರಿಯಾಯೋಜನೆ
ಸಿ. ಏಷ್ಯನ್ ಹೂಡಿಕೆ ಬ್ಯಾಂಕಿನ ಸ್ಥಾಪನೆಗೆ ಸದಸ್ಯದೇಶಗಳ ಬಂಡವಾಳ ದೇಣಿಗೆ
ಡಿ. ಸುಸ್ಥಿರ ಅಭಿವೃದ್ಧಿ ಸಾಧನೆಗೆ ವಿಶ್ವದ ದೇಶಗಳು ರೂಪಿಸಿದ ಕ್ರಿಯಾಯೋಜನೆ
ಉ: ಬಿ
82. ಉದಯ್ ಯೋಜನೆಯ ಉದ್ದೇಶ ಏನು?
ಎ. ಸ್ಟಾರ್ಟ್ ಅಪ್ ಪುನರ್‍ಬಳಕೆ ಮೂಲದ ವಿದ್ಯುತ್ ಕಂಪನಿಗಳುಗೆ ಹಣಕಾಸು ಹಾಗೂ ತಾಂತ್ರಿಕ ನೆರವು ನೀಡುವುದು.
ಬಿ. 2018ರೊಳಗೆ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವುದು.
ಸಿ. ಕಲ್ಲಿದ್ದಲು ಆಧರಿತ ವಿದ್ಯುತ್ ಘಟಕಗಳ ಬದಲು £ನೈಸರ್ಗಿಕ ಅನಿಲ ಆಧರಿತ ವಿದ್ಯುತ್ ಘಟಕ ಸ್ಥಾಪನೆ
ಡಿ. ವಿದ್ಯುತ್ ವಿತರಣಾ ಕಂಪನಿಗಳ ಪುನರುಜ್ಜೀವನಕ್ಕೆ ಆರ್ಥಿಕ ನೆರವು ನೀಡುವುದು.
ಉ: ಡಿ
83. ಐಎಫ್‍ಸಿ ಮಸಾಲಾ ಬಾಂಡ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಅಂತರರಾಷ್ಟ್ರೀಯ ಹಣಕಾಸು ಸಂಸ್ಥೆಯು ಈ ಬಾಂಡ್ ಬಿಡುಗಡೆ ಮಾಡಿದೆ.
2. ಇದು ರೂಪಾಯಿ ಪ್ರಾಬಲ್ಯದ ಬಾಂಡ್‍ಗಳಾಗಿದ್ದು, ಸಾರ್ವಜನಿಕ ಹಾಗೂ ಖಾಸಗಿ ವಲಯದ ಉದ್ದಿಮೆಗಳಿಗೆ ಸಾಲ ಕ್ರೋಢೀಕರಿಸುವ ಸಾಧನ
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
84. ವಿಜಯನಗರದ ಅರಸ ಕೃಷ್ಣದೇವನ ತೆರಿಗೆ ಪದ್ಧತಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಭೂಮಿಯ ಮೇಲಿನ ತೆರಿಗೆ ದರ ಭೂಮಿಯ ಗುಣಮಟ್ಟವನ್ನು ಅವಲಂಬಿಸಿರುತ್ತದೆ.
2. ಖಾಸಗಿ ಕಾರ್ಯಾಗಾರಗಳು ಕೈಗಾರಿಕಾ ತೆರಿಗೆ ನೀಡಬೇಕು.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
85. ಸುಂಗ ರಾಜಮನೆತನದ ಪ್ರೇಮಕಥೆಯನ್ನು ಒಳಗೊಂಡ ಪ್ರಾಚೀನ ಭಾರತದ ಕೃತಿ ಯಾವುದು?
ಎ. ಸ್ವಪ್ನವಾಸವದತ್ತ
ಬಿ. ಮಾಳವಿಕಾಗ್ನಿಮಿತ್ರ
ಸಿ. ಮೇಘದೂತ
ಡಿ. ರತ್ನಾವತಿ
ಉ: ಬಿ
86. ಅಂಬೆರ್ ಬಾಕ್ಸ್, ಬ್ಲೂ ಬಾಕ್ಸ್, ಹಾಗೂ ಗ್ರೀನ್ ಬಾಕ್ಸ್ ಯಾವುದಕ್ಕೆ ಸಂಬಂಧಿಸಿದ್ದು?
ಎ. ವಿಶ್ವ ವ್ಯಾಪಾರ ಸಂಸ್ಥೆ ವಹಿವಾಟು
ಬಿ. ಸಾಕ್ ವಹಿವಾಟು
ಸಿ. ಯುಎನ್‍ಎಫ್‍ಸಿಸಿಸಿ ವಹಿವಾಟು
ಡಿ. ಭಾರತ– ಯೂರೋಪಿಯನ್ ಯೂನಿಯನ್ ಒಪ್ಪಂದ
ಉ: ಎ
87. ಸರ್ಕಾರದ ಹೂಡಿಕೆ ಬಜೆಟ್‍ಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ರಸ್ತೆ, ಕಟ್ಟಡ ಹಾಗೂ ಯಂತ್ರೋಪಕರಣ ಸ್ವಾಧೀನದ ಮೇಲಿನ ಖರ್ಚು ಇತ್ಯಾದಿ.
2. ವಿದೇಶಿ ಸರ್ಕಾರಗಳಿಂದ ಪಡೆದ ಸಾಲ
3. ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ನೀಡಿದ ಸಾಲ ವಿವರ
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಡಿ
88. ವಿಶ್ವಸಂಸ್ಥೆಯ ಡಿಸರ್ಟಿಫಿಕೇಶನ್ ಒಪ್ಪಂದದ ಮಹತ್ವ ಏನು?
1. ಪರಿಣಾಮಕಾರಿ ಕ್ರಿಯಾಯೋಜನೆಯನ್ನು ಉತ್ತೇಜಿಸುವ ರಾಷ್ಟ್ರೀಯ ಯೋಜನೆ ಮತ್ತು ಬೆಂಬಲಾತ್ಮಕ ಅಂತರರಾಷ್ಟ್ರೀಯ ಪಾಲುದಾರಿಕೆ
2. ಇದು ದಕ್ಷಿಣ ಏಷ್ಯಾ ಹಾಗೂ ಉತ್ತರ ಆಫ್ರಿಕಾ ಪ್ರದೇಶಗಳ ಮೇಲೆ ಗುರಿ ಇಟ್ಟುಕೊಂಡಿದ್ದು, ಈ ಭಾಗಕ್ಕೆ ದೊಡ್ಡ ಮೊತ್ತದ ಹಣಕಾಸು ನೆರವು ನೀಡುವುದು.
3. ಡಿಸರ್ಟಿಫಿಕೇಶನ್ ವಿರುದ್ಧ ಸ್ಥಳೀಯರ ಹೋರಾಟಕ್ಕೆ ಬೆಂಬಲ ನೀಡುವುದು.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಸಿ
89. ಇತ್ತೀಚೆಗೆ ಐಎಂಎಫ್‍ನ ಎಸ್‍ಡಿಆರ್ ಬಾಸ್ಕೆಟ್‍ಗೆ ಸೇರಿಸಲು ಯಾವ ಕರೆನ್ಸಿಯನ್ನು ಪರಿಗಣಿಸಲಾಗಿದೆ?
ಎ. ರೂಬೆಲ್
ಬಿ. ರೆಂಡ್
ಸಿ. ಭಾರತೀಯ ರೂಪಾಯಿ
ಡಿ. ರೊಮಿಂಬಿ
ಉ: ಡಿ
90. ಅಂತರರಾಷ್ಟ್ರೀಯ ವಿತ್ತೀಯ ಹಾಗೂ ಹಣಕಾಸು ಸಮಿತಿಗೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ಐಎಂಎಫ್‍ಸಿ ಜಾಗತಿಕ ಆರ್ಥಿಕತೆಯ ವಿಷಯಗಳನ್ನು ಚರ್ಚಿಸುತ್ತದೆ ಮತ್ತು ಈ ಸಂಬಂಧ ಐಎಂಎಫ್‍ಗೆ ಸಲಹೆ ಮಾಡುತ್ತದೆ.
2. ಐಎಂಎಫ್‍ಸಿ ಸಭೆಗಳಲ್ಲಿ ವಿಶ್ವಬ್ಯಾಂಕ್ ವೀಕ್ಷಕನಾಗಿ ಭಾಗವಹಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ


91. ರಾಷ್ಟ್ರೀಯ ಗೃಹ ಅಭಿಯಾನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನಿರ್ವಸತಿಗರಿಗೆ ಪುನರ್ವಸತಿ ಕಲ್ಪಿಸುವುದು.
ಬಿ. ಲೈಂಗಿಕ ಕಾರ್ಯಕರ್ತರನ್ನು ವಿಮುಕ್ತಿಗೊಳಿಸಿ ಪರ್ಯಾಯ ಜೀವನಾಧಾರ ಕಲ್ಪಿಸುವುದು.
ಸಿ. ಜಾಡಮಾಲಿ ಪದ್ಧತಿ ನಿರ್ಮೂಲನೆ
ಡಿ. ಜೀತ ಕಾರ್ಮಿಕರನ್ನು ಬಂಧಮುಕ್ತಿಗೊಳಿಸುವುದು.
ಉ: ಸಿ
92. ಮಧ್ಯಕಾಲೀನ ಭಾರತದ ಸಾಂಸ್ಕøತಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಯಾವ ಹೇಳಿಕೆ ಸರಿ?
1. ತಮಿಳು ಪ್ರದೇಶದ ಸಿದ್ಧರು ಮೂರ್ತಿಪೂಜೆ ಖಂಡಿಸಿದ್ದರು.
2. ಕರ್ನಾಟಕದ ಲಿಂಗಾಯತರು ಪುನರ್ಜನ್ಮ ಸಿದ್ಧಾಂತ ಪ್ರಶ್ನಿಸಿದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉಡಿ
93. ಸುದ್ದಿಗಳಲ್ಲಿ ಕಾಣಿಸಿಕೊಳ್ಳುವ ಆಮದು ಸುರಕ್ಷೆ ಎಂಬ ಪದ ಯಾವುದಕ್ಕೆ ಸೂಕ್ತವಾಗಿದೆ?
ಎ. ಜಿಡಿಪಿಮತ್ತು ಆಮದು ನಡುವಿನ ಅನುಪಾತ
ಬಿ. ಒಂದು ವರ್ಷದಲ್ಲಿ ದೇಶದ ಒಟ್ಟು ಆಮದು ಮೌಲ್ಯ
ಸಿ. ಎರಡು ದೇಶಗಳ ನಡುವಿನ ರಫ್ತು ಹಾಗೂ ಆಮದು ಮೌಲ್ಯದ ಅನುಪಾತ
ಡಿ. ದೇಶದ ಅಂತರರಾಷ್ಟ್ರೀಯ ದಾಸ್ತಾನಿನಿಂದ ಎಷ್ಟು ತಿಂಗಳು ಆಮದಿಗೆ ಪಾವತಿ ಮಾಡಬಹುದು ಎಂಬ ಅಂದಾಜು.
ಉ: ಡಿ
94. ಈ ಕೆಳಗಿನ ಜೋಡಿಯಲ್ಲಿ ಯಾವುದು ಸರಿಯಾಗಿ ಹೊಂದಾಣಿಕೆಯಾಗಿದೆ?
1. ಕುರ್ದ್: ಬಾಂಗ್ಲಾದೇಶ
2. ಮಧೇಲ್: ನೇಪಾಳ
3. ರೊಹಿಂಗ್ಯಾ: ಮ್ಯಾನ್ಮಾರ್
ಎ. 1 ಮತ್ತು 2 ಮಾತ್ರ
ಬಿ. 2 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 3 ಮಾತ್ರ
ಉ: ಸಿ
95. ರಾಸಾಯನಿಕ ಅಸ್ತ್ರ ತಡೆ ಸಂಘಟನೆಗೆ ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಇದು ನ್ಯಾಟೊ ಹಾಗೂ ವಿಶ್ವ ಆರೋಗ್ಯ ಸಂಸ್ಥೆಯ ಜತೆ ಕಾರ್ಯನಿರ್ವಹಿಸುವ ಯೂರೋಪಿಯನ್ ಒಕ್ಕೂಟದ ಒಂದು ಸಂಸ್ಥೆ.
2. ಇದು ಹೊಸ ರಾಸಾಯನಿಕ ಅಸ್ತ್ರಗಳ ತಡೆಯ ಉದ್ದೇಶ ಹೊಂದಿದೆ.
3. ಇದು ದೇಶಗಳಿಗೆ ರಾಸಾಯನಿಕ ಅಸ್ತ್ರಗಳ ಅಪಾಯದಿಂದ ಸುರಕ್ಷೆ ನೀಡುತ್ತದೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಬಿ
96. ಪ್ರಧಾನ ಮಂತ್ರಿ ಫಸಲು ವಿಮಾ ಯೋಜನೆಗೆ ಸಂಬಂಧಿಸಿದಂತೆ ಸರಿ ಹೇಳಿಕೆ ಗುರುತಿಸಿ.
1. ಈ ಯೋಜನೆಯಡಿ ರೈತರು ಯಾವುದೇ ಹಂಗಾಮಿನಲ್ಲಿ ಯಾವುದೇ ಬೆಳೆ ಬೆಳೆದರೂ ಸಮಾನ ವಿಮಾಕಂತು ನೀಡಬೇಕಾಗುತ್ತದೆ.
2. ಈ ಯೋಜನೆಯು ಕೊಯ್ಲೋತ್ತರ ಅಪಾಯಗಳಿಗೂ ಸುರಕ್ಷೆ ಒದಗಿಸುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
97. ಗ್ರೇಟ್ ಇಂಡಿಯನ್ ಹಾರ್ನ್‍ಬಿಲ್ ಭಾರತದ ಯಾವ ಭಾಗದಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ?
ಎ. ಉತ್ತರ ಭಾರತದ ಸಿಂಧ್ ಪ್ರಾಂತ್ಯ
ಬಿ. ಹಿಮಾಲಯದ ಎತ್ತರ ಪ್ರದೇಶ
ಸಿ. ಪಶ್ಚಿಮ ಗುಜರಾತ್
ಡಿ. ಪಶ್ಚಿಮ ಘಟ್ಟ
ಉ: ಡಿ
98. ರಾಷ್ಟ್ರೀಯ ಗಂಗಾ ನದಿ ಪಾತ್ರ ಪ್ರಾಧಿಕಾರದ ಪ್ರಮುಖ ಲಕ್ಷಣ ಯಾವುದು?
1. ನದಿಪಾತ್ರವು ಯೋಜನೆ ಹಾಗೂ ನಿರ್ವಹಣೆಯ ಮೂಲ ಘಟಕ
2. ಇದು ರಾಷ್ಟ್ರಮಟ್ಟದಲ್ಲಿ ನದಿ ಸಂರಕ್ಷಣೆ ಪ್ರಯತ್ನವನ್ನು ಹೆಚ್ಚಿಸುತ್ತದೆ.
3. ಗಂಗಾನದಿ ಹರಿಯುವ ಒಂದು ರಾಜ್ಯದ ಮುಖ್ಯಮಂತ್ರಿ ಇದರ ಅಧ್ಯಕ್ಷರಾಗುತ್ತಾರೆ.
ಎ. 1 ಮತ್ತು 2 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3 ಮಾತ್ರ
ಡಿ. 1, 2 ಮತ್ತು 3
ಉ: ಎ
99. ಕೃಷಿಕ್ಷೇತ್ರದಲ್ಲಿ ಬೇವು ಲೇಪಿತ ಯೂರಿಯಾವನ್ನು ಭಾರತ ಸರ್ಕಾರ ಏಕೆ ಉತ್ತೇಜಿಸುತ್ತದೆ?
ಎ. ಬೇವಿನ ಎಣ್ಣೆ ಮಣ್ಣಿನಲ್ಲಿ ಬಿಡುಗಡೆಯಾಗುವುದರಿಂದ ಸಾರಜನಕ ಸರಿಯಾಗಿ ಮಣ್ಣಿನ ಕಣಗಳಿಗೆ ಸೇರಿಕೊಳ್ಳುತ್ತದೆ.
ಬಿ. ಬೇವಿನೆಣ್ಣೆ ಯೂರಿಯಾ ಮಣ್ಣಿನಲ್ಲಿ ಕರಗುವುದನ್ನು ನಿಧಾನಗೊಳಿಸುತ್ತದೆ.
ಸಿ. ನೈಟ್ರಸ್ ಆಕ್ಸೈಡ್ ಮುಕ್ತ ಹೊಲಗಳಿಂದ ಬಿಡುಗಡೆಯಾಗುವುದಿಲ್ಲ
ಡಿ. ಇದು ಕಳೆನಾಶಕ ಹಾಗೂ ಗೊಬ್ಬರವಾಗುತ್ತದೆ.
ಉ: ಡಿ
100. ಈ ಕೆಳಗಿನ ಸರಿ ಹೇಳಿಕೆಗಳನ್ನು ಗುರುತಿಸಿ.
1. ರಾಜ್ಯದ ಮುಖ್ಯ ಕಾರ್ಯದರ್ಶಿಯನ್ನು ಆಯಾ ರಾಜ್ಯದ ರಾಜ್ಯಪಾಲರು ನೇಮಿಸುತ್ತಾರೆ.
2. ರಾಜ್ಯದ ಮುಖ್ಯ ಕಾರ್ಯದರ್ಶಿಯು ಸೀಮಿತ ಅಧಿಕಾರ ಅವಧಿಯ ಹೊಂದಿರುತ್ತಾರೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಡಿ
@@@@@@@@@@@@@@@@@@@@@@@@@@@@@@@@@@@@@@@@@@@@@




IAS Prelim Exam 2016 (KANNADA) Part-1

ಐಎಎಸ್ ಪ್ರಶ್ನೆಪತ್ರಿಕೆ 2016 (ಕನ್ನಡಭಾಷಾಂತರ)
★★ 1-10 ★★
@@@@@@@@@@@@@@@@@@@@@@
1. ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆಗಳು ಸರಿ?
1. ಪರಿಶಿಷ್ಟ ಜಾತಿ, ಪಂಗಡ ಹಾಗೂ ಮಹಿಳಾ ಉದ್ಯಮಿಗಳನ್ನು ಉತ್ತೇಜಿಸುವುದು ಇದರ ಮೂಲ ಉದ್ದೇಶ.
2. ಇದು ಎಸ್‍ಐಡಿಬಿಐ ಮೂಲಕ ಹಣಕಾಸು ನೆರವನ್ನು ನೀಡುತ್ತದೆ.
ಎ. ಹೇಳಿಕೆ 1 ಮಾತ್ರ
ಬಿ. ಹೇಳಿಕೆ 2 ಮಾತ್ರ
ಸಿ. ಹೇಳಿಕೆ 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
2. ಎಫ್‍ಎಓ ಜಾಗತಿಕ ಮಹತ್ವದ ಕೃಷಿ ಪರಂಪರೆ ವ್ಯವಸ್ಥೆ (ಜಿಐಎಎಸ್‍ಎಚ್)ಗೆ ಚಾಲನೆ ನೀಡಿದೆ. ಇದರ ಉದ್ದೇಶ ಏನು?
1. ಆಧುನಿಕ ತಂತ್ರಜ್ಞಾನ, ಆಧುನಿಕ ಕೃಷಿ ತರಬೇತಿ ಮತ್ತು ಹಣಕಾಸು ನೆರವು ನೀಡಿ ಈ ಯೋಜನೆಯಡಿ ಆಯ್ಕೆ ಮಾಡಿದ ಫಲಾನುಭವಿಗಳಿಗೆ ಕೃಷಿ ಉತ್ಫಾದನೆ ಹೆಚ್ಚಿಸಲು ಉತ್ತೇಜನ ನಿಡುವುದು.
2. ಪರಿಸರ ಸ್ನೇಹಿ ಸಾಂಪ್ರದಾಯಿಕ ಕೃಷಿ ವಿಧಾನವನ್ನು ಉಳಿಸುವುದು/
3. ಎಲ್ಲ ಬಗೆಯ ಕೃಷಿ ಉತ್ಪನ್ನಗಳಿಗೆ ಭೌಗೋಳಿಕ ವೈಶಿಷ್ಟ್ಯ ಗುರುತಿಸುವಿಕೆ ಸ್ಥಾನಮಾನ ನೀಡುವುದು.
ಎ. 1 ಮತ್ತು 3
ಬಿ. 2 ಮಾತ್ರ
ಸಿ. 2 ಮತ್ತು 3
ಡಿ. 1,2,3
ಉ:
3, ಈ ಕೆಳಗಿನ ಯಾವ ನದಿಗಳು ಬ್ರಹ್ಮಪುತ್ರಾದ ಉಪನದಿಗಳು?
1. ದಿಬಾಂಗ್
2. ಕುರ್ದೆಂಗ್
3. ಲೋಹಿತ್
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಡಿ
4. ಕೋರ್‍ಬ್ಯಾಂಕಿಂಗ್ ಸೊಲ್ಯೂಶನ್ ಎಂಬ ಬಳಕೆಯನ್ನು ಸುದ್ದಿಗಳಲ್ಲಿ ಕಾಣುತ್ತೇವೆ. ಈ ಕೆಳಗಿನ ಯಾವ ಹೇಳಿಕೆ ಅದಕ್ಕೆ ಸೂಕ್ತವಾಗುತ್ತದೆ?
1. ಇದು ಬ್ಯಾಂಕ್ ಶಾಖೆಗಳ ಜಾಲವಾಗಿದ್ದು, ಇದರಿಂದ ಗ್ರಾಹಕರು ಯಾವುದೇ ಶಾಖೆಯಲ್ಲಿ ಖಾತೆ ಹೊಂದಿದ್ದರೂ ಮತ್ತೊಂದು ಶಾಖೆಯಲ್ಲಿ ವ್ಯವಹರಿಸಲು ಸಾಧ್ಯವಾಗುತ್ತದೆ.
2. ಇದು ಕಂಪ್ಯೂಟರೀಕರಣದ ಮೂಲಕ ಆರ್‍ಬಿಐ ಬ್ಯಾಂಕ್‍ಗಳ ನಿಯಂತ್ರಣಕ್ಕೆ ಮಾಡಿಕೊಂಡ ವ್ಯವಸ್ಥೆ.
3. ಇದು ಒಂದು ಬ್ಯಾಂಕಿನ ದೊಡ್ಡ ಪ್ರಮಾಣದ ಅನುತ್ಪಾದಕ ಆಸ್ತಿಯನ್ನು ಮತ್ತೊಂದ ಬ್ಯಾಂಕ್ ತೆಗೆದುಕೊಳ್ಳುವ ಪ್ರಕ್ರಿಯೆ.
ಎ. 1 ಮಾತ್ರ
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1,2,3
ಉ: ಎ
5. ಹೊಂದಿಸಿ ಬರೆಯಿರಿ
1. ಪ್ರಮಾಣೀಕರಿಸಿದ ದೇಶಗಳು ಎ. ಕಾರ್ಟೆಜೆನಾ ಒಪ್ಪಂದ
2. ಪ್ರಮಾಣೀಕೃತ ಹೊಗೆಯುಗುಳುವಿಕೆ ಕಡಿಮೆಮಾಡುವುದು ಬಿ. ನಗೋಯಾ ಒಪ್ಪಂದ
3. ಸ್ವಚ್ಛ ಅಭಿವೃದ್ಧಿ ವ್ಯವಸ್ಥೆ ಸಿ. ಕ್ಯೂಟೊ ಒಪ್ಪಂದ
ಮೇಲಿನ ಯಾವುದು ಸರಿ ಹೊಂದಾಣಿಕೆಯಾಗುತ್ತವೆ?
ಎ. 1 ಮತ್ತು 2
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2,3
ಉ: ಬಿ
6. ಬಯೋಇನ್ರ್ಫೋಮ್ಯಾಟಿಕ್ಸ್‍ಗೆ ಸಂಬಂಧಿಸಿದಂತೆ ಸುದ್ದಿಗಳಲ್ಲಿ ಟ್ರಾನ್ಸ್‍ಸ್ಕ್ರಿಪ್ಟೋನ್ ಎಂಬ ಪದ ಕಾಣಿಸುತ್ತದೆ. ಇದು ಯಾವುದಕ್ಕೆ ಸಂಬಂಧಿಸಿದ್ದು?
ಎ. ಜೆನೋಮ್ ಸಂಸ್ಕರಣೆಯಲ್ಲಿ ಬಳಸುವ ಒಂದು ಬಗೆಯ ಎನ್ಸಾಯಿಮ್ (ಇಓZಙಒಇ)
ಬಿ. ಜೈವಿಕ ಕಣಗಳು ಹೊರಸೂಸುವ ಆರ್‍ಎನ್‍ಎ ಕಣಗಳು
ಸಿ. ವಂಶವಾಹಿ ಅಭಿವ್ಯಕ್ತಿಯ ವಿವರಣೆ
ಡಿ. ಕೋಶಗಳಲ್ಲಿ ಸಂಭವಿಸುವ ವಂಶವಾಹಿ ಕುಲಾಂತರ
ಉ: ಬಿ
7. ಭಾರತ ಸರ್ಕಾರ ಆರಂಭಿಸಿದ ಮಿಷನ್ ಇಂದ್ರಧನುಷ್ ಯಾವುದಕ್ಕೆ ಸಂಬಂದಿಸಿದ್ದು?
ಎ. ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರ ಲಸಿಕೆ ಕಾರ್ಯಕ್ರಮ
ಬಿ. ದೇಶಾದ್ಯಂತ ಸ್ಮಾರ್ಟ್ ಸಿಟಿಗಳ ನಿರ್ಮಾಣ
ಸಿ. ಬಾಹ್ಯಾಕಾಶದಲ್ಲಿ ಭೂಮಾದರಿಯ ಗ್ರಹಗಳ ಅನ್ವೇಷಣೆ
ಡಿ. ಹೊಸ ಶಿಕ್ಷಣ ನೀತಿ
ಉ: ಎ
8. ಭಾರತ ಸರ್ಕಾರದ ಗ್ರೀನ್ ಇಂಡಿಯಾ ಮಿಷನ್ ಯೋಜನೆಯನ್ನು ಕೆಳಗಿನ ಯಾವುದು ಸರಿಯಾಗಿ ವಿವರಿಸುತ್ತದೆ?
1. ಪರಿಸರ ಲಾಭ ಮತ್ತು ವೆಚ್ಚವನ್ನು ಕೇಂದ್ರ ಹಾಗೂ ರಾಜ್ಯ ಬಜೆಟ್‍ಗಳಲ್ಲಿ ಸೇರಿಸುವ ಮೂಲಕ ಹಸಿರು ಲೆಕ್ಕಾಚಾರವನ್ನು ಅನುಷ್ಠಾನಗೊಳಿಸುವುದು.
2. ಕೃಷಿ ಉತ್ಪಾದನೆ ಹೆಚ್ಚಿಸಲು ಎರಡನೇ ಹಸಿರು ಕ್ರಾಂತಿ ಜಾರಿಗೊಳಿಸುವುದು.
3. ಅರಣ್ಯ ಪ್ರದೇಶವನ್ನು ಉಳಿಸುವುದು ಮತ್ತು ವಿಸ್ತರಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 3 ಮಾತ್ರ
ಡಿ. 1,2 ಮತ್ತು 3
ಉ: ಸಿ
9. ಆಹಾರ ಸುರಕ್ಷೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಾವಳಿ-2011ರ ಅನ್ವಯ ಈ ಕೆಳಗಿನ ಯಾವ ಮಾಹಿತಿಯನ್ನು ಲೇಬಲ್‍ನಲ್ಲಿ ಪ್ರದರ್ಶಿಸಬೇಕು?
1. ಉತ್ಪನ್ನದಲ್ಲಿ ಒಳಗೊಂಡ ಅಂಶಗಳು
2. ಪೌಷ್ಟಿಕ ಮಾಹಿತಿ
3. ಯಾವುದೇ ಅಲರ್ಜಿಗೆ ಕಾರಣವಾಗುವ ಅಂಶಗಳ ಸಾಧ್ಯತೆ ಬಗ್ಗೆ ಮಾಹಿತಿ
4. ಸಸ್ಯಾಹಾರಿ/ ಮಾಂಸಾಹಾರಿ ಎಂಬ ಮಾಹಿತಿ
ಎ. ಕೇವಲ 1,2,3
ಬಿ. 2 3, ಮತ್ತು 4
ಸಿ. 1,2,4 ಮಾತ್ರ
ಡಿ. 1 ಮತ್ತು 4
ಉ: ಸಿ
10. ಸಾಮಾನ್ಯವಾಗಿ ಸುದ್ದಿಗಳಲ್ಲಿ ಕಂಡುಬರುವ ಪ್ರಾಜೆಕ್ಟ್ ಲೂನ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ನೀರು ನಿರ್ವಹಣೆ ತಂತ್ರಜ್ಞಾನ
ಬಿ. ನಿಸ್ತಂತು ಸಂವಹನಾ ತಂತ್ರಜ್ಞಾನ
ಸಿ. ಜಲವಿದ್ಯುತ್ ಉತ್ಪಾದನಾ ತಂತ್ರಜ್ಞಾನ
ಡಿ. ನೀರು ಸಂರಕ್ಷಣೆ ತಂತ್ರಜ್ಞಾನ
ಉ: ಬಿ
11. ನೆಟ್‍ಸೆಂಟರಿಂಗ್ ಎಂಬ ಪದ ಸುದ್ದಿಯಲ್ಲಿ ಕಂಡುಬರುತ್ತದೆ. ಇದು ಯಾವ ಸಂದರ್ಭಕ್ಕೆ ಅನ್ವಯಿಸುತ್ತದೆ?
ಎ. ಕುಟುಂಬಗಳು ಅಥವಾ ಗ್ರಾಹಕರಿಂದ ಸೌರಶಕ್ತಿಯ ಉತ್ಪಾದನೆ ಮತ್ತು ಬಳಕೆ
ಬಿ. ಕುಟುಂಬಗಳಿಗೆ ಪೈಪ್ ಮೂಲಕ ನೈಸರ್ಗಿಕ ಅನಿಲ ಸರಬರಾಜು ವ್ಯವಸ್ಥೆ
ಸಿ. ಸಿಎನ್‍ಜಿ ಕಿಟ್‍ಗಳನ್ನು ವಾಹನಗಳಲ್ಲಿ ಅಳವಡಿಸುವುದು.
ಡಿ. ನಗರಗಳ ಮನೆಗಳಿಗೆ ನೀರಿನ ಮೀಟರ್ ಅಳವಡಿಸುವುದು.
ಉ: ಎ
12. ವ್ಯವಹಾರ ನಡೆಸಲು ಅನುಕೂಲಕರ ವಾತಾವರಣದ ರ್ಯಾಂಕಿಂಗ್ ಎನ್ನುವುದು ಸುದ್ದಿಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತದೆ. ಈ ರ್ಯಾಂಕಿಂಗ್ ನೀಡುವ ಸಂಸ್ಥೆ ಯಾವುದು?
ಎ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ
ಬಿ. ವಿಶ್ವ ಆರ್ಥಿಕ ವೇದಿಕೆ
ಸಿ. ವಿಶ್ವಬ್ಯಾಂಕ್
ಡಿ. ವಿಶ್ವ ವ್ಯಾಪಾರ ಸಂಘಟನೆ
ಉ: ಸಿ
13. ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಬಂಜಾರಾ ಸಮುದಾಯದವರು ಯಾರು?
ಎ. ಕೃಷಿಕರು
ಬಿ. ಯೋಧರು
ಸಿ. ನೇಕಾರರು
ಡಿ. ವ್ಯಾಪಾರಿಗಳು
ಉ: ಡಿ
14. ಈ ಕೆಳಗಿನ ಯಾರು ಚಕ್ರವರ್ತಿ ಅಶೋಕನ ಸಂಹಿತೆಗಳ ಅರ್ಥ ಗ್ರಹಿಸಿದವರು?
ಎ. ಜಾರ್ಜ್ ಓಲರ್
ಬಿ. ಜೇಮ್ಸ್ ಪ್ರಿನೇಪ್
ಸಿ. ಮ್ಯಾಕ್ಸ್ ಮುಲ್ಲರ್
ಡಿ. ವಿಲಿಯಂ ಜೋನ್ಸ್
ಉ: ಬಿ
15. ಗ್ರಾಮನ್ಯಾಯಾಲಯ ಕಾಯ್ದೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಕಾಯ್ದೆಯ ಅನ್ವಯ, ಗ್ರಾಮನ್ಯಾಯಾಲಯಗಳು ಕೇವಲ ಸಿವಿಲ್ ಪ್ರಕರಣಗಳ ವಿಚಾರಣೆ ನಡೆಸಬಹುದು.
2. ಈ ಕಾಯ್ದೆಯು ಸ್ಥಳೀಯ ಸಾಮಾಜಿಕ ಕಾರ್ಯಕರ್ತರನ್ನು ಮಧ್ಯಸ್ಥಿಕೆದಾರರನ್ನಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
16. ಟ್ರಾನ್ಸ್‍ಫೆಸಿಫಿಕ್ ಪಾಲುದಾರಿಕೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಇದು ಚೀನಾ ಮತ್ತು ರಷ್ಯಾ ಹೊರತುಪಡಿಸಿ ಎಲ್ಲ ಪೆಸಿಫಿಕ್ ವಲಯದ ದೇಶಗಳ ನಡುವೆ ಆದ ಒಪ್ಪಂದ.
2. ಸಾಗರ ಭದ್ರತೆಗೆ ಸಂಬಂಧಿಸಿದ ತಂತ್ರಗಾರಿಕೆ ಮೈತ್ರಿಕೂಟ ಇದಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಡಿ
17. ಈ ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. 2015ರಲ್ಲಿ ನಡೆದ ಭಾರತ ಆಫ್ರಿಕಾ ಶೃಂಗವು ಮೂರನೇ ಶೃಂಗವಾಗಿದೆ.
2. ಇದನ್ನು ಜವಾಹರ್‍ಲಾಲ್ ನೆಹರೂ 1951ರಲ್ಲಿ ಆರಂಭಿಸಿದ್ದರು.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
18. ಸಾಲ ದರಕ್ಕೆ ಅನುಗುಣವಾಗಿ ಆರ್‍ಬಿಐ ಘೋಷಿಸಿದ ನಿಧಿಗಳ ಮಾರ್ಜಿನಲ್ ವೆಚ್ಚದ ಉದ್ದೇಶವೇನು?
1. ಬ್ಯಾಂಕುಗಳು ಸಾಲದ ಬಡ್ಡಿದರವನ್ನು ನಿರ್ಧರಿಸಲು ಅನುಸರಿಸಬೇಕಾದ ವಿಧಿವಿಧಾನಗಳಲ್ಲಿ ಪಾರದರ್ಶಕತೆಯನ್ನು ಇದು ಸುಧಾರಿಸುವ ಮಾರ್ಗದರ್ಶಿ ಸೂತ್ರವಾಗಿದೆ.
2. ಬ್ಯಾಂಕ್ ಹಾಗೂ ಸಾಲಪಡೆಯುವವರಿಗೆ ನ್ಯಾಯಬದ್ಧ ಎನಿಸುವ ದರದಲ್ಲಿ ಸಾಲವನ್ನು ಪಡೆಯಲು ಇದು ಮಾರ್ಗಸೂಚಿಯಾಗುತ್ತದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
19. ಭಾರತದಲ್ಲಿ ಕಂಡುಬರುವ ಖರಾಜ್ ಒಂಟೆಯ ತಳಿಯ ವೈಶಿಷ್ಠ್ಯ ಏನು?
1, ಇದು ಸಮುದ್ರದ ನೀರಿನಲ್ಲಿ 3 ಕಿಲೋಮೀಟರ್ ಈಜಬಲ್ಲದು
2. ಇದು ಮ್ಯಾಂಗ್ರೋವ್ ಅರಣ್ಯದಲ್ಲಿ ಮೇಯುವ ಮೂಲಕ ಜೀವಿಸಬಲ್ಲದು.
3. ಇದು ವನ್ಯಮೃಗವಾಗಿದ್ದು ಸಾಕಲು ಸಾಧ್ಯವಿಲ್ಲ.
ಎ. ಕೇವಲ 1 ಮತ್ತು 2
ಬಿ. ಕೇವಲ 3
ಸಿ. 1 ಮತ್ತು 3
ಡಿ. 1, 2, 3
ಉ: ಎ
20. ಇತ್ತೀಚೆಗೆ ಭಾರತೀಯ ವಿಜ್ಞಾನಿಗಳು ಹೊಸ ತಳಿಯ ಬಾಳೆಯನ್ನು ಕಂಡುಹಿಡಿದಿದ್ದು, ಇದು 11 ಮೀಟರ್ ಎತ್ತರ ಬೆಳೆಯಬಲ್ಲದು ಹಾಗೂ ಕಿತ್ತಳೆ ಬಣ್ಣದ ಪಲ್ಪ್ ಹೊಂದಿರುತ್ತದೆ. ಇದು ಎಲ್ಲಿ ಪತ್ತೆಯಾಗಿದೆ?
ಎ. ಅಂಡಮಾನ್ ದ್ವೀಪ
ಬಿ. ಅಣ್ಣಾಮಲೈ ಅರಣ್ಯ
ಸಿ. ಮೈಕೆಲಾ ಬೆಟ್ಟ
ಡಿ. ಈಶಾನ್ಯದ ಉಷ್ಣವಲಯದ ಮಳೆ ಕಾಡು
ಉ: ಎ

21. ಇತ್ತೀಚೆಗೆ ಸುದ್ದಿ ಮಾಡಿದ ಐಎನ್‍ಎಸ್ ಅಷ್ಟಧಾರಿಣಿಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
ಎ. ನೀರು/ ಭೂಮಿಯಲ್ಲಿ ಬಳಸಬಹುದಾದ ಯುದ್ಧನೌಕೆ
ಬಿ. ಅಣ್ವಸ್ತ್ರ ಸಜ್ಜಿತ ಸಬ್‍ಮೆರಿನ್
ಸಿ. ಟಾರ್ಪೆಡೊ ಉಡಾವಣೆ ಮತ್ತು ಪತ್ತೆ ನೌಕೆ
ಡಿ. ಅಣ್ವಸ್ತ್ರ ಸಾಮಥ್ರ್ಯದ ವಿಮಾನ ವಾಹನ
ಉ: ಸಿ
22. ಇತ್ತೀಚೆಗೆ ಸುದ್ದಿಯಲ್ಲಿದ್ದ ಗ್ರೀಸ್‍ಡ್ ಲೈಟನಿಂಗ್-10 ಎಂದರೇನು?
ಎ. ನಾಸಾ ಪರೀಕ್ಷಿಸಿದ ಎಲೆಕ್ಟ್ರಿಕ್ ವಿಮಾನ
ಬಿ. ಜಪಾನ್ ವಿನ್ಯಾಸಗೊಳಿಸಿದ ಎರಡು ಆಸನಗಳ ಸೌರವಿಮಾನ
ಸಿ. ಚೀನಾ ಉಡಾಯಿಸಿದ ಬಾಹ್ಯಾಕಾಶ ವೀಕ್ಷಣಾ ವ್ಯವಸ್ಥೆ
ಡಿ. ಇಸ್ರೊ ವಿನ್ಯಾಸಗೊಳಿಸಿದ ಮರುಬಳಕೆ ರಾಕೆಟ್
ಉ: ಎ
23. ತೀವ್ರ ತೃಣಧಾನ್ಯ ಉತ್ತೇಜನ ಮೂಲಕ ಪೌಷ್ಟಿಕ ಭದ್ರತೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿ?
1. ಈ ಯೋಜನೆಯ ಮುಖ್ಯ ಉದ್ದೇಶ ಸುಧಾರಿತ ಉತ್ಪಾದನೆ ಮತ್ತು ಕೊಯ್ಲೋತ್ತರ ತಂತ್ರಜ್ಞಾನವನ್ನು ಉತ್ತೇಜಿಸುವುದು.
2. ಬಡ, ಸಣ್ಣ, ಅತಿಸಣ್ಣ ಹಾಗೂ ಬುಡಕಟ್ಟು ಕೃಷಿಕರು ಈ ಯೋಜನೆಯಲ್ಲಿ ದೊಡ್ಡ ಪಾಲು ಪಡೆಯುತ್ತಾರೆ.
3. ವಾಣಿಜ್ಯ ಬೆಳೆಗಳನ್ನು ಬೆಳೆಯುವ ರೈತರನ್ನು ತೃಣಧಾನ್ಯ ಬೆಳೆಯಲು ಪ್ರೋತ್ಸಾಹಿಸುವುದು.
ಎ. ಕೇವಲ 1
ಬಿ. 2 ಮತ್ತು 3
ಸಿ. 1, 2
ಡಿ. 1, 2, 3
ಉ: ಸಿ
24. ಸ್ವದೇಶಿ ಮತ್ತು ಬಹಿಷ್ಕಾರ ವಿಧಾನವನ್ನು ಸಂಘರ್ಷದ ವಿಧಾನವಾಗಿ ಮೊಟ್ಟಮೊದಲು ಯಾವಾಗ ಬಳಸಿಕೊಳ್ಳಲಾಯಿತು?
ಎ. ಬಂಗಾಳ ವಿಭಜನೆ ಸಂದರ್ಭದ ಪ್ರತಿಭಟನೆಯಲ್ಲಿ
ಬಿ. ಹೋಂರೂಲ್ ಚಳವಳಿ
ಸಿ. ಅಸಹಕಾರ ಚಳವಳಿ
ಡಿ. ಭಾರತಕ್ಕೆ ಸೈಮನ್ ಕಮಿಷನ್ ಭೇಟಿ ಸಂದರ್ಭ
ಉ: ಎ
25. ಭಾರತದ ಧಾರ್ಮಿಕ ಇತಿಹಾಸಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳಲ್ಲಿ ಸರಿಯಾದ್ದನ್ನು ಗುರುತಿಸಿ.
1. ಬೋಧಿಸತ್ವ ಪರಿಕಲ್ಪನೆಯು ಬೌದ್ಧಧರ್ಮದ ಹಿನಾಯಾನ ಪಂಥಕ್ಕೆ ಸೀಮಿತ
2. ಬೋಧಿಸತ್ವ ಎನ್ನುವುದು ಜ್ಞಾನೋದಯದ ಮಾರ್ಗದ ಅನುಕಂಪ.
3. ತನ್ನ ಸ್ವಂತ ಮುಕ್ತಿಯನ್ನು ಪಡೆಯುವುದನ್ನು ಬೋಧಿಸತ್ವ ನಿರಾಕರಿಸುತ್ತದೆ.
ಎ. ಕೇವಲ 1
ಬಿ. 2 ಮತ್ತು 3
ಸಿ. 2 ಮಾತ್ರ
ಡಿ. 1,2,3
ಉ: ಬಿ
26. ಡಾಕ್ಟರ್ಸ್ ವಿದೌಟ್ ಬಾರ್ಡರ್ಸ್ ಎನ್ನುವುದು ಸುದ್ದಿಯಲ್ಲಿದೆ. ಹಾಗೆಂದರೆ:
ಎ. ವಿಶ್ವ ಆರೋಗ್ಯ ಸಂಸ್ಥೆಯ ವಿಭಾಗ
ಬಿ. ಇದೊಂದು ಸರ್ಕಾರೇತರ ಅಂತರರಾಷ್ಟ್ರೀಯ ಸಂಸ್ಥೆ
ಸಿ. ಯೂರೋಪಿಯನ್ ಯೂನಿಯನ್ ಪ್ರಾಯೋಜಕತ್ವದ ಅಂತರ ಸರ್ಕಾರ ಏಜೆನ್ಸಿ
ಡಿ. ವಿಶ್ವಸಂಸ್ಥೆಯ ವಿಶೇಷ ಏಜೆನ್ಸಿ
ಉ: ಬಿ
27. ಪರಿಸರ ಹಾಗೂ ಜೀವವೈವಿಧ್ಯದ ಅರ್ಥಶಾಸ್ತ್ರಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದನ್ನು ಯುಎನ್‍ಇಪಿ, ಐಎಂಎಫ್ ಹಾಗೂ ವಿಶ್ವ ಆರ್ಥಿಕ ವೇದಿಕೆ ಆರಂಭಿಸಿದೆ.
2. ಜೀವವೈವಿಧ್ಯದ ಆರ್ಥಿಕ ಲಾಭಗಳ ಬಗ್ಗೆ ಗಮನ ಸೆಳೆಯುವ ಯೋಜನೆ‘
3. ನೀತಿ ನಿರೂಪಕರು ಪರಿಸರ ಹಾಗೂ ಜೀವವೈವಿಧ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳುವುದು.
ಎ. ಕೇವಲ 1 ಮತ್ತು 2
ಬಿ. 3
ಸಿ. 2 ಮತ್ತು 3
ಡಿ. 1, 2, 3
ಉ: ಸಿ
28. ರೆಡ್‍ಸ್ಯಾಂಡರ್ಸ್ ಎಂಬ ಶಬ್ದ ಸುದ್ದಿಯಲ್ಲಿದೆ. ಇದಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಒಂದು ಬಗೆಯ ಮರದ ಪ್ರಬೇಧವಾಗಿದ್ದು, ದಕ್ಷಿಣ ಭಾರತದಲ್ಲಿ ಕಂಡುಬರುತ್ತದೆ.
2. ಇದು ದಕ್ಷಿಣ ಭಾರತದ ಮಹತ್ವದ ಮಳೆಕಾಡಿನಲ್ಲಿ ಕಂಡುಬರುವ ಮರದ ಪ್ರಬೇಧವಾಗಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಸಿ
29. ಯುಎನ್ ಆರ್‍ಇಡಿಡಿ ಯೋಜನೆಯು ಈ ಕೆಳಗಿನ ಯಾವುದಕ್ಕೆ ಕೊಡುಗೆ ನೀಡುತ್ತದೆ?
1. ಜೀವವೈವಿಧ್ಯ ಸಂರಕ್ಷಣೆ
2. ಅರಣ್ಯ ಪರಿಸರ ಸಂರಕ್ಷಣೆ
3. ಬಡತನ ಕಡಿಮೆ ಮಾಡುವುದು‘
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3 ಮಾತ್ರ
ಡಿ. 1, 2, 3
ಉ: ಎ
30. ಹಸಿರು ಮನೆ ಅನಿಲ ಒಪ್ಪಂದ ಎಂದರೇನು?
ಎ. ಹಸಿರುಮನೆ ಅನಿಲದ ಪ್ರಮಾಣವನ್ನು ಅಂದಾಜು ಮಾಡಲು ಸರ್ಕಾರ ಹಾಗೂ ಉದ್ಯಮಿಗಳಿಗೆ ಲೆಕ್ಕಾಚಾರ ಮಾಡುವ ಸಾಧನವಾಗಿದೆ.
ಬಿ. ಅಭಿವೃದ್ಧಿಶೀಲ ದೇಶಗಳು ಹಸಿರುಮನೆ ಅನಿಲ ಕಡಿಮೆ ಮಾಡಲು ನೆರವು ನೀಡುವ ವಿಶ್ವಸಂಸ್ಥೆಯ ಯೋಜನೆ.
ಸಿ. ವಿಶ್ವಸಂಸ್ಥೆಯ ಎಲ್ಲ ಸದಸ್ಯದೇಶಗಳ ಅಂತರಸರ್ಕಾರ ಒಪ್ಪಂದವಾಗಿದೆ.
ಡಿ. ಇದು ಆರ್‍ಇಡಿಡಿಯ ಬಹುಮುಖಿ ಒಪ್ಪಂದವಾಗಿದ್ದು, ವಿಶ್ವಬ್ಯಾಂಕ್ ಪ್ರಾಯೋಜಿತವಾಗಿದೆ.
ಉ: ಎ

31. ಹಣಕಾಸಿನ ಸ್ಥಿರತೆ ಹಾಗೂ ಅಭಿವೃದ್ಧಿ ಮಂಡಳಿಗೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ನೀತಿ ಆಯೋಗದ ಅಂಗಸಂಸ್ಥೆ
2. ಕೇಂದ್ರ ಹಣಕಾಸು ಸಚಿವರು ಇದರ ಮುಖ್ಯಸ್ಥರಾಗಿರುತ್ತಾರೆ.
3. ಇದು ಆರ್ಥಿಕತೆಯ ಮೇಲ್ವಿಚಾರಣೆ ನಿರ್ವಹಿಸುತ್ತದೆ.
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಸಿ
32. ಅಜಂಡಾ 21ಕ್ಕೆ ಸಂಬಂಧಿಸಿದಂತೆ ಸರಿ ಹೇಳಿಕೆಗಳನ್ನು ಗುರುತಿಸಿ.
1. ಇದು ಸುಸ್ಥಿರ ಅಭಿವೃದ್ಧಿಯ ಜಾಗತಿಕ ಕ್ರಿಯಾಯೋಜನೆ
2. ಇದು 2002ರಲ್ಲಿ ಜೋಹಾನ್ಸ್‍ಬರ್ಗ್‍ನಲ್ಲಿ ನಡೆದ ಸುಸ್ಥಿರ ಅಭಿವೃದ್ಧಿ ಶೃಂಗದಲ್ಲಿ ಹುಟ್ಟಿಕೊಂಡಿದೆ.
ಎ. ಕೇವಲ 1
ಬಿ. ಕೇವಲ 2
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಎ
33. ಸತ್ಯಬೋಧಕ ಸಮಾಜವು ಈ ಕೆಳಗಿನ ಯಾವ ಚಳವಳಿಯನ್ನು ಸಂಘಟಿಸಿದೆ?
ಎ. ಬಿಹಾರದ ಬುಡಕಟ್ಟು ಜನಾಂಗದ ಉನ್ನತಿ
ಬಿ. ಗುಜರಾತ್‍ನಲ್ಲಿ ದೇವಸ್ಥಾನ ಪ್ರವೇಶ ಚಳವಳಿ
ಸಿ. ಮಹಾರಾಷ್ಟ್ರದ ಜಾತಿ ವಿರೋಧಿ ಚಳವಳಿ
ಡಿ. ಪಂಜಾಬ್‍ನ ರೈತ ಚಳವಳಿ
ಉ: ಸಿ
34. ವೈರಸ್ ಯಾವುದಕ್ಕೆ ಸೋಂಕು ಉಂಟುಮಾಡುತ್ತದೆ?
1. ಬ್ಯಾಕ್ಟೀರಿಯಾ
2. ಶಿಲೀಂದ್ರ
3. ಸಸ್ಯಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಡಿ
35. ಮೂಲ ಸವಕಳಿ ಮತ್ತು ಲಾಭ ವರ್ಗಾವಣೆ ಈಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂಪನ್ಮೂಲ ಭರಿತ ಆದರೆ ಹಿಂದುಳಿದ ಪ್ರದೇಶಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳ ಗಣಿಗಾರಿಕೆ
ಬಿ. ಬಹುರಾಷ್ಟ್ರೀಯ ಕಂಪನಿಗಳ ತೆರಿಗೆಕಳ್ಳತನವನ್ನು ಕಡಿಮೆ ಮಾಡುವುದು.
ಸಿ. ಬಹುರಾಷ್ಟ್ರೀಯ ಕಂಪನಿಗಳು ವಂಶವಾಹಿ ಸಂಪನ್ಮೂಲಗಳನ್ನು ಶೋಷಿಸುವುದು.
ಡಿ. ಯೋಜನೆ ರೂಪಿಸುವ ಹಾಗೂ ಅನುಷ್ಠಾನದಲ್ಲಿ ಪರಿಸರ ವೆಚ್ಚವನ್ನು ಪರಿಗಣಿಸದಿರುವುದು.
ಉ: ಬಿ
36. ಭಾರತದ ಮೊಟ್ಟಮೊದಲ ಹೂಡಿಕೆ ಹಾಗೂ ಉತ್ಫಾಧನಾ ವಲಯ ಎಲ್ಲಿ ಸ್ಥಾಪನೆಯಾಗಲಿದೆ?
ಎ. ಆಂಧ್ರಪ್ರದೇಶ
ಬಿ. ಗುಜರಾತ್
ಸಿ. ಮಹಾರಾಷ್ಟ್ರ
ಡಿ. ಉತ್ತರಪ್ರದೇಶ
ಉ: ಡಿ
37. ಭಾರತದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನಗಳ ಉದ್ದೇಶವೇನು?
1. ಖನಿಜಭರಿತ ಜಿಲ್ಲೆಗಳಲ್ಲಿ ಖನಿಜ ಹೊರತೆಗೆಯುವುದನ್ನು ಉತ್ತೇಜಿಸುವುದು.
2. ಗಣಿ ಕಾರ್ಯಾಚರಣೆಯಿಂದ ತೊಂದರೆಗೀಡಾದ ಜನರ ಹಿತಾಸಕ್ತಿಯನ್ನು ಕಾಪಾಡುವುದು.
3. ಖನಿಜ ಹೊರತೆಗೆಯಲು ರಾಜ್ಯ ಸರ್ಕಾರಗಳಿಗೆ ಅನುಮತಿ ನೀಡುವ ಅಧಿಕಾರ ನೀಡುವುದು.
ಎ. ಕೇವಲ 1 ಮತ್ತು 2
ಬಿ. 2 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಬಿ
38. ಕೇಂದ್ರ ಸರ್ಕಾರದ ಸ್ವಯಂ ಯೋಜನೆಯ ಉದ್ದೇಶವೇನು?
ಎ. ಗ್ರಾಮೀಣ ಪ್ರದೇಶಗಳಲ್ಲಿ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡುವುದು.
ಬಿ. ಹೊಸ ಸ್ಟಾರ್ಟ್‍ಅಪ್ ಉದ್ಯಮಿಗಳಿಗೆ ಹಣಕಾಸು ನೆರವು ನೀಡುವುದು
ಸಿ. ಹೆಣ್ಣುಮಕ್ಕಳ ಶಿಕ್ಷಣ ಮತ್ತು ಆರೋಗ್ಯಕ್ಕೆ ನೆರವಾಗುವುದು.
ಡಿ. ನಾಗರಿಕರಿಗೆ ಕೈಗೆಟುಕುವ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡುವುದು.
ಉ: ಡಿ
39. ಮಾಂಟೆಗ್ ಚೆಮ್ಸ್‍ಫೋರ್ಡ್ ಪ್ರಸ್ತಾವನೆಗಳು ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿವೆ?
ಎ. ಸಾಮಾಜಿಕ ಸುಧಾರಣೆ
ಬಿ. ಶೈಕ್ಷಣಿಕ ಸುಧಾರಣೆ
ಸಿ. ಪೊಲೀಸ್ ಆಡಳಿತದಲ್ಲಿ ಸುಧಾರಣೆ
ಡಿ. ಸಂವಿಧಾನ ಸುಧಾರಣೆ
ಉ: ಡಿ
40. ಎರಡು ಐತಿಹಾಸಿಕ ಸ್ಥಳಗಳಾದ ಅಜಂತ ಮತ್ತು ಮಹಾಬಲಿಪುರಕ್ಕೆ ಇರುವ ಸಾಮ್ಯತೆಗಳು ಏನು?
1. ಎರಡೂ ಒಂದೇ ಅವಧಿಯಲ್ಲಿ ನಿರ್ಮಾಣವಾದವು.
2. ಎರಡೂ ಸಮಾನ ಧಾರ್ಮಿಕ ಪಂಥಗಳಿಗೆ ಸೇರಿದವು
3. ಎರಡೂ ಶಿಲಾಕೆತ್ತನೆಯ ಸ್ಮಾರಕಗಳು
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 1 ಮತ್ತು 3
ಡಿ. ಯಾವುದೂ ಅಲ್ಲ
ಉ: ಬಿ

41. ಬಿಟ್‍ಕಾಯಿನ್‍ಗೆ ಸಂಬಂಧಿಸಿದಂತೆ ಯಾವ ಹೇಳಿಕೆಗಳು ಸರಿ?
1. ಬಿಟ್‍ಕಾಯಿನ್‍ಗಳನ್ನು ದೇಶಗಳ ಕೇಂದ್ರೀಯ ಬ್ಯಾಂಕ್‍ಗಳು ನಿಗಾ ವಹಿಸುತ್ತವೆ.
2. ಬಿಟ್‍ಕಾಯಿನ್ ವಿಳಾಸ ಹೊಂದಿರುವ ಯಾರು ಬೇಕಾದರೂ ಬಿಟ್‍ಕಾಯಿನ್‍ಗಳು ಕಳುಹಿಸಲು ಹಾಗೂ ಪಡೆಯಲು ಅವಕಾಶವಿದೆ.
3. ಮತ್ತೊಬ್ಬರ ಗುರುತು ಇಲ್ಲದೇ ಆನ್‍ಲೈನ್ ಪಾವತಿ ಮಾಡಲು ಅವಕಾಶವಿದೆ.
ಎ. ಕೇವಲ 1 ಮತ್ತು 2
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3
ಉ: ಬಿ
42. ಕೆಳಗಿನ ಹೇಳಿಕೆಗಳಲ್ಲಿ ಯಾವುದು ಸರಿ?
1. ಹೊಸ ಅಭಿವೃದ್ಧಿ ಬ್ಯಾಂಕನ್ನು ಎಪಿಇಸಿ ಆರಂಭಿಸಿದೆ.
2. ನ್ಯೂ ಡೆವಲಪ್‍ಮೆಂಟ್ ಬ್ಯಾಂಕ್‍ನ ಕೇಂದ್ರ ಕಚೇರಿ ಶಾಂಘೈಯಲ್ಲಿದೆ.
ಎ. 1 ಮಾತ್ರ
ಬಿ. 2 ಮಾತ್ರ
ಸಿ. 1 ಮತ್ತು 2
ಡಿ. ಯಾವುದೂ ಅಲ್ಲ
ಉ: ಬಿ
43. ಗಾಡ್ಗೀಳ್ ಸಮಿತಿ ವರದಿ ಹಾಗೂ ಕಸ್ತೂರಿರಂಗನ್ ಸಮಿತಿ ವರದಿ ಯಾವುದಕ್ಕೆ ಸಂಬಂಧಿಸಿದ್ದು?
ಎ. ಸಂವಿಧಾನ ಸುಧಾರಣೆ
ಬಿ. ಗಂಗಾಕ್ರಿಯಾಯೋಜನೆ
ಸಿ. ನದಿಗಳ ಜೋಡಣೆ
ಡಿ. ಪಶ್ಚಿಮಘಟ್ಟಗಳ ಸಂರಕ್ಷಣೆ
ಉ: ಡಿ
44. ಕೇಶವ್ ಚಂದ್ರಸೇನ್ ಈ ಕೆಳಗಿನ ಯಾವುದರ ಜತೆ ಸಂಬಂಧ ಹೊಂದಿದ್ದಾರೆ?
1. ಕಲ್ಕತ್ತ ಏಕೀಕರಣ ಸಮಿತಿ
2. ಗುಡಿಸಲು ಹಂಚಿಕೆ
3. ಭಾರತ ಸುಧಾರಣಾ ಸಂಘ
ಎ. ಕೇವಲ 1 ಮತ್ತು 3
ಬಿ. 2 ಮತ್ತು 3 ಮಾತ್ರ
ಸಿ. 3 ಮಾತ್ರ
ಡಿ. 1, 2, 3
ಉ: ಬಿ
45. ಗಲ್ಫ್ ಸಹಕಾರ ಮಂಡಳಿಯ ಸದಸ್ಯತ್ವ ಹೊಂದದ ದೇಶ ಯಾವುದು?
ಎ. ಇರಾನ್
ಬಿ. ಸೌದಿ ಅರೇಬಿಯಾ
ಸಿ. ಓಮಾನ್
ಡಿ. ಕುವೈತ್
ಉ: ಬಿ
46. ಸೊವರಿನ್ ಚಿನ್ನ ಬಾಂಡ್ ಯೋಜನೆ ಹಾಗೂ ಚಿನ್ನ ನಗದೀಕರಣ ಯೋಜನೆಯ ಉದ್ದೇಶವೇನು?
1. ಭಾರತದ ಕುಟುಂಬಗಳಲ್ಲಿ ಜಡವಾಗಿರುವ ಚಿನ್ನವನ್ನು ಆರ್ಥಿಕತೆಗೆ ತರುವುದು.
2. ಚಿನ್ನ ಹಾಗೂ ಆಭರಣ ವಲಯದಲ್ಲಿ ವಿದೇಶಿ ನೇರ ಹೂಡಿಕೆ ಉತ್ತೇಜಿಸುವುದು
3. ಚಿನ್ನ ಆಮದಿನ ಮೇಲಿನ ಭಾರತದ ಅವಲಂಬನೆ ಕಡಿಮೆ ಮಾಡುವುದು.
ಎ. ಕೇವಲ 1
ಬಿ. 2 ಮತ್ತು 3 ಮಾತ್ರ
ಸಿ. 1 ಮತ್ತು 3
ಡಿ. 1, 2, 3
ಉ: ಸಿ
47. ಬೆಲ್ಟ್ ಅಂಡ್ ರೋಡ್ ಇನಿಶಿಯೇಟಿವ್ ಈ ಕೆಳಗಿನ ಯಾವುದಕ್ಕೆ ಸಂಬಂಧಿಸಿದ್ದು?
ಎ. ಆಫ್ರಿಕನ್ ಯೂನಿಯನ್
ಬಿ. ಬ್ರೆಜಿಲ್
ಸಿ. ಯೂರೋಪಿನ್ ಯೂನಿಯನ್
ಡಿ. ಚೀನಾ
ಉ: ಡಿ
48. ಪ್ರಧಾನಮಂತ್ರಿ ಮುದ್ರಾ ಯೋಜನೆಯು
ಎ. ಸಣ್ಣ ಉದ್ಯಮಶೀಲರನ್ನು ಔಪಚಾರಿಕ ಹಣಕಾಸು ವ್ಯವಸ್ಥೆಯಡಿ ತರುವುದು
ಬಿ. ಬಡರೈತರಿಗೆ ನಿರ್ದಿಷ್ಟ ಬೆಳೆ ಬೆಳೆಯಲು ಸಾಲ ನೀಡುವುದು
ಸಿ. ವೃದ್ಧ ಮತ್ತು ನಿರ್ಗತಿಕರಿಗೆ ಪಿಂಚಣಿ ನೀಡುವುದು
ಡಿ. ಕೌಶಲ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಸ್ವಯಂಸೇವಾ ಸಂಸ್ಥೆಗಳಿಗೆ ನೆರವಾಗುವುದು.
ಉ: ಎ
49. ಈ ಕೆಳಗಿನ ಯಾವ ಪ್ರದೇಶದಲ್ಲಿ ಶೇಲ್ ಗ್ಯಾಸ್ ಕಂಡುಬರುತ್ತದೆ?
ಎ. ಕ್ಯಾಂಬೆ ನದಿಪಾತ್ರ
ಬಿ. ಕಾವೇರಿ ನದಿಪಾತ್ರ
ಸಿ. ಕೃಷ್ಣಾ ಮತ್ತು ಗೋದಾವರಿ ನದಿಪಾತ್ರ
ಎ. ಕೇವಲ 1 ಮತ್ತು 2
ಬಿ. 3 ಮಾತ್ರ
ಸಿ. 2 ಮತ್ತು 3
ಡಿ. 1, 2, 3
ಉ: ಡಿ
50. ಜಾಗತಿಕ ಹಣಕಾಸು ಸ್ಥಿರತೆ ವರದಿಯನ್ನು ಯಾವುದು ಸಿದ್ಧಪಡಿಸುತ್ತದೆ?
ಎ. ಯೂರೋಪಿಯನ್ ಕೇಂದ್ರೀಯ ಬ್ಯಾಂಕ್
ಬಿ. ಅಂತರರಾಷ್ಟ್ರೀಯ ಹಣಕಾಸು ನಿಧಿ
ಸಿ. ಅಂತರರಾಷ್ಟ್ರೀಯ ಪುನರ್ ನಿರ್ಮಾಣ ಮತ್ತು ಅಭಿವೃದ್ಧಿ ಬ್ಯಾಂಕ್
ಡಿ. ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಘಟನೆ
ಉ: ಬಿ